2.05.2019

ದಿನ ಭವಿಷ್ಯ

         
ವಿಕಾರಿನಾಮ ಸಂವತ್ಸರ / ಉತ್ತರಾಯಣ /
ವಸಂತ ಋತು / ಚೈತ್ರ ಮಾಸ /
ಕೃಷ್ಣ ಪಕ್ಷ /ತ್ರಯೋದಶಿ ತಿಥಿ/

ಗುರುವಾರ/ಉತ್ತರಭಾದ್ರ ನಕ್ಷತ್ರ /

ದಿನಾಂಕ 02.05.2019

 °~•~°~•~°~•~°~•~°~•~°

ಮೇಷ

          ಉತ್ತಮ ಶ್ರದ್ಧೆ ಹಾಗೂ ಪರಿಶ್ರಮದಿಂದ ಮುನ್ನಡೆದರೆ  ತೊಡಗಿಸಿಕೊಂಡ ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ ಕಂಡು ಬರುತ್ತದೆ. ಉದ್ಯೋಗ ವ್ಯವಹಾರ ಕ್ಷೇತ್ರಗಳಲ್ಲಿ ನಿಧಾನಗತಿ ಅಭಿವೃದ್ಧಿ ಕಂಡು ಬರುವುದು. ಹಣಕಾಸಿನ ವಿಚಾರದಲ್ಲಿ ಉತ್ತಮ ಏಳಿಗೆ ದೊರೆಯುತ್ತದೆ. ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ನೆಲೆಗೊಳ್ಳುವುದು. ಜ್ವರ, ತಲೆನೋವು, ಚರ್ಮ ಸಂಬಂಧಿ ತೊಂದರೆಗಳು ಮೊದಲಾದ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳು  ಉತ್ತಮ ಪರಿಶ್ರಮದಿಂದ ಮುನ್ನಡೆದರೆ ಉತ್ತಮ ಅಭಿವೃದ್ಧಿ ಕಂಡು ಬರುವುದು



ಪರಿಹಾರ:
ದೇವಿಯ ಆರಾಧನೆಯಿಂದ ಶುಭ.

ಜಪಿಸಲು :
ಸರ್ವಮಂಗಲಮಾಂಗಲ್ಯೇ
ಶಿವೇ ಸರ್ವಾರ್ಥಸಾಧಿಕೇ |
ಶರಣ್ಯೇ ತ್ರ್ಯಂಬಕೇ ಗೌರಿ
ನಾರಾಯಣಿ ನಮೋಸ್ತು ತೇ ||

°~•~°~•~°~•~°~•~°~•~°

    

ವೃಷಭ

         ತೊಡಗಿಸಿಕೊಂಡ ಕೆಲಸಕಾರ್ಯಗಳಲ್ಲಿ ಸಣ್ಣಪುಟ್ಟ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಹಣಕಾಸಿನ ವಿಚಾರದಲ್ಲಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಮೋಸ ಹೋಗುವ ಲಕ್ಷಣಗಳು ಇರುವುದರಿಂದ ಜಾಗರೂಕತೆಯಿಂದ ವ್ಯವಹರಿಸಿ.  ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ನೆಲೆಗೊಳ್ಳುವುದು. ಆರೋಗ್ಯ ಸಂಬಂಧವಾದ ಸಣ್ಣಪುಟ್ಟ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಪರಿಶ್ರಮದಿಂದ ಆಲಸ್ಯತನ ವನ್ನು ಬಿಟ್ಟು ಮುಂದುವರೆದರೆ ಮಾತ್ರ ಅಭಿವೃದ್ಧಿ ಕಂಡು ಬರುವುದು




ಪರಿಹಾರ
ದೇವಿಯ ಆರಾಧನೆಯಿಂದ ಶುಭ.

ಜಪಿಸಲು :
ಶ್ರೀದುರ್ಗಾಯೈ ನಮಃ  / ಶ್ರೀಶಾಂತ್ಯೈ ನಮಃ / ಶ್ರೀಶಾಂಭವ್ಯೈ ನಮಃ  / ಶ್ರೀಭೂತಿದಾಯಿನ್ಯೈ ನಮಃ / ಶ್ರೀಶಂಕರಪ್ರಿಯಾಯೈ ನಮಃ  / ಶ್ರೀನಾರಾಯಣ್ಯೈ ನಮ: / ಶ್ರೀಭದ್ರಕಾಲ್ಯೈ ನಮಃ / ಶ್ರೀಶಿವದೂತ್ಯೈ ನಮಃ  / ಶ್ರೀಮಹಾಲಕ್ಷ್ಮ್ಯೈ ನಮಃ / ಶ್ರೀಮಹಾಮಾಯಾಯೈ ನಮಃ / ಶ್ರೀಯೋಗನಿದ್ರಾಯೈ ನಮಃ  / ಶ್ರೀಚಂಡಿಕಾಯೈ ನಮಃ ||

°~•~°~•~°~•~°~•~°~•~°



ಮಿಥುನ


   ನಿಮ್ಮ ಉತ್ತಮ ಕಾರ್ಯಕ್ಷಮತೆಗೆ ಮೆಚ್ಚಿ ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆಯ ಮಾತುಗಳು ಕೇಳಿ ಬರುವುದು ಹಾಗೂ ಉನ್ನತ ಸ್ಥಾನಮಾನ ಗೌರವಗಳು ಲಭಿಸುತ್ತದೆ.  ಹಣಕಾಸಿನ ವಿಚಾರದಲ್ಲಿ ಉತ್ತಮ ಅಭಿವೃದ್ಧಿ ಕಂಡು ಬರುವುದು. ಜೀವನದಲ್ಲಿ ಸುಖ ಶಾಂತಿ ನೆಲೆಗೊಳ್ಳುವುದು. ಆಹಾರದ ಮುಖಾಂತರವಾಗಿ ಆರೋಗ್ಯ ಹದಗೆಡುವ ಲಕ್ಷಣ ಗಳಿರುವುದರಿಂದ ಜಾಗರೂಕತೆಯಿಂದ ಇರಬೇಕು. ವಾಹನ ಪ್ರಯಾಣದ ಸಂದರ್ಭಗಳಲ್ಲಿ ಜಾಗರೂಕತೆಯಿಂದ ಇರಬೇಕು. ವಿದ್ಯಾರ್ಥಿಗಳು  ಉತ್ತಮ ಪರಿಶ್ರಮದಿಂದ ಮುನ್ನಡೆಯಬೇಕು.



ಪರಿಹಾರ  
ಶ್ರೀಕೃಷ್ಣನ ಆರಾಧನೆ,ಗುರುದೇವತಾ ಆರಾಧನೆಯಿಂದ ಶುಭ.

ಜಪಿಸಲು :
ವಸುದೇವಸುತಂ ದೇವಮ್

ಕಂಸಚಾಣೂರಮರ್ದನಮ್ |

ದೇವಕೀಪರಮಾನನ್ದಮ್

ಕೃಷ್ಣಂ ವನ್ದೇ ಜಗದ್ಗುರುಮ್ ||

  °~•~°~•~°~•~°~•~°~•~°



ಕರ್ಕಾಟಕ

    ಕೆಲಸ ಕಾರ್ಯಗಳಲ್ಲಿ ಉತ್ತಮ ಅಭಿವೃದ್ಧಿ ಕಂಡು ಬರುತ್ತದೆ. ಹಣಕಾಸಿನ ವಿಚಾರದಲ್ಲಿ ಉತ್ತಮ ಏಳಿಗೆ ಕಂಡುಬರುವುದು. ದಾಂಪತ್ಯ ಜೀವನದಲ್ಲಿ  ಕಲಹ ಸಂಭವಿಸುವ ಲಕ್ಷಣಗಳು ಇರುವುದರಿಂದ ಜಾಗರೂಕತೆಯಿಂದ ಇರಬೇಕು. ಮೈ ಕೈ ಗಂಟು ನೋವು, ತಲೆನೋವು, ದೇಹದಲ್ಲಿ ವಿಪರೀತ ಸುಸ್ತು, ಮಲಬದ್ಧತೆ ಮೊದಲಾದ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಉತ್ತಮ ಪರಿಶ್ರಮದಿಂದ ಮುನ್ನಡೆಯಬೇಕು



