|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಬೆಂಗಳೂರು – ‘ಗೋಸಮ್ಮಾನ’ ಸಹಿ ಅಭಿಯಾನ

ಗಿರಿನಗರದಲ್ಲಿರುವ ಶ್ರೀಮಠದ ಬೆಂಗಳೂರು ಶಾಖೆ ಶ್ರೀರಾಮಾಶ್ರಮದಲ್ಲಿ ‘ಗೋಸಮ್ಮಾನ’ ಅಭಿಯಾನದ ಅಂಗವಾಗಿ ಗೋಹತ್ಯೆ ನಿಷೇಧಕ್ಕಾಗಿ ಹಸ್ತಾಕ್ಷರ ಸಂಗ್ರಹ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಬಸವನಗುಡಿ ಶಾಸಕ ಎಲ್. ಎ. ರವಿಸುಬ್ರಹ್ಮಣ್ಯ, ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ವಿತ್ತಾಧ್ಯಕ್ಷ ಗಣೇಶ ಜೆ. ಎಲ್., ಶಾಸನತಂತ್ರದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ರಾಮಾಶ್ರಮ ಕ್ರಿಯಾ ಸಮಿತಿಯ ವಾದಿರಾಜ ಸಾಮಗ, ಹವ್ಯಕ ಮಹಾಮಂಡಲದ ಜಿ. ಜಿ. ಹೆಗಡೆ, ಡಾ| ಶಾರದಾ ಜಯಗೋವಿಂದ ಹಾಗೂ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.