|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

03.02.2019

         

ವಿಲಂಬನಾಮ ಸಂವತ್ಸರ / ಉತ್ತರಾಯಣ /
ಹೇಮಂತ ಋತು / ಪೌಷ ಮಾಸ /
ಕೃಷ್ಣ ಪಕ್ಷ / ಚತುರ್ದಶೀ ತಿಥಿ/

ರವಿವಾರ/ ಉತ್ತರಾಷಾಢ ನಕ್ಷತ್ರ /

ದಿನಾಂಕ: 03.02.2019

 °~•~°~•~°~•~°~•~°~•~°

ಮೇಷ

       ಉತ್ತಮ ಕೆಲಸದಿಂದ ಕಾರ್ಯಕ್ಷೇತ್ರದಲ್ಲಿ ಏಳಿಗೆ ಹಾಗೂ ಉತ್ತಮ ಹುದ್ದೆ ದೊರೆಯುವ ಅವಕಾಶ. ನಿಷ್ಠೆಯಿಂದ ಕಾರ್ಯಗಳನ್ನು ಮಾಡಿ. ಹಣವನ್ನು ದುರ್ವಿನಿಯೋಗ ಮಾಡದಿರಿ. ಗುರುಹಿರಿಯರಿಗೆ ಗೌರವವನ್ನು ಕೊಡಿ. ಉದರ ಸಂಬಂಧಿ, ಶ್ವಾಸ ಸಂಬಂಧಿ ತೊಂದರೆಗಳು ಹಾಗೂ ಅಲರ್ಜಿಗಳು ಬರುವ ಸಾಧ್ಯತೆಯಿದ್ದು ಜಾಗರೂಕರಾಗಿರಬೇಕು. ವಿದ್ಯಾರ್ಥಿಗಳು ತಮ್ಮ ಕಾರ್ಯವನ್ನು ಯಶಸ್ವಿಗೊಳಿಸಲು ಉತ್ತಮ ಅವಕಾಶ ಲಭ್ಯವಾಗಲಿದೆ.



ಪರಿಹಾರ:
ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಆರಾಧನೆ ಹಾಗೂ ಸುಬ್ರಹ್ಮಣ್ಯ ದೇವರ ಆರಾಧನೆಯನ್ನು ಮಾಡಬೇಕು.

ಜಪಿಸಲು:
ನಮಸ್ತೇ ಶರಣ್ಯೇ ಶಿವೇ ಸಾನುಕಮ್ಪೇ

ನಮಸ್ತೇ ಜಗದ್ವ್ಯಾಪಿಕೇ ವಿಶ್ವರೂಪೇ ।
ನಮಸ್ತೇ ಜಗದ್ವನ್ದ್ಯ-ಪಾದಾರವಿನ್ದೇ

ನಮಸ್ತೇ ಜಗತ್ತಾರಿಣಿ ತ್ರಾಹಿ ದುರ್ಗೇ ॥

°~•~°~•~°~•~°~•~°~•~°

    

ವೃಷಭ

         ತೊಡಗಿಸಿಕೊಳ್ಳುವ ಕೆಲಸಗಳಲ್ಲಿ ನಾನಾ ರೀತಿಯ ತೊಂದರೆಗಳು ಒದಗಿ ಬರಲಿದೆ. ಮಾಡುವ ಕೆಲಸಗಳಿಗೆ ಅಧಿಕಾರಿಗಳಿಂದ ವಿನಾಕಾರಣ ಅಸಮಾಧಾನತೆಯ ಮಾತುಗಳನ್ನು ಕೇಳಿಸಿ ಕೊಳ್ಳಬೇಕಾಗುತ್ತದೆ. ಸಂಪಾದಿಸಿದ ಹಣವನ್ನು ವಿನಾಕಾರಣ ಖರ್ಚು ಮಾಡಬೇಡಿ. ಮೈ ಕೈ ಗಂಟು ನೋವುಗಳು, ಮೂತ್ರ ಸಂಬಂಧಿ ತೊಂದರೆಗಳು ಸಂಭವಿಸುವುದರಿಂದ ಜಾಗರೂಕರಾಗಿರಬೇಕು. ತಂದೆ ತಾಯಿಗೆ ಗೌರವವನ್ನು ಕೊಡಿ. ವಿದ್ಯಾರ್ಥಿಗಳು ಯಶಸ್ಸನ್ನು ಕಾಣುವಿರಿ.




