ಶ್ರೀಕ್ಷೇತ್ರ ಗೋಕರ್ಣಕ್ಕೆ ಅನಿಲ್ ಕುಂಬ್ಳೆ ಭೇಟಿ

ಏ. 28 : ಶ್ರೀ ಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಖ್ಯಾತ ಕ್ರಿಕೆಟ್ಪಪಟು ಅನಿಲ್ ಕುಂಬ್ಳೆ ಪತ್ನಿ ಸಮೇತ ಶ್ರೀ ದೇವರ ದರ್ಶನ ಪಡೆದರು. ಆತ್ಮಲಿಂಗಕ್ಕೆ ಪಂಚಾಮೃತ ಅಭಿಷೇಕ, ನವಧಾನ್ಯ, ಗಂಗಾಭಿಷೇಕ ಪೂಜೆ ಮತ್ತು ಸುವರ್ಣ ನಾಗಾಭರಣ ವಿಶೇಷ ಪೂಜೆಯನ್ನು ಮಡಿಬಟ್ಟೆ ಧರಿಸಿ ಶ್ರದ್ಧಾ ಭಕ್ತಿ ಯಿಂದ ನೆರವೇರಿಸಿದರು. ಈ ವೇಳೆ ಜಿ. ಪಂ. ಸದಸ್ಯ ಶ್ರೀ ಪ್ರದೀಪ ನಾಯಕ ಜೊತೆಗಿದ್ದರು. ದೇವಾಲಯದ ಆಡಳಿತಾಧಿಕಾರಿ ಶ್ರೀ ಜಿ. ಕೆ. ಹೆಗಡೆ ಅನಿಲ್ ಕುಂಬ್ಳೆಯವರಿಗೆ ಆತ್ಮಲಿಂಗ […]

Continue Reading

ಗೋವಿಗಾಗಿ ಹಲಸು ಮೇಳ ; ಸಿದ್ಧತಾ ಸಭೆ

➖➖➖➖➖➖➖➖ “ಹಲಸು ಬೆಳೆಸಿ ಗೋವು ಉಳಿಸಿ” ಎಂಬ ಧ್ಯೇಯ ವಾಕ್ಯದೊಂದಿಗೆ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಜೂನ್ 8ರಂದು ನಡೆಸಲಿರುವ ” ಹಲಸು ಮೇಳ ” ಎಂಬ ಬೃಹತ್ ಸಮಾರಂಭದ ಸಿದ್ಧತೆಗಾಗಿ ಸಮಾಲೋಚನಾ ಸಭೆಯು ವಿದ್ಯಾಪೀಠದಲ್ಲಿ ಜರಗಿತು. ಮುಳ್ಳೇರಿಯಾ ಮಂಡಲಾಧ್ಯಕ್ಷರಾದ ಪ್ರೊ ಶ್ರೀಕೃಷ್ಣ ಭಟ್ಟ ಅವರು ಅಧ್ಯಕ್ಷತೆ ವಹಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.   ಸಮಾರಂಭವು ಮುಳ್ಳೇರಿಯಾ ಹವ್ಯಕ ಮಂಡಲ, ಅಮೃತಧಾರಾ ಗೋಶಾಲೆ ಬಜಕ್ಕೂಡ್ಲು ಪೆರ್ಲ, ಮತ್ತು ಮಹಿಳೋದಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಜರಗಲಿದೆ. ಸಭೆಯಲ್ಲಿ ಡಾ. ವೈ. […]

Continue Reading

ಗೋವಾ ರಾಜ್ಯಪಾಲರ ಗೋಕರ್ಣ ದರ್ಶನ

ಶ್ರೀ ಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀಮಹಾಬಲೇಶ್ವರ ದೇವಾಲಯಕ್ಕೆ ಗೋವಾ ರಾಜ್ಯಪಾಲರಾದ ಗೌರವಾನ್ವಿತ ಶ್ರೀಮತಿ ಮೃದುಲಾ ಸಿನ್ಹಾ ಭೇಟಿ ನೀಡಿ ಶ್ರೀ ಆತ್ಮಲಿಂಗಕ್ಕೆ ನವಧಾನ್ಯಭಿಷೇಕ ಮತ್ತು ಸುವರ್ಣ ನಾಗಾಭರಣ ಪೂಜಾ ಸೇವೆ ನೆರವೇರಿಸಿದರು. ಶ್ರೀ ದೇವಾಲಯದ ಸ್ವಚ್ಛತೆ, ಪ್ರಶಾಂತತೆ ಮತ್ತು ಪೂಜಾ ವಿಧಾನದ ಬಗ್ಗೆ ಸಂತಸ ವ್ಯಕ್ತಪಡಿಸಿದರು . ಶ್ರೀ ದೇವಾಲಯದ ವತಿಯಿಂದ ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಶಾಲು ಹೊದೆಸಿ , ಸ್ಮರಣಿಕೆ ನೀಡಿ ಗೌರವಿಸಿದರು. ವೇ|| ಮಹಾಬಲೇಶ್ವರ ಮಾರಿಗೋಳಿ ಪೂಜೆ ನೆರವೇರಿಸಿದರು . ಉಪಾಧಿವಂತ […]

