|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

25.01.2019

         

ವಿಲಂಬನಾಮ ಸಂವತ್ಸರ / ಉತ್ತರಾಯಣ /
ಹೇಮಂತ ಋತು / ಪೌಷ ಮಾಸ /
ಕೃಷ್ಣ ಪಕ್ಷ / ಪಂಚಮಿ ತಿಥಿ /

ಶುಕ್ರವಾರ / ಉತ್ತರ ನಕ್ಷತ್ರ /

ದಿನಾಂಕ:  25.01.2019

 °~•~°~•~°~•~°~•~°~•~°

 

ಮೇಷ

 

        ಉದ್ಯೋಗ ವ್ಯವಹಾರ ಕ್ಷೇತ್ರದಲ್ಲಿ  ವಿಧಾನಗತಿಯ ಮುನ್ನಡೆ ಕಂಡುಬರುತ್ತದೆ.  ಹಣಕಾಸಿನ ವಿಚಾರದಲ್ಲಿ ತೊಂದರೆಗಳು ಕಂಡು ಬರುತ್ತದೆ.  ಆರೋಗ್ಯದಲ್ಲಿ ಶೀತ ಜ್ವರ ಶ್ವಾಸ ಸಂಬಂಧಿ ತೊಂದರೆಗಳು ಅಲರ್ಜಿಗಳು ಕಂಡುಬರುತ್ತದೆ.  ದಾಂಪತ್ಯದಲ್ಲಿ ಬರುವ ಕಲಹದಿಂದ ಮನ ಶಾಂತಿ ಕೆಡುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಪರಿಶ್ರಮ ಇದ್ದಲ್ಲಿ ಮಾತ್ರ ಶುಭ



ಪರಿಹಾರ:
ದೇವಿಯ ಆರಾಧನೆಯಿಂದ ಶುಭ.

ಜಪಿಸಲು:
ಸರ್ವಮಂಗಲಮಾಂಗಲ್ಯೇ
ಶಿವೇ ಸರ್ವಾರ್ಥಸಾಧಿಕೇ |
ಶರಣ್ಯೇ ತ್ರ್ಯಂಬಕೇ ಗೌರಿ
ನಾರಾಯಣಿ ನಮೋಸ್ತುತೇ ||

°~•~°~•~°~•~°~•~°~•~°

    

ವೃಷಭ

         ನಿಮ್ಮ ಕಾರ್ಯಕ್ಷೇತ್ರದಲ್ಲಿ ಉತ್ತಮ ಏಳಿಗೆಯನ್ನು ಕಾಣುತ್ತೀರಿ. ವ್ಯವಹಾರದಲ್ಲಿ  ಅಧಿಕ ಲಾಭ ಗಳಿಸುತ್ತೀರಿ. ಮನಃಶಾಂತಿ ದೊರೆಯುತ್ತದೆ. ದಾಂಪತ್ಯದಲ್ಲಿ ಸುಖ. ಮಗನಿಂದ ನೆಮ್ಮದಿ.ಆರೋಗ್ಯದಲ್ಲಿ ಸಣ್ಣ ತೊಂದರೆಗಳಿದ್ದರೂ ಕೂಡ  ಅಭಿವೃದ್ಧಿ ಕಾಣುವುದು. ವಿದ್ಯಾರ್ಥಿಗಳಿಗೆ ಉತ್ತಮವಾದ ಮುನ್ನಡೆ ಕಂಡುಬರುತ್ತದೆ




ಪರಿಹಾರ
ದೇವಿಯ ಆರಾಧನೆಯಿಂದ ಶುಭ.

ಜಪಿಸಲು:
ಶ್ರೀದುರ್ಗಾಯೈ ನಮ: / ಶ್ರೀಶಾಂತ್ಯೈ ನಮ: / ಶ್ರೀಶಾಂಭವ್ಯೈ ನಮ: / ಶ್ರೀಭೂತಿದಾಯಿನ್ಯೈ ನಮ: / ಶ್ರೀಶಂಕರಪ್ರಿಯಾಯೈ ನಮ: / ಶ್ರೀನಾರಾಯಣ್ಯೈ ನಮ: / ಶ್ರೀಭದ್ರಕಾಲ್ಯೈ ನಮ: / ಶ್ರೀಶಿವದೂತ್ಯೈ ನಮ: / ಶ್ರೀಮಹಾಲಕ್ಷ್ಮ್ಯೈ ನಮ: / ಶ್ರೀಮಹಾಮಾಯಾಯೈ ನಮ: / ಶ್ರೀಯೋಗನಿದ್ರಾಯೈ ನಮ: / ಶ್ರೀಚಂಡಿಕಾಯೈ ನಮ:

°~•~°~•~°~•~°~•~°~•~°



ಮಿಥುನ


   ವ್ಯವಹಾರ ಕ್ಷೇತ್ರದಲ್ಲಿ ತೊಡಕುಗಳಿದ್ದರೂ ಕೂಡ ನಿಧಾನಗತಿಯ ಮುನ್ನಡೆ ಕಾಣುತ್ತೀರಿ.  ಆರ್ಥಿಕವಾಗಿ ಮುನ್ನಡೆ. ನೂತನ ವಾಹನ ಭಾಗ್ಯ ದಿ ಗಳು ಒದಗಿ ಬರುತ್ತದೆ. ದಾಂಪತ್ಯದಲ್ಲಿ ವಿನಾಕಾರಣ ಕಲಹಗಳು.  ದಂಪತಿಗಳ ಮಧ್ಯೆ ಅನುಮಾನಗಳು ಬೇಡ. ಆರೋಗ್ಯದಲ್ಲಿ ಗ್ಯಾಸ್ಟ್ರಿಕ್ ಮೊದಲಾದ ತೊಂದರೆಗಳು ಬರುವ ಸಾಧ್ಯತೆ ಇರುವುದರಿಂದ ಆಹಾರದಲ್ಲಿ ಗಮನವಿರಲಿ.  ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಏಳಿಗೆ ಇದೆ



ಪರಿಹಾರ  
ಶ್ರೀಕೃಷ್ಣನ ಆರಾಧನೆಯಿಂದ ಶುಭ.

ಜಪಿಸಲು:
ವಸುದೇವಸುತಂ ದೇವಂ

ಕಂಸಚಾಣೂರಮರ್ದನಮ್|

ದೇವಕೀಪರಮಾನನ್ದಂ

ಕೃಷ್ಣಂ ವನ್ದೇ ಜಗದ್ಗುರುಮ್ ||

  °~•~°~•~°~•~°~•~°~•~°



ಕರ್ಕಾಟಕ

 

ಕೆಲಸ ಕಾರ್ಯದಲ್ಲಿ ಉತ್ತಮ ಮುನ್ನಡೆ ಕಂಡುಬರುತ್ತಿದ್ದು ಆರ್ಥಿಕವಾಗಿ ಸಹೋದರರಿಂದ ಸಹಾಯ ಒದಗಿ ಬರುತ್ತದೆ.  ಮಾನಸಿಕವಾಗಿ ಕಿರಿಕಿರಿ ಎದುರಿಸಬೇಕಾದೀತು. ದಾಂಪತ್ಯದಲ್ಲಿ ಕಲಹಗಳು ಏರ್ಪಡುವ ಸಾಧ್ಯತೆ ಇದೆ. ಆರೋಗ್ಯದಲ್ಲಿ ಮೈಕೈ ಗಂಟು ನೋವುಗಳು. ಮಲಬದ್ಧತೆಯಲ್ಲಿ ತೊಂದರೆ  ಮುಂತಾದ ತೊಂದರೆಗಳು ಬರುತ್ತದೆ. ವಿದ್ಯಾರ್ಥಿಗಳಿಗೆ ಮುನ್ನಡೆ ಇದೆ. ಹಿರಿಯರನ್ನು ಗೌರವಿಸಿ

 



ಪರಿಹಾರ
ಕುಲದೇವತಾ ಆರಾಧನೆ ಅಗತ್ಯ. ದೇವಿಯ ಆರಾಧನೆಯಿಂದ ಶುಭ.

ಜಪಿಸಲು:
ಸರ್ವಸ್ವರೂಪೇ ಸರ್ವೇಶಿ
ಸರ್ವಶಕ್ತಿಸಮನ್ವಿತೇ |
ಭಯೇಭ್ಯಸ್ತ್ರಾಹಿ ನೋ ದೇವಿ  
ದುರ್ಗೇದೇವಿ ನಮೋಸ್ತುತೇ ||

 °~•~°~•~°~•~°~•~°~•~°



ಸಿಂಹ

      ವ್ಯವಹಾರ ಕ್ಷೇತ್ರದಲ್ಲಿ ಉತ್ತಮ ಮುನ್ನಡೆ ಇದ್ದರೂ ಕೂಡ ಶಾಂತಿ ಕಳೆದುಕೊಳ್ಳುತ್ತೀರಿ.  ಆರ್ಥಿಕವಾದ ಹಿನ್ನಡೆ ಕಂಡುಬರುತ್ತದೆ. ಕುಟುಂಬದಲ್ಲಿ ವಿನಾಕಾರಣ ಖರ್ಚು ವೆಚ್ಚಗಳ ಬರುವುದು.  ಉದರ ಸಂಬಂಧಿ ತೊಂದರೆಗಳು ಹಾಗೂ ಶೀತ ಜ್ವರ ಆದಿ ಗಳು ಬರುವಂತಹ ಲಕ್ಷಣಗಳು ಕಂಡು ಬರುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮವಾದ ಮುನ್ನಡೆ ಇದೆ

 


ಪರಿಹಾರ
ಶಿವನ ಆರಾಧನೆ ಅಗತ್ಯ.

ಜಪಿಸಲು:
ಶ್ರೀಮಹಾದೇವಾಯ ನಮಃ / ಶ್ರೀಮಹೇಶ್ವರಾಯ ನಮಃ / ಶ್ರೀಶಂಕರಾಯ ನಮಃ / ಶ್ರೀವೃಷಭಧ್ವಜಾಯ ನಮಃ / ಶ್ರೀಕೃತ್ತಿವಾಸಸೇ ನಮಃ / ಶ್ರೀಕಾಮಾಂಗನಾಶನಾಯ ನಮಃ / ಶ್ರೀದೇವದೇವೇಶಾಯ ನಮಃ /  ಶ್ರೀಶ್ರೀಕಂಠಾಯ ನಮಃ / ಶ್ರೀಹರಾಯ ನಮಃ / ಶ್ರೀಪಾರ್ವತೀಪತಯೇ ನಮಃ / ಶ್ರೀರುದ್ರಾಯ ನಮಃ / ಶ್ರೀಶಿವಾಯ ನಮಃ

    °~•~°~•~°~•~°~•~°~•~°      

 


ಕನ್ಯಾ


    ವ್ಯವಹಾರ ಕ್ಷೇತ್ರದಲ್ಲಿ ಉತ್ತಮ ಮುನ್ನಡೆ ಕಂಡುಬರುತ್ತಿದ್ದು ನಿಮ್ಮ ಕಾರ್ಯವೈಖರಿಯಿಂದ ಅಧಿಕಾರಿಗಳನ್ನು   ಮೆಚ್ಚಿಸುತ್ತೀರಿ. ನೂತನವಾದ ಮುನ್ನಡೆ ಕಂಡುಬರುತ್ತದೆ. ಆರೋಗ್ಯದಲ್ಲಿ ಮುನ್ನಡೆಯನ್ನು ಪಡೆದುಕೊಳ್ಳುತ್ತೀರಿ.  ವಾಹನ ಪ್ರಯಾಣಗಳಲ್ಲಿ ಜಾಗೃತವಾಗಿರಿ. ದಾಂಪತ್ಯದಲ್ಲಿ ಕಲಹಗಳು ಕಂಡುಬರುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಪರಿಶ್ರಮದಿಂದ ಉತ್ತಮ ಫಲ ಲಭ್ಯವಾಗಲಿದೆ



ಪರಿಹಾರ
ಶ್ರೀರಾಮದೇವರ ಆರಾಧನೆಯಿಂದ  ಶುಭ.

ಜಪಿಸಲು:
ರಾಮಾಯ ರಾಮಭದ್ರಾಯ
ರಾಮಚಂದ್ರಾಯ ವೇಧಸೇ|  
ರಘುನಾಥಾಯ ನಾಥಾಯ
ಸೀತಾಯಾಃ ಪತಯೇ ನಮಃ ||

  °~•~°~•~°~•~°~•~°~•~°       

 


ತುಲಾ


        ನಿಮ್ಮ ವ್ಯಾವಹಾರಿಕ ಕ್ಷೇತ್ರದಲ್ಲಿ  ಸಣ್ಣ ಅಡೆತಡೆಗಳು ಕಂಡುಬರುವುದು. ಮನಃಶಾಂತಿಯನ್ನು ಕಳೆದುಕೊಳ್ಳುವಿರಿ.  ಆರ್ಥಿಕವಾಗಿ ಮುನ್ನಡೆ ಕಂಡುಬರುತ್ತದೆ. ದಾಂಪತ್ಯದಲ್ಲಿ ಸುಖ. ಆರೋಗ್ಯದಲ್ಲಿ  ಹಿನ್ನಡೆ ಕಾಣುತ್ತೀರಿ. ವಿದ್ಯಾರ್ಥಿಗಳಿಗೆ ಉತ್ತಮವಾದ ಮುನ್ನಡೆ ಇದೆ


ಪರಿಹಾರ  
ದುರ್ಗಾದೇವಿಯ ಆರಾಧನೆಯಂದ ಶುಭ.

ಜಪಿಸಲು:
ಶ್ರೀದುರ್ಗಾಯೈ ನಮ: / ಶ್ರೀಶಾಂತ್ಯೈ ನಮ: / ಶ್ರೀಶಾಂಭವ್ಯೈ ನಮ: / ಶ್ರೀಭೂತಿದಾಯಿನ್ಯೈ ನಮ: / ಶ್ರೀಶಂಕರಪ್ರಿಯಾಯೈ ನಮ: / ಶ್ರೀನಾರಾಯಣ್ಯೈ ನಮ: / ಶ್ರೀಭದ್ರಕಾಲ್ಯೈ ನಮ: / ಶ್ರೀಶಿವದೂತ್ಯೈ ನಮ: / ಶ್ರೀಮಹಾಲಕ್ಷ್ಮ್ಯೈ ನಮ: / ಶ್ರೀ ಮಹಾಮಾಯಾಯೈ ನಮ: / ಶ್ರೀಯೋಗನಿದ್ರಾಯೈ ನಮ: / ಶ್ರೀಚಂಡಿಕಾಯೈ ನಮ


 °~•~°~•~°~•~°~•~°~•~°

 


ವೃಶ್ಚಿಕ


  ವ್ಯವಹಾರ ಕ್ಷೇತ್ರದಲ್ಲಿ  ಮುನ್ನಡೆ ಕಂಡುಬರುತ್ತಿದ್ದು ಮನಃಶಾಂತಿ ಪಡೆಯುವಿರಿ.  ಆರ್ಥಿಕವಾಗಿ ಉತ್ತಮವಾದ ಲಾಭ ಗಳಿಸುವಿರಿ. ದಾಂಪತ್ಯದಲ್ಲಿ ಸುಖ ಶಾಂತಿ  ನೆಲೆಗೊಳ್ಳುವುದು. ಆರೋಗ್ಯದಲ್ಲಿ ಮುನ್ನಡೆ ಕಂಡುಬರುತ್ತಿದ್ದು ಆಹಾರದಲ್ಲಿ ಗಮನ ಇರಲಿ.  ವಿದ್ಯಾರ್ಥಿಗಳಿಗೆ ಆಲಸ್ಯತನ ವನ್ನು ಬಿಟ್ಟು ಮುಂದುವರೆದಲ್ಲಿ ಶುಭ



ಪರಿಹಾರ
ದೇವೀ, ಸುಬ್ರಹ್ಮಣ್ಯಸ್ವಾಮಿಯ ಆರಾಧನೆಯಿಂದ ಶುಭ.


ಜಪಿಸಲು:
ಷಡಾನನಂ ಕುಂಕುಮರಕ್ತವರ್ಣಂ

ಮಹಾಮತಿಂ ದಿವ್ಯಮಯೂರವಾಹಮ್ |

ರುದ್ರಸ್ಯ ಸೂನುಂ ಸುರಸೈನ್ಯನಾಥಂ

ಗುಹಂ ಸದಾ ಶರಣಮಹಂ ಪ್ರಪದ್ಯೇ ||

°~•~°~•~°~•~°~•~°~•~°

 


ಧನು


    ಉದ್ಯೋಗ ಕ್ಷೇತ್ರದಲ್ಲಿ ಉತ್ತಮವಾದ ಏಳಿಗೆ ಕಂಡು ಬರುತ್ತಿತ್ತು ಹೊಸ ಆವಿಷ್ಕಾರಗಳಿಂದ ಮುನ್ನಡೆಯುವಿರಿ.  ಆರ್ಥಿಕವಾಗಿ ನಿಧಾನಗತಿಯ ಮುನ್ನಡೆ. ವಾಹನ ಪ್ರಯಾಣದಲ್ಲಿ ಜಾಗರೂಕರಾಗಿರಬೇಕು. ದಾಂಪತ್ಯದಲ್ಲಿ ಕಲಹಗಳು ಕಂಡುಬರುತ್ತದೆ.  ಆರೋಗ್ಯದಲ್ಲಿ ಏರುಪೇರು ಸಂಭವಿಸುತ್ತದೆ. ವಿದ್ಯಾರ್ಥಿಗಳಿಗೆ ಆಲಸ್ಯತನ ವನ್ನು ಬಿಟ್ಟು ಶ್ರಮದಿಂದ ಮುಂದುವರೆದಲ್ಲಿ ಶುಭಆಗಲಿದೆ