ಪರಿಹಾರ
ಗೋಮಾತೆಯ ದರ್ಶನ ಹಾಗೂ ಸೇವೆಯನ್ನು ಮಾಡಿ

ಜಪಿಸಲು:
ಸರ್ವದೇವಮಯೇ ದೇವಿ

ಸರ್ವದೇವೈ-ರಲಂಕೃತೇ |
ಮಾತರ್ಮಮಾ-ಭಿಲಷಿತಂ

ಸಫಲಂ ಕುರು ನಂದಿನಿ ||

°~•~°~•~°~•~°~•~°~•~°



ಮಿಥುನ


   ಉದಾಸೀನತೆ ಹಾಗೂ ಅಸಡ್ಡೆತನವು ಕೈಗೊಳ್ಳುವಂತಹ ಕೆಲಸ ಕಾರ್ಯಗಳಿಗೆ ಅಡೆತಡೆಯನ್ನು ಉಂಟು ಮಾಡುವುದು. ಅಧಿಕಾರಿಗಳ ಅಸಮಾಧಾನತೆಗೆ ಒಳಗಾಗುವಿರಿ. ಮಾನಸಿಕ ದೃಢತೆ ಕಳೆದುಕೊಳ್ಳುವಿರಿ. ವಿನಾಕಾರಣ ಒದಗಿ ಬರುವ ಖರ್ಚುವೆಚ್ಚ ನಿಮ್ಮನ್ನು ಹಿಮ್ಮುಖವಾಗಿಸುತ್ತದೆ. ಉತ್ತಮ ಆರೋಗ್ಯವನ್ನು ಹೊಂದಿದ್ದರೂ ಕೂಡ ನಿಮ್ಮ ಆಹಾರ ಪದ್ಧತಿಯಿಂದ ಉದರ ಸಂಬಂಧಿ ತೊಂದರೆಗಳು ಬರುವ ಸಾಧ್ಯತೆಗಳಿದ್ದು ಆಹಾರದ ಬಗ್ಗೆ ಜಾಗರೂಕರಾಗಿರಬೇಕು. ದಾಂಪತ್ಯದ ಮಧ್ಯೆ ಅನುಮಾನಗಳಿಗೆ ಎಡೆಮಾಡಿ ಕೊಡಬೇಡಿ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ ಲಭ್ಯವಾಗದೇ ಇರಬಹುದು. ಮಕ್ಕಳು ಪ್ರಯಾಣದ ಸಂದರ್ಭದಲ್ಲಿ  ಜಾಗರೂಕರಾಗಿರಬೇಕು.



ಪರಿಹಾರ  
ನರಸಿಂಹನ ಆರಾಧನೆಯನ್ನು ಮಾಡಿ.

ಜಪಿಸಲು:
ದೇವತಾಕಾರ್ಯ-ಸಿದ್ಧ್ಯರ್ಥಂ

ಸಭಾಸ್ತಂಭ-ಸಮುದ್ಭವಮ್ |
ಶ್ರೀನೃಸಿಂಹ ಮಹಾವೀರಂ

ನಮಾಮಿ ಋಣಮುಕ್ತಯೇ ||

  °~•~°~•~°~•~°~•~°~•~°



ಕರ್ಕಾಟಕ

   ಸ್ವಭಾವ ಹಾಗೂ ನಡವಳಿಕೆಯಿಂದ  ಕಾರ್ಯಕ್ಷೇತ್ರದಲ್ಲಿ ಉತ್ತಮ ಹೆಸರು ಬರಲಿದೆ   ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ ಕೆಲಸ ಮಾಡಿ. ವಿನಾಕಾರಣ ಖರ್ಚುವೆಚ್ಚಕ್ಕೆ ಗುರಿಯಾಗಬೇಡಿ. ಮೂಳೆ ಸಂಬಂಧಿ ಹಾಗೂ ಮೂತ್ರ  ಸಂಬಂಧಿ ತೊಂದರೆಗಳು ಬರುವ ಲಕ್ಷಣಗಳಿರುವುದರಿಂದ ಹೆಚ್ಚು ನೀರು ಕುಡಿಯಿರಿ. ದಾಂಪತ್ಯ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಗೊಳ್ಳುವುದು. ವಿದ್ಯಾರ್ಥಿಗಳಿಗೆ ಹಿರಿಯರ ಸಹಾಯದಿಂದ ಮೇಲೆ ಬರುವ ಅವಕಾಶಗಳಿದ್ದು ಹಿರಿಯರ ಮಾರ್ಗದರ್ಶನದಂತೆ ನಡೆಯಿರಿ.



ಪರಿಹಾರ
ಕುಲದೇವತಾ ಆರಾಧನೆ ಅಗತ್ಯ. ದೇವಿಯ ಆರಾಧನೆಯಿಂದ ಶುಭ.

ಜಪಿಸಲು:
ಶ್ರೀದುರ್ಗಾಯೈ ನಮ: / ಶ್ರೀಶಾಂತ್ಯೈ ನಮ: / ಶ್ರೀಶಾಂಭವ್ಯೈ ನಮ: / ಶ್ರೀಭೂತಿದಾಯಿನ್ಯೈ ನಮ: / ಶ್ರೀಶಂಕರಪ್ರಿಯಾಯೈ ನಮ: / ಶ್ರೀನಾರಾಯಣ್ಯೈ ನಮ: / ಶ್ರೀಭದ್ರಕಾಲ್ಯೈ ನಮ: / ಶ್ರೀಶಿವದೂತ್ಯೈ ನಮ: / ಶ್ರೀಮಹಾಲಕ್ಷ್ಮ್ಯೈ ನಮ: / ಶ್ರೀಮಹಾಮಾಯಾಯೈ ನಮ: / ಶ್ರೀಯೋಗನಿದ್ರಾಯೈ ನಮ: / ಶ್ರೀಚಂಡಿಕಾಯೈ ನಮ:

 °~•~°~•~°~•~°~•~°~•~°



ಸಿಂಹ

      ತೊಡಗಿಸಿಕೊಂಡ ಕಾರ್ಯಗಳು ನಿಂತು ಹೋಗುವ ಸಂಭವಗಳಿವೆ. ವ್ಯಾವಹಾರಿಕ  ಕ್ಷೇತ್ರದಲ್ಲಿ ನಿಧಾನವಾಗಿ ಏಳಿಗೆ ಕಂಡುಬರುತ್ತದೆ. ಉದರ ಸಂಬಂಧಿ ತೊಂದರೆಗಳು ಬರವ ಸಾಧ್ಯತೆಗಳಿರುವುದರಿಂದ ಆಹಾರದ ಬಗ್ಗೆ ಜಾಗರೂಕತೆಯನ್ನು ವಹಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ನೆಲೆಗೊಳ್ಳುವುದು . ವಿದ್ಯಾರ್ಥಿಗಳು ತಮ್ಮ ಧ್ಯೇಯವನ್ನು ತಲುಪಲು ಕಠಿಣ ಪರಿಶ್ರಮ ಪಡಬೇಕಾದ ಅಗತ್ಯ ಇದೆ.


ಪರಿಹಾರ
ಶಿವನ ಆರಾಧನೆ ಅಗತ್ಯ.

ಜಪಿಸಲು:
ಕರಚರಣಕೃತಂ ವಾಕ್ಕಾಯಜಂ ಕರ್ಮಜಂ ವಾ
ಶ್ರವಣನಯನಜಂ ವಾ ಮಾನಸಂ ವಾಪರಾಧಂ|
ವಿಹಿತಮವಿಹಿತಂ ವಾ ಸರ್ವಮೇತತ್ ಕ್ಷಮಸ್ವ
ಜಯ ಜಯ ಕರುಣಾಬ್ದೇ ಶ್ರೀಮಹಾದೇವ ಶಂಭೋ||

