ಪ್ರಕಲ್ಪಗಳ ಲೋಕಾರ್ಪಣೆ

ವಿದ್ಯಾಲಯ

 

ಕಾಸರಗೋಡು: ಮುಜುಂಗಾವಿನ ಶ್ರೀಭಾರತೀ ವಿದ್ಯಾಪೀಠದಲ್ಲಿ ನೂತನ ಭೋಜನ ಶಾಲೆ ಹಾಗೂ ಸ್ಮಾರ್ಟ್ ಕ್ಲಾಸ್ ಕೊಠಡಿ, ಮತ್ತು ಬದಿಯಡ್ಕದ ಶ್ರೀಭಾರತೀ ವಿದ್ಯಾಪೀಠದಲ್ಲಿ ಕೌಶಲಾಭಿವೃದ್ಧಿ ಪ್ರಯೋಗಾಲಯ ಹಾಗೂ ಕೌಶಲ ಪ್ರದರ್ಶನ ಪ್ರಾಂಗಣಗಳ ಲೋಕಾರ್ಪಣೆ ಫಾಲ್ಗುನ ಕೃಷ್ಣ ತದಿಗೆಯಂದು (06-03-2026) ನಡೆಯಿತು. ಹೆಚ್. ಎ. ಎಲ್. ಸಂಸ್ಥೆಯ ಸಾಮಾಜಿಕ ಹೊಣೆಗಾರಿಕೆ ವಿಭಾಗ (ಸಿ. ಎಸ್. ಆರ್.) ಪ್ರಾಯೋಜಿಸಿರುವ ಈ ಪ್ರಕಲ್ಪಗಳನ್ನು ಹೆಚ್. ಎ. ಎಲ್. ಸಂಸ್ಥೆಯ ಮಾನವ ಸಂಪನ್ಮೂಲ ನಿರ್ದೇಶಕರಾದ ಎಮ್. ಜಿ. ಬಾಲಸುಬ್ರಹ್ಮಣ್ಯ ಅವರು ಲೋಕಾರ್ಪಣೆಗೊಳಿಸಿದರು.

‘ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ತುಂಬಾ ಸಂತಸವಾಗಿದೆ. ವಿದ್ಯಾರ್ಥಿಗಳು ಇವುಗಳನ್ನು ಸರ್ವಹಿತಕ್ಕಾಗಿ ಉಪಯೋಗಿಸಿಕೊಳ್ಳಲಿ’ ಎಂದು ನುಡಿದರು. ಹವ್ಯಕ ಅಭ್ಯುದಯ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ಡಾ. ವೈ. ವಿ. ಕೃಷ್ಣಮೂರ್ತಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹೆಚ್. ಎ. ಎಲ್. ಸಂಸ್ಥೆಯ ಹೈದರಾಬಾದ್ ಪ್ರದೇಶದ ಎ.ಜಿ.ಎಮ್. ಆಗಿರುವ ಎ. ಎಸ್. ಸಾಜಿ, ಕಾಸರಗೋಡು ಪ್ರದೇಶದ ಡಿ. ಜಿ. ಎಮ್. ಆಗಿರುವ ಜೋಸೆಫ್ ದಿನೇಶ್ ಮೊತೇರಿಯೋ ಉಪಸ್ಥಿತರಿದ್ದರು. ಎರಡೂ ಶಾಲೆಗಳ ಮುಖ್ಯಸ್ಥರು ಮಾತಾಡಿ ಹೆಚ್. ಎ. ಎಲ್. ಸಂಸ್ಥೆಗೆ ಧನ್ಯವಾದ ತಿಳಿಸಿದರು.

Leave a Reply

Your email address will not be published. Required fields are marked *