|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

01.03.2019

         

ವಿಲಂಬನಾಮ ಸಂವತ್ಸರ / ಉತ್ತರಾಯಣ /
ಶಿಶಿರ ಋತು / ಮಾಘ ಮಾಸ /
ಕೃಷ್ಣ ಪಕ್ಷ /ದಶಮಿ ತಿಥಿ/

ಶುಕ್ರವಾರ/ಪೂರ್ವಾಷಾಡಾ ನಕ್ಷತ್ರ /

ದಿನಾಂಕ 01.03..2019

 °~•~°~•~°~•~°~•~°~•~°

 

ಮೇಷ

 

        ಉದ್ಯೋಗ ವ್ಯವಹಾರ ಕ್ಷೇತ್ರಗಳಲ್ಲಿ ನಿಧಾನಗತಿ ಅಭಿವೃದ್ಧಿ ಕಂಡು ಬರುತ್ತದೆ. ಹಣಕಾಸಿನ ವಿಚಾರದಲ್ಲಿ ಸಣ್ಣಪುಟ್ಟ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ದಾಂಪತ್ಯ ಜೀವನದಲ್ಲಿ ಅಭಿವೃದ್ಧಿ ಕಂಡುಬರುವುದು ವಿದ್ಯಾರ್ಥಿಗಳು ಉತ್ತಮ ಪರಿಶ್ರಮದಿಂದ ಮುಂದುವರಿಯಬೇಕು.



ಪರಿಹಾರ :
ದೇವಿಯ ಆರಾಧನೆಯಿಂದ ಶುಭ.

ಜಪಿಸಲು :
ಸರ್ವಮಂಗಲಮಾಂಗಲ್ಯೇ
ಶಿವೇ ಸರ್ವಾರ್ಥಸಾಧಿಕೇ |
ಶರಣ್ಯೇ ತ್ರ್ಯಂಬಕೇ ಗೌರಿ
ನಾರಾಯಣಿ ನಮೋಸ್ತು ತೇ ||

°~•~°~•~°~•~°~•~°~•~°

    

ವೃಷಭ

         ತೊಡಗಿಸಿಕೊಂಡ ಕೆಲಸ ಕಾರ್ಯಗಳಲ್ಲಿ ತಕ್ಕಮಟ್ಟಿಗೆ ಅಭಿವೃದ್ಧಿ ಕಂಡು ಬರುತ್ತದೆ. ಹಣ  ಕಾಸಿನ ವಿಚಾರದಲ್ಲಿ ತೊಂದರೆ ಎದುರಿಸಬೇಕಾಗುತ್ತದೆ. ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ನೆಲೆಗೊಳ್ಳುತ್ತದೆ. ವಿದ್ಯಾರ್ಥಿಗಳು ತಮ್ಮ ಪರಿಶ್ರಮದಿಂದ ಮುಂದುವರಿಯಬೇಕು.




ಪರಿಹಾರ
ದೇವಿಯ ಆರಾಧನೆಯಿಂದ ಶುಭ.

ಜಪಿಸಲು:
ಶ್ರೀದುರ್ಗಾಯೈ ನಮಃ ಶ್ರೀಶಾಂತ್ಯೈ ನಮ / ಶ್ರೀಶಾಂಭವ್ಯೈ ನಮಃ / ಶ್ರೀಭೂತಿದಾಯಿನ್ಯೈ ನಮಃ / ಶ್ರೀಶಂಕರಪ್ರಿಯಾಯೈ ನಮಃ / ಶ್ರೀನಾರಾಯಣ್ಯೈ ನಮಃ / ಶ್ರೀಭದ್ರಕಾಲ್ಯೈ ನಮಃ / ಶ್ರೀಶಿವದೂತ್ಯೈ ನಮಃ / ಶ್ರೀಮಹಾಲಕ್ಷ್ಮ್ಯೈ ನಮಃ / ಶ್ರೀಮಹಾಮಾಯಾಯೈ ನಮಃ / ಶ್ರೀಯೋಗನಿದ್ರಾಯೈ ನಮಃ / ಶ್ರೀಚಂಡಿಕಾಯೈ ನಮಃ ||
°~•~°~•~°~•~°~•~°~•~°



