|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

14.03.2019

         

ವಿಲಂಬನಾಮ ಸಂವತ್ಸರ / ಉತ್ತರಾಯಣ /
ಶಿಶಿರ ಋತು / ಪಾಲ್ಗುನ ಮಾಸ /
ಶುಕ್ಲ ಪಕ್ಷ / ಅಷ್ಟಮಿ ತಿಥಿ /

ಗುರುವಾರ/ ಮೃಗಶಿರಾ ನಕ್ಷತ್ರ/

ದಿನಾಂಕ: 14.03.2019

 °~•~°~•~°~•~°~•~°~•~°

ಮೇಷ

        ಉದ್ಯೋಗ ವ್ಯವಹಾರ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಂಡು ಬರುತ್ತದೆ. ಹಣಕಾಸಿನ ವಿಚಾರದಲ್ಲಿ ಏಳಿಗೆ ಕಂಡು ಬರುವುದು. ನಿಮಗೆ ಸಿಗಬೇಕಾದ ಅಂತಹ ಹಣವು ಒದಗಿ ಬರುತ್ತದೆ.  ಕುಟುಂಬ ಕೋಸ್ಕರ ಹಣವನ್ನು ವಿನಿಯೋಗಿಸಬೇಕಾಗುತ್ತದೆ. ಜೀವನದಲ್ಲಿ ಸುಖ ಶಾಂತಿ ನೆಲೆಗೊಳ್ಳುತ್ತದೆ. ಕಿವಿ ನೋವು, ಗಂಟಲು ನೋವು, ಜ್ವರ, ಚರ್ಮ ಸಂಬಂಧಿ ತೊಂದರೆಗಳು ಮುಂತಾದವುಗಳನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಉತ್ತಮ ಅಭಿವೃದ್ಧಿಯನ್ನು ಹೊಂದುತ್ತಾರೆ.



ಪರಿಹಾರ:
ಶ್ರೀದುರ್ಗಾಪರಮೇಶ್ವರೀ ಅಮ್ಮನವರ ಆರಾಧನೆ ಹಾಗೂ ಸುಬ್ರಹ್ಮಣ್ಯ ದೇವರ ಆರಾಧನೆಯನ್ನು ಮಾಡಬೇಕು.

ಜಪಿಸಲು:
ನಮಸ್ತೇ ಶರಣ್ಯೇ ಶಿವೇ ಸಾನುಕಮ್ಪೇ

ನಮಸ್ತೇ ಜಗದ್ವ್ಯಾಪಿಕೇ ವಿಶ್ವರೂಪೇ ।
ನಮಸ್ತೇ ಜಗದ್ವನ್ದ್ಯಪಾದಾರವಿನ್ದೇ

ನಮಸ್ತೇ ಜಗತ್ತಾರಿಣಿ ತ್ರಾಹಿ ದುರ್ಗೇ ॥

°~•~°~•~°~•~°~•~°~•~°

    

ವೃಷಭ

         ಉನ್ನತ ಹುದ್ದೆ, ಉತ್ತಮ ಗೌರವ, ಮೊದಲಾದವುಗಳು ಉದ್ಯೋಗ ಕ್ಷೇತ್ರದಲ್ಲಿ ಲಭಿಸುತ್ತವೆ. ನೂತನ ಉದ್ಯೋಗಾಕಾಂಕ್ಷಿಗಳಿಗೆ ಅವಕಾಶಗಳು ಒದಗಿ ಬರುತ್ತವೆ. ಹಣಕಾಸಿನ ವಿಚಾರದಲ್ಲಿ ಸಣ್ಣಪುಟ್ಟ ತೊಂದರೆಯನ್ನು ಎದುರಿಸಬೇಕಾಗುತ್ತದೆ. ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ನೆಲೆಗೊಳ್ಳುತ್ತದೆ. ಯುವಕ-ಯುವತಿಯರಿಗೆ ವಿವಾಹ ಯೋಗ ಭಾಗ್ಯಗಳು ಒದಗಿ ಬರುತ್ತವೆ. ಆರೋಗ್ಯ ಸಂಬಂಧವಾದ ತೊಂದರೆ ಎಂದು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಏಕಾಗ್ರತೆಯಿಂದ ಮುಂದುವರಿದರೆ ಉತ್ತಮ ಅಭಿವೃದ್ಧಿ ಕಾಣಲಿದೆ.




