|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

21.01.2019

         

ವಿಲಂಬನಾಮ ಸಂವತ್ಸರ / ಉತ್ತರಾಯಣ /
ಹೇಮಂತ ಋತು / ಪೌಷ ಮಾಸ /
ಶುಕ್ಲ ಪಕ್ಷ / ಪೂರ್ಣಿಮಾ ತಿಥಿ /
ಸೋಮವಾರ/  ಪುಷ್ಯ ನಕ್ಷತ್ರ /

 

ದಿನಾಂಕ:  21.01.2019

 

°~•~°~•~°~•~°~•~°~•~°

 

ಮೇಷ

 

ಉದ್ಯೋಗ, ವ್ಯಾವಹಾರಿಕ ಕ್ಷೇತ್ರಗಳಲ್ಲಿ ಮುನ್ನಡೆ. ಆರ್ಥಿಕ ತೊಂದರೆಗಳು ಕಂಡುಬರುವುದು. ಆರೋಗ್ಯದಲ್ಲಿ ಮುನ್ನಡೆ. ದಂಪತಿಗಳಲ್ಲಿ ಸಣ್ಣ ಕಲಹವಿದ್ದರೂ ಮನಶ್ಶಾಂತಿ ಲಭ್ಯ. ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಶುಭಫಲ.



ಪರಿಹಾರ:
ದೇವಿಯ ಆರಾಧನೆಯಿಂದ ಶುಭ.

ಜಪಿಸಲು:
ಸರ್ವಮಂಗಲಮಾಂಗಲ್ಯೇ
ಶಿವೇ ಸರ್ವಾರ್ಥಸಾಧಿಕೇ |
ಶರಣ್ಯೇ ತ್ರ್ಯಂಬಕೇ ಗೌರಿ
ನಾರಾಯಣಿ ನಮೋಸ್ತುತೇ ||

°~•~°~•~°~•~°~•~°~•~°
    

ವೃಷಭ



ವ್ಯಾವಹಾರಿಕ ಕ್ಷೇತ್ರಗಳಲ್ಲಿ ಮುನ್ನಡೆ. ನೂತನ  ಕಾರ್ಯದಲ್ಲಿ ತೊಡಗಿಸಿಕೊಳ್ಳುವಿರಿ. ಹಣಕಾಸಿನ ವಿಚಾರದಲ್ಲಿ ಏಳಿಗೆ. ಯುವಕ-ಯುವತಿಯರಿಗೆ ವಿವಾಹ ಭಾಗ್ಯಗಳು ಒದಗಿ ಬರುವುವು. ಆರೋಗ್ಯದಲ್ಲಿ  ಚೇತರಿಕೆ. ವಿದ್ಯಾರ್ಥಿಗಳಿಗೆ ಶುಭಫಲ.



ಪರಿಹಾರ
ದೇವಿಯ ಆರಾಧನೆಯಿಂದ ಶುಭ.

ಜಪಿಸಲು:
ಶ್ರೀದುರ್ಗಾಯೈ ನಮ: / ಶ್ರೀಶಾಂತ್ಯೈ ನಮ: / ಶ್ರೀಶಾಂಭವ್ಯೈ ನಮ: / ಶ್ರೀಭೂತಿದಾಯಿನ್ಯೈ ನಮ: / ಶ್ರೀಶಂಕರಪ್ರಿಯಾಯೈ ನಮ: / ಶ್ರೀನಾರಾಯಣ್ಯೈ ನಮ: / ಶ್ರೀಭದ್ರಕಾಲ್ಯೈ ನಮ: / ಶ್ರೀಶಿವದೂತ್ಯೈ ನಮ: / ಶ್ರೀಮಹಾಲಕ್ಷ್ಮ್ಯೈ ನಮ: / ಶ್ರೀಮಹಾಮಾಯಾಯೈ ನಮ: / ಶ್ರೀಯೋಗನಿದ್ರಾಯೈ ನಮ: / ಶ್ರೀಚಂಡಿಕಾಯೈ ನಮ:

°~•~°~•~°~•~°~•~°~•~°



ಮಿಥುನ


ಉದ್ಯೋಗ, ವ್ಯಾವಹಾರಿಕ ಕ್ಷೇತ್ರಗಳಲ್ಲಿ ತೊಂದರೆಗಳು ಕಂಡುಬರುವುದು. ಮಾನಸಿಕ ತೊಂದರೆಗಳು ಕಂಡು ಬರುವುದು. ಆರ್ಥಿಕ ವ್ಯವಸ್ಥೆಯಲ್ಲಿ ಏಳಿಗೆಯನ್ನು ಕಾಣುವಿರಿ. ಆರೋಗ್ಯದಲ್ಲಿ ಸಣ್ಣಪುಟ್ಟ ತೊಂದರೆಗಳಿದ್ದರೂ ಚೇತರಿಕೆ ಕಂಡುಬರುವುದು. ದಾಂಪತ್ಯ ಜೀವನದಲ್ಲಿ ಸಣ್ಣ ಮಟ್ಟಿನಲ್ಲಿ ಕಲಹಗಳು ಏರ್ಪಡುವುದು. ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಶುಭಫಲ.


ಪರಿಹಾರ  
ಶ್ರೀಕೃಷ್ಣನ ಆರಾಧನೆಯಿಂದ ಶುಭ.

ಜಪಿಸಲು:
ವಸುದೇವಸುತಂ ದೇವಂ

ಕಂಸಚಾಣೂರಮರ್ದನಮ್|

ದೇವಕೀಪರಮಾನನ್ದಂ

ಕೃಷ್ಣಂ ವನ್ದೇ ಜಗದ್ಗುರುಮ್ ||

  °~•~°~•~°~•~°~•~°~•~°


ಕರ್ಕಾಟಕ


ಉದ್ಯೋಗ, ವ್ಯಾವಹಾರಿಕ ಕ್ಷೇತ್ರಗಳಲ್ಲಿ ಉತ್ತಮ ಏಳಿಗೆ. ನೂತನ ಕಾರ್ಯವೈಖರಿಯಿಂದಾಗಿ ಅಧಿಕಾರಿಗಳಿಂದ ಮೆಚ್ಚುಗೆ. ಆರ್ಥಿಕ ವ್ಯವಹಾರಗಳಲ್ಲಿ ಮುನ್ನಡೆ. ಮೈ ಕೈ ಗಂಟು ನೋವು, ಶೀತ, ಜ್ವರಗಳು ಬಾಧಿಸುವುದು.  ದಾಂಪತ್ಯ ಜೀವನದಲ್ಲಿ ಸಣ್ಣ ಕಲಹಗಳು ಏರ್ಪಡುವುದು. ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಶುಭಫಲ.



ಪರಿಹಾರ
ಕುಲದೇವತಾ ಆರಾಧನೆ ಅಗತ್ಯ. ದೇವಿಯ ಆರಾಧನೆಯಿಂದ ಶುಭ.

ಜಪಿಸಲು:
ಸರ್ವಸ್ವರೂಪೇ ಸರ್ವೇಶಿ
ಸರ್ವಶಕ್ತಿಸಮನ್ವಿತೇ |
ಭಯೇಭ್ಯಸ್ತ್ರಾಹಿ ನೋ ದೇವಿ  
ದುರ್ಗೇದೇವಿ ನಮೋಸ್ತುತೇ ||

 °~•~°~•~°~•~°~•~°~•~°


ಸಿಂಹ

 


ಉದ್ಯೋಗ, ವ್ಯಾವಹಾರಿಕ ಕ್ಷೇತ್ರಗಳಲ್ಲಿ ಮುನ್ನಡೆ. ಕೆಲಸ ಕಾರ್ಯಗಳು ಉತ್ತಮವಾಗಿದ್ದರೂ ಅಧಿಕಾರಿಗಳಿಂದ ಅಸಮಾಧಾನತೆ ಕಂಡುಬರುವುದು. ಉದರ ಸಂಬಂಧಿ ತೊಂದರೆಗಳು, ಮೈ ಕೈ ಗಂಟು ನೋವುಗಳು ಕಂಡುಬರುವುದು. ದಾಂಪತ್ಯದಲ್ಲಿ  ಸಣ್ಣ ಕಲಹವಿದ್ದರೂ ನೆಮ್ಮದಿ ಲಭ್ಯ. ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಉತ್ತಮ ಫಲ.


ಪರಿಹಾರ
ಶಿವನ ಆರಾಧನೆ ಅಗತ್ಯ. ಶಿವದೇವಸ್ಥಾನದಲ್ಲಿ ರುದ್ರಾಭಿಷೇಕ ಸೇವೆ ಉತ್ತಮ.

ಜಪಿಸಲು:
ಶ್ರೀಮಹಾದೇವಾಯ ನಮಃ / ಶ್ರೀಮಹೇಶ್ವರಾಯ ನಮಃ / ಶ್ರೀಶಂಕರಾಯ ನಮಃ / ಶ್ರೀವೃಷಭಧ್ವಜಾಯ ನಮಃ / ಶ್ರೀಕೃತ್ತಿವಾಸಸೇ ನಮಃ / ಶ್ರೀಕಾಮಾಂಗನಾಶನಾಯ ನಮಃ / ಶ್ರೀದೇವದೇವೇಶಾಯ ನಮಃ /  ಶ್ರೀಶ್ರೀಕಂಠಾಯ ನಮಃ / ಶ್ರೀಹರಾಯ ನಮಃ / ಶ್ರೀಪಾರ್ವತೀಪತಯೇ ನಮಃ / ಶ್ರೀರುದ್ರಾಯ ನಮಃ / ಶ್ರೀಶಿವಾಯ ನಮಃ

    °~•~°~•~°~•~°~•~°~•~°      

 


ಕನ್ಯಾ


ಉದ್ಯೋಗ, ವ್ಯಾವಹಾರಿಕ ಕ್ಷೇತ್ರಗಳಲ್ಲಿ ಮುನ್ನಡೆ.  ನೀವು ಮಾಡುವ ಕೆಲಸ ಕಾರ್ಯಗಳಿಗೆ ಸಹವರ್ತಿಗಳಿಂದ ತೊಂದರೆ. ಹಣಕಾಸಿನ ವಿಚಾರದಲ್ಲಿ ಮುನ್ನಡೆ. ದಾಂಪತ್ಯದಲ್ಲಿ ಸಣ್ಣ ಕಲಹ. ಮೈ ಕೈ ನೋವು. ವಾಹನ ಪ್ರಯಾಣದಲ್ಲಿ ಜಾಗರೂಕರಾಗಿರಬೇಕು. ವಿದ್ಯಾರ್ಥಿಗಳಿಗೆ ಉತ್ತಮ ಪ್ರಯತ್ನದಿಂದ ಉತ್ತಮ  ಫಲ ಲಭ್ಯ.



ಪರಿಹಾರ
ಶ್ರೀರಾಮದೇವರ ಆರಾಧನೆಯಿಂದ  ಶುಭ.

ಜಪಿಸಲು:
ರಾಮಾಯ ರಾಮಭದ್ರಾಯ
ರಾಮಚಂದ್ರಾಯ ವೇಧಸೇ|  
ರಘುನಾಥಾಯ ನಾಥಾಯ
ಸೀತಾಯಾಃ ಪತಯೇ ನಮಃ ||

  °~•~°~•~°~•~°~•~°~•~°       

 


ತುಲಾ


ಉದ್ಯೋಗ, ವ್ಯಾವಹಾರಿಕ ಕ್ಷೇತ್ರಗಳಲ್ಲಿ ನೂತನ ಕೆಲಸಗಳಿಗೆ ಅವಕಾಶ. ಮಾನಸಿಕ ನೆಮ್ಮದಿ. ಆರ್ಥಿಕ ಮುನ್ನಡೆ. ದಾಂಪತ್ಯದಲ್ಲಿ ಕಲಹ. ಆರೋಗ್ಯದಲ್ಲಿ ಹಿನ್ನಡೆ. ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಶುಭಫಲ.


