ರಾಮಕಥೆಯ ಕವಿ ಡಾ| ಗಜಾನನಶರ್ಮಾ ಹುಕ್ಲು ಇವರ ಕಾದಂಬರಿ ಲೋಕಾರ್ಪಣೆ. ಲಿಂಗನಮಕ್ಕಿ ಅಣೆಕಟ್ಟೆಯಲ್ಲಿ ಮುಳುಗಿದ ಬದುಕಿನ ಬವಣೆಯ ಕಥಾನಕ.

Continue Reading

ಆದಿಗುರು ಶಂಕರರ ಚಿತ್ರರಚನೆ ಸಮರ್ಪಿಸಿದ ಚಿತ್ರಕಾರ ರವೀಂದ್ರ ಹೆಗಡೆ

ಬೆಂಗಳೂರು: ಸಿದ್ದಾಪುರ ಮಂಡಲದ ಮುಗದೂರಿನ ಚಿತ್ರ ಕಲಾವಿದ ಶ್ರೀ ರವೀಂದ್ರ ಹೆಗಡೆಯವರು ಆದಿಗುರು ಶಂಕರಾಚಾರ್ಯ ಅವರ ತ್ವರಿತ ಚಿತ್ರ (ಸ್ಪೀಡ್ ಪೈಂಟ್) ಬಿಡಿಸಿ ಗಿರಿನಗರದ ರಾಮಾಶ್ರಮದಲ್ಲಿ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳಿಗೆ ಸಮರ್ಪಿಸಿ ಪ್ರಶಂಸೆ ಹಾಗೂ ಆಶೀರ್ವಾದ ಪಡೆದರು.   ಹೊಸನಗರದ ಗುರುಕುಲದಲ್ಲಿ ವಿದ್ಯಾರ್ಥಿಯಾಗಿದ್ದ ರವೀಂದ್ರ ಶ್ರೀ ರಾಮಕೃಷ್ಣ ಹೆಗಡೆಯವರ ಪುತ್ರ. ಸದ್ಯ ಡಿಪ್ಲೊಮಾ ಅಭ್ಯಾಸ ಮಾಡುತ್ತಿದ್ದು, ಸ್ವತಃ ತಾನೇ ಸ್ಪೀಡ್ ಪೈಂಟ್ ಕಲೆಯನ್ನು ಕಲಿತಿದ್ದರು.   ಆದಿಗುರು ಶಂಕರಾಚಾರ್ಯರ ಅಂದವಾದ ಚಿತ್ರ […]

Continue Reading

ಮುಳ್ಳೇರ್ಯ ಹವ್ಯಕ ಮಂಡಲದ ಸಭೆ

ಶ್ರೀಸಂಸ್ಥಾನದವರ ಮಾರ್ಗದರ್ಶನದಂತೆ ಮುಳ್ಳೇರ್ಯ ಹವ್ಯಕ ಮಂಡಲದ ಮಾಸಿಕ ಸಭೆಯು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಮಠ ಶ್ರಾವಣಕೆರೆ ಸಭಾ೦ಗಣದಲ್ಲಿ ಜರಗಿತು.   ಮಂಡಲಾಧ್ಯಕ್ಷ ಪ್ರೊ. ಟಿ. ಶ್ರೀಕೃಷ್ಣ ಭಟ್ ಇವರು ಅಧ್ಯಕ್ಷತೆ ವಹಿಸಿದ್ದರು.   ಶ್ರಾವಣಕೆರೆ ಮಠದಲ್ಲಿ ಜನವರಿ 16 ರಿ೦ದ 20 ರ ತನಕ ಶ್ರೀಸಂಸ್ಥಾನದವರ ಪೂರ್ಣಾನುಗ್ರಹ ಮತ್ತು ದಿವ್ಯ ಉಪಸ್ಥಿತಿಯೊಂದಿಗೆ ಜರಗಲಿರುವ ಬ್ರಹ್ಮಕಲಶೋತ್ಸವ ಸಮಾರ೦ಭದ ಕುರಿತು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀ ರಾಧಾಕೃಷ್ಣ ಹೆಬ್ಬಾರ ಅವರು ಮಾಹಿತಿಗಳನ್ನಿತ್ತರು.   ಕಾರ್ಯದರ್ಶಿ ಶ್ರೀ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆಯವರು […]

