ಪೂರಕ ಕಟ್ಟಡದ ಪ್ರವೇಶೋತ್ಸವ

ಸುದ್ದಿ

 

ಬೆಂಗಳೂರು: ವಿಜಯನಗರದಲ್ಲಿರುವ ಶ್ರೀಭಾರತೀ ವಿದ್ಯಾಲಯದ ನೂತನ ಪೂರಕ ಕಟ್ಟಡದ ಪ್ರವೇಶೋತ್ಸವವು ವೈಶಾಖ ಕೃಷ್ಣ ಪಂಚಮೀ (07-05-2026) ಹಾಗೂ ಷಷ್ಠಿಯಂದು (08-05-2026) ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿಗಳವರ ದಿವ್ಯಾಶೀರ್ವಾದಗಳೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ‌ ಮೂಲಕ ನಡೆಯಿತು.

ಪಂಚಮಿಯ ಸಂಜೆ ಗುರುವಂದನೆ, ಪುಣ್ಯಾಹ ಮುಂತಾದ ವಿಧಿಗಳು ಸಂಪನ್ನಗೊಂಡವು. ಷಷ್ಠಿಯಂದು ಗಣಪತಿ ಹವನ, ನೂತನ ಕಟ್ಟಡದ ಪ್ರವೇಶ ಹಾಗೂ ಶ್ರೀಸತ್ಯನಾರಾಯಣ ಪೂಜೆಗಳು ನಡೆದವು.

ಕಾರ್ಯಕ್ರಮದಲ್ಲಿ ಸಂಸ್ಥೆಯ ವಿಶ್ವಸ್ತ ಮಂಡಳಿಯ ಕಾರ್ಯದರ್ಶಿಗ ಜಿ. ಎಮ್. ಹೆಗಡೆ, ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷೆ ಡಾ. ಶಾರದಾ ಜಯಗೋವಿಂದ, ಉಪಾಧ್ಯಕ್ಷ ಪಿ. ಜೆ. ಭಟ್, ಕಾರ್ಯದರ್ಶಿ ನಾಗವೇಣಿ ಭಾಗವತ್, ಜಂಟಿ ಕಾರ್ಯದರ್ಶಿ ಡಾ. ಪರಮೇಶ್ವರ ವಿ. ಪಂಡಿತ್, ಖಜಾಂಚಿ ಶ್ರೀಪಾದ ಗಣಪತಿ ಭಟ್ ಸಾರಂಗ, ಸದಸ್ಯರಾದ ಸುಜಾತಾ ಶ್ಯಾನುಭೋಗ್, ಶಿವರಾಜ್ ಪೆರ್ಮುಖ, ಪ್ರಭಾಕರ್ ಅಲಗೋಡು, ಶಿವರಂಜನ್ ಬೆರ್ಕಡವು, ಪ್ರಾಂಶುಪಾಲೆ ವರ್ಷಾ ಎಸ್. ಎಸ್., ಮುಖ್ಯೋಪಾಧ್ಯಾಯ ಸತ್ಯನಾರಾಯಣ ಭಟ್ ಉಪಸ್ಥಿತರಿದ್ದರು.

ಶಿಕ್ಷಕರು, ಸಿಬ್ಬಂದಿ ಹಾಗೂ ಹಿತೈಷಿಗಳ ಸಹಕಾರದೊಂದಿಗೆ ಬೆಂಗಳೂರು ಉತ್ತರ ಹಾಗೂ ದಕ್ಷಿಣ ಮಂಡಲ ಮತ್ತು ವಿವಿಧ ವಲಯಗಳ ಮಾತೆಯರು, ಪದಾಧಿಕಾರಿಗಳು ಹಾಗೂ ಭಕ್ತರ ಉಪಸ್ಥಿತಿಯಿಂದ ಕಾರ್ಯಕ್ರಮವು ಭಕ್ತಿಭಾವಪೂರ್ಣವಾಗಿ ಮತ್ತು ಯಶಸ್ವಿಯಾಗಿ ನೆರವೇರಿತು.

Leave a Reply

Your email address will not be published. Required fields are marked *