ಪರಿಹಾರ  
ದುರ್ಗಾದೇವಿಯ ಶ್ಲೋಕ ಪಠಿಸುವುದರಿಂದ ಶುಭ.

ಜಪಿಸಲು:
ಶ್ರೀದುರ್ಗಾಯೈ ನಮ: / ಶ್ರೀಶಾಂತ್ಯೈ ನಮ: / ಶ್ರೀಶಾಂಭವ್ಯೈ ನಮ: / ಶ್ರೀಭೂತಿದಾಯಿನ್ಯೈ ನಮ: / ಶ್ರೀಶಂಕರಪ್ರಿಯಾಯೈ ನಮ: / ಶ್ರೀನಾರಾಯಣ್ಯೈ ನಮ: / ಶ್ರೀಭದ್ರಕಾಲ್ಯೈ ನಮ: / ಶ್ರೀಶಿವದೂತ್ಯೈ ನಮ: / ಶ್ರೀಮಹಾಲಕ್ಷ್ಮ್ಯೈ ನಮ: / ಶ್ರೀ ಮಹಾಮಾಯಾಯೈ ನಮ: / ಶ್ರೀಯೋಗನಿದ್ರಾಯೈ ನಮ: / ಶ್ರೀಚಂಡಿಕಾಯೈ ನಮ
          °~•~°~•~°~•~°~•~°~•~°

 


ವೃಶ್ಚಿಕ


ಉದ್ಯೋಗ, ವ್ಯಾವಹಾರಿಕ ಕ್ಷೇತ್ರಗಳಲ್ಲಿ   ಮುನ್ನಡೆ. ಕೆಲಸ ಕಾರ್ಯಗಳಲ್ಲಿ ಹಿರಿಯ ಅಧಿಕಾರಿಗಳಿಂದ ತೊಂದರೆ. ನೂತನ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು  ಹಿರಿಯರಿಂದ ತೊಡಕು. ಆರ್ಥಿಕ ಹಿನ್ನಡೆ. ಆರೋಗ್ಯದಲ್ಲಿ ಮುನ್ನಡೆ. ಉದಾಸೀನತೆಯನ್ನು ಬಿಟ್ಟು ಮುಂದುವರಿದಲ್ಲಿ ವಿದ್ಯಾರ್ಥಿಗಳಿಗೆ ಶುಭ.



ಪರಿಹಾರ
ದೇವೀ, ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಯಿಂದ ಶುಭ.


ಜಪಿಸಲು:
ಷಡಾನನಂ ಕುಂಕುಮರಕ್ತವರ್ಣಂ

ಮಹಾಮತಿಂ ದಿವ್ಯಮಯೂರವಾಹಮ್ |

ರುದ್ರಸ್ಯ ಸೂನುಂ ಸುರಸೈನ್ಯನಾಥಂ

ಗುಹಂ ಸದಾ ಶರಣಮಹಂ ಪ್ರಪದ್ಯೇ ||

°~•~°~•~°~•~°~•~°~•~°

 


ಧನು


ಉದ್ಯೋಗ, ವ್ಯಾವಹಾರಿಕ ಕ್ಷೇತ್ರಗಳಲ್ಲಿ ನಿಧಾನಗತಿಯ ಮುನ್ನಡೆ. ಹಣಕಾಸಿನ ವಿಚಾರದಲ್ಲಿ ಮುನ್ನಡೆ. ಕುಟುಂಬದಲ್ಲಿ ಕಲಹ ಸಾಧ್ಯತೆ. ಆರೋಗ್ಯದಲ್ಲಿ  ಹಿನ್ನಡೆ. ವಿದ್ಯಾರ್ಥಿಗಳಿಗೆ ಉತ್ತಮ ಪರಿಶ್ರಮದಿಂದ, ಆಲಸ್ಯವನ್ನು ಬಿಟ್ಟು ಮುಂದುವರಿದಲ್ಲಿ ಮಾತ್ರ ‌ಶುಭಫಲ.