Continue Reading

ಮಂಗನಕಾಯಿಲೆ ನಿವಾರಣೆಗಾಗಿ ಹವ್ಯಕ ಮಹಾಮಂಡಲದಿಂದ ಶ್ರೀಕರಾರ್ಚಿತ ದೇವರಲ್ಲಿ ಪ್ರಾರ್ಥನೆ

ಬೆಂಗಳೂರು: ಮಲೆನಾಡಿನ ಕಾಡಂಚಿನಲ್ಲಿ ಮರಣ ಮೃದಂಗ ಬಾರಿಸತೊಡಗಿದ ಕ್ಯಾಸನೂರು ಫಾರೆಸ್ಟ್ ಡಿಸೀಸ್ ಅಥವಾ ಮಂಗನ ಕಾಯಿಲೆಯ ನಿವಾರಣೆಗಾಗಿ ದೇವರ ಮೊರೆ ಹೋಗಲಾಗಿದೆ.   ಈ ಗಂಭೀರ ಕಾಯಿಲೆಯು ನಿಯಂತ್ರಣವಾಗಿ ಸಮಸ್ತ ಜನರಿಗೆ ಆರೋಗ್ಯ, ಸುಭಿಕ್ಷೆ ಲಭಿಸಲೆಂದು ದಿನಾಂಕ 07.01.2018 ರಂದು ಶ್ರೀಕರಾರ್ಚಿತ ಶ್ರೀರಾಮದೇವರು, ಶ್ರೀಚಂದ್ರಮೌಳೀಶ್ವರ ಶ್ರೀರಾಜರಾಜೇಶ್ವರೀ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.   ಈ ಸಂದರ್ಭದಲ್ಲಿ ಹವ್ಯಕ ಮಹಾಮಂಡಲ ಅಧ್ಯಕ್ಷೆ ಶ್ರೀಮತಿ ಈಶ್ವರಿ ಶಾಮಭಟ್ ಬೇರ್ಕಡವು, ಪ್ರಧಾನ ಕಾರ್ಯದರ್ಶಿ ಶ್ರೀ ಹರಿಪ್ರಸಾದ್ ಪೆರಿಯಾಪ್ಪು ಹಾಗೂ ಬೆಂಗಳೂರು ಮಂಡಲದ ಪದಾಧಿಕಾರಿಗಳು […]

Continue Reading

ರಾಮಪದಕ್ಕೊಂದು ಅಲ್ಪವಿರಾಮ

  ಪ್ರತಿ ಜೀವದ ಕೊನೆಯ ಗುರಿಯಾದ ಮುಕ್ತಿಯ ಮೊದಲ ಹಂತ ಸತ್ಸಂಗ. ಸತ್ಸಂಗ ಮಾಡಲು ಏಕಾದಶಿಯ ಹರಿದಿನಕ್ಕಿಂತ ಶ್ರೇಷ್ಠ ಪರ್ವಕಾಲ ಯಾವುದಿರಬಹುದು! ರಾಮನ ಪದಗಳನ್ನು, ರಾಗದಲ್ಲಿ ಪೋಣಿಸಿ ಭಾವದ ಸುಗಂಧ ಬೀರುವ ‘ರಾಮಪದ’ ವೆಂಬ ವಿನೂತನ ಸತ್ಸಂಗವನ್ನು ಶ್ರೀಸಂಸ್ಥಾನದವರು ಅಂತಹ ಪರ್ವಕಾಲವಾದ ಪ್ರತಿ ಏಕಾದಶಿಯಂದು ಅನುಗ್ರಹಿಸಿದರು. ಶಾಸನತಂತ್ರದ ಕಲಾರಾಮ ವಿಭಾಗದ ಅಡಿಯಲ್ಲಿ ಈ ರಾಮಪದವೆಂಬ ಸತ್ಸಂಗ ಆಯೋಜಿತಗೊಂಡಿತು.   ಹೇಮಲಂಬ ಸಂವತ್ಸರದ ರಾಮನವಮಿ (04-04-2017)ಯಿಂದ ಈ ವಿಶಿಷ್ಟ ರಾಮಪದವು ಹೊಸನಗರದ ಪ್ರಧಾನಮಠದಲ್ಲಿ ಪ್ರಾರಂಭಗೊಂಡಿತು. ನುರಿತ ಕಲಾವಿದರಿಂದ ಮೊದಲ್ಗೊಂಡು […]