Continue Reading

ಶ್ರೀಭಾರತೀ ಸಮೂಹಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಅವಕಾಶ

ವಿದ್ಯಾರ್ಥಿಗಳ ಮತ್ತು ಹೆತ್ತವರ ಗಮನಕ್ಕೆ   ನಂತೂರು: ಪರಮಪೂಜ್ಯ ಶ್ರೀಸಂಸ್ಥಾನದವರ ಸಂಪೂರ್ಣ ಆಶೀರ್ವಾದ, ಅನುಗ್ರಹದೊಂದಿಗೆ ಮುನ್ನಡೆಯುತ್ತಿರುವ ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳಲ್ಲಿ 8, 9, 10ನೆಯ ತರಗತಿ, ಪಿಯುಸಿ(ವಾಣಿಜ್ಯ ಮತ್ತು ವಿಜ್ಞಾನ) ಹಾಗೂ ಪದವಿ(ಬಿಸಿಎ, ಬಿಎಸ್ಸಿ, ಬಿಕಾಂ) ವಿಭಾಗಗಳಿವೆ. ಇದು ಶ್ರೀಮಠದ ಏಕೈಕ ಕಾಲೇಜು. ಪ್ರಸಕ್ತ ಸಾಲಿನಲ್ಲಿ 40ಕ್ಕೂ ಅಧಿಕ ಬೋಧಕ, ಬೋಧಕೇತರ ವೃಂದದವರನ್ನು ಹೊಂದಿದೆ. ಇಲ್ಲಿ ಅತ್ಯುತ್ತಮ ಶಿಕ್ಷಣ ನೀಡಲಾಗುತ್ತಿದ್ದು, ಇದು ಅತ್ಯುತ್ತಮ ಫಲಿತಾಂಶ ದಾಖಲಿಸಲು ಕಾರಣವಾಗಿದೆ. ಈಗಾಗಲೇ ನಡೆದ ಆಂತರಿಕ ಪರೀಕ್ಷೆಗಳಲ್ಲಿ […]

Continue Reading

ಮರವಂತೆಯ ಅಖಿಲಾ ಕಾಲೇಜಿಗೆ ಪ್ರಥಮ

ಮರವಂತೆ: ಮರವಂತೆ ವಲಯದ ಪಡುಕೋಣೆ ಘಟಕದ ಶ್ರೀ ಮೋಹನ ಹೆಬ್ಬಾರ್ ಹಾಗೂ ಶ್ರೀಮತಿ ಗೀತಾ ಹೆಬ್ಬಾರ್ ದಂಪತಿಗಳ ಮಗಳು ಕು. ಅಖಿಲಾ ಹೆಬ್ಬಾರ್ ದ್ವಿತೀಯ ಪಿ.ಯು.ಸಿ.ಯಲ್ಲಿ 97% ಅಂಕವನ್ನು ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.  

Continue Reading

ಅನೂಚಾನದಲ್ಲಿ ವಸಂತಶಿಬಿರ

ಅನೂಚಾನ ವಿದ್ಯಾ ಪ್ರತಿಷ್ಠಾನ ಗುತ್ತಿಗಾರು ಮತ್ತು ಹವ್ಯಕ ವಲಯ ಗುತ್ತಿಗಾರು ಸಹಯೋಗದಲ್ಲಿ ವಸಂತ ವೇದ ಶಿಬಿರ ಮತ್ತು ಗಾಯತ್ರೀ ಯಜ್ಞ ಮಹಾಸಂಕಲ್ಪ ಮತ್ತು ಘೃತ ಕಲಶ ಸ್ಥಾಪನೆ, ಗಾಯತ್ರೀ ಜಪ ಪ್ರಾರಂಭೋತ್ಸವವು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ದಿನಾಂಕ 15/04/19 ಸೋಮವಾರ ಬೆಳಿಗ್ಗೆ ಗಂಟೆ 8.30 ಕ್ಕೆ ಗುರುವಂದನೆ, ಪ್ರಾರ್ಥನೆಯೊಂದಿಗೆ ಆರಂಭವಾಯಿತು. ವೇ.ಮೂ.ಪಿ.ಸುಬ್ರಾಯ ಕೆದಿಲಾಯ ವಳಲಂಬೆ ಇವರು ದೀಪ ಬೆಳಗಿಸಿ ವೇದ ಶಿಬಿರ ವನ್ನು ಉದ್ಘಾಟಿಸಿ ವೇದ ಶಿಬಿರದ ಅಗತ್ಯತೆ ಮತ್ತು ಅವಶ್ಯಕತೆಯನ್ನು ತಿಳಿಸಿದರು. […]