ಪರಿಹಾರ
ಗೋಮಾತೆಯ ದರ್ಶನ ಹಾಗೂ ಸೇವೆಯನ್ನು ಮಾಡಿ.

ಜಪಿಸಲು :
ಸರ್ವದೇವಮಯೇ ದೇವಿ

ಸರ್ವದೇವೈರಲಂಕೃತೇ |
ಮಾತರ್ಮಮಾಭಿಲಷಿತಮ್

ಸಫಲಂ ಕುರು ನಂದಿನಿ ||

°~•~°~•~°~•~°~•~°~•~°



ಮಿಥುನ


   ಮುನ್ನಡೆಸುವ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ಕಂಡುಬರುತ್ತವೆ, ಹಾಗೂ ಕಷ್ಟ ನಷ್ಟಗಳನ್ನು ಎದುರಿಸಬೇಕಾಗುತ್ತದೆ. ಹಣ ಕಾಸಿನ ವಿಚಾರದಲ್ಲಿ ತೊಂದರೆಗಳು ಎದುರಾಗುತ್ತವೆ. ದಾಂಪತ್ಯ ಜೀವನದಲ್ಲಿ ಕಲಹಗಳು ಸಂಭವಿಸುವ ಲಕ್ಷಣಗಳು ಇರುವುದರಿಂದ  ಜಾಗರೂಕತೆಯಿಂದ ಇರಬೇಕು. ಆರೋಗ್ಯ ಸಂಬಂಧವಾದ ತೊಂದರೆಯನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಉತ್ತಮ ಪರಿಶ್ರಮದಿಂದ ಮುಂದುವರಿಯಬೇಕು.
.



ಪರಿಹಾರ  
ನರಸಿಂಹನ ಆರಾಧನೆಯನ್ನು ಮಾಡಿ.

ಜಪಿಸಲು :
ದೇವತಾಕಾರ್ಯಸಿದ್ಧ್ಯರ್ಥಮ್

ಸಭಾಸ್ತಂಭಸಮುದ್ಭವಮ್ |
ಶ್ರೀನೃಸಿಂಹ ಮಹಾವೀರಮ್

ನಮಾಮಿ ಋಣಮುಕ್ತಯೇ ||

  °~•~°~•~°~•~°~•~°~•~°



ಕರ್ಕಾಟಕ

   ಉದ್ಯೋಗ ವ್ಯವಹಾರ ಕ್ಷೇತ್ರಗಳಲ್ಲಿ ಉತ್ತಮ ಅಭಿವೃದ್ಧಿ ಕಂಡು ಬರುತ್ತದೆ, ಗೌರವ, ಉತ್ತಮ ಸ್ಥಾನಮಾನ ಲಭಿಸಲಿದೆ. ಹಣಕಾಸಿನ ವಿಚಾರದಲ್ಲಿ ಅಭಿವೃದ್ಧಿ ಕಂಡು ಬರುತ್ತದೆ  ಹಿರಿಯರಿಂದ ಸಹಾಯ ಒದಗಿ ಬರುತ್ತದೆ. ಆರೋಗ್ಯ ಸಂಬಂಧವಾದ ತೊಂದರೆಗಳು ಎದುರಾಗುತ್ತವೆ. ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ನೆಲೆಗೊಳ್ಳುತ್ತದೆ. ಯುವಕ-ಯುವತಿಯರಿಗೆ ವಿವಾಹ ಯೋಗ ಭಾಗ್ಯಗಳು ಒದಗಿ ಬರುತ್ತದೆ. ವಿದ್ಯಾರ್ಥಿಗಳು ಉತ್ತಮ ಪರಿಶ್ರಮದಿಂದ ಮುನ್ನಡೆಯಬೇಕು.



