|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಗೋಸ್ವರ್ಗಕ್ಕೆ ಶುಭ ಹಾರೈಸಿದ ಚಿದಂಬರಾಶ್ರಮ ಶ್ರೀಗಳು

ಗೋಸ್ವರ್ಗ: ಸವದತ್ತಿ ತಾಲೂಕಿನ ಮುರಗೋಡದ ಶ್ರೀಶಿವ ಚಿದಂಬರಾಶ್ರಮದ ಪರಮಪೂಜ್ಯ ಶ್ರೀಶ್ರೀ ದಿವಾಕರ ದೀಕ್ಷಿತ ಮಹಾರಾಜರು ಗೋಸ್ವರ್ಗಕ್ಕೆ ಚಿತ್ತೈಸಿದ್ದರು. ಸ್ವತಹ ಗೋಶಾಲೆ ಮಾಡುವ ಯೋಜನೆಯಂತೆ ಬೇರೆ ಬೇರೆ ಗೋಶಾಲೆಗಳ ಸಂದರ್ಶನ ಮಾಡುತ್ತ ಈದಿನ ಗೋಸ್ವರ್ಗಕ್ಕೆ ಆಗಮಿಸಿದ್ದರು. ಗೋಸ್ವರ್ಗ ಯೋಜನೆ ಸಂಪೂರ್ಣ ಮಾಹಿತಿ ಪಡೆದು, ವೀಕ್ಷಣೆ ಮಾಡಿ ವ್ಯವಸ್ಥೆಗಳ ಕುರಿತು ಸಂತಸ ವ್ಯಕ್ತಪಡಿಸಿದರು. ಗೋಗ್ರಾಸ, ಮತ್ಸ್ಯಗ್ರಾಸ ಸಮರ್ಪಿಸ ಪ್ರಸಾದ ಸ್ವೀಕರಿಸಿ ಶುಭ ಹಾರೈಸಿದರು. ಆಗಮಿಸಿದ ಶ್ರೀಗಳಿಗೆ ಗೋಸ್ವರ್ಗದಿಂದ ಫಲಕಾಣಿಕೆ ಸಮರ್ಪಿಸಿ ಗೌರವಿಸಲಾಯಿತು.