ಪರಿಹಾರ
ಕುಲದೇವತಾ ಆರಾಧನೆ ಅಗತ್ಯ. ದೇವಿಯ ಆರಾಧನೆಯಿಂದ ಶುಭ.

ಜಪಿಸಲು :
ಸರ್ವಸ್ವರೂಪೇ ಸರ್ವೇಶಿ
ಸರ್ವಶಕ್ತಿಸಮನ್ವಿತೇ |
ಭಯೇಭ್ಯಸ್ತ್ರಾಹಿ ನೋ ದೇವಿ  
ದುರ್ಗೇದೇವಿ ನಮೋಸ್ತು ತೇ ||

 °~•~°~•~°~•~°~•~°~•~°



ಸಿಂಹ

      ಉತ್ತಮ ಪರಿಶ್ರಮದಿಂದ ತೊಡಗಿಸಿಕೊಂಡರೆ ಮಾತ್ರ ಅಭಿವೃದ್ಧಿ ಕಂಡು ಬರುವುದು ಹಾಗೂ ತೊಡಗಿಸಿಕೊಂಡ ಕೆಲಸಕಾರ್ಯಗಳಲ್ಲಿ ಅಡೆತಡೆಗಳು ಕಷ್ಟ ನಷ್ಟಗಳನ್ನು ಎದುರಿಸಬೇಕಾಗುತ್ತದೆ. ಹಣಕಾಸಿನ ವಿಚಾರದಲ್ಲಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ, ಜಾಗರೂಕತೆಯಿಂದ ಖರ್ಚುವೆಚ್ಚಗಳನ್ನು ನಿಭಾಯಿಸಿ. ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ನೆಲೆಗೊಳ್ಳುತ್ತದೆ. ಆರೋಗ್ಯದ ಸಂಬಂಧವಾದ ಸಣ್ಣಪುಟ್ಟ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಪರಿಶ್ರಮದಿಂದ ಮಾತ್ರ  ಮುನ್ನಡೆ ದೊರೆಯುತ್ತದೆ


ಪರಿಹಾರ
ಶಿವನ ಆರಾಧನೆ ಅಗತ್ಯ.

ಜಪಿಸಲು :
ಶ್ರೀಮಹಾದೇವಾಯ ನಮಃ / ಶ್ರೀಮಹೇಶ್ವರಾಯ ನಮಃ / ಶ್ರೀಶಂಕರಾಯ ನಮಃ / ಶ್ರೀವೃಷಭಧ್ವಜಾಯ ನಮಃ / ಶ್ರೀಕೃತ್ತಿವಾಸಸೇ ನಮಃ / ಶ್ರೀಕಾಮಾಂಗನಾಶನಾಯ ನಮಃ / ಶ್ರೀದೇವದೇವೇಶಾಯ ನಮಃ /  ಶ್ರೀಶ್ರೀಕಂಠಾಯ ನಮಃ / ಶ್ರೀಹರಾಯ ನಮಃ / ಶ್ರೀಪಾರ್ವತೀಪತಯೇ ನಮಃ / ಶ್ರೀರುದ್ರಾಯ ನಮಃ / ಶ್ರೀಶಿವಾಯ ನಮಃ ||

