|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಗೋಸ್ವರ್ಗದಲ್ಲಿ ಗೋಪಾಷ್ಟಮೀ

ಸಿದ್ದಾಪುರ: ಗೋವಿಂದನು ಗೋಪಾಲಕನಾಗಿ ಹೊಣೆಗಾರಿಕೆ ಸ್ವೀಕರಿಸಿದ ಶುಭದಿನವಾದ ಗೋಪಾಷ್ಟಮಿಯನ್ನು ಗೋಸ್ವರ್ಗದಲ್ಲಿ ಆಚರಿಸಲಾಯಿತು.

ಗುರುವಂದನೆ, ಗೋವಂದನೆಯೊಂದಿಗೆ ಪ್ರಾರಂಭಮಾಡಿ ಸಪ್ತಸನ್ನಿಧಿಯಲ್ಲಿ ಮಾತೆಯರು ಗಂಗಾ ಪೂಜೆ ಮಾಡಿ ಗಂಗೆಯನ್ನು ತುಂಬಿದರು. ಪುರುಷರು ಕಾಮಧೇನು ಜಪ ನೆರವೇರಿಸಿದರು. ‘ಭಾನು’ ಗೋಮಾತೆಗೆ ಎಲ್ಲ ಮಾತೆಯರು ಸಡಗರದಿಂದ ಸೀಮಂತದ ಶಾಸ್ತ್ರ ಮಾಡಿದರು. ಸಿಹಿ ಕಡಬು, ಬೇಳೆ ಹೋಳಿಗೆ, ಕಾಯಿ ಹೋಳಿಗೆ, ಮಂಡಕ್ಕಿ ಉಂಡೆ, ನಿಪ್ಪಟ್ಟು ಗೋಗ್ರಾಸ ಹೀಗೆ ಬಗೆ ಬಗೆಯ ಖಾದ್ಯಗಳನ್ನು ನೀಡಿ ಆರತಿ ಬೆಳಗಿ ಮಾತೆಯರೆಲ್ಲ ಸಂಭ್ರಮಿಸಿದು.

ಹೊನ್ನಾವರದ ಗೀತಾ ಹೆಗಡೆಯವರ ನೇತೃತ್ವದಲ್ಲಿ 25 ಕ್ಕೂ ಅಧಿಕ ಮಾತೆಯರನ್ನೊಳಗೊಂಡ 2 ಭಜನಾ ತಂಡಗಳು ಭಜನೆ ಮಾಡಿ ಭಕ್ತಿಯ ಅಲೆಯೆಬ್ಬಿಸಿ ಗೋಮಾತೆಗೆ ಸಮರ್ಪಣೆ ಮಾಡಿದರು.‌ ಅನೇಕ ಗೋಭಕ್ತರು ಗೋಪೂಜೆ, ಗೋಗ್ರಾಸ ಸೇವೆಯನ್ನು ಸಮರ್ಪಿಸಿದರು.

ರಾಷ್ಟ್ರಾದ್ಯಂತ ನಡೆಯುತ್ತಿರುವ ಗೋಸಮ್ಮಾನ ಅಭಿಯಾನದ ಭಾಗವಾದ ಗೋಸಂರಕ್ಷಣೆಗಾಗಿ ಹಸ್ತಾಕ್ಷರ ಸಂಗ್ರಹವನ್ನೂ ಮಾಡಲಾಯಿತು.