ಪರಿಹಾರ
ಕುಲದೇವತಾ ಆರಾಧನೆ ಅಗತ್ಯ. ವಿಷ್ಣುಸಹಸ್ರನಾಮ ಪಾರಾಯಣ ಮಾಡಿ.

ಜಪಿಸಲು:
ಶ್ರೀಕೇಶವಾಯ ನಮಃ / ಶ್ರೀನಾರಾಯಣಾಯ ನಮಃ / ಶ್ರೀಮಾಧವಾಯ ನಮಃ / ಶ್ರೀಗೋವಿಂದಾಯ ನಮಃ / ಶ್ರೀವಿಷ್ಣವೇ ನಮಃ / ಶ್ರೀಮಧುಸೂದನಾಯ ನಮಃ /  ಶ್ರೀತ್ರಿವಿಕ್ರಮಾಯ ನಮಃ / ಶ್ರೀವಾಮನಾಯ ನಮಃ / ಶ್ರೀಶ್ರೀಧರಾಯ ನಮಃ / ಶ್ರೀಹೃಷಿಕೇಶಾಯ ನಮಃ / ಶ್ರೀಪದ್ಮನಾಭಾಯ ನಮಃ / ಶ್ರೀದಾಮೋದರಾಯ ನಮಃ

     °~•~°~•~°~•~°~•~°~•~°

 


ಮಕರ


    ಉದ್ಯೋಗ ವ್ಯವಹಾರ ಕ್ಷೇತ್ರದಲ್ಲಿ ನಿಧಾನಗತಿಯ ಮುನ್ನಡೆ.  ಆರ್ಥಿಕವಾಗಿ ಹಿನ್ನಡೆ ಕಂಡುಬರುತ್ತದೆ. ಆರೋಗ್ಯದಲ್ಲಿ ವ್ಯತ್ಯಾಸಗಳನ್ನು ಕಾಣುತ್ತೀರಿ .  ಆಹಾರದಲ್ಲಿ ಗಮನ ಇರಲಿ. ವೃಥಾ ಅಪವಾದಗಳು ಬರುವ ಸಾಧ್ಯತೆಗಳಿದ್ದು ಜಾಗರೂಕರಾಗಿರಬೇಕು. ದಾಂಪತ್ಯದಲ್ಲಿ ಕಲಹ.   ಪ್ರಯಾಣಗಳಲ್ಲಿ ತೊಂದರೆ. ವಿದ್ಯಾರ್ಥಿಗಳಿಗೆ ಉತ್ತಮ ಪರಿಶ್ರಮದಿಂದ ಉತ್ತಮ ಫಲ



ಪರಿಹಾರ
ಶಿವ ದೇವಸ್ಥಾನ ದರ್ಶನ, ಕುಲದೇವತಾರಾಧನೆಯಿಂದ ಶುಭ.  

ಜಪಿಸಲು:
ಶ್ರೀಮಹಾದೇವಾಯ ನಮಃ / ಶ್ರೀಮಹೇಶ್ವರಾಯ ನಮಃ / ಶ್ರೀಶಂಕರಾಯ ನಮಃ / ಶ್ರೀವೃಷಭಧ್ವಜಾಯ ನಮಃ / ಶ್ರೀಕೃತ್ತಿವಾಸಸೇ ನಮಃ / ಶ್ರೀಕಾಮಾಂಗನಾಶನಾಯ ನಮಃ / ಶ್ರೀದೇವದೇವೇಶಾಯ ನಮಃ /  ಶ್ರೀಶ್ರೀಕಂಠಾಯ ನಮಃ / ಶ್ರೀಹರಾಯ ನಮಃ / ಶ್ರೀಪಾರ್ವತೀಪತಯೇ ನಮಃ / ಶ್ರೀರುದ್ರಾಯ ನಮಃ / ಶ್ರೀಶಿವಾಯ ನಮಃ

   °~•~°~•~°~•~°~•~°~•~°          

 