ಪರಿಹಾರ
ಕುಲದೇವತಾ ಆರಾಧನೆ ಅಗತ್ಯ. ದೇವಿಯ ಆರಾಧನೆಯಿಂದ ಶುಭ.

ಜಪಿಸಲು:
ಶ್ರೀದುರ್ಗಾಯೈ ನಮಃ / ಶ್ರೀಶಾಂತ್ಯೈ ನಮಃ / ಶ್ರೀಶಾಂಭವ್ಯೈ ನಮಃ / ಶ್ರೀಭೂತಿದಾಯಿನ್ಯೈ ನಮಃ / ಶ್ರೀಶಂಕರಪ್ರಿಯಾಯೈ ನಮಃ / ಶ್ರೀನಾರಾಯಣ್ಯೈ ನಮಃ / ಶ್ರೀಭದ್ರಕಾಲ್ಯೈ ನಮಃ / ಶ್ರೀಶಿವದೂತ್ಯೈ ನಮಃ / ಶ್ರೀಮಹಾಲಕ್ಷ್ಮ್ಯೈ ನಮಃ / ಶ್ರೀಮಹಾಮಾಯಾಯೈ ನಮಃ / ಶ್ರೀಯೋಗನಿದ್ರಾಯೈ ನಮಃ / ಶ್ರೀಚಂಡಿಕಾಯೈ ನಮಃ ||

 °~•~°~•~°~•~°~•~°~•~°



ಸಿಂಹ

     ಮಾಡುವಂತಹ ಕೆಲಸ ಕಾರ್ಯಗಳಲ್ಲಿ ನಿಧಾನಗತಿಯ ಅಭಿವೃದ್ಧಿ ಕಂಡು ಬರುವುದು. ಕೃಷಿಕರಿಗೆ ಹಾಗೂ ನೀರಿನ ವ್ಯವಹಾರ ಮಾಡುವವರಿಗೆ ಉತ್ತಮ ಏಳಿಗೆ ಕಂಡು ಬರುತ್ತದೆ. ಹಣಕಾಸಿನ ವಿಚಾರದಲ್ಲಿ ನಿಧಾನಗತಿಯ ಅಭಿವೃದ್ಧಿ ಕಂಡು ಬರಬಹುದು. ಮೋಸ ಹೋಗುವ ಸಾಧ್ಯತೆಗಳಿರುವುದರಿಂದ ಜಾಗರೂಕತೆಯಿಂದ ಇರಬೇಕು. ಆರೋಗ್ಯ ಸಂಬಂಧವಾದ ತೊಂದರೆ ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಆಲಸ್ಯತನ ವನ್ನು ಬಿಟ್ಟು ಮುಂದುವರೆಯಬೇಕು.


ಪರಿಹಾರ
ಶಿವನ ಆರಾಧನೆ ಅಗತ್ಯ.

ಜಪಿಸಲು :
ಕರಚರಣಕೃತಂ ವಾಕ್ಕಾಯಜಂ ಕರ್ಮಜಂ ವಾ
ಶ್ರವಣನಯನಜಂ ವಾ ಮಾನಸಂ ವಾಪರಾಧಮ್ |
ವಿಹಿತಮವಿಹಿತಂ ವಾ ಸರ್ವಮೇತತ್ ಕ್ಷಮಸ್ವ
ಜಯ ಜಯ ಕರುಣಾಬ್ದೇ ಶ್ರೀಮಹಾದೇವ ಶಂಭೋ||