ಮಿಥುನ


   ನೂತನ ವ್ಯವಹಾರವನ್ನು ತೊಡಗಿಸಿಕೊಳ್ಳುವ ಅವರಿಗೆ ಉತ್ತಮ  ಅವಕಾಶಗಳು ಕೈಗೂಡುತ್ತದೆ . ಸಂಬಂಧಿಸಿದಂತಹ ಹಣವನ್ನು ಉತ್ತಮ ಕಾರ್ಯಗಳಿಗೆ ಓಸ್ಕರ ವಾಗಿ ವಿನಿಯೋಗಿಸಿ. ದಾಂಪತ್ಯ ಜೀವನದಲ್ಲಿ ಸುಖ ಶಾಂತಿ  ನೆಲೆ ಗೊಳ್ಳಲಿದೆ. ಹೊಟ್ಟೆಗೆ ಸಂಬಂಧಿಸಿದಂತಹ ತೊಂದರೆಗಳು ಬರುವ ಲಕ್ಷಣಗಳು ಇರುವುದರಿಂದ ಜಾಗರೂಕತೆಯಿಂದ ಇರಬೇಕು. ವಿದ್ಯಾರ್ಥಿಗಳು ಉತ್ತಮ ಮನಸ್ಸಿನಿಂದ ಏಕಾಗ್ರತೆಯಿಂದ ಮುಂದುವರಿಯಬೇಕು



ಪರಿಹಾರ  
ಶ್ರೀಕೃಷ್ಣನ ಆರಾಧನೆ,ಗುರುದೇವತಾ ಆರಾಧನೆಯಿಂದ ಶುಭ.

ಜಪಿಸಲು :
ವಸುದೇವಸುತಂ ದೇವಮ್

ಕಂಸಚಾಣೂರಮರ್ದನಮ್|

ದೇವಕೀಪರಮಾನನ್ದಮ್

ಕೃಷ್ಣಂ ವನ್ದೇ ಜಗದ್ಗುರುಮ್ ||

  °~•~°~•~°~•~°~•~°~•~°



ಕರ್ಕಾಟಕ

    ವ್ಯವಹಾರಿಕ ಕ್ಷೇತ್ರಗಳಲ್ಲಿ ಅಡೆತಡೆಯನ್ನು ಎದುರಿಸಬೇಕಾಗುತ್ತದೆ. ಮನಶಾಂತಿ ಹದಗೆಡುತ್ತದೆ. ದಾಂಪತ್ಯ ಜೀವನದಲ್ಲಿ ಕಲಹವನ್ನು ಎದುರಿಸಬೇಕಾಗುತ್ತದೆ.  ಮೈ ಕೈ ಗಂಟು ನೋವು, ಶೀತ ಜ್ವರ ಕಫ ಮೊದಲಾದ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಆಲಸ್ಯತನ ವನ್ನು ಬಿಟ್ಟು ಮುಂದುವರಿಯಬೇಕು



ಪರಿಹಾರ
ಕುಲದೇವತಾ ಆರಾಧನೆ ಅಗತ್ಯ. ದೇವಿಯ ಆರಾಧನೆಯಿಂದ ಶುಭ.

ಜಪಿಸಲು :
ಸರ್ವಸ್ವರೂಪೇ ಸರ್ವೇಶಿ
ಸರ್ವಶಕ್ತಿಸಮನ್ವಿತೇ |
ಭಯೇಭ್ಯಸ್ತ್ರಾಹಿ ನೋ ದೇವಿ  
ದುರ್ಗೇದೇವಿ ನಮೋಸ್ತು ತೇ ||

 °~•~°~•~°~•~°~•~°~•~°



ಸಿಂಹ

      ಮಾಡುವಂತಹ ಕೆಲಸ ಕಾರ್ಯಗಳನ್ನು ಶ್ರದ್ಧೆಯಿಂದ ಮುಂದುವರಿಸಿ.  ಆರ್ಥಿಕ ವಿಚಾರದಲ್ಲಿವಿಚಾರದಲ್ಲಿ ತೊಂದರೆ ಎದುರಿಸಬೇಕಾಗುತ್ತದೆ. ಉತ್ತಮ ಕಾರ್ಯಗಳಿಗೆ ಓಸ್ಕರ ವಾಗಿ  ಹಣವನ್ನು ವಿನಿಯೋಗಿಸಿ ಹಾಗೂ ದುಂದುವೆಚ್ಚ ಮಾಡದಿರಿ. ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ನೆಲೆಗೊಳ್ಳಲು ಇದೆ. ವಿದ್ಯಾರ್ಥಿಗಳು ಉತ್ತಮ ಪರಿಶ್ರಮದಿಂದ ಪ್ರಯತ್ನ ಪಟ್ಟಲ್ಲಿ ಮಾತ್ರ ಅಭಿವೃದ್ಧಿ ಕಂಡು ಬರುವುದು.


