ಮುಜುಂಗಾವು: ಶ್ರೀಭಾರತೀ ವಿದ್ಯಾಪೀಠ ಸಂಸ್ಥೆಗೆ ಕರ್ನಾಟಕ ಬ್ಯಾಂಕ್ ಮಂಗಳೂರು ಇವರ ವತಿಯಿಂದ ಕೊಡುಗೆಯಾಗಿ ನೀಡಲಾದ ಶಾಲಾವಾಹನದ ಹಸ್ತಾಂತರ ಕಾರ್ಯಕ್ರಮವು ವಿದ್ಯಾಲಯದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾಂಕ್ನ ಅಸಿಸ್ಟೆಂಟ್ ರೀಜನಲ್ ಮ್ಯಾನೇಜರ್ ಅಶ್ವಿನ್ ಟಿ. ಎಮ್. ಹಾಗೂ ನೀರ್ಚಾಲು ಶಾಖೆಯ ಪ್ರಬಂಧಕರಾದ ಸತ್ಯನಾರಾಯಣ ಹೊಳ್ಳ ಅವರು ಉಪಸ್ಥಿತರಿದ್ದು, ಶಾಲಾವಾಹನವನ್ನು ವಿದ್ಯಾಲಯಕ್ಕೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರು, ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಉದಾರ ಕೊಡುಗೆಗಾಗಿ ಕರ್ನಾಟಕ ಬ್ಯಾಂಕ್ನ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳಿಗೆ ವಿದ್ಯಾಲಯದ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.