    °~•~°~•~°~•~°~•~°~•~°      


ಕನ್ಯಾ


    ವ್ಯಾಪಾರಸ್ಥರಿಗೆ, ಕೃಷಿಕರಿಗೆ ಉತ್ತಮ ಅಭಿವೃದ್ಧಿ ದೊರೆಯುತ್ತದೆ. ನೂತನ ವ್ಯವಹಾರವನ್ನು ತೊಡಗಿಸಿಕೊಳ್ಳುವ ಅವರಿಗೆ ಉತ್ತಮ ಅವಕಾಶಗಳು ಒದಗಿ ಬರುತ್ತದೆ. ಹಣಕಾಸಿನ ವಿಚಾರದಲ್ಲಿ ಉತ್ತಮ ಏಳಿಗೆ ದೊರೆಯುತ್ತದೆ ಹಾಗೂ ಉತ್ತಮ ಕಾರ್ಯಗಳಿಗೆ ಹಣವನ್ನು ವಿನಿಯೋಗಿಸಿ. ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ನೆಲೆಗೊಳ್ಳುವುದು. ಆರೋಗ್ಯ ಸಂಬಂಧವಾದ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಉತ್ತಮ ಮುನ್ನಡೆಯನ್ನು ಸಾಧಿಸುತ್ತಾರೆ



ಪರಿಹಾರ
ಶ್ರೀರಾಮದೇವರ ಆರಾಧನೆಯಿಂದ  ಶುಭ.

ಜಪಿಸಲು :
ರಾಮಾಯ ರಾಮಭದ್ರಾಯ
ರಾಮಚಂದ್ರಾಯ ವೇಧಸೇ |  
ರಘುನಾಥಾಯ ನಾಥಾಯ
ಸೀತಾಯಾಃ ಪತಯೇ ನಮಃ ||

  °~•~°~•~°~•~°~•~°~•~°       


ತುಲಾ


        ಮಾಡುವಂತಹ ಕೆಲಸ ಕಾರ್ಯಗಳಲ್ಲಿ  ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ದಾಂಪತ್ಯ ಜೀವನದಲ್ಲಿ ಸಂಭವಿಸುವ ಲಕ್ಷಣಗಳು ಇರುವುದರಿಂದ ಜಾಗರೂಕತೆಯಿಂದ ಇರಬೇಕು. ಶೀತ ಜ್ವರ, ತಲೆನೋವು ಮೊದಲಾದ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಮಾನಸಿಕವಾದ  ಸ್ಥಿಮಿತವನ್ನು ಕಳೆದುಕೊಳ್ಳಬೇಕಾಗುತ್ತದೆ. ವಿದ್ಯಾರ್ಥಿಗಳು ಉತ್ತಮ ಪರಿಶ್ರಮದಿಂದ ಏಳಿಗೆಯನ್ನು ಸಾಧಿಸುತ್ತಾರೆ


ಪರಿಹಾರ  
ದುರ್ಗಾದೇವಿಯ ಆರಾಧನೆಯಂದ ಶುಭ.

ಜಪಿಸಲು:
ಶ್ರೀದುರ್ಗಾಯೈ ನಮಃ  / ಶ್ರೀಶಾಂತ್ಯೈ ನಮಃ / ಶ್ರೀಶಾಂಭವ್ಯೈ ನಮಃ / ಶ್ರೀಭೂತಿದಾಯಿನ್ಯೈ ನಮಃ / ಶ್ರೀಶಂಕರಪ್ರಿಯಾಯೈ ನಮ: / ಶ್ರೀನಾರಾಯಣ್ಯೈ ನಮಃ / ಶ್ರೀಭದ್ರಕಾಲ್ಯೈ ನಮಃ / ಶ್ರೀಶಿವದೂತ್ಯೈ ನಮಃ  / ಶ್ರೀಮಹಾಲಕ್ಷ್ಮ್ಯೈ ನಮಃ / ಶ್ರೀ ಮಹಾಮಾಯಾಯೈ ನಮಃ / ಶ್ರೀಯೋಗನಿದ್ರಾಯೈ ನಮಃ / ಶ್ರೀಚಂಡಿಕಾಯೈ ನಮಃ ||


 °~•~°~•~°~•~°~•~°~•~°


ವೃಶ್ಚಿಕ


  
 ತೊಡಗಿಸಿಕೊಂಡ ಕೆಲಸ ಕಾರ್ಯಗಳಲ್ಲಿ ಸಣ್ಣಪುಟ್ಟ ತೊಂದರೆ ಎದುರಿಸಬೇಕಾಗುತ್ತದೆ. ಹಣಕಾಸಿನ ವಿಚಾರದಲ್ಲಿ ತೊಂದರೆಗಳನ್ನು ಎದುರಿಸಬೇಕಾಗುವುದು ರಿಂದ ಜಾಗರೂಕತೆಯಿಂದ ಖರ್ಚುವೆಚ್ಚಗಳನ್ನು ನಿಭಾಯಿಸಬೇಕು. ದಾಂಪತ್ಯ ಜೀವನದಲ್ಲಿ ಕಲಹ ಏರ್ಪಡುವ ಲಕ್ಷಣಗಳು ಇರುವುದರಿಂದ ಜಾಗರೂಕರಾಗಿರಿ. ಹೊಟ್ಟೆಗೆ ಸಂಬಂಧಿಸಿದ ತೊಂದರೆಗಳು,  ರಕ್ತ ಸಂಬಂಧಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.ವಿದ್ಯಾರ್ಥಿಗಳು ಆಲಸ್ಯತನ ವನ್ನು ಬಿಟ್ಟು ಮುಂದುವರಿಯಬೇಕು

ಪರಿಹಾರ
ದೇವೀ, ಸುಬ್ರಹ್ಮಣ್ಯಸ್ವಾಮಿಯ ಆರಾಧನೆಯಿಂದ ಶುಭ.


ಜಪಿಸಲು :
ಷಡಾನನಂ ಕುಂಕುಮರಕ್ತವರ್ಣಮ್

ಮಹಾಮತಿಂ ದಿವ್ಯಮಯೂರವಾಹಮ್ |

ರುದ್ರಸ್ಯ ಸೂನುಂ ಸುರಸೈನ್ಯನಾಥಮ್

ಗುಹಂ ಸದಾ ಶರಣಮಹಂ ಪ್ರಪದ್ಯೇ ||

°~•~°~•~°~•~°~•~°~•~°


ಧನು


   ನಿಮ್ಮ ಆಲಸ್ಯತನ  ಕಾರ್ಯಕ್ಷೇತ್ರದಲ್ಲಿ ಮುನ್ನಡೆಯಲು ಕುಂದು ತರುತ್ತದೆ. ಉತ್ತಮ ಪರಿಶ್ರಮದಿಂದ ಮುನ್ನಡೆದರೆ ಮಾತ್ರ  ಅಭಿವೃದ್ಧಿ ಕಂಡು ಬರುವುದು. ಹಣಕಾಸಿನ ವಿಚಾರದಲ್ಲಿ ನಿಧಾನಗತಿ ಅಭಿವೃದ್ಧಿ ಕಂಡು ಬರುವುದು. ದಾಂಪತ್ಯ ಜೀವನದಲ್ಲಿ ಕಲಹ ಸಂಭವಿಸುವ ಲಕ್ಷಣಗಳು ಇರುವುದರಿಂದ ಜಾಗರೂಕರಾಗಿರಬೇಕು. ಆರೋಗ್ಯ ಸಂಬಂಧಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ  ಆಲಸ್ಯತನ ಬಿಟ್ಟು ಬಂದರೆ ಮಾತ್ರ ಅಭಿವೃದ್ಧಿ

ಪರಿಹಾರ
ಕುಲದೇವತಾ ಆರಾಧನೆ ಅಗತ್ಯ. ವಿಷ್ಣುಸಹಸ್ರನಾಮ ಪಾರಾಯಣ ಮಾಡಿ.

ಜಪಿಸಲು:
ಶ್ರೀಕೇಶವಾಯ ನಮಃ / ಶ್ರೀನಾರಾಯಣಾಯ ನಮಃ / ಶ್ರೀಮಾಧವಾಯ ನಮಃ / ಶ್ರೀಗೋವಿಂದಾಯ ನಮಃ / ಶ್ರೀವಿಷ್ಣವೇ ನಮಃ / ಶ್ರೀಮಧುಸೂದನಾಯ ನಮಃ /  ಶ್ರೀತ್ರಿವಿಕ್ರಮಾಯ ನಮಃ / ಶ್ರೀವಾಮನಾಯ ನಮಃ / ಶ್ರೀಶ್ರೀಧರಾಯ ನಮಃ / ಶ್ರೀಹೃಷಿಕೇಶಾಯ ನಮಃ / ಶ್ರೀಪದ್ಮನಾಭಾಯ ನಮಃ / ಶ್ರೀದಾಮೋದರಾಯ ನಮಃ ||

     °~•~°~•~°~•~°~•~°~•~°


ಮಕರ


    ಮಾಡುವಂತಹ ಕೆಲಸ ಕಾರ್ಯಗಳಲ್ಲಿ ಉತ್ತಮ ಅಭಿವೃದ್ಧಿ ಕಂಡು ಬರುವುದು. ಹಣಕಾಸಿನ ವಿಚಾರದಲ್ಲಿ ನಿಧಾನಗತಿ ಏಳಿಗೆ ದೊರೆಯುತ್ತದೆ. ದಾಂಪತ್ಯ ಜೀವನದಲ್ಲಿ ಪುಟ್ಟ ಕಲಹಗಳು ಏರ್ಪಡುವ ಲಕ್ಷಣಗಳು ಇರುವುದರಿಂದ ಜಾಗರೂಕರಾಗಿರಬೇಕು. ಆರೋಗ್ಯ ಸಂಬಂಧಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ವಿದ್ಯಾರ್ಥಿಗಳು ಉತ್ತಮ ಪರಿಶ್ರಮದಿಂದ ಮುನ್ನಡೆಯಬೇಕು.



ಪರಿಹಾರ
ಶಿವ ದೇವಸ್ಥಾನ ದರ್ಶನ, ಕುಲದೇವತಾರಾಧನೆಯಿಂದ ಶುಭ.  

ಜಪಿಸಲು :
ಶ್ರೀಮಹಾದೇವಾಯ ನಮಃ / ಶ್ರೀಮಹೇಶ್ವರಾಯ ನಮಃ / ಶ್ರೀಶಂಕರಾಯ ನಮಃ / ಶ್ರೀವೃಷಭಧ್ವಜಾಯ ನಮಃ / ಶ್ರೀಕೃತ್ತಿವಾಸಸೇ ನಮಃ / ಶ್ರೀಕಾಮಾಂಗನಾಶನಾಯ ನಮಃ / ಶ್ರೀದೇವದೇವೇಶಾಯ ನಮಃ /  ಶ್ರೀಶ್ರೀಕಂಠಾಯ ನಮಃ / ಶ್ರೀಹರಾಯ ನಮಃ / ಶ್ರೀಪಾರ್ವತೀಪತಯೇ ನಮಃ / ಶ್ರೀರುದ್ರಾಯ ನಮಃ / ಶ್ರೀಶಿವಾಯ ನಮಃ ||

   °~•~°~•~°~•~°~•~°~•~°          


ಕುಂಭ  


      ತೊಡಗಿಸಿಕೊಂಡ ಕೆಲಸಕಾರ್ಯಗಳಲ್ಲಿ ಉತ್ತಮ ಅಭಿವೃದ್ಧಿಯನ್ನು  ಹೊಂದುತ್ತೀರಿ. ಹಣಕಾಸಿನ ವಿಚಾರದಲ್ಲಿ ಉತ್ತಮ ಏಳಿಗೆ ದೊರೆಯುತ್ತದೆ ಹಾಗೂ  ದುಂದು ವೆಚ್ಚವನ್ನು ಮಾಡದಿರಿ.ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ನೆಲೆಗೊಳ್ಳುವುದು. ಮಾತಿನ ಮೂಲಕ ಜಗಳಗಳು ಸಂಭವಿಸುವ ಲಕ್ಷಣಗಳು ಇರುವುದರಿಂದ ಜಾಗರೂಕತೆಯಿಂದ ಇರಬೇಕು. ವಿದ್ಯಾರ್ಥಿಗಳಿಗೆ ಉತ್ತಮ ಮುನ್ನಡೆ ದೊರೆಯುತ್ತದೆ



ಪರಿಹಾರ  
ಶಿವದೇವಸ್ಥಾನ ದರ್ಶನ, ರುದ್ರಾಭಿಷೇಕ ಸೇವೆ, ಕುಲದೇವತಾ ಆರಾಧನೆಯಿಂದ ಶುಭ.

ಜಪಿಸಲು :
ರುದ್ರಂ ಪಶುಪತಿಂ ಸ್ಥಾಣುಮ್

ನೀಲಕಂಠಂ ಉಮಾಪತಿಮ್ |

ನಮಾಮಿ ಶಿರಸಾ ದೇವಮ್

ಕಿಂ ನೋ ಮೃತ್ಯುಃ ಕರಿಷ್ಯತಿ  ||

°~•~°~•~°~•~°~•~°~•~°


ಮೀನ   


   ತೊಡಗಿಸಿಕೊಂಡ ಕೆಲಸಕಾರ್ಯಗಳಲ್ಲಿ ಉತ್ತಮ ಅಭಿವೃದ್ಧಿ ಕಂಡು ಬಂದರೂ ಕೂಡ ತಮ್ಮ ಆಲಸ್ಯತನ ದಿಂದಾಗಿ ಕೆಲವೊಂದು ಅವಕಾಶಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಉತ್ತಮ ಏಳಿಗೆ ದೊರೆಯುತ್ತದೆ. ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ನೆಲೆಗೊಳ್ಳುವುದು. ಹೊಟ್ಟೆಗೆ ಸಂಬಂಧಿಸಿದ ತೊಂದರೆಗಳು, ಶೀತ ಜ್ವರ, ಚರ್ಮರೋಗ ಮೊದಲಾದ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಉತ್ತಮ ಪರಿಶ್ರಮದಿಂದ ಮುನ್ನಡೆಯಬೇಕು


ಪರಿಹಾರ
ಶ್ರೀಮಹಾವಿಷ್ಣುದೇವರ ಆರಾಧನೆಯಿಂದ ಶುಭ. ಕುಲದೇವತಾ ಆರಾಧನೆಯು ಅತ್ಯಗತ್ಯವಾಗಿದೆ.


ಜಪಿಸಲು :    
ಶಾಂತಾಕಾರಂ ಭುಜಗಶಯನಮ್  

ಪದ್ಮನಾಭಂ ಸುರೇಶಮ್

ವಿಶ್ವಾಧಾರಂ ಗಗನಸದೃಶಮ್

ಮೇಘವರ್ಣಂ ಶುಭಾಂಗಮ್ |

ಲಕ್ಷ್ಮೀಕಾಂತಂ ಕಮಲನಯನಮ್

ಯೋಗಿಹೃದ್ಧ್ಯಾನಗಮ್ಯಮ್

ವಂದೇ ವಿಷ್ಣುಂ ಭವಭಯಹರಮ್

ಸರ್ವಲೋಕೈಕನಾಥಮ್  ||

°~•~°~•~°~•~°~•~°~•~°



{ವಿ. ಸೂ. : ಮೇಲೆ ಕೊಟ್ಟ ಪರಿಹಾರ ಶ್ಲೋಕ ಮತ್ತು ನಾಮಗಳನ್ನು ಸ್ನಾನದ ಅನಂತರ ಶುಚಿಯಾಗಿ ದೇವರ ಮುಂದೆ ದೀಪ ಹಚ್ಚಿ ನಿರ್ಮಲ ಮನಸ್ಸಿನಿಂದ 48 ಸಲ ಪಠಿಸಬೇಕು.}

Author Details


Srimukha

Leave a Reply

Your email address will not be published. Required fields are marked *