    °~•~°~•~°~•~°~•~°~•~°      


ಕನ್ಯಾ


    ತೊಡಗಿಸಿಕೊಂಡ ಕೆಲಸಕಾರ್ಯಗಳಲ್ಲಿ ಅಡೆತಡೆಗಳು ಕಂಡುಬರುತ್ತವೆ. ವ್ಯಾವಹಾರಿಕವಾಗಿ ಮೋಸ ಹೋಗುವ ಸಾಧ್ಯತೆಗಳಿರುವುದರಿಂದ ಜಾಗರೂಕತೆಯಿಂದ ಇರಬೇಕು. ಹಣಕಾಸಿನ ವಿಚಾರದಲ್ಲಿ  ನಿಧಾನಗತಿಯ ಅಭಿವೃದ್ಧಿ ಕಂಡು ಬರುತ್ತದೆ. ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ನೆಲೆಗೊಳ್ಳುತ್ತದೆ. ಹೊಟ್ಟೆ ನೋವು, ಆಹಾರದಲ್ಲಿ ವ್ಯತ್ಯಾಸ, ಚರ್ಮ ಸಂಬಂಧಿ ತೊಂದರೆಗಳು, ಶ್ವಾಸ ಸಂಬಂಧಿ ತೊಂದರೆಗಳು  ಬರುವ ಲಕ್ಷಣಗಳು ಇರುವುದರಿಂದ ಜಾಗರೂಕತೆಯಿಂದ ಇರಬೇಕು. ವಿದ್ಯಾರ್ಥಿಗಳಿಗೆ ಉತ್ತಮ ಅಭಿವೃದ್ಧಿ ಕಂಡು ಬರುತ್ತದೆ.



ಪರಿಹಾರ
ಶ್ರೀಕೃಷ್ಣ ದೇವರ ಆರಾಧನೆಯಿಂದ ಶುಭ

ಜಪಿಸಲು :
ವಸುದೇವಸುತಂ  ದೇವಮ್

ಕಂಸಚಾಣೂರ-ಮರ್ದನಮ್  |
ದೇವಕೀಪರಮಾನಂದಮ್

ಕೃಷ್ಣಂ ವಂದೇ  ಜಗದ್ಗುರುಮ್ ||

  °~•~°~•~°~•~°~•~°~•~°       


ತುಲಾ


       ಮಾಡುವಂತಹ ಕೆಲಸ ಕಾರ್ಯಗಳಲ್ಲಿ ಉತ್ತಮ ಅಭಿವೃದ್ಧಿ ಕಂಡು ಬರುತ್ತದೆ. ಕೃಷಿಕರಿಗೆ ಉತ್ತಮ ಬೆಳೆ ದೊರೆಯುತ್ತದೆ. ಆರ್ಥಿಕವಾದ ಮುನ್ನಡೆಯನ್ನು ಪಡೆಯುತ್ತೀರಿ. ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ದೊರೆಯುತ್ತದೆ. ಶ್ವಾಸಕ್ಕೆ ಸಂಬಂಧಪಟ್ಟ ತೊಂದರೆ, ಹೊಟ್ಟೆಗೆ ಸಂಬಂಧಪಟ್ಟ ತೊಂದರೆಗಳು ಬರುವ ಲಕ್ಷಣಗಳು ಇರುವುದರಿಂದ ಜಾಗರೂಕತೆಯಿಂದ ಇರಬೇಕು. ವಿದ್ಯಾರ್ಥಿಗಳಿಗೆ ಉತ್ತಮ ಅಭಿವೃದ್ಧಿ ಕಂಡು ಬರೆಯುವುದು.


ಪರಿಹಾರ  
ದುರ್ಗಾದೇವಿಯ ಆರಾಧನೆಯಂದ ಶುಭ.