    °~•~°~•~°~•~°~•~°~•~°      


ಕನ್ಯಾ


    ಕಾರ್ಯಕ್ಷೇತ್ರದಲ್ಲಿ ಮೇಲೆ ಬರಲು ಅವಕಾಶವಿದ್ದರೂ  ಸಣ್ಣಪುಟ್ಟ ಅಡೆತಡೆಗಳು ಹಿನ್ನಡೆಯುವಂತೆ ಮಾಡುವುವು. ಬಂದಿರುವಂತಹ ಹಣದಲ್ಲಿ ದೇವತಾ ಕಾರ್ಯಗಳಿಗೆ ಕಿಂಚಿತ್ತಾದರೂ ಉಪಯೋಗಿಸಿ. ವಿನಾಕಾರಣ ಖರ್ಚುವೆಚ್ಚ ಬರುವುದು. ಗೆಳೆಯರ  ಆಶ್ವಾಸನಾ ಮಾತಿನಿಂದ ಹಣಕಾಸನ್ನು ದುರುಪಯೋಗ ಮಾಡಬೇಡಿ. ಉತ್ತಮ ಆರೋಗ್ಯ. ಕೋಪವನ್ನು ನಿಯಂತ್ರಣದಲ್ಲಿಡಿ. ದಾಂಪತ್ಯ ಜೀವನದಲ್ಲಿ ಸಣ್ಣಪುಟ್ಟ ಕಲಹ ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಉತ್ತಮ ಅಂಕ ಪಡೆಯುತ್ತಾರೆ.



ಪರಿಹಾರ
ಶ್ರೀಕೃಷ್ಣ ದೇವರ ಆರಾಧನೆಯಿಂದ ಶುಭ

ಜಪಿಸಲು:
ವಸುದೇವಸುತಂ  ದೇವಂ

ಕಂಸಚಾಣೂರ-ಮರ್ದನಮ್  |
ದೇವಕೀ-ಪರಮಾನಂದಂ  

ಕೃಷ್ಣಂ ವಂದೇ  ಜಗದ್ಗುರುಮ್ ||

  °~•~°~•~°~•~°~•~°~•~°       


ತುಲಾ


         ಶ್ರದ್ಧೆ ನಿಷ್ಠೆ ಇಟ್ಟು ಕೆಲಸ ಮಾಡಿದಲ್ಲಿ ಉತ್ತಮ ಏಳಿಗೆ ಕಂಡು ಬರಲಿದೆ. ಇದರಿಂದಾಗಿ ಮನಶ್ಶಾಂತಿ ದೊರೆಯಲಿದ್ದು ಹಿರಿಯರಿಂದ ಪ್ರಶಂಸೆಗಳು ಒದಗಿಬರಲಿದೆ. ಒದಗಿ ಬರುವ ಹಣವನ್ನು ಜೀವನದ ಸಾರ್ಥಕತೆಗೋಸ್ಕರ ಬಳಸಿ. ವೈವಾಹಿಕ ಜೀವನದಲ್ಲಿ ಏರುಪೇರು ಕಂಡುಬಂದರೂ ಧೃತಿಗೆಡದೆ ಜೀವನದಲ್ಲಿ ಮುನ್ನಡೆಯಿರಿ. ವಿದ್ಯಾರ್ಥಿಗಳು ತಮ್ಮ ವೃದ್ಧಿಯನ್ನು ಕಂಡು ಸಂತೋಷ ಪಡುವಿರಿ.


ಪರಿಹಾರ  
ದುರ್ಗಾದೇವಿಯ ಆರಾಧನೆಯಂದ ಶುಭ.