ಪರಿಹಾರ
ಶಿವನ ಆರಾಧನೆ ಅಗತ್ಯ.

ಜಪಿಸಲು:
ಶ್ರೀಮಹಾದೇವಾಯ ನಮಃ / ಶ್ರೀಮಹೇಶ್ವರಾಯ ನಮಃ / ಶ್ರೀಶಂಕರಾಯ ನಮಃ / ಶ್ರೀವೃಷಭಧ್ವಜಾಯ ನಮಃ / ಶ್ರೀಕೃತ್ತಿವಾಸಸೇ ನಮಃ / ಶ್ರೀಕಾಮಾಂಗನಾಶನಾಯ ನಮಃ / ಶ್ರೀದೇವದೇವೇಶಾಯ ನಮಃ /  ಶ್ರೀಶ್ರೀಕಂಠಾಯ ನಮಃ / ಶ್ರೀಹರಾಯ ನಮಃ / ಶ್ರೀಪಾರ್ವತೀಪತಯೇ ನಮಃ / ಶ್ರೀರುದ್ರಾಯ ನಮಃ / ಶ್ರೀಶಿವಾಯ ನಮಃ ||

    °~•~°~•~°~•~°~•~°~•~°      

 


ಕನ್ಯಾ


    ನೀವು ತೊಡಗಿಸಿಕೊಳ್ಳುವ ಕೆಲಸ ಕಾರ್ಯಗಳಲ್ಲಿ ಹಿನ್ನಡೆ ಕಂಡುಬರುತ್ತದೆ. ಅಧಿಕಾರ ಪತನ, ಬೈಗುಳ, ಅಸಮಾಧಾನ ತೆ, ಮುಂತಾದವುಗಳು ವ್ಯವಹಾರಿಕ ಕ್ಷೇತ್ರದಲ್ಲಿ ಒದಗಿ ಬರುತ್ತದೆ. ಹಣಕಾಸಿನ ವಿಚಾರದಲ್ಲಿ ತೊಂದರೆ ಎದುರಿಸಬೇಕಾಗುತ್ತದೆ.  ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ನೆಲೆಗಳಲ್ಲಿ ಇದೆ. ಹೊಟ್ಟೆಗೆ ಸಂಬಂಧಿಸಿದ ತೊಂದರೆಗಳ ಲಕ್ಷಣಗಳು ಇರುವುದರಿಂದ ಆಹಾರದಲ್ಲಿ ನಿಯಂತ್ರಣವಿರಲಿ. ವಿದ್ಯಾರ್ಥಿಗಳು ಆಲಸಿ ತನವನ್ನು ಬಿಟ್ಟೂ ಮುಂದುವರಿಯಬೇಕು>



ಪರಿಹಾರ
ಶ್ರೀರಾಮದೇವರ ಆರಾಧನೆಯಿಂದ  ಶುಭ.

ಜಪಿಸಲು :
ರಾಮಾಯ ರಾಮಭದ್ರಾಯ
ರಾಮಚಂದ್ರಾಯ ವೇಧಸೇ |  
ರಘುನಾಥಾಯ ನಾಥಾಯ
ಸೀತಾಯಾಃ ಪತಯೇ ನಮಃ ||

  °~•~°~•~°~•~°~•~°~•~°       

 


ತುಲಾ


        ಕೆಲಸ ಕಾರ್ಯಗಳಲ್ಲಿ ಸಣ್ಣಪುಟ್ಟ ತೊಂದರೆಗಳನ್ನು ಎದುರಿಸಬೇಕಾಗುತ್ತದೆ, ವಿನಾಕಾರಣ ಅಪವಾದಗಳು ಕೇಳಿ ಬರುವುದು. ಹಣಕಾಸಿನ ವಿಚಾರದಲ್ಲಿ ಜಾಗರೂಕತೆಯಿಂದ ಇರಬೇಕು. ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ನೆಲೆಗೊಳ್ಳುತ್ತದೆ. ವಿದ್ಯಾರ್ಥಿಗಳು ಉತ್ತಮ ಪರಿಶ್ರಮದಿಂದ ಮುಂದುವರಿಯಬೇಕು


ಪರಿಹಾರ  
ದುರ್ಗಾದೇವಿಯ ಆರಾಧನೆಯಂದ ಶುಭ.