Continue Reading

ಅಮೃತಮಹೋತ್ಸವಕ್ಕೆ ವೈಭವದ ಚಾಲನೆ

ಎಲ್ಲರನ್ನೂ ಕರೆಯುವುದು, ಎಲ್ಲರ ಜೊತೆ ಸಾಗುವುದು ಹವ್ಯಕತ್ವ –  ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಹವ್ಯಕ ಸಮಾಜ 100% ಸುಶಿಕ್ಷಿತ ಎಂಬುದಯ ನಿಜಕ್ಕೂ ಹೆಮ್ಮೆಯ ವಿಚಾರ – ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ವ್ಯಕ್ತಿಗೂ ಸಂಸ್ಥೆಗೂ ವ್ಯತ್ಸಾಸವಿದೆ. 75 ವರ್ಷಕ್ಕೆ ವ್ಯಕ್ತಿ ವೃದ್ಧಾಪ್ಯ ಹೊಂದಿ ಮರಣಕ್ಕೆ ಹತ್ತಿರವದರೇ, ಸಂಸ್ಥೆ 75   ವರ್ಷ ಪೂರೈಸಿದಾಗ ಅಮೃತವಾಗುತ್ತದೆ. ಅಮೃತಮಹೋತ್ಸವವನ್ನು ಆಚರಿಸಿಕೊಳ್ಳುತ್ತದೆ. ವ್ಯಕ್ತಿ ದುರ್ಬಲನಾದರೆ ಸಂಸ್ಥೆ ಮತ್ತಷ್ಟು ಸಶಕ್ತವಾಗುತ್ತದೆ. ಅಂತಹ 75 ವರ್ಷಗಳನ್ನು ಪೂರೈಸಿದ ಅಖಿಲ ಹವ್ಯಕ ಮಹಾಸಭೆಗೆ ಪರ್ಯಾಯ ಇಲ್ಲ. ಇನ್ನೊಂದಲ್ಲ ಹನ್ನೊಂದು ಒಕ್ಕೂಟಗಳನ್ನು ಕಟ್ಟಬಹುದು, ಆದರೆ ಏಳು […]

Continue Reading

ಹೆಚ್ ಕೆ ಪಾಟೀಲ್

ಹೆಚ್ ಕೆ ಪಾಟೀಲ್ ಹವ್ಯಕ ಸಮುದಾಯದೊಂದಿಗೆ ನನ್ನ ಸಂಬಂಧಗಳು ಅನುಪಮವಾದದ್ದು, ನಾನು ಅನೇಕ ಹುದ್ದೆಗಳನ್ನು ನಿರ್ವಹಿಸುವುದರ ಹಿಂದೆ ಹವ್ಯಕ ಸಮಾಜದ ಕೊಡುಗೆ ಅವಿಸ್ಮರಣೀಯ. ಸಹಕಾರಿ ಕ್ಷೇತ್ರದ ಬೆಳವಣಿಗೆಯಲ್ಲಿ ಹವ್ಯಕರ ಕೊಡುಗೆಯನ್ನು ನಾಡಿನ ಜನತೆ ಸದಾ ಸ್ಮರಸಬೇಕಿದೆ. ಸಹಸ್ರಾರು ಸಹಕಾರಿ ಸಂಘಗಳನ್ನು ಹುಟ್ಟುಹಾಕಿ ಯಶಸ್ವಿಯಾಗಿ ಮುನ್ನೆಡೆಸಿ, ಅನೇಕ ಸಂಸ್ಥೆಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಿದ ಕೀರ್ತಿ ಹವ್ಯಕರದ್ದು. ಪೂಜ್ಯ ರಾಘವೇಶ್ವರ ಶ್ರೀಗಳ ಅನುಪಮವಾದ ಆಶೀರ್ವಾದ ನನ್ನ ಮೇಲಿದೆ. ಆ ಸಮಾಜದ ಜೊತೆ ಸಂಬಂಧ ಇರುವುದರಿಂದ ಶ್ರೀಗಳು ‘ಪಾಟೀಲರೇ ನೀವು ಕೂಡ […]

Continue Reading

ನ್ಯಾ. ಶಿವರಾಜ್ ಪಾಟೀಲ್

ನ್ಯಾ. ಶಿವರಾಜ್ ಪಾಟೀಲ್ ಸಮುದಾಯದ ಸಂಘಟನೆಗಳು ತಪ್ಪಲ್ಲ, ನಮ್ಮ ಸಂತೋಷಕ್ಕಾಗಿ ಸಂಘಟನೆಗಳು ಬೇಕು ಹೊರತು ಬೇರೆಯವರಿಗೆ ದುಃಖ ನೀಡಲಲ್ಲ. ಸಂಘಟನೆ ಅಭಿವೃದ್ಧಿಗೆ ಕಾರಣವಾಗಬೇಕು ಹೊರತು ಮತ್ತೊಬ್ಬರಿಗೆ ಮಾರಕವಾಗಬಾರದು. ಈ ದಿಶೆಯಲ್ಲಿ ತೊಡಗಿಸಿಕೊಂಡ ಎಲ್ಲಾ ಸಂಘಟನೆಗಳಿಗೆ ನನ್ನ ಸಹಮತಿ ಇದೆ. ಹವ್ಯಕ ಮಹಾಸಭೆ ಈ ದಿಶೆಯಲ್ಲಿ ತೊಡಗಿಸಿಕೊಂಡಿದೆ ಎಂಬುದು ನನ್ನ ಅಭಿಪ್ರಾಯ. ಹವ್ಯಕ ಸಮಾಜ ಈ ರೂಪದಲ್ಲಿ ಸಂಘಟಿತವಾಗಿ 75 ವರ್ಷಗಳಾಗಿದೆ. ಇಲ್ಲಿಯ ವರೆಗಿನ ಕಾರ್ಯಗಳನ್ನು ಅವಲೋಕನ ಮಾಡಿಕೊಂಡು ಮುಂದೇನು ಮಾಡಬಹುದು ಎಂಬ ಕುರಿತು ಆಲೋಚಿಸಬೇಕು. ಮುಂದೆ ನಡೆಯುವ […]