ಜಪಿಸಲು:
ಸರ್ವರೂಪಮಯೀ ದೇವೀ

ಸರ್ವಂ ದೇವೀಮಯಂ ಜಗತ್ ।
ಅತೋಽಹಂ ವಿಶ್ವರೂಪಾಂ ತ್ವಾಂ

ನಮಾಮಿ ಪರಮೇಶ್ವರೀಮ್ ||


 °~•~°~•~°~•~°~•~°~•~°


ವೃಶ್ಚಿಕ


  
ಉತ್ತಮ ಕಾರ್ಯವೈಖರಿ, ಶ್ರದ್ಧೆ ಇದ್ದರೂ ಮನ್ನಣೆ ದೊರೆಯುವುದಿಲ್ಲ. ಕಾರಣ ಇಲ್ಲದೆ ಅಪವಾದಗಳು, ದೂರುಗಳು ಕೇಳಿ ಬರುವುದರಿಂದ ಜಾಗರೂಕತೆಯಿಂದ ಕೆಲಸ ಕಾರ್ಯವನ್ನು ಮಾಡಬೇಕು. ವಿನಾಕಾರಣ ಖರ್ಚುವೆಚ್ಚಗಳು ತೋರಿ ಬರುವುದು. ಜಾಗರೂಕತೆಯಿಂದ ಹಣ ವಿನಿಯೋಗಿಸಿ. ದಾಂಪತ್ಯದಲ್ಲಿ ಸುಖ, ಶಾಂತಿ, ನೆಮ್ಮದಿ ತೋರಿ ಬರುವುದು. ವಿದ್ಯಾರ್ಥಿಗಳು ತಮ್ಮ ಸಂಪೂರ್ಣ ಪ್ರಯತ್ನವನ್ನು ವಿದ್ಯಾಭ್ಯಾಸಕ್ಕೋಸ್ಕರ ವಿನಿಯೋಗಿಸಬೇಕು.

ಪರಿಹಾರ
ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಯಿಂದ ಶುಭವಾಗಲಿದೆ.


ಜಪಿಸಲು:
ಶರಣ್ಯಂ ಸರ್ವಲೋಕಾನಾಮ್

ಅಗ್ರಗಣ್ಯಂ ದಿವೌಕಸಾಮ್ |
ವರೇಣ್ಯಂ ದೇವಸೇನಾಯಾ:

ಸುಬ್ರಮಣ್ಯ-ಮುಪಾಸ್ಮಹೇ ||

°~•~°~•~°~•~°~•~°~•~°


ಧನು


      ಕೆಲಸ ಕಾರ್ಯಕ್ಕೆ ಅನುಗುಣವಾಗಿ ಏಳಿಗೆ ಹೊಂದುವಿರಿ. ವ್ಯವಹಾರಕ್ಕೆ ಅನುಗುಣವಾಗಿ ಹಣವನ್ನು  ವಿನಿಯೋಗಿಸ ಬೇಕಾದಂತಹ ಪರಿಸ್ಥಿತಿ ಒದಗಿಬರುವುದು. ಕುಟುಂಬದ ಕೆಲಸಗಳಿಗೆ ಹಣವನ್ನು ವಿನಿಯೋಗಿಸಬೇಕಾಗುತ್ತದೆ. ಮನೆಯಲ್ಲಿ  ಅಶಾಂತಿ ತಲೆದೋರುವುದು. ದಂಪತಿಗಳ ನಡುವೆ ಸಣ್ಣಪುಟ್ಟ ಕಲಹ ತಲೆದೋರುವ ಸಂಭವ. ಆರೋಗ್ಯದಲ್ಲಿ ಸಣ್ಣಪುಟ್ಟ ತೊಂದರೆಗಳು ಬರುವ ಸಾಧ್ಯತೆಗಳಿದ್ದು ವ್ಯಾಯಾಮ, ಯೋಗ ಮುಂದಾದವುಗಳನ್ನು  ಮಾಡಬೇಕು. ವಿದ್ಯಾರ್ಥಿಗಳಿಗೆ ಆಲಸಿತನವು ದುಷ್ಪರಿಣಾಮವನ್ನು ಉಂಟುಮಾಡುತ್ತದೆ. ಆದುದರಿಂದ ಉದಾಸೀನತೆಯನ್ನು ಬಿಟ್ಟು ಮುಂದುವರಿಯಬೇಕು.


ಪರಿಹಾರ
ತಂದೆ ತಾಯಿಯ ಆಶೀರ್ವಾದ ಹಾಗೂ ಗುರುವಿನ ಆಶೀರ್ವಾದವನ್ನು ಪಡೆಯಿರಿ.