Continue Reading

ಪೀಯೂಸೀ ಪ್ರತಿಭೆ ಕೃಷ್ಣ ಶರ್ಮರಿಗೆ ಪೆರಡಾಲ ವಲಯದ ಪುರಸ್ಕಾರ

ಪೆರಡಾಲ, 17.04.2019 ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗಲ್ಲಿ ಕರ್ನಾಟಕ ರಾಜ್ಯದಲ್ಲಿ ಪ್ರಥಮ ಸ್ಥಾನ ಗಳಿಸಿ ಕೀರ್ತಿಗೆ ಭಾಜನರಾದ ಕಾಸರಗೋಡಿನ ಪೆರಡಾಲ ಕಡಪ್ಪು ಶ್ರೀ ಕೃಷ್ಣ ಶರ್ಮ ಇವರನ್ನು ಮಾತಾಪಿತೃ ಕಡಪ್ಪು ಶ್ರೀ ಸುಬ್ರಹ್ಮಣ್ಯ ಭಟ್ಟ ಶಾರದಾ ದಂಪತಿ ಮತ್ತು ಮನೆಯವರ ಉಪಸ್ಥಿತಿಯಲ್ಲಿ ಪೆರಡಾಲ ಹವ್ಯಕ ವಲಯ ವತಿಯಿಂದ ಶಾಲು ಹೊದೆಸಿ ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು.   ಕಡಪ್ಪು ನಿವಾಸದಲ್ಲಿ ಜರಗಿದ ಸಭೆಯಲ್ಲಿ ಪೆರಡಾಲ ವಲಯ ಅಧ್ಯಕ್ಷರಾದ ಶ್ರೀಹರಿಪ್ರಸಾದ್ ಪೆರ್ಮುಖ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಹಾ ಮಂಡಲ ಉಲ್ಲೇಖ ಪ್ರಧಾನ ಗೋವಿಂದಬಳ್ಳಮೂಲೆ […]

Continue Reading

ಪೀಯೂಸೀ ಪ್ರತಿಭೆ ಕು. ಸ್ವಸ್ತಿಕ್ ಮಾಡಾವು

2018 -19 ರ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಪುತ್ತೂರಿನ ಸ್ವಸ್ತಿಕ್ ಪಿ ಮಾಡಾವು 594 ಅಂಕ ಪಡೆದು ರಾಜ್ಯದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ. ಇವರು ಪುತ್ತೂರು ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ. ಪ್ರಾಥಮಿಕ ವಿದ್ಯಾಭ್ಯಾಸ ನರಿಮೊಗರು ಸಾಂದೀಪನಿ ವಿದ್ಯಾ ಸಂಸ್ಥೆ ಹಾಗೂ ಭೆಥೆನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ. ಹೈಸ್ಕೂಲ್ ವಿದ್ಯಾಭ್ಯಾಸವನ್ನು ಸಂತ ಫಿಲೋಮಿನಾ ಹೈಸ್ಕೂಲಿನಲ್ಲಿ ಮುಗಿಸಿದ್ದಾರೆ.   ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಮೃದಂಗ ಜೂನಿಯರ್ ಗ್ರೇಡ್ ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆಯಾಗಿದ್ದು, ರಾಷ್ಟ್ರೀಯ ಮಟ್ಟದ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ […]

Continue Reading

ಪೀಯೂಸೀಯಲ್ಲಿ ರಾಜ್ಯಕ್ಕೇ ಸರ್ವಪ್ರಥಮ ಶ್ರೀಕೃಷ್ಣ ಕಡಪ್ಪು

2018 -19 ರ ಕರ್ನಾಟಕ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಕಾಸರಗೋಡು ಪೆರಡಾಲದ ಕಡಪ್ಪುಶ್ರೀ ಕೃಷ್ಣ ಶರ್ಮ ಇವರು 596 ಅಂಕ ಪಡೆದು ರಾಜ್ಯಕ್ಕೇ ಪ್ರಥಮ ಸ್ಥಾನ ಗಳಿಸಿರುತ್ತಾರೆ. ಇವರು ಅಳಿಕೆ ಸತ್ಯ ಸಾಯಿ ಲೋಕಸೇವಾ ವಿದ್ಯಾ ಸಂಸ್ಥೆಯ ವಿದ್ಯಾರ್ಥಿ.   ಪ್ರಾಥಮಿಕದಿಂದ SSLC ವಿದ್ಯಾಭ್ಯಾಸವನ್ನು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಕನ್ನಡಮಾಧ್ಯಮದಲ್ಲಿ ಪಡೆದಿರುತ್ತಾರೆ. ಇವರು ಶ್ರೀ ಸುಬ್ರಹ್ಮಣ್ಯ ಭಟ್ಟ ಶಾರದಾ ದಂಪತಿಯ ಪುತ್ರರಾಗಿದ್ದಾರೆ. ಇವರ ಮುಂದಿನ ಸಾಧನೆಗೆ ಶ್ರೀಗುರುದೇವತಾನುಗ್ರಹ ಸದಾ ಇರಲಿ ಎಂಬ ಹಾರೈಕೆ.

