ರಕ್ತಬಂಧ ~ ಸೇವಾಬಂಧ

ಇತರೆ

ಬೆಂಗಳೂರು: ಶಾಸನತಂತ್ರದ ಸೇವಾಖಂಡ ಹಾಗೂ ಬೆಂಗಳೂರು ದಕ್ಷಿಣ-ಉತ್ತರ ಮಂಡಲಗಳ ಸಹಯೋಗದಲ್ಲಿ, ರಾಷ್ಟ್ರೋತ್ಥಾನ ರಕ್ತಕೇಂದ್ರದ ಸಹಕಾರದಲ್ಲಿ 22-03-2026 ರಂದು ವಿಜಯನಗರದ ಶ್ರೀಭಾರತೀ ವಿದ್ಯಾಲಯದಲ್ಲಿ ಸಂಪನ್ನಗೊಂಡಿತು. ದಕ್ಷಿಣ ಮಂಡಲಾಂತರ್ಗತ ವಿಜಯನಗರ ವಲಯೋತ್ಸವವೂ ನಡೆಯಿತು.

 

ಪರಮಪೂಜ್ಯ ಶ್ರೀಸಂಸ್ಥಾನದವರ ಸಂನ್ಯಾಸಸ್ವೀಕಾರ ದಿನವಾದ ಚೈತ್ರ ಶುಕ್ಲ ಚೌತಿಯಂದು ನಡೆದ ಈ ಸಮಾಜಮುಖಿ ಶಿಬಿರದಲ್ಲಿ ಒಟ್ಟು 62 ರಕ್ತದಾನಿಗಳು ಭಾಗವಹಿಸಿ ಪುಣ್ಯಭಾಜನರಾದರು.

ಕಾರ್ಯಕ್ರಮಕ್ಕೆ ಯೋಜನಾಖಂಡದ ಶ್ರೀಸಂಯೋಜಕರಾದ ವಿದ್ವಾನ್ ಜಗದೀಶಶರ್ಮಾ ಸಂಪ, ಶಾಸನತಂತ್ರದ ಕಾರ್ಯದರ್ಶಿಗಳಾದ ಕೃಷ್ಣಪ್ರಸಾದ್ ಎಡಪ್ಪಾಡಿ ಅಭ್ಯಾಗತರಾಗಿದ್ದರು. ಮಹಾಮಂಡಲ ಉಪಾಧ್ಯಕ್ಷರಾದ ಜಿ. ಜಿ. ಹೆಗಡೆ ತಲಕೇರಿ ಶುಭಾಶಂಸನೆಗೈದರು. ಸೇವಾಖಂಡದ ಶ್ರೀಸಂಯೋಜಕರಾದ ಕೇಶವ ಪ್ರಕಾಶ ಎಮ್., ಬೆಂಗಳೂರು ಉತ್ತರ ಹವ್ಯಕಮಂಡಲದ ಅಧ್ಯಕ್ಷರಾದ ಎಲ್. ಆರ್. ಹೆಗಡೆ, ಬೆಂಗಳೂರು ದಕ್ಷಿಣ ಮಂಡಲ ಸೇವಾ ಪ್ರಧಾನರಾದ ರಮೇಶ ಸೂರ್ಡೇಲು, ಶ್ರೀಭಾರತೀ ವಿದ್ಯಾಲಯದ ಪ್ರಾಂಶುಪಾಲರಾದ ವರ್ಷ ಹಾಗೂ ರಾಷ್ಟ್ರೋತ್ಥಾನ ರಕ್ತ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಅಭಿಷೇಕ್ ಇವರು ಉಪಸ್ಥಿತರಿದ್ದರು.

ಗುರುವಂದನೆ, ಶಂಖನಾದ, ದೀಪಪ್ರಜ್ವಲನೆ, ಫಲಸಮರ್ಪಣೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮುಖ್ಯಾಭ್ಯಾಗತರಾದ ವಿದ್ವಾನ್ ಜಗದೀಶಶರ್ಮಾ ಅವರು ‘ಶ್ರೀಸಂಸ್ಥಾನದವರು ಸಂನ್ಯಾಸ ಸ್ವೀಕರಿಸಿದ ದಿನದಂದು ಈ ಕಾರ್ಯಕ್ರಮ ಆಯೋಜನೆ ಆಗಿದೆ. ಮುಂದೆಯೂ ಸೇವಾ ಖಂಡದಿಂದ ಇಂತಹ ಸಮಾಜಮುಖಿ ಕಾರ್ಯಕ್ರಮ ನಡೆಯುತ್ತಿರಬೇಕು’ ಎಂದು ಆಶಯ ವ್ಯಕ್ತಪಡಿಸಿದರು.

ಎಲ್ಲ ರಕ್ತದಾನಿಗಳಿಗೂ ಗೌರವಾರ್ಥವಾಗಿ ಪ್ರಶಂಸಾ ಪತ್ರ, ಶಾಲು ಹಾಗೂ ನೆನಪಿನ ಕಾಣಿಕೆ ನೀಡಲಾಯಿತು.

 

ವಿಜಯನಗರ ವಲಯೋತ್ಸವ ಅಂಗವಾಗಿ ಸತ್ಯನಾರಾಯಣ ಪೂಜೆ, ಕುಂಕುಮಾರ್ಚನೆ, ರುದ್ರಪಠಣ, ಯಕ್ಷಗಾನ ಪ್ರದರ್ಶನಗಳು ನಡೆದವು.

Leave a Reply

Your email address will not be published. Required fields are marked *