ಜಪಿಸಲು:
ಅಖಂಡಮಂಡಲಾಕಾರಂ

ವ್ಯಾಪ್ತಂ ಯೇನ ಚರಾಚರಮ್ |
ತತ್ಪದಂ ದರ್ಶಿತಂ ಯೇನ

ತಸ್ಮೈ ಶ್ರೀಗುರವೇ ನಮಃ ||

     °~•~°~•~°~•~°~•~°~•~°


ಮಕರ


    ನೂತನ ಹುದ್ದೆ ನೂತನ ಕಾರ್ಯಗಳು ನಿಮ್ಮ ಮನಸ್ಸಂತೋಷಕ್ಕೆ ಕಾರಣವಾಗುವುದು. ಕಾರಣವಿಲ್ಲದೇ ಖರ್ಚುಗಳು ಒದಗಿ ಬಂದರೂ ಕೂಡ ಧೃತಿಗೆಡದೆ  ಮುನ್ನಡೆಯಿರಿ. ಅಪವಾದ ನಿಮ್ಮನ್ನು ಹಿನ್ನಡೆಯುವಂತೆ ಮಾಡುವುದು. ಆರೋಗ್ಯದಲ್ಲಿ ಏರುಪೇರುಗಳು ಸಂಭವಿಸಲಿದ್ದು ಜಾಗರೂಕತೆಯಿಂದ ಮುನ್ನಡೆಯಬೇಕು. ದಾಂಪತ್ಯ ಜೀವನದಲ್ಲಿ ಸುಖ-ಶಾಂತಿ ನೆಲೆಸಲಿದೆ. ವಿವಾಹಾಕಾಂಕ್ಷಿಗಳಿಗೆ ವಿವಾಹ ಯೋಗ ಒದಗಿ ಬರಲಿದೆ. ವಿದ್ಯಾರ್ಥಿಗಳು ಹಿನ್ನಡೆ ಸಾಧಿಸಿದರೂ ಹಿರಿಯರ ಸಹಾಯದಿಂದ ಏಳಿಗೆ.



ಪರಿಹಾರ
ಶಿವಾಲಯ ದರ್ಶನ, ರುದ್ರಾಭಿಷೇಕ ಸೇವೆ ಮಾಡುವುದರಿಂದ ಶುಭ ಆಗಲಿದೆ.  

ಜಪಿಸಲು:
ಶುದ್ಧಸ್ಫಟಿಕ-ಸಂಕಾಶಂ
ಶುದ್ಧವಿದ್ಯಾ-ಪ್ರದಾಯಕಮ್ |
ಶುದ್ಧಂ ಪೂರ್ಣಂ ಚಿದಾನಂದಂ
ಸದಾಶಿವಮಹಂ ಭಜೇ ||

   °~•~°~•~°~•~°~•~°~•~°          


ಕುಂಭ  


      ಯಥಾಪ್ರಕಾರ ಕೆಲಸ ಕಾರ್ಯಗಳಿದ್ದರೂ ಕೂಡ  ಕುಟುಂಬದಲ್ಲಿರುವ ಅಶಾಂತಿಯಿಂದ ಮನಶ್ಶಾಂತಿ ಕಳೆದುಕೊಳ್ಳುವಿರಿ. ವಿನಾಕಾರಣ ಖರ್ಚು ವೆಚ್ಚಗಳಿಂದ ದುಗುಡ ತಲೆದೋರುವುದು. ಮಾತಿನ ಮೇಲಡ ನಿಗಾ  ಇರಲಿ.ಯಾರೊಂದಿಗೂ ಜಗಳ ಮಾಡಬೇಡಿ. ಆರೋಗ್ಯದಲ್ಲಿ ವ್ಯತ್ಯಾಸಗಳು ಕಂಡುಬರುವುದು ಶೀತ ಜ್ವರ ತಲೆನೋವು ಮುಂತಾದ ತೊಂದರೆಗಳು ತಲೆದೋರುವುವು. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ತೊಡಕು. ಮಕ್ಕಳ ಆರೋಗ್ಯದಲ್ಲಿ ಏರುಪೇರು ಸಂಭವಿಸುವುದು.