Continue Reading

ಸಾಗರದ ಗೋಳಗೋಡಿನಲ್ಲಿ ಮಹಾರುದ್ರ ಹವನ ಸಂಪನ್ನ

ಹಿಂದೆ ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರಗಾಮಿಗಳು ದೇಶದ ಯೋಧರನ್ನು ಭೀಭತ್ಸವಾಗಿ ಕೊಂದಾಗ ಇಡೀ ದೇಶವೇ ಕಂಬನಿ ಮಿಡಿದಿತ್ತು. ಇದೇ ಸಂದರ್ಭದಲ್ಲಿ ಗೋಳಗೋಡಿನ ತ್ರಯಂಬಕೇಶ್ವರ ದೇವಸ್ಥಾನದ ವೇ.ಮೂ.ದತ್ತಾತ್ರೇಯ ಭಟ್ಟರು ತಾವು ದಿನನಿತ್ಯ ಪೂಜಿಸುವ ಈಶ್ವರನಲ್ಲಿ ದೇಶದ ಸೈನಿಕರ ಒಳಿತಿಗಾಗಿ ಮಹಾರುದ್ರ ಹವನ ಮಾಡಿಸಿಕೊಡುತ್ತೇನೆ ಎಂದು ಸಂಕಲ್ಪ ಮಾಡಿದ್ದರು ಸೈನಿಕರಿಗಾಗಿ ಮಾಡಿಕೊಂಡ ಈ ಮಹಾಕಾರ್ಯಕ್ಕೆ ಇಡೀ ಹವ್ಯಕ ಸಮಾಜವೇ ಬಹುಬೇಗನೆ ಸ್ಪಂದಿಸಿದ್ದರ ಫಲವಾಗಿ ಮಹಾರುದ್ರ ಹವನ ವಿಧ್ಯುಕ್ತವಾಗಿ ನಡೆಯಿತು. ಈ ದೊಡ್ಡ ಕಾರ್ಯ ನೆರವೇರಲು ಹವ್ಯಕ ಸಮಾಜದ ದೊಡ್ಡ ಕಾರ್ಯಪಡೆ ಯಾವುದೇ […]

Continue Reading

ಸಂಸ್ಥಾಪನೋತ್ಸವ – ವಿಶೇಷ ಪ್ರಶಸ್ತಿ ಪುರಸ್ಕಾರ ಸಮಾರಂಭ

ಶ್ರೀ ಅಖಿಲ ಹವ್ಯಕ ಮಹಾಸಭೆಯ 76ನೇ ವರ್ಷದ ಸಂಸ್ಥಾಪನೋತ್ಸವ ಹಾಗೂ ಹವ್ಯಕ ವಿಶೇಷ ಪ್ರಶಸ್ತಿ ಪುರಸ್ಕಾರ, ಪಲ್ಲವ ಪುರಸ್ಕಾರ ಪ್ರದಾನ ಸಮಾರಂಭ 31.3.2019 ಭಾನುವಾರ ಮಲ್ಲೇಶ್ವರದಲ್ಲಿರುವ ಹವ್ಯಕ ಭವನದಲ್ಲಿ ಸಂಜೆ 4.00 ಗಂಟೆಗೆ ನಡೆಯಲಿದೆ.   1943ರಲ್ಲಿ ಸಂಸ್ಥಾಪಿತವಾಗಿ ; 75 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಹವ್ಯಕ ಸಮಾಜದ ಪ್ರಾತಿನಿಧಿಕ ಸಂಸ್ಥೆಯಾದ ಶ್ರೀಅಖಿಲ ಹವ್ಯಕ ಮಹಾಸಭೆಯ 76ನೇ ವರ್ಷದ ಸಂಸ್ಥಾಪನೋತ್ಸವದ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, 2018-19 ನೇ ಸಾಲಿನ “ಹವ್ಯಕ ವಿಭೂಷಣ” “ಹವ್ಯಕ ಭೂಷಣ” “ಹವ್ಯಕ […]

