|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಕಿತ್ರೆಯಲ್ಲಿ ಗೋರಥ

ಭಟ್ಕಳ: ಗೋಸಮ್ಮಾನ ಅಭಿಯಾನದ ಅಂಗವಾಗಿ, ಗೋಹತ್ಯಾ ನಿಷೇಧಕ್ಕಾಗಿ ಹಸ್ತಾಕ್ಷರ ಸಂಗ್ರಹಕ್ಕಾಗಿ ಯಾತ್ರೆ ಮಾಡುತ್ತಿರುವ ಗೋರಥವು ಕಾರ್ತಿಕ ಕೃಷ್ಣ ಪಾಡ್ಯದಂದು (25-11-2026) ಶ್ರೀಕ್ಷೇತ್ರ ದೇವಿಮನೆಯ ಸಶಿವಶಾಂತಿಕಾಪರಮೇಶ್ವರೀ ದೇವಸ್ಥಾನವನ್ನು ತಲುಪಿತು.

ಗೋರಥಕ್ಕೆ ಪೂಜೆ ಮತ್ತು ಸಹಿ ಅಭಿಯಾನ ನಡೆಸಲಾಯಿತು. ಹೊನ್ನಾವರ ಮಂಡಲದ ಅಧ್ಯಕ್ಷರು, ಭವತಾರಿಣೀ ವಲಯದ ಅಧ್ಯಕ್ಷರು, ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಗೋರಥ ಪೂಜೆಯ ಬಳಿಕೆ ರಥವನ್ನು ಮುರುಡೇಶ್ವರಕ್ಕೆ ಬೀಳ್ಕೊಡಲಾಯಿತು.