ಕುಮಟಾ: ಪ್ರಗತಿ ವಿದ್ಯಾಲಯಕ್ಕೆ 21-11-2026ರಂದು ಗೋಮಾತೆಯ ಗೌರವದ ಸಹಿ ಅಭಿಯಾನದ ರಥಯಾತ್ರೆ ಆಗಮಿಸಿತು.
ಪರಮಪೂಜ್ಯ ಶ್ರೀಸಂಸ್ಥಾನದವರ ಆಶೀರ್ವಾದದಿಂದ 20-11-2026ರ ಮುಂಜಾನೆ ಕುಮಟಾ ಮಹಾಸತಿ ದೇವಸ್ಥಾನದಿಂದ ಪ್ರಾರಂಭವಾದ ಗೋಮಾತೆಯ ಸಹಿ ಅಭಿಯಾನ ರಥವು ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ರಾತ್ರೆ ವಸತಿಯನ್ನು ಪ್ರಗತಿ ವಿದ್ಯಾಲಯದ ಅವರಣದಲ್ಲಿ ಮಾಡಿತ್ತು.
21-11-2026ರ ಬೆಳಗ್ಗೆ ವಿದ್ಯಾರ್ಥಿಗಳು, ಶಿಕ್ಷಕರು, ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ರಥದ ಪೂಜಾ ಕಾರ್ಯಕ್ರಮ ಮತ್ತು ಸಹಿ ಅಭಿಯಾನದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದಲೇ ದೀಪ ಬೆಳಗಿಸಿ, ರಥದ ನಂದಿಗೆ ಆರತಿ ಮಾಡಿಸಲಾಯಿತು. ಅಭಿಯಾನ ಉದ್ದೇಶವನ್ನು ಕುಮಟಾ ಹವ್ಯಕ ಮಂಡಲ ಅಧ್ಯಕ್ಷ ಮತ್ತು ಆಡಳಿತ ಮಂಡಳಿ ಸದಸ್ಯ ಸೀತಾರಾಮ ವಿ. ಹೆಗಡೆ ಭದ್ರನ್ ವಿವರಿಸಿದರು. ಗೋಭಿಯಾನದ ಜಿಲ್ಲಾ ಸಂಚಾಲಕ ಮತ್ತು ಆಡಳಿತ ಮಂಡಳಿ ಸದಸ್ಯ ಹಾಗೂ ಸದ್ಯ ಸಂಸ್ಥೆಯ ಪ್ರಭಾರಿ ಕಾರ್ಯಾಧ್ಯಕ್ಷ ಸುಬ್ರಾಯ ಭಟ್ಟ ಮಾತನಾಡಿ ದಿನಾಂಕ 17-12-2026 ರಂದು ಬೆಂಗಳೂರಿನಲ್ಲಿ ನಡೆಯುವ ಪ್ರಾರ್ಥನಾ ಪತ್ರ ಸಲ್ಲಿಕೆ ಸಮ್ಮೇಳನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕರೆ ಕೊಟ್ಟರು.