ಜಪಿಸಲು :
ಸರ್ವರೂಪಮಯೀ ದೇವೀ

ಸರ್ವಂ ದೇವೀಮಯಂ ಜಗತ್ ।
ಅತೋಽಹಂ ವಿಶ್ವರೂಪಾಂ ತ್ವಾಮ್

ನಮಾಮಿ ಪರಮೇಶ್ವರೀಮ್ ||


 °~•~°~•~°~•~°~•~°~•~°


ವೃಶ್ಚಿಕ


  
ಮಾಡುವಂತಹ ಕೆಲಸ ಕಾರ್ಯಗಳಲ್ಲಿ  ನಿಧಾನಗತಿಯ ಅಭಿವೃದ್ಧಿ ಕಂಡು ಬರುತ್ತದೆ. ಭೂ ಸಂಬಂಧಿ ವ್ಯವಹಾರ ಮಾಡುವವರಿಗೆ ಅಭಿವೃದ್ಧಿ ಕಂಡು ಬರುವುದು. ಹಣ ಕಾಸಿನವಿಚಾರದಲ್ಲಿ ನೀವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಹಾಗೂ  ಮೋಸ ಹೋಗುವ ಸಾಧ್ಯತೆಗಳಿರುವುದರಿಂದ ಜಾಗರೂಕತೆಯಿಂದ ವ್ಯವಹರಿಸಬೇಕು. ಮಾತಿನ ಮೂಲಕ ಜಗಳಗಳ ಆಗುವ ಲಕ್ಷಣಗಳಿವೆ. ಆರೋಗ್ಯ ಸಂಬಂಧವಾದ ತೊಂದರೆಗಳು ಬರುವ ಲಕ್ಷಣ ಗಳಿರುವುದರಿಂದ ಜಾಗರೂಕರಾಗಿರಬೇಕು. ವಿದ್ಯಾರ್ಥಿಗಳು ಉತ್ತಮ ಪರಿಶ್ರಮದಿಂದ  ಆಲಸ್ಯತನ ಬಿಟ್ಟು ಮುಂದುವರೆದರೆ ಮಾತ್ರ ಅಭಿವೃದ್ಧಿ ಕಂಡು ಬರುವುದು.

ಪರಿಹಾರ
ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಯಿಂದ ಶುಭವಾಗಲಿದೆ.


ಜಪಿಸಲು:
ಶರಣ್ಯಂ ಸರ್ವಲೋಕಾನಾಮ್

ಅಗ್ರಗಣ್ಯಂ ದಿವೌಕಸಾಮ್ |
ವರೇಣ್ಯಂ ದೇವಸೇನಾಯಾಃ

ಸುಬ್ರಮಣ್ಯಮುಪಾಸ್ಮಹೇ ||

°~•~°~•~°~•~°~•~°~•~°


ಧನು


    ಉದ್ಯೋಗ ವ್ಯವಹಾರ ಕ್ಷೇತ್ರಗಳಲ್ಲಿ  ಕಷ್ಟ ನಷ್ಟಗಳನ್ನು ಎದುರಿಸಬೇಕಾಗುತ್ತದೆ. ಭೂ ಸಂಬಂಧಿ ವ್ಯವಹಾರ ಮಾಡುವವರಿಗೆ  ತೊಂದರೆಗಳು ಎದುರಾಗುತ್ತವೆ. ಹಣಕಾಸಿನ ವಿಚಾರದಲ್ಲಿ ನಿಧಾನಗತಿಯ ಅಭಿವೃದ್ಧಿ ಕಂಡು ಬರುವುದು. ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ನೆಲೆಗೊಳ್ಳುತ್ತದೆ, ವಿದ್ಯಾರ್ಥಿಗಳು ಉತ್ತಮ ಪರಿಶ್ರಮದಿಂದ  ಮುಂದುವರಿಯ ಬೇಕು.


ಪರಿಹಾರ
ತಂದೆ ತಾಯಿಯರ ಹಾಗೂ ಗುರುವಿನ ಆಶೀರ್ವಾದವನ್ನು  ಪಡೆಯಿರಿ.