Continue Reading

ಪಾತಂಜಲ ಮಹಾಭಾಷ್ಯ ಕನ್ನಡಿ : ಪುಸ್ತಕ ಪರಿಚಯ ಮತ್ತು ಲೇಖಕ ಸಮ್ಮಾನ ಕಾರ್ಯಕ್ರಮ

  ಹೊನ್ನಾವರ : ನಗರದ ಕವಲಕ್ಕಿಯ ಶ್ರೀರಾಘವೇಂದ್ರಭಾರತೀ ಸವೇದ ಸಂಸ್ಕೃತ ಕಾಲೇಜಿನ ಆವರಣದ ಶ್ರೀರಾಘವೇಶ್ವರಭಾರತೀ ಸಭಾಭವನದಲ್ಲಿ ಮಾ.17ರಂದು ಡಾ. ಗಣಪತಿ ಭಟ್ಟ ರಚಿಸಿದ ‘ಪಾತಂಜಲ ಮಹಾಭಾಷ್ಯ ಕನ್ನಡಿ’ ಪುಸ್ತಕ-ಪರಿಚಯ ಕಾರ್ಯಕ್ರಮ ಸಂಪನ್ನವಾಯಿತು. ಗ್ರಂಥಕಾರಾದ ಡಾ. ಗಣಪತಿ ಭಟ್ಟ ಪುಸ್ತಕದ ವಿಷಯದ ಕುರಿತು ಸಮಗ್ರ ಮಾಹಿತಿ ನೀಡಿದರು. ಅನಂತರ ಕಾಲೇಜಿನ ಪ್ರಾಚಾರ್ಯ ವಿದ್ವಾನ್ ಗಣೇಶ ವಿ. ಭಟ್ಟ ಗ್ರಂಥವನ್ನು ವಿಮರ್ಶಿಸಿ ಅದರಲ್ಲಿರುವ ವೈಶಿಷ್ಟ್ಯ ಮತ್ತು ಪ್ರಸ್ತುತತೆಯನ್ನು ಸಭೆಗೆ ಪರಿಚಯಿಸಿದರು. ಕೊನೆಯಲ್ಲಿ ಗ್ರಂಥಕರ್ತೃ ಡಾ. ಗಣಪತಿ ಭಟ್ಟರನ್ನು ಸಮ್ಮಾನಿಸಿ ಗೌರವಿಸಲಾಯಿತು. […]

Continue Reading

ಶ್ರೀ ಭಾರತೀ ವಿದ್ಯಾ ಸಂಸ್ಥೆಯು ಸಂಸ್ಕೃತಿಯ ದೇಗುಲ ; ರಾಮಚಂದ್ರ ಭಟ್ ಮಾಣಿಪ್ಪಾಡಿ

ನಂತೂರು: ಮಂಗಳೂರು ನಂತೂರು ಶ್ರೀಭಾರತೀ ಸಮೂಹ ಸಂಸ್ಥೆಗಳ ಶಂಕರಶ್ರೀ ಸಭಾಭವನದಲ್ಲಿ ಶ್ರೀಭಾರತೀ ಪದವಿ ಕಾಲೇಜಿನ ಸಾಂಸ್ಕೃತಿಕ ಸಂಘದ ವತಿಯಿಂದ ಸಾಂಸ್ಕೃತಿಕ ದಿನಾಚರಣೆಯನ್ನು ಮಾರ್ಚ್ 16ರಂದು ನಡೆಸಲಾಯಿತು.   ವಕೀಲರು ಮತ್ತು ನೋಟರಿ ಶ್ರೀ ರಾಮಚಂದ್ರ ಭಟ್ಟ ಮಾಣಿಪ್ಪಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶ್ರೀ ಭಾರತೀ ವಿದ್ಯಾಸಂಸ್ಥೆಯು ಸಂಸ್ಕೃತಿಯ ದೇಗುಲ. ವಿದ್ಯಾದೇಗುಲದಲ್ಲಿ ಸಂಸ್ಕೃತಿಯೊಂದಿಗೆ ವಿದ್ಯೆಯನ್ನು ನೀಡುವುದು, ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವುದಕ್ಕೆ ಸಹಕಾರಿ, ಎಂದು ಹೇಳಿದರು.   ಶ್ರೀಭಾರತೀ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಈಶ್ವರಪ್ರಸಾದ್ ಎ. ಅಧ್ಯಕ್ಷತೆ ವಹಿಸಿ ಮಾತನಾಡಿ, ವೇದಪುರಾಣಗಳ ಕಾಲದಲ್ಲಿಯೇ ಸಂಸ್ಕಾರಯುತ ಶಿಕ್ಷಣಕ್ಕೆ ಹಿರಿಯರು ಹೆಚ್ಚಿನ ಒತ್ತು ನೀಡಿದ್ದರು. ವಿದ್ಯಾರ್ಥಿಗಳಲ್ಲಿ ಸಂಸ್ಕೃತಿಯ ಉಳಿವಿನ ಪಾಠ ಬೆಳೆದು ಹೆಮ್ಮರವಾಗಲಿ, ಎಂದು ಆಶಿಸಿದರು.   ಮುಖ್ಯ ಅಭ್ಯಾಗತರಾಗಿ  ಆಗಮಿಸಿದ ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಸುಕನ್ಯಾ ಸಿ. ಮಾತನಾಡಿ, ಭಾರತ ದೇಶ ಸಂಸ್ಕೃತಿಯ ತವರೂರು, ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಯಾರೂ ಹೀಯಾಳಿಕೆಗೆ ಗುರಿಯಾಗುವುದಿಲ್ಲ. ನಮ್ಮ ಎಲ್ಲ ಆಚರಣೆಗಳಿಗೆ ವೈಜ್ಞಾನಿಕ ಕಾರಣಗಳಿವೆ. ವಿದ್ಯಾರ್ಥಿ ಜೀವನದಲ್ಲಿ ಸಂಸ್ಕೃತಿಗೆ ಹೆಚ್ಚಿನ ಮಹತ್ತ್ವ ನೀಡಿದಾಗ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ಹೇಳಿದರು.   ನಮ್ಮ ಕುಡ್ಲ ಚಾನಲ್ ನ್ಯೂಸ್ ರೀಡರ್ ಶ್ರೀಮತಿ ಪ್ರಿಯಾ ಹರೀಶ್ ಶೆಟ್ಟಿ ಮಾತನಾಡಿ, […]