Continue Reading

ಆರ್ ವಿ ದೇಶಪಾಂಡೆ

ಆರ್ ವಿ ದೇಶಪಾಂಡೆ ಹವ್ಯಕ ಸಮಾಜದ ಜೊತೆಗೆ ನಾನು ಅವಿನಾಭಾವದ ಸಂಬಂಧವನ್ನು ಹೊಂದಿದ್ದೇನೆ. ಹವ್ಯಕ ಸಮಾಜ ತನ್ನಲ್ಲಿ ಅನೇಕ ಗುಣಾತ್ಮಕ ಬದಲಾವಣೆಗಳೊಂದಿಗೆ ಮುನ್ನೆಡೆಯುತ್ತಿದೆ. ಇದು ಪ್ರಜ್ಞಾವಂತ ಸಮುದಾಯವಾಗಿದೆ. ರಾಮಚಂದ್ರಾಪುರಮಠದ ಶ್ರೀಗಳ ನೇತೃತ್ವದಲ್ಲಿ ಸಮಾಜ ಉತ್ತಮ ರೀತಿಯಲ್ಲಿ ಮುಂದುವರಿಯುತ್ತಿದ್ದು, ಸಮಾಜದಲ್ಲಿ ಸಂಸ್ಕೃತಿ ಸಂಪ್ರದಾಯಗಳನ್ನು ಉಳಿಸಿಬೆಳೆಸುತ್ತಿರುವ ಕಾಯಕದಲ್ಲಿ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಕಾರ್ಯ ಅನುಪಮವಾದದ್ದು. ಮನುಷ್ಯ ಸಮಾಜಕ್ಕಷ್ಟೇ ಅಲ್ಲದೇ, ಪೂಜ್ಯ ಶ್ರೀಗಳು ಗೋವಿಗಾಗಿ ಜಗತ್ತಿನ ಮೊದಲ ಸ್ವರ್ಗವನ್ನು ನಿರ್ಮಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಸಮಾಜ ಮುಂದುವರಿಯಲಿ. ನನ್ನ […]

Continue Reading

ಹವ್ಯಕ ಸಮ್ಮೇಳನ

ಲೋಕದ ಒಳಿತಿಗಾಗಿ ಆರ್ವಿಭವಿಸಿದ ಸಮಾಜ ಹವ್ಯಕ ಸಮಾಜ. ಉತ್ತರದ ಅಹಿಚ್ಛತ್ರದಿಂದ ರಾಜ ಮಯೂರವರ್ಮ 30 ವೈದಿಕ ಕುಟುಂಬಗಳನ್ನು ಕರೆತಂದ. ಇದೇ ಕುಟುಂಬಗಳು ಹವ್ಯಕ ಸಮುದಾಯವಾಗಿ ರೂಪುಗೊಂಡು ಲೋಕವಿಖ್ಯಾತವಾಯಿತು. ಹವ್ಯಕ ಸಮುದಾಯ ಅನೇಕ ವೈಶಿಷ್ಟ್ಯಗಳನ್ನು ಹೊಂದಿದೆ ಎಂಬುದು ಸಮಾಜಕ್ಕೆ ಹೆಮ್ಮೆಯ ವಿಚಾರ. ಹವ್ಯಕರು ತಮ್ಮದೇ ಆದ ಹವಿಗನ್ನಡ ಭಾಷೆಯನ್ನು ಹೊಂದಿದೆ, ಅಡಿಕೆ ಕೃಷಿ ನಮ್ಮ ಪಾರಂಪರಿಕ ಕೃಷಿಯಾದರೆ, ಯಕ್ಷಗಾನ ಕ್ಷೇತ್ರದಲ್ಲಿ ಹವ್ಯಕರ ಕೊಡುಗೆ ಅನುಪಮವಾದದ್ದು. ಹಾಗೆಯೇ ಹವ್ಯಕರಲ್ಲಿ ಅನಕ್ಷರಸ್ಥರು ಇಲ್ಲ ಎಂಬುದು ಗಮನಾರ್ಹ. ಐತಿಹಾಸಿಕವಾದ ಪ್ರಥಮ ವಿಶ್ವ ಹವ್ಯಕ […]

Continue Reading