ಜಪಿಸಲು :
ಅಖಂಡಮಂಡಲಾಕಾರಮ್

ವ್ಯಾಪ್ತಂ ಯೇನ ಚರಾಚರಮ್ |
ತತ್ಪದಂ ದರ್ಶಿತಂ ಯೇನ

ತಸ್ಮೈ ಶ್ರೀಗುರವೇ ನಮಃ ||

     °~•~°~•~°~•~°~•~°~•~°


ಮಕರ


    ತೊಡಗಿಸಿಕೊಂಡ ಕೆಲಸ ಕಾರ್ಯಗಳಲ್ಲಿ  ಉತ್ತಮ ಅಭಿವೃದ್ಧಿ ಕಂಡು ಬರುತ್ತದೆ. ನೂತನ ಉದ್ಯೋಗಾಕಾಂಕ್ಷಿಗಳಿಗೆ ಅವಕಾಶಗಳು ಒದಗಿ ಬರುತ್ತವೆ. ಹಣಕಾಸಿನ ವಿಚಾರದಲ್ಲಿ ಸಣ್ಣಪುಟ್ಟ ತೊಂದರೆ ಎದುರಿಸಬೇಕಾಗುತ್ತದೆ. ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ನೆಲೆಗೊಳ್ಳುತ್ತದೆ.  ನೂತನ ವಿವಾಹಾಕಾಂಕ್ಷಿಗಳಿಗೆ ವಿವಾಹ ಯೋಗ ಭಾಗ್ಯ ಒದಗಿ ಬರುತ್ತದೆ. ಆರೋಗ್ಯ ಸಂಬಂಧವಾದ ತೊಂದರೆ ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಉತ್ತಮ ಅಭಿವೃದ್ಧಿಯನ್ನು ಪಡೆಯುತ್ತಾರೆ.



ಪರಿಹಾರ
ಶಿವಾಲಯ ದರ್ಶನ, ರುದ್ರಾಭಿಷೇಕ ಸೇವೆ ಮಾಡುವುದರಿಂದ ಶುಭ ಆಗಲಿದೆ.  

ಜಪಿಸಲು :
ಶುದ್ಧಸ್ಫಟಿಕಸಂಕಾಶಮ್
ಶುದ್ಧವಿದ್ಯಾಪ್ರದಾಯಕಮ್ |
ಶುದ್ಧಂ ಪೂರ್ಣಂ ಚಿದಾನಂದಮ್
ಸದಾಶಿವಮಹಂ ಭಜೇ ||

   °~•~°~•~°~•~°~•~°~•~°          


ಕುಂಭ  


      ಮಾಡುವಂತಹ ಕೆಲಸ ಕಾರ್ಯಗಳಲ್ಲಿ ಉತ್ತಮ ಅಭಿವೃದ್ಧಿ ಕಂಡುಬರುತ್ತದೆ. ಹಣಕಾಸಿನ ವಿಚಾರದಲ್ಲಿ ನಿಧಾನಗತಿಯ ಅಭಿವೃದ್ಧಿ ಕಂಡು ಬರುವುದು. ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ನೆಲೆಗೊಳ್ಳುತ್ತದೆ. ಆರೋಗ್ಯದಲ್ಲಿ  ಚೇತರಿಕೆ ಕಂಡುಬರುವುದು. ವಿದ್ಯಾರ್ಥಿಗಳು ಉತ್ತಮ ಪರಿಶ್ರಮದಿಂದ ಮುಂದುವರಿಯಬೇಕು.



ಪರಿಹಾರ  
ಶಿವದೇವಸ್ಥಾನ ದರ್ಶನ, ಆಂಜನೇಯ ಸ್ವಾಮಿಯ ಆರಾಧನೆಯಿಂದ ಶುಭವಾಗಲಿದೆ.