ಪರಿಹಾರ
ಕುಲದೇವತಾ ಆರಾಧನೆ ಅಗತ್ಯ. ವಿಷ್ಣುಸಹಸ್ರನಾಮ ಪಾರಾಯಣ ಉತ್ತಮ.

ಜಪಿಸಲು:
ಶ್ರೀಕೇಶವಾಯ ನಮಃ / ಶ್ರೀನಾರಾಯಣಾಯ ನಮಃ / ಶ್ರೀಮಾಧವಾಯ ನಮಃ / ಶ್ರೀಗೋವಿಂದಾಯ ನಮಃ / ಶ್ರೀವಿಷ್ಣವೇ ನಮಃ / ಶ್ರೀಮಧುಸೂದನಾಯ ನಮಃ /  ಶ್ರೀತ್ರಿವಿಕ್ರಮಾಯ ನಮಃ / ಶ್ರೀವಾಮನಾಯ ನಮಃ / ಶ್ರೀಶ್ರೀಧರಾಯ ನಮಃ / ಶ್ರೀಹೃಷಿಕೇಶಾಯ ನಮಃ / ಶ್ರೀಪದ್ಮನಾಭಾಯ ನಮಃ / ಶ್ರೀದಾಮೋದರಾಯ ನಮಃ

     °~•~°~•~°~•~°~•~°~•~°

 


ಮಕರ


ಉದ್ಯೋಗ, ವ್ಯಾವಹಾರಿಕ ಕ್ಷೇತ್ರಗಳಲ್ಲಿ  ಮುನ್ನಡೆ. ಉದ್ಯೋಗದಲ್ಲಿ ಉತ್ತಮವಾದ ಬದಲಾವಣೆ. ಮನಃಶಾಂತಿ. ಆರೋಗ್ಯದಲ್ಲಿ ಮುನ್ನಡೆ. ದಾಂಪತ್ಯ ಜೀವನದಲ್ಲಿ ಸುಖ. ವಿದ್ಯಾರ್ಥಿಗಳಿಗೆ ಹಿನ್ನಡೆ.



ಪರಿಹಾರ
ಶಿವ ದೇವಸ್ಥಾನ ದರ್ಶನ, ರುಧ್ರಾಭಿಷೇಕ, ಕುಲದೇವತಾರಾಧನೆಯಿಂದ ಶುಭ.  

ಜಪಿಸಲು:
ಶ್ರೀಮಹಾದೇವಾಯ ನಮಃ / ಶ್ರೀಮಹೇಶ್ವರಾಯ ನಮಃ / ಶ್ರೀಶಂಕರಾಯ ನಮಃ / ಶ್ರೀವೃಷಭಧ್ವಜಾಯ ನಮಃ / ಶ್ರೀಕೃತ್ತಿವಾಸಸೇ ನಮಃ / ಶ್ರೀಕಾಮಾಂಗನಾಶನಾಯ ನಮಃ / ಶ್ರೀದೇವದೇವೇಶಾಯ ನಮಃ /  ಶ್ರೀಶ್ರೀಕಂಠಾಯ ನಮಃ / ಶ್ರೀಹರಾಯ ನಮಃ / ಶ್ರೀಪಾರ್ವತೀಪತಯೇ ನಮಃ / ಶ್ರೀರುದ್ರಾಯ ನಮಃ / ಶ್ರೀಶಿವಾಯ ನಮಃ

   °~•~°~•~°~•~°~•~°~•~°          

 


ಕುಂಭ   


ವ್ಯಾವಹಾರಿಕ ಕ್ಷೇತ್ರದಲ್ಲಿ ಮುನ್ನಡೆ. ಆರ್ಥಿಕ ತೊಂದರೆ. ಮಾನಸಿಕ ಶಾಂತಿಗೆ ತೊಡಕು. ದಾಂಪತ್ಯದಲ್ಲಿ ಅಶಾಂತಿ. ಆರೋಗ್ಯದಲ್ಲಿ ತೊಂದರೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಡಕು.


