|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಭಕ್ತಿ ಭಾವದಿಂದ ನಡೆದ ಕಾರ್ತೀಕ ದೀಪೋತ್ಸವ

ಭಾನ್ಕುಳಿ: ಶ್ರೀರಾಮದೇವ ಭಾನ್ಕುಳಿಮಠದ ಶ್ರೀರಾಮದೇವ ಸನ್ನಿಧಿಯಲ್ಲಿ ಕಾರ್ತೀಕ ದೀಪೋತ್ಸವ ಸೇವೆ ನಡೆಯಿತು.

ದೀಪಾವಳಿ ಪ್ರತಿಪದೆಯಿಂದ ಆರಂಭಗೊಂಡ ದೀಪೋತ್ಸವ ಸೇವೆ ಕಾರ್ತೀಕ ಮಾಸದ ಕೊನೆಯ ಸೋಮವಾರವಾದ ಕಾರಣ ವಿಜೃಂಭಣೆಯಿಂದ ನಡೆಯಿತು. ಸಹಸ್ರಾಧಿಕ ದೀಪಗಳಿಂದ ಶ್ರೀರಾಮ ಸನ್ನಿಧಿ ಕಂಗೊಳಿಸಿತು. ಗೋಸ್ವರ್ಗದ ಸನಿಹದಲ್ಲೇ ಇರುವ ಪುರಾತನ ಶಿವ ದೇವಾಲಯದಲ್ಲಿ ದೀಪೋತ್ಸವ ಸೇವೆ ನೆರವೇರಿಸಿ, ಸಪ್ತಸನ್ನಿಧಿಯಲ್ಲಿ ದೀಪ ಬೆಳಗಿಸಿ ನಂತರ ರಾಮಸನ್ನಿಧಿಯಲ್ಲಿ ಸೇವೆ ಸಲ್ಲಿಸಲಾಯಿತು. ಈ ದಿನ ೧೨ ಕರ್ತೃಗಳ ಸೇವೆ ರಾಮಾರ್ಪಣಗೊಂಡಿತು.