ಜಪಿಸಲು :
ಅಂಜನಾಗರ್ಭಸಂಭೂತ
ಕಪೀಂದ್ರಸಚಿವೋತ್ತಮ |
ರಾಮಪ್ರಿಯ ನಮಸ್ತುಭ್ಯಮ್
ಹನೂಮಾನ್ ರಕ್ಷ ಮಾಂ ಸದಾ ||

°~•~°~•~°~•~°~•~°~•~°


ಮೀನ   


  ಉದ್ಯೋಗ  ವ್ಯವಹಾರ ಕ್ಷೇತ್ರಗಳಲ್ಲಿ ಅಡೆತಡೆಗಳು ಕಷ್ಟನಷ್ಟಗಳುಗಳನ್ನು ಎದುರಿಸಬೇಕಾಗುತ್ತದೆ, ವ್ಯಾವಹಾರಿಕವಾಗಿ ಮೋಸ ಹೋಗುವ ಸಾಧ್ಯತೆಗಳಿರುವುದರಿಂದ  ಜಾಗರೂಕತೆಯಿಂದ ವ್ಯವಹರಿಸಿ. ಹಣಕಾಸಿನ ವಿಚಾರದಲ್ಲಿ ತೊಂದರೆಗಳು ಬರುವ ಸಾಧ್ಯತೆಗಳಿವೆ. ದಾಂಪತ್ಯ ಜೀವನದಲ್ಲಿಸುಖ ಶಾಂತಿ ನೆಲೆಗೊಳ್ಳುತ್ತದೆ. ಆರೋಗ್ಯ ಸಂಬಂಧವಾದ ತೊಂದರೆ ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಆಲಸ್ಯ ಬಿಟ್ಟು ಮುಂದುವರಿಯಬೇಕು.


ಪರಿಹಾರ
ಶ್ರೀಮಹಾವಿಷ್ಣುದೇವರ ಆರಾಧನೆಯಿಂದ ಶುಭ. ಅಶ್ವತ್ಥಮರ ಪ್ರದಕ್ಷಿಣೆ ಬರುವುದರಿಂದ ಶುಭ ಕುಲದೇವತಾ ಆರಾಧನೆಯು ಅತ್ಯಗತ್ಯವಾಗಿದೆ.


ಜಪಿಸಲು :    
ಶ್ರೀಕೇಶವಾಯ ನಮಃ / ಶ್ರೀನಾರಾಯಣಾಯ ನಮಃ / ಶ್ರೀಮಾಧವಾಯ ನಮಃ / ಶ್ರೀಗೋವಿಂದಾಯ ನಮಃ / ಶ್ರೀವಿಷ್ಣವೇ ನಮಃ / ಶ್ರೀಮಧುಸೂದನಾಯ ನಮಃ /  ಶ್ರೀತ್ರಿವಿಕ್ರಮಾಯ ನಮಃ / ಶ್ರೀವಾಮನಾಯ ನಮಃ / ಶ್ರೀಶ್ರೀಧರಾಯ ನಮಃ / ಶ್ರೀಹೃಷಿಕೇಶಾಯ ನಮಃ / ಶ್ರೀಪದ್ಮನಾಭಾಯ ನಮಃ / ಶ್ರೀದಾಮೋದರಾಯ ನಮಃ ||

°~•~°~•~°~•~°~•~°~•~°



{ವಿ. ಸೂ. : ಮೇಲೆ ಕೊಟ್ಟ ಪರಿಹಾರ ಶ್ಲೋಕ ಮತ್ತು ನಾಮಗಳನ್ನು ಸ್ನಾನದ ಅನಂತರ ಶುಚಿಯಾಗಿ ದೇವರ ಮುಂದೆ ದೀಪ ಹಚ್ಚಿ ನಿರ್ಮಲ ಮನಸ್ಸಿನಿಂದ 48 ಸಲ ಪಠಿಸಬೇಕು.}