Continue Reading

ಶ್ರೀ ಭಾರತೀ ಸಮೂಹ ಸಂಸ್ಥೆಗಳ ವಾಲಿಬಾಲ್ ಪಂದ್ಯಾಟ*

ನಂತೂರು ಮಾ. 13 : ಮಂಗಳೂರಿನ ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಶಂಕರಶ್ರೀ ಸಭಾಭವನದಲ್ಲಿ ಶ್ರೀ ಭಾರತೀ ಪದವಿ ಕಾಲೇಜಿನ ಸ್ಪೋರ್ಟ್ಸ್ ಅಸೋಸಿಯೇಶನ್ ವತಿಯಿಂದ ಎಸ್‌ಬಿಸಿ ವಾಲಿಬಾಲ್ ಲೀಗ್ ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ಭಾರತೀ ಸಮೂಹ ಸಂಸ್ಥೆಗಳ ಕಾರ್ಯಾಧ್ಯಕ್ಷ ಶ್ರೀ ಗಣೇಶಮೋಹನ ಕಾಶಿಮಠ ಉದ್ಘಾಟಿಸಿದರು. ಮುಖ್ಯ ಅಭ್ಯಾಗತರಾಗಿ ಕಾರ್ಯದರ್ಶಿ ಶ್ರೀ ಶ್ರೀಕೃಷ್ಣ ನೀರಮೂಲೆ, ಕಾರ್ಯಾಲಯ ಕಾರ್ಯದರ್ಶಿ ಶ್ರೀ ಎಂ.ಟಿ.ಭಟ್ಟ , ಪ್ರಾಂಶುಪಾಲ ಡಾ.ಎ.ಈಶ್ವರಪ್ರಸಾದ್, ಕ್ರೀಡಾ ಸಂಘದ ನಿರ್ದೇಶಕ ಶ್ರೀ ಪ್ರವೀಣ್ […]

Continue Reading

ಪ್ರಗತಿ ವಿದ್ಯಾಲಯದಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ

ಮೂರೂರು: ಇಲ್ಲಿಯ ಪ್ರಗತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಿನಾಂಕ 11/03/19 ರ ಸೋಮವಾರದಂದು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವು ಭಾವನಾತ್ಮಕವಾಗಿ ನಡೆಯಿತು. ಗುರುವಂದನೆಯೊಂದಿಗೆ ಆರಂಭಗೊಂಡ ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಶಿಕ್ಷಣ ಸಮಿತಿಯ ಸದಸ್ಯರಾದ ಶ್ರೀ ಟಿ ಆರ್ ಜೋಶಿಯವರು ವಹಿಸಿದ್ದರು. ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಅನಿಸಿಕೆಯೊಂದಿಗೆ ನೆನಪಿನ ಕಾಣಿಕೆಯನ್ನು ವಿದ್ಯಾರ್ಥಿಗಳು ಶಾಲೆಗೆ ಹಸ್ತಾಂತರಿಸಿದರು. ಮುಖ್ಯ ಗುರುಗಳಾದ ಶ್ರೀ ಎಮ್.ಜಿ. ಭಟ್ಟರು ಹಾಗೂ ಇತರ ಶಿಕ್ಷಕರು ಉಪಸ್ಥಿತರಿದ್ದರು. ಶ್ರೀಮತಿ ಜಯಶ್ರೀ ಭಟ್ಟರು ಸ್ವಾಗತಿಸಿದರೆ […]

