ಜ್ಞಾನಸಂವತ್ಸರ: ಪ್ರಕಾಶನದಿಂದ ಪುಸ್ತಕಪ್ರದಾನ

ಸುದ್ದಿ

ಬೆಂಗಳೂರು: ಪರಾಭವ ಸಂವತ್ಸರದ ಯುಗಾದಿಯಂದು ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಈ ಸಂವತ್ಸರವನ್ನು ‘ಜ್ಞಾನಸಂವತ್ಸರ’ವನ್ನಾಗಿ ಆಚರಿಸುವಂತೆ, ಜ್ಞಾನಪ್ರಸರಣ ನಡೆಸುವಂತೆ ನಿರ್ದೇಶಿಸಿದ್ದರು. ಪರಮಪೂಜ್ಯರೇ ಜ್ಞಾನಪ್ರಸರಣಕ್ಕಾಗಿ ಸಂಸ್ಥಾಪಿಸಿದ ಶ್ರೀಭಾರತೀ ಪ್ರಕಾಶನವು ಈ ಕಾರ್ಯಕ್ಕೆ ತನ್ನ ಸೇವೆಯನ್ನು ಸಲ್ಲಿಸಲು ತೊಡಗಿದೆ.

ತತ್ಪ್ರಯುಕ್ತವಾಗಿ ಶ್ರೀಮಠದ ಬೆಂಗಳೂರು ಶಾಖೆಯ ಪುನರ್ವಸು ಭವನದಲ್ಲಿ 200ಕ್ಕೂ ಹೆಚ್ಚು ಪುಸ್ತಕಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಶುಭಾರಂಭಗೊಂಡಿತು.

ಶಾಸನತಂತ್ರದ ಅಧ್ಯಕ್ಷರಾದ ಮೋಹನ ಭಾಸ್ಕರ ಹೆಗಡೆ ಅವರು ಮೊದಲ‌ ಪುಸ್ತಕವನ್ನು ಜಿ. ಎಮ್. ಹೆಗಡೆ ಚಾಮರಾಜನಗರ ಇವರಿಗೆ ನೀಡಿದರು. ಶಾಸನತಂತ್ರದ ಕಾರ್ಯದರ್ಶಿಗಳಾದ ಕೃಷ್ಣಪ್ರಸಾದ ಎಡಪ್ಪಾಡಿ, ಶ್ರೀಭಾರತೀ ಪ್ರಕಾಶನದ ಶ್ರೀಸಂಯೋಜಕರಾದ ಅಂಬಿಕಾ ಹೆಚ್. ಎನ್., ಸಂಯೋಜಕರಾದ ದೀಪಕ ಹೆಗಡೆ ಗೋಳಿಕೈ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *