ಸಾಗರ: ಆಶ್ವಯುಜ ಶುಕ್ಲ ತ್ರಯೋದಶಿಯಿಂದ ಹುಣ್ಣಿಮಯವರೆಗೆ (ಅ. 24 – 26) ಕೋಗೋಡಿನ ಶ್ರೀಕೇಶವನಾಥಸ್ವಾಮಿ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಿದ ಸಭಾಂಗಣದಲ್ಲಿ ಧರ್ಮಚಕ್ರ ಟ್ರಸ್ಟ್ ಇದರ ‘ತತ್ವಧಾರಾ’ ಪ್ರವಚನ ಮಾಲಿಕೆಯ ಅಡಿಯಲ್ಲಿ
ವಿದ್ವಾನ್ ಜಗದೀಶಶರ್ಮಾ ಸಂಪ ಇವರು ಭಗವದ್ಗೀತೆಯ ಕುರಿತು ಪ್ರವಚನವನ್ನು ನೀಡಿದರು.
ಶ್ರೀಕೇಶವನಾಥ ಸ್ವಾಮಿ ಟ್ರಸ್ಟ್ ಕೋಗೋಡು, ಅರೆಹದ ಕೃಷಿ ಪತ್ತಿನ ಸಹಕಾರ ಸಂಘ ಸಸರವಳ್ಳಿ, ನವೋದಯ ಯುವಕ ಸಂಘ ಅರೆಹದ ಇವರುಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಸಲಾಯಿತು. ಈ ಸಂದರ್ಭದಲ್ಲಿ ಪ್ರವಚನಕಾರರ ಮಾತಾ-ಪಿತೃಗಳನ್ನು ಸನ್ಮಾನಿಸಲಾಯಿತು. ಮೂರು ದಿನಗಳ ಕಾಲ ಸಾರ್ವಜನಿಕರು ಭಗವದ್ಗೀತೆ ಪ್ರವಚನವನ್ನು ಆಸ್ವಾದಿಸಿ ಹೃನ್ಮನಗಳಲ್ಲಿ ತುಂಬಿಕೊಂಡರು.
ಇದೇ ಸಂದರ್ಭದಲ್ಲಿ ಗೋಸ್ಪರ್ಗಕ್ಕೆ ಮೂರು ಲಕ್ಷಕ್ಕೂ ಅಧಿಕ ದೇಣಿಗೆ ನೀಡಿದ ಅರೆಹದ ಕೃಷಿ ಪತ್ತಿನ ಸಹಕಾರ ಸಂಘ ಸಸರವಳ್ಳಿ ಇದರ ಅಧ್ಯಕ್ಷರಿಗೆ ಶ್ರೀಸಂಸ್ಥಾನದವರು ಅನುಗ್ರಹಿಸಿದ ಶಾಲು, ಸ್ಮರಣಿಕೆ, ಭಾವಚಿತ್ರ ಹಾಗು ಪ್ರಸಾದವನ್ನು ನೀಡಲಾಯಿತು. ಸಹಕಾರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.