Continue Reading

ಮಾದಕವ್ಯಸನದ ಮಾರಕ ಪರಿಣಾಮದ ಕುರಿತು ಮಕ್ಕಳ ಜಾಗೃತಿ ಕಾರ್ಯಕ್ರಮ

ಬದಿಯಡ್ಕ: ರಾಜ್ಯ ಜನಮೈತ್ರಿ ಪೊಲೀಸ್ ಹಾಗೂ ಕೋಝಿಕ್ಕೋಡು ಸ್ವಾತಂನಂ ಟ್ರಸ್ಟ್ನಾ ನೇತೃತ್ವದಲ್ಲಿ ಮಾದಕ ವ್ಯಸನದ ಕುರಿತು ತಿಳುವಳಿಕೆ ಮೂಡಿಸುವ ಕಾರ್ಯಕ್ರಮವೂ ಇತ್ತೀಚಿಗೆ ಬದಿಯಡ್ಕ ಶ್ರೀಭಾರತಿ ವಿದ್ಯಾಪೀಠದಲ್ಲಿ ಅಲ್ಲಿಯ ಮಕ್ಕಳಿಗಾಗಿ ನಡೆಯಿತು. ಮಾದಕ ವ್ಯಸನದ ಬಗ್ಗೆ ಎಚ್ಚರಿಕೆ ಮೂಡಿಸುವ ಅಂಗವಾಗಿ ನಡೆಯ ಈ ಸಂದೇಶ ಯಾತ್ರೆಯಲ್ಲಿ ಪಾಲಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.   ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಯಾತ್ರೆಯ ಸಂಚಾಲಕ ಶ್ರೀ ಮೋಹನ್ ವಿದ್ಯಾರ್ಥಿಗಳು ಶಾಲೆಯ ಕ್ಯಾಂಪಸ್ ಹಾಗೂ ಇತರೆಡೆಗಳಲ್ಲಿ ಮಾದಕ ಪದಾರ್ಥಗಳನ್ನು ರಾಜಾರೋಷವಾಗಿ ಸೇವಿಸುತ್ತಿರುವುದು ಕಂಡುಬರುತ್ತಿದೆ. […]

Continue Reading

ಶ್ರೀಭಾರತೀ ಸಮೂಹ ಸಂಸ್ಥೆಯಲ್ಲಿ ಮಹಿಳೋತ್ಸವ ದಿನ

  ನಂತೂರು : ಶ್ರೀ ಭಾರತೀ ಸಮೂಹ ಸಂಸ್ಥೆಗಳ ಶಂಕರಶ್ರೀ ಸಭಾಭವನದಲ್ಲಿ ಶ್ರೀ ಭಾರತೀ ಪದವಿ ಕಾಲೇಜಿನ ಮಹಿಳಾ ಸಬಲೀಕರಣ ಘಟಕದ ವತಿಯಿಂದ ಮಹಿಳೋತ್ಸವದ ದಿನಾಚರಣೆಯು ನಡೆಯಿತು. ಅಭ್ಯಾಗತರಾಗಿ ಬಂದ ಶ್ರೀಭಾರತೀ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಹಿರಿಯ ಉಪನ್ಯಾಸಕಿ ಶ್ರೀಮತಿ ಸುಭದ್ರಾ ಭಟ್ಟ ಅವರು ಕ್ರಾಯಕ್ರಮವನ್ನು ಉದ್ಘಾಟಿಸಿ ಎಲ್ಲಾ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳೆಯರ ಕಿರು ಪರಿಚಯವನ್ನು ನೀಡಿದರು.   ಶ್ರೀಭಾರತೀ ಪದವಿ ಕಾಲೇಜಿನ ಪ್ರಾಂಶುಪಾಲ ಡಾ| ಈಶ್ವರ ಪ್ರಸಾದ ಆಲಂಗಾರು ಅವರು ಮಾತನಾಡಿ, ಕಾಲೇಜಿನಲ್ಲಿ ಮಹಿಳೆಯರಿಗೆ ಹೆಚ್ಚಿನ […]

Continue Reading

ಗೋಕರ್ಣ ಶ್ರೀಕ್ಷೇತ್ರದಲ್ಲಿ ಮಹಾರಥೋತ್ಸವ

ಶ್ರೀಕ್ಷೇತ್ರ ಗೋಕರ್ಣದ ಸಾರ್ವಭೌಮ ಮಹಾಬಲೇಶ್ವರ ದೇವರ ಶ್ರೀಮನ್ಮಹಾರಥೋತ್ಸವ ಕಾರ್ಯಕ್ರಮವು ಪ್ರತಿ ವರ್ಷದಂತೆ ವಿಜೃಂಭಣೆಯಿಂದ ಸಂಪನ್ನವಾಯಿತು. ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಉತ್ಸವ ಮೂರ್ತಿಗೆ ಧಾರ್ಮಿಕವಿಧ್ಯುಕ್ತ ಕ್ರಮದಂತೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.   ಇಂದು ಶಾಂತಿಘಟಾದ್ಯಭಿಷೇಕ, ರಥ ಸಂಪ್ರೋಕ್ಷಣ, ದಂಡ ಬಲಿ, ಭೂತಬಲಿ, ಗ್ರಾಮಬಲಿ ಮುಂತಾದ ಧಾರ್ಮಿಕ ವಿಧಿವಿಧಾನಗಳು ಉಪಾಧಿವಂತರ ನೇತೃತ್ವದಲ್ಲಿ ನಡೆಯಿತು. ಆನಂತರ ಮಧ್ಯಾಹ್ನ 2.30 ಶ್ರೀಮನ್ಮಹಾರಥೋತ್ಸವ ವೈಭವಯುತವಾಗಿ ಸಂಪನ್ನವಾಯಿತು. ಉತ್ತರಕರ್ನಾಟಕ, ಬೆಂಗಳೂರು, ಮಂಗಳೂರು, ಮಹಾರಾಷ್ಟ್ರ, ಆಂದ್ರಪ್ರದೇಶ ಸೇರಿದಂತೆ ರಾಜ್ಯ ಹೊರರಾಜ್ಯಗಳಿಂದ ಆಗಮಿಸಿದ […]