ಜಪಿಸಲು :
ಶ್ರೀದುರ್ಗಾಯೈ ನಮಃ / ಶ್ರೀಶಾಂತ್ಯೈ ನಮಃ / ಶ್ರೀಶಾಂಭವ್ಯೈ ನಮಃ / ಶ್ರೀಭೂತಿದಾಯಿನ್ಯೈ ನಮಃ / ಶ್ರೀಶಂಕರಪ್ರಿಯಾಯೈ ನಮಃ / ಶ್ರೀನಾರಾಯಣ್ಯೈ ನಮಃ / ಶ್ರೀಭದ್ರಕಾಲ್ಯೈ ನಮಃ / ಶ್ರೀಶಿವದೂತ್ಯೈ ನಮಃ / ಶ್ರೀಮಹಾಲಕ್ಷ್ಮ್ಯೈ ನಮಃ / ಶ್ರೀ ಮಹಾಮಾಯಾಯೈ ನಮಃ / ಶ್ರೀಯೋಗನಿದ್ರಾಯೈ ನಮಃ / ಶ್ರೀಚಂಡಿಕಾಯೈ ನಮಃ ||


 °~•~°~•~°~•~°~•~°~•~°

 


ವೃಶ್ಚಿಕ


  
 ಉದ್ಯೋಗ ವ್ಯವಹಾರ ಕ್ಷೇತ್ರಗಳಲ್ಲಿ ಸಣ್ಣಪುಟ್ಟ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.  ಹಣಕಾಸಿನ ವಿಚಾರದಲ್ಲಿ ತೊಂದರೆಗಳು ಕಂಡು ಬರುತ್ತದೆ. ವಿನಾ ಕಾರಣ ಖರ್ಚನ್ನು ಮಾಡದಿರಿ. ದಾಂಪತ್ಯ ಜೀವನದಲ್ಲಿ ಶಾಂತಿ ನೆಲೆಗೊಳ್ಳುತ್ತದೆ. ವಿದ್ಯಾರ್ಥಿಗಳು ಆಲಸ್ಯತನ ವನ್ನು ಬಿಟ್ಟು ಮುಂದುವರಿಯಬೇಕು.

ಪರಿಹಾರ
ದೇವೀ, ಸುಬ್ರಹ್ಮಣ್ಯಸ್ವಾಮಿಯ ಆರಾಧನೆಯಿಂದ ಶುಭ.


ಜಪಿಸಲು :
ಷಡಾನನಂ ಕುಂಕುಮರಕ್ತವರ್ಣಮ್

ಮಹಾಮತಿಂ ದಿವ್ಯಮಯೂರವಾಹಮ್ |

ರುದ್ರಸ್ಯ ಸೂನುಂ ಸುರಸೈನ್ಯನಾಥಮ್

ಗುಹಂ ಸದಾ ಶರಣಮಹಂ ಪ್ರಪದ್ಯೇ ||

°~•~°~•~°~•~°~•~°~•~°

 


ಧನು


   ನೂತನ  ವ್ಯವಹಾರವನ್ನು ತೊಡಗಿಸಿಕೊಳ್ಳುವ ಅವರಿಗೆ ಉತ್ತಮ ಅವಕಾಶಗಳು ಒದಗಿ ಬರುತ್ತದೆ. ಹಣಕಾಸಿನ ವಿಚಾರದಲ್ಲಿ ಅಭಿವೃದ್ಧಿ ಕಂಡು ಬರುವುದು. ನಿಮಗೆ ಬರಬೇಕಾದ ಅಂತಹ ಹಣವು  ಒದಗಿ ಬರುತ್ತದೆ. ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ನೆಲೆಗೊಳ್ಳುವುದು. ಆರೋಗ್ಯ ಸಂಬಂಧವಾದ ತೊಂದರೆಗಳನ್ನು ಇದುರಿಸ ಬೇಕಾಗುತ್ತದೆ. ವಿದ್ಯಾರ್ಥಿಗಳು ಉತ್ತಮ ಪರಿಶ್ರಮದಿಂದ  ಆಲಸ್ಯ ತನವನ್ನು ಬಿಟ್ಟೂ ಮುಂದುವರಿಯಬೇಕು.