ಕುಂಭ  


      ಉದ್ಯೋಗ ಕ್ಷೇತ್ರದಲ್ಲಿ ನಿಧಾನಗತಿಯ ಮುನ್ನಡೆ.  ಆರ್ಥಿಕವಾದ ಹಿನ್ನಡೆ ಕಂಡುಬರುತ್ತದೆ. ಕುಟುಂಬದಲ್ಲಿ ಕಲಹ.  ಆರೋಗ್ಯದಲ್ಲಿ ವ್ಯತ್ಯಾಸ. ದಾಂಪತ್ಯದಲ್ಲಿ ಕಿರಿಕಿರಿ ಎದುರಿಸಬೇಕಾಗುತ್ತದೆ.  ವಿದ್ಯಾರ್ಥಿಗಳಿಗೆ ಉತ್ತಮ ಪರಿಶ್ರಮದಿಂದ ಉತ್ತಮ ಫಲ ಲಭ್ಯ



ಪರಿಹಾರ  
ಶಿವದೇವಸ್ಥಾನ ದರ್ಶನ, ರುದ್ರಾಭಿಷೇಕ ಸೇವೆ, ಕುಲದೇವತಾ ಆರಾಧನೆಯಿಂದ ಶುಭ.

ಜಪಿಸಲು:
ರುದ್ರಂ ಪಶುಪತಿಂ ಸ್ಥಾಣುಂ

ನೀಲಕಂಠಂ ಉಮಾಪತಿಮ್ |

ನಮಾಮಿ ಶಿರಸಾ ದೇವಂ

ಕಿಂ ನೋ ಮೃತ್ಯುಃ ಕರಿಷ್ಯತಿ  ||

°~•~°~•~°~•~°~•~°~•~°


ಮೀನ   


  ವ್ಯಾವಹಾರಿಕ  ಕ್ಷೇತ್ರಗಳಲ್ಲಿ  ಹಿನ್ನಡೆ ಕಂಡುಬರುವುದು. ಆರ್ಥಿಕವಾಗಿ ನಿಧಾನಗತಿಯ ಮುನ್ನಡೆ.  ದಾಂಪತ್ಯದಲ್ಲಿ ಸುಖ ಕಂಡುಬರುತ್ತದೆ. ನಿಮ್ಮ ಆಲಸ್ಯತನ ದಿಂದ ಅವಕಾಶವನ್ನು ಕಳೆದುಕೊಳ್ಳಬೇಡಿ.  ಆರೋಗ್ಯದಲ್ಲಿ ಮುನ್ನಡೆ. ವಿದ್ಯಾರ್ಥಿಗಳಿಗೆ ಉತ್ತಮ ಫಲ ಲಭ್ಯ


ಪರಿಹಾರ
ಶ್ರೀಮಹಾವಿಷ್ಣುದೇವರ ಆರಾಧನೆಯಿಂದ ಶುಭ. ಕುಲದೇವತಾ ಆರಾಧನೆಯು ಅತ್ಯಗತ್ಯವಾಗಿದೆ.


ಜಪಿಸಲು:    
ಶಾಂತಾಕಾರಂ ಭುಜಗಶಯನಂ

ಪದ್ಮನಾಭಂ ಸುರೇಶಂ  

ವಿಶ್ವಾಧಾರಂ ಗಗನಸದೃಶಂ

ಮೇಘವರ್ಣಂ ಶುಭಾಂಗಮ್ |

ಲಕ್ಷ್ಮೀಕಾಂತಂ ಕಮಲನಯನಂ

ಯೋಗಿಹೃದ್ಧ್ಯಾನಗಮ್ಯಂ

ವಂದೇ ವಿಷ್ಣುಂ ಭವಭಯಹರಂ

ಸರ್ವಲೋಕೈಕನಾಥಮ್  ||

°~•~°~•~°~•~°~•~°~•~°



{ವಿ. ಸೂ. : ಮೇಲೆ ಕೊಟ್ಟ ಪರಿಹಾರ ಶ್ಲೋಕ ಮತ್ತು ನಾಮಗಳನ್ನು ಸ್ನಾನದ ಅನಂತರ ಶುಚಿಯಾಗಿ ದೇವರ ಮುಂದೆ ದೀಪ ಹಚ್ಚಿ ನಿರ್ಮಲ ಮನಸ್ಸಿನಿಂದ 48 ಸಲ ಪಠಿಸಬೇಕು.}