Continue Reading

* ಶ್ರೀಭಾರತೀ ಸಮೂಹ ಸಂಸ್ಥೆ ; ಟೆಕ್‌ಟಿಸ್-2019 ಕಾರ್ಯಕ್ರಮ*

ನಂತೂರು : ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಶಂಕರಶ್ರೀ ಸಭಾಭವನದಲ್ಲಿ ಶ್ರೀ ಭಾರತೀ ಪದವಿ ಕಾಲೇಜಿನ ಐಟಿ ಅಸೋಸಿಯೇಶನ್ ನೇತೃತ್ವದಲ್ಲಿ ಟೆಕ್‌ಟಿಸ್-2019 ಎಂಬ ಇಂಟರ್‌ಕ್ಲಾಸ್ ಸ್ಪರ್ಧಾವಳಿಯನ್ನು ಆಯೋಜಿಸಲಾಗಿತ್ತು. ಅಭ್ಯಾಗತರಾಗಿ ನಿಮಂತ್ರಿತರಾಗಿದ್ದ ಕಾಕುಂಜೆ ಸಾಫ್ಟ್‌ವೇರ್ ಪ್ರೈವೇಟ್ ಲಿಮಿಟೆಡ್ ಮೆನೇಜಿಂಗ್ ಡೈರೆಕ್ಟರ್ ಶ್ರೀ ಜಿ.ಕೆ.ಭಟ್ಟ ಅವರು ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ಸಂಘಟಿಸಿ, ನಿಭಾಯಿಸುವ ಮತ್ತು ಕಾಲೇಜಿನ ಇತರ ವಿಭಾಗದ ವಿದ್ಯಾರ್ಥಿಗಳಿಗೆ ಸರ್ಧೆ ಆಯೋಜನೆ ಅತ್ಯುತ್ತಮವಾಗಿದೆ. ಉಪನ್ಯಾಸಕರ ಬೆಂಬಲ, ಪ್ರೋತ್ಸಾಹ, ಮಾರ್ಗದರ್ಶನವೂ ಗಮನಾರ್ಹವಾಗಿದೆ. ಇಂತಹ ಕಾರ್ಯಕ್ರಮಗಳಿಗೆ ನಿರಂತರ ಬೆಂಬಲ […]

Continue Reading

ಭಾರತೀ ಎಜುಕೇಶನ್ ಟ್ರಸ್ಟ್ : ಸ್ಕಾಲರ್‌ಶಿಪ್ ವಿತರಣೆ  

ನಂತೂರು : ಮಂಗಳೂರು ಹವ್ಯಕ ಸಭಾ ಪ್ರಾಯೋಜಿತ ಶ್ರೀ ಭಾರತೀ ಎಜುಕೇಶನ್ ಟ್ರಸ್ಟ್ ವತಿಯಿಂದ ಮಂಗಳೂರು ನಂತೂರು ಪದವು ಶ್ರೀ ಭಾರತೀ ಸಮೂಹ ಸಂಸ್ಥೆಗಳ 6 ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ವಿತರಿಸಲಾಯಿತು.   ಶ್ರೀ ಭಾರತೀ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಶ್ರೀ ಶ್ಯಾಮಸುಂದರ ಭೀಮಗುಳಿ ಅವರು ಅಧ್ಯಕ್ಷತೆ ವಹಿಸಿ, ಮಾತನಾಡಿ, ರಾಜ್ಯದ ವಿವಿಧ ಭಾಗಗಳ ವಿದ್ಯಾರ್ಥಿಗಳು ಶ್ರೀ ಭಾರತೀ ಸಮೂಹ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವುದರಿಂದ ಇಲ್ಲಿನ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ವಿತರಿಸಲಾಗುತ್ತಿದೆ. ಈ ಮೂಲಕ ಅರ್ಹ ಫಲಾನುಭವಿಗಳಿಗೆ ತಲುಪುತ್ತದೆ ಎಂದು […]

Continue Reading