ಪರಿಹಾರ
ಕುಲದೇವತಾ ಆರಾಧನೆ ಅಗತ್ಯ. ವಿಷ್ಣುಸಹಸ್ರನಾಮ ಪಾರಾಯಣ ಮಾಡಿ.

ಜಪಿಸಲು :
ಶ್ರೀಕೇಶವಾಯ ನಮಃ / ಶ್ರೀನಾರಾಯಣಾಯ ನಮಃ / ಶ್ರೀಮಾಧವಾಯ ನಮಃ / ಶ್ರೀಗೋವಿಂದಾಯ ನಮಃ / ಶ್ರೀವಿಷ್ಣವೇ ನಮಃ / ಶ್ರೀಮಧುಸೂದನಾಯ ನಮಃ /  ಶ್ರೀತ್ರಿವಿಕ್ರಮಾಯ ನಮಃ / ಶ್ರೀವಾಮನಾಯ ನಮಃ / ಶ್ರೀಶ್ರೀಧರಾಯ ನಮಃ / ಶ್ರೀಹೃಷಿಕೇಶಾಯ ನಮಃ / ಶ್ರೀಪದ್ಮನಾಭಾಯ ನಮಃ / ಶ್ರೀದಾಮೋದರಾಯ ನಮಃ ||

     °~•~°~•~°~•~°~•~°~•~°

 


ಮಕರ


    ವ್ಯವಹಾರಿಕ ಕ್ಷೇತ್ರಗಳಲ್ಲಿ ಅಡೆತಡೆ ಹಾಗೂ ನಷ್ಟಗಳನ್ನು ಎದುರಿಸಬೇಕಾಗುತ್ತದೆ. ಹಣಕಾಸಿನ ವಿಚಾರದಲ್ಲಿ  ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ದುಂದುವೆಚ್ಚ ಮಾಡದೇ ಇರೀ. ದಾಂಪತ್ಯ ಜೀವನದಲ್ಲಿ ಸಣ್ಣ ಪುಟ್ಟ ಕಲಹವನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಉತ್ತಮ  ಪರಿಶ್ರಮದಿಂದ ಮುಂದುವರಿಯಬೇಕು.



ಪರಿಹಾರ
ಶಿವ ದೇವಸ್ಥಾನ ದರ್ಶನ, ಕುಲದೇವತಾರಾಧನೆಯಿಂದ ಶುಭ.  

ಜಪಿಸಲು :
ಶ್ರೀಮಹಾದೇವಾಯ ನಮಃ / ಶ್ರೀಮಹೇಶ್ವರಾಯ ನಮಃ / ಶ್ರೀಶಂಕರಾಯ ನಮಃ / ಶ್ರೀವೃಷಭಧ್ವಜಾಯ ನಮಃ / ಶ್ರೀಕೃತ್ತಿವಾಸಸೇ ನಮಃ / ಶ್ರೀಕಾಮಾಂಗನಾಶನಾಯ ನಮಃ / ಶ್ರೀದೇವದೇವೇಶಾಯ ನಮಃ /  ಶ್ರೀಶ್ರೀಕಂಠಾಯ ನಮಃ / ಶ್ರೀಹರಾಯ ನಮಃ / ಶ್ರೀಪಾರ್ವತೀಪತಯೇ ನಮಃ / ಶ್ರೀರುದ್ರಾಯ ನಮಃ / ಶ್ರೀಶಿವಾಯ ನಮಃ ||

   °~•~°~•~°~•~°~•~°~•~°          

 


ಕುಂಭ  


      ಮಾಡುತ್ತಿರುವ ಕೆಲಸ ಕಾರ್ಯಗಳಲ್ಲಿ ನಿಧಾನಗತಿ ಅಭಿವೃದ್ಧಿ ಕಂಡು ಬರುವುದು. ಆರ್ಥಿಕವಾದ ತೊಂದರೆಯನ್ನು ಎದುರಿಸಬೇಕಾಗುತ್ತದೆ. ದಾಂಪತ್ಯ ಜೀವನದಲ್ಲಿ ಶಾಂತಿ ನೆಲೆಗೊಳ್ಳುವುದು. ಆರೋಗ್ಯ ಸಂಬಂಧವಾದ ತೊಂದರೆಯನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಉತ್ತಮ ಪರಿಶ್ರಮದಿಂದ ಮುಂದುವರಿಯಬೇಕು>



