|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಶರ್ವನಿಗೆ ಶ್ರಾವಣೋತ್ಸವ

ಕಡತೋಕಾ: ಶ್ರೀಸ್ವಯಂಭೂ ದೇವಸ್ಥಾನದಲ್ಲಿ ಶ್ರಾವಣ ಶುಕ್ಲ ತ್ರಯೋದಶಿಯಂದು (25-08-2026) ಪ್ರಾತಿವಾರ್ಷಿಕ ಶ್ರಾವಣೋತ್ಸವವನ್ನು ನೆರವೇರಿಸಲಾಯಿತು. ಲೋಕಕಲ್ಯಾಣಾರ್ಥವಾಗಿ ದೇವತಾ ಪೂಜಾರಾಧನೆ, ಕಳಶ ಸ್ಥಾಪನೆಯೊಂದಿಗೆ ರುದ್ರಪಠಣ, ರುದ್ರಹವನ, ಸಪ್ತಶತೀ ಪಾರಾಯಣ, ಕ್ಷೀರಾಭಿಷೇಕ, ಪ್ರದೋಷ ಪೂಜೆ ಅನುಷ್ಠಾನಗಳು ಸ್ವಯಂಭೂ ಶಿವನಿಗೆ ಸಮರ್ಪಿಸಲಾಯಿತು. ಪ್ರಸಾದ ಭೋಜನ ಜರುಗಿತು.

ಶ್ರೀಕರಿಕಾನ ಪರಮೇಶ್ವರಿ ತಾಳಮದ್ದಳೆ ಸಂಘ ನೀಲ್ಕೋಡ, ಶ್ರೀಗೋಪಾಲಕೃಷ್ಣ ಭಜನಾ ಮಂಡಳಿ ಕಡತೋಕಾ, ಶ್ರೀ ರಾಮನಾಥ ಭಜನಾ ಮಂಡಳಿ ಕಡತೋಕಾ ಇವರಿಂದ ಭಜನೆ ಹಾಗೂ ತಾಳಮದ್ದಳೆ ನಡೆದವು.