ಪರಿಹಾರ  
ಶಿವದೇವಸ್ಥಾನ ದರ್ಶನ, ರುಧ್ರಾಭಿಷೇಕ ಸೇವೆ, ಕುಲದೇವತಾ ಆರಾಧನೆಯಿಂದ ಶುಭ.

ಜಪಿಸಲು:
ರುದ್ರಂ ಪಶುಪತಿಂ ಸ್ಥಾಣುಂ

ನೀಲಕಂಠಂ ಉಮಾಪತಿಮ್ |

ನಮಾಮಿ ಶಿರಸಾ ದೇವಂ

ಕಿಂ ನೋ ಮೃತ್ಯುಃ ಕರಿಷ್ಯತಿ  ||

°~•~°~•~°~•~°~•~°~•~°

 

ಮೀನ   


ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಸಣ್ಣಪುಟ್ಟ ತೊಂದರೆ.  ನಿಧಾನಗತಿಯ ಏಳಿಗೆ. ಕೈಗೊಳ್ಳುವ ಕೆಲಸಕಾರ್ಯಗಳು ಮಧ್ಯದಲ್ಲಿ  ನಿಂತುಹೋಗುವುದು. ಹಣಕಾಸಿನ ವಿಚಾರದಲ್ಲಿ ಏಳಿಗೆ. ನಿಮಗೆ ಸೇರಬೇಕಾದ ಹಣವು ಹಿಂದಿರುಗುವುದು. ಗುರುಹಿರಿಯರಿಂದ ಪ್ರಶಂಸೆ.  ಮಕ್ಕಳಿಂದ ಶುಭ ಸಮಾಚಾರ. ಉದರ ಸಂಬಂಧಿ ತೊಂದರೆ. ವಿದ್ಯಾರ್ಥಿಗಳಿಗೆ ಮುನ್ನಡೆ.


ಪರಿಹಾರ
ಶ್ರೀಮಹಾವಿಷ್ಣುದೇವರ ಆರಾಧನೆಯಿಂದ ಶುಭ. ಕುಲದೇವತಾ ಆರಾಧನೆಯು ಅತ್ಯಗತ್ಯವಾಗಿದೆ.

ಜಪಿಸಲು:    
ಶಾಂತಾಕಾರಂ ಭುಜಗಶಯನಂ

ಪದ್ಮನಾಭಂ ಸುರೇಶಂ

ವಿಶ್ವಾಧಾರಂ ಗಗನಸದೃಶಂ

ಮೇಘವರ್ಣಂ ಶುಭಾಂಗಮ್ |

ಲಕ್ಷ್ಮೀಕಾಂತಂ ಕಮಲನಯನಂ

ಯೋಗಿಹೃದ್ಧ್ಯಾನಗಮ್ಯಂ

ವಂದೇ ವಿಷ್ಣುಂ ಭವಭಯಹರಂ

ಸರ್ವಲೋಕೈಕನಾಥಮ್ ||

°~•~°~•~°~•~°~•~°~•~°



{ವಿ. ಸೂ. : ಮೇಲೆ ಕೊಟ್ಟ ಪರಿಹಾರ ಶ್ಲೋಕ ಮತ್ತು ನಾಮಗಳನ್ನು ಸ್ನಾನದ ಅನಂತರ ಶುಚಿಯಾಗಿ ದೇವರ ಮುಂದೆ ದೀಪ ಹಚ್ಚಿ ನಿರ್ಮಲ ಮನಸ್ಸಿನಿಂದ 48 ಸಲ ಪಠಿಸಬೇಕು.}