|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಕರ್ಕಿ ಪೂಜ್ಯರಿಗೆ ಗೌರವ ಸಮರ್ಪಣೆ

ಸಾಗರ: ದೈವಜ್ಞ ಸಭಾಭವನದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಕರ್ಕಿಯ ದೈವಜ್ಞ ಬ್ರಾಹ್ಮಣ ಸಮಾಜದ ಗುರುಗಳಾದ ಪರಮಪೂಜ್ಯ ಶ್ರೀಶ್ರೀಸಚ್ಚಿದಾನಂದ ಜ್ಞಾನೇಶ್ವರಭಾರತೀ ಮಹಾಸ್ವಾಮಿಗಳವರಿಗೆ ಹಾಗೂ ಅವರ ಉತ್ತರಾಧಿಕಾರಿ ಶಿಷ್ಯರಾದ ಪರಮಪೂಜ್ಯ ಶ್ರೀಶ್ರೀಸುಜ್ಞಾನೇಶ್ವರಭಾರತೀ ಮಹಾಸ್ವಾಮಿಗಳವರಿಗೆ ಸಾಗರ ಮಂಡಲ ಹಾಗೂ ರಾಮಚಂದ್ರಾಪುರ ಮಂಡಲದ ವತಿಯಿಂದ ಗೌರವ ಸಮರ್ಪಿಸಲಾಯಿತು.

ಶ್ರಾವಣ ಶುದ್ಧ ಷಷ್ಠಿಯಂದು (18-08-2026) ಪೂಜ್ಯರ ದರ್ಶನ ಮಾಡಿ ಗುರುವಂದನೆ ಸಲ್ಲಿಸಿ ಫಲ ಸಮರ್ಪಣೆ ಮಾಡಲಾಯಿತು. ಮಂಡಲದ ಪದಾಧಿಕಾರಿಗಳು, ವಲಯದ ಪದಾಧಿಕಾರಿಗಳು, ಗುರಿಕಾರರು, ಶ್ರೀಮಠದ ಶಿಷ್ಯರು 100 ಜನಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.