|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

19ನೇ ವಾರ್ಷಿಕ ರಕ್ತದಾನ ಶಿಬಿರ

ಸಾಗರ: ಶ್ರೀಮಠದ ‘ರಕ್ತಬಂಧ’ ಸಂಘಟನೆ ಸೇರಿದಂತೆ ಹಲವು ಸಂಸ್ಥೆಗಳ ಸಹಭಾಗಿತ್ವದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಅರೆಹದ ಸೊಸೈಟಿ ಆವರಣದಲ್ಲಿ ಪ್ರಾತಿವಾರ್ಷಿಕ ರಕ್ತದಾನ ಶಿಬಿರ ನಡೆಯಿತು.

ಆಶ್ವಯುಜ ಶುಕ್ಲ ಅಷ್ಟಮಿಯಂದು (18-10-2026) ನೆಡೆದ 19ನೇ ವರ್ಷದ ರಕ್ತದಾನ ಶಿಬಿರದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನವೋದಯ ಯುವಕ ಸಂಘ ಅರೆಹದ ಇದರ ಅಧ್ಯಕ್ಷರಾದ ಪವನ್ ಕುಮಾರ್ ನಿರ್ವಹಸಿದರು. ಕಾರ್ಯಕ್ರಮವನ್ನು ಭಾರತೀಯ ಭೂ ಸೇನೆಯ ನಿವೃತ್ತ ಹವಾಲ್ದಾರ್ ಎ. ಡಿ. ಮಹಾಬಲೇಶ್ವರ ಹುಲ್ಕೋಡು ಇವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ಶ್ರೀಯುತರನ್ನು ಸನ್ಮಾನಿಸಲಾಯಿತು.

ರೆಡ್ ಕ್ರಾಸ್ ಸಂಜೀವಿನಿ ರಕ್ತ ನಿಧಿ ಶಿವಮೊಗ್ಗ ಇದರ ಸಂಚಾಲಕ ಹಾಗೂ 121 ಬಾರಿ ರಕ್ತದಾನ ಮಾಡಿದ ಧರಣೇಂದ್ರ ದಿನಕರ್, ಶ್ರೀ ಅಖಿಲ ಹವ್ಯಕ ಮಹಾಸಭಾ ಬೆಂಗಳೂರು ಇದರ ನಿರ್ದೇಶಕ ರಮೇಶ್ ಹಾರೇಗೊಪ್ಪ, ಅರೆಹದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸಸರವಳ್ಳಿ ಇದರ ಅಧ್ಯಕ್ಷ ಅಶೋಕ್ ಕುಮಾರ್,
‘ರಕ್ತಬಂಧ – ಶ್ರೀರಾಮಚಂದ್ರಾಪುರ ಮಠ’ ಇದರ ಸಂಯೋಜಕ ಕಿರಣ್ ಮುಂಗರವಳ್ಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ರಕ್ತದಾನ ಶಿಬಿರದಲ್ಲಿ 89 ಜನ ರಕ್ತದಾನ ಮಾಡಿದರು. ಕಾರ್ಯಕ್ರಮದಲ್ಲಿ ಊರಿನ ಹಿರಿಯರಾದ ಎಮ್. ಜಿ. ರಾಮಚಂದ್ರ, ಹೆಚ್. ಏನ್. ರಾಮಪ್ಪ, ಸದಾಶಿವ ಎಮ್. ಪಿ., ಪಿ.ಎ.ಸಿ.ಎಸ್. ಸಸರವಳ್ಳಿ ಇದರ ಸಿ.ಇ.ಒ ಮಂಜುನಾಥ್ ಜಿ. ಎಮ್., ಪಿ.ಎ.ಸಿ.ಎಸ್. ನಿರ್ದೇಶಕ ಮಧುರಾ ಕೃಷ್ಣಮೂರ್ತಿ, ಗ್ರಾಮಪಂಚಾಯ್ತಿ ಮಾಜಿ ಅಧ್ಯಕ್ಷೆ ಅನುಪಮ ಸಾರಂಗ, ಗಿರೀಶ್ ಹಕ್ರೆ, ನವೋದಯ ಯುವಕ ಸಂಘದ ಕಾರ್ಯದರ್ಶಿ ಪ್ರದೀಪ್ ಮರಹಾನ್ಕುಳಿ ಇವರುಗಳು ಭಾಗವಹಿಸಿದ್ದರು.