ಪರಿಹಾರ  
ಶಿವದೇವಸ್ಥಾನ ದರ್ಶನ, ಆಂಜನೇಯ ಸ್ವಾಮಿಯ ಆರಾಧನೆಯಿಂದ ಶುಭವಾಗಲಿದೆ.

ಜಪಿಸಲು:
ಅಂಜನಾಗರ್ಭ-ಸಂಭೂತ
ಕಪೀಂದ್ರ-ಸಚಿವೋತ್ತಮ |
ರಾಮಪ್ರಿಯ ನಮಸ್ತುಭ್ಯಂ
ಹನುಮಾನ್ ರಕ್ಷ ಮಾಂ ಸದಾ |

°~•~°~•~°~•~°~•~°~•~°


ಮೀನ   


  ಮಾಡುವ ಕೆಲಸ ಕಾರ್ಯದಲ್ಲಿ ಅಸಂತೃಪ್ತಿಗಳು ಕಂಡುಬರುವುದು. ಯೋಗ್ಯತೆಗೆ ತಕ್ಕುದಾದ ಅವಕಾಶ ದೊರೆಯದೇ ಇರಬಹುದು. ಜೀವನದಲ್ಲಿ ನಿಮ್ಮ ಸಾಧನೆಯೇ ಅತಿ ಮುಖ್ಯವಾಗಿದೆ. ವಿನಾಕಾರಣ ಖರ್ಚುವೆಚ್ಚ ಮಾಡಿ ದುಃಖಕ್ಕೆ ಒಳಗಾಗದಿರಿ.  ದಾಂಪತ್ಯದಲ್ಲಿ ಸುಖ. ಆರೋಗ್ಯದಲ್ಲಿ ಚೇತರಿಕೆ

 ವಿದ್ಯಾರ್ಥಿಗಳಿಗೆ ತಮ್ಮ ಪ್ರಯತ್ನದಿಂದ  ಉತ್ತಮ ಏಳಿಗೆ.


ಪರಿಹಾರ
ಶ್ರೀಮಹಾವಿಷ್ಣುದೇವರ ಆರಾಧನೆಯಿಂದ ಶುಭ. ಅಶ್ವತ್ಥಮರ ಪ್ರದಕ್ಷಿಣೆ ಬರುವುದರಿಂದ ಶುಭ. ಕುಲದೇವತಾ ಆರಾಧನೆಯು ಅತ್ಯಗತ್ಯವಾಗಿದೆ.


ಜಪಿಸಲು:    
ಶ್ರೀಕೇಶವಾಯ ನಮಃ / ಶ್ರೀನಾರಾಯಣಾಯ ನಮಃ / ಶ್ರೀಮಾಧವಾಯ ನಮಃ / ಶ್ರೀಗೋವಿಂದಾಯ ನಮಃ / ಶ್ರೀವಿಷ್ಣವೇ ನಮಃ / ಶ್ರೀಮಧುಸೂದನಾಯ ನಮಃ /  ಶ್ರೀತ್ರಿವಿಕ್ರಮಾಯ ನಮಃ / ಶ್ರೀವಾಮನಾಯ ನಮಃ / ಶ್ರೀಶ್ರೀಧರಾಯ ನಮಃ / ಶ್ರೀಹೃಷಿಕೇಶಾಯ ನಮಃ / ಶ್ರೀಪದ್ಮನಾಭಾಯ ನಮಃ / ಶ್ರೀದಾಮೋದರಾಯ ನಮಃ

°~•~°~•~°~•~°~•~°~•~°



{ವಿ. ಸೂ. : ಮೇಲೆ ಕೊಟ್ಟ ಪರಿಹಾರ ಶ್ಲೋಕ ಮತ್ತು ನಾಮಗಳನ್ನು ಸ್ನಾನದ ಅನಂತರ ಶುಚಿಯಾಗಿ ದೇವರ ಮುಂದೆ ದೀಪ ಹಚ್ಚಿ ನಿರ್ಮಲ ಮನಸ್ಸಿನಿಂದ 48 ಸಲ ಪಠಿಸಬೇಕು.}