ಪರಿಹಾರ  
ಶಿವದೇವಸ್ಥಾನ ದರ್ಶನ, ರುದ್ರಾಭಿಷೇಕ ಸೇವೆ, ಕುಲದೇವತಾ ಆರಾಧನೆಯಿಂದ ಶುಭ.

ಜಪಿಸಲು :
ರುದ್ರಂ ಪಶುಪತಿಂ ಸ್ಥಾಣುಮ್

ನೀಲಕಂಠಂ ಉಮಾಪತಿಮ್ |

ನಮಾಮಿ ಶಿರಸಾ ದೇವಮ್

ಕಿಂ ನೋ ಮೃತ್ಯುಃ ಕರಿಷ್ಯತಿ  ||

°~•~°~•~°~•~°~•~°~•~°


ಮೀನ   


   ಮಾಡುವಂತಹ ಕೆಲಸ ಕಾರ್ಯಗಳಲ್ಲಿ ನಿಧಾನಗತಿಯ ಅಭಿವೃದ್ಧಿ ಹಾಗೂ ಉತ್ತಮ ಸ್ಥಾನ ಮಾನಗಳು ದೊರೆಯಲಿ ಇದೆ. ಹಣಕಾಸಿನ ವಿಚಾರದಲ್ಲಿ ನಿಧಾನಗತಿ ಅಭಿವೃದ್ಧಿ ಕಂಡು ಬರುತ್ತದೆ. ವ್ಯಾಪಾರಸ್ಥರು ನಷ್ಟವನ್ನು ಎದುರಿಸಬೇಕಾಗುತ್ತದೆ. ದಾಂಪತ್ಯ ಜೀವನದಲ್ಲಿ  ಶಾಂತಿ ನೆಲ ಗೊಳ್ಳಲಿದೆ. ಉದರ ಸಂಬಂಧಿ ತೊಂದರೆ, ಮೈ ಕೈ ಗಂಟು ನೋವು, ಚರ್ಮದ ತೊಂದರೆ, ಮುಂತಾದ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಉತ್ತಮ ಪರಿಶ್ರಮದಿಂದ ಮುಂದುವರೆಯಬೇಕು.


ಪರಿಹಾರ
ಶ್ರೀಮಹಾವಿಷ್ಣುದೇವರ ಆರಾಧನೆಯಿಂದ ಶುಭ. ಕುಲದೇವತಾ ಆರಾಧನೆಯು ಅತ್ಯಗತ್ಯವಾಗಿದೆ.


ಜಪಿಸಲು :    
ಶಾಂತಾಕಾರಂ ಭುಜಗಶಯನಮ್

ಪದ್ಮನಾಭಂ ಸುರೇಶಮ್  

ವಿಶ್ವಾಧಾರಂ ಗಗನಸದೃಶಮ್

ಮೇಘವರ್ಣಂ ಶುಭಾಂಗಮ್ |

ಲಕ್ಷ್ಮೀಕಾಂತಂ ಕಮಲನಯನಮ್

ಯೋಗಿಹೃದ್ಧ್ಯಾನಗಮ್ಯಮ್

ವಂದೇ ವಿಷ್ಣುಂ ಭವಭಯಹರಮ್

ಸರ್ವಲೋಕೈಕನಾಥಮ್  ||

°~•~°~•~°~•~°~•~°~•~°



{ವಿ. ಸೂ. : ಮೇಲೆ ಕೊಟ್ಟ ಪರಿಹಾರ ಶ್ಲೋಕ ಮತ್ತು ನಾಮಗಳನ್ನು ಸ್ನಾನದ ಅನಂತರ ಶುಚಿಯಾಗಿ ದೇವರ ಮುಂದೆ ದೀಪ ಹಚ್ಚಿ ನಿರ್ಮಲ ಮನಸ್ಸಿನಿಂದ 48 ಸಲ ಪಠಿಸಬೇಕು.}