|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

30.05.2019

         

ವಿಕಾರಿನಾಮ ಸಂವತ್ಸರ / ಉತ್ತರಾಯಣ /
ವಸಂತ ಋತು / ವೈಶಾಖ ಮಾಸ/

ಕೃಷ್ಣಪಕ್ಷ/ಏಕಾದಶಿ ತಿಥಿ/

ಗುರುವಾರ/ರೇವತೀ ನಕ್ಷತ್ರ /



ದಿನಾಂಕ: 30.05.2019

 °~•~°~•~°~•~°~•~°~•~°

ಮೇಷ
ಉತ್ತಮ ಶ್ರದ್ಧೆಯಿಂದ ಕೆಲಸ-ಕಾರ್ಯಗಳನ್ನು ಮುನ್ನಡೆಸಿ. ಆರ್ಥಿಕ ಮುನ್ನಡೆ ದೊರೆಯುತ್ತದೆ. ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ನೆಲೆಗೊಳ್ಳುವುದು, ಯುವಕ-ಯುವತಿಯರಿಗೆ ವಿವಾಹಯೋಗ ಭಾಗ್ಯ ಒದಗಿಬರುತ್ತದೆ. ಮಾತಿನ ಮೂಲಕ ಜಗಳಗಳು ಸಂಭವಿಸುವ ಲಕ್ಷಣಗಳು ಇರುವುದರಿಂದ ಜಾಗರೂಕತೆಯಿಂದ ಇರಬೇಕು. ವಿದ್ಯಾರ್ಥಿಗಳಿಗೆ  ಉತ್ತಮ ಅಭಿವೃದ್ಧಿ ದೊರೆಯುತ್ತದೆ.

ಪರಿಹಾರ:
ಶ್ರೀದುರ್ಗಾಪರಮೇಶ್ವರೀ ಅಮ್ಮನವರ ಆರಾಧನೆ ಹಾಗೂ ಸುಬ್ರಹ್ಮಣ್ಯ ದೇವರ ಆರಾಧನೆಯನ್ನು ಮಾಡಬೇಕು.

ಜಪಿಸಲು :
ನಮಸ್ತೇ ಶರಣ್ಯೇ ಶಿವೇ ಸಾನುಕಮ್ಪೇ

ನಮಸ್ತೇ ಜಗದ್ವ್ಯಾಪಿಕೇ ವಿಶ್ವರೂಪೇ ।
ನಮಸ್ತೇ ಜಗದ್ವನ್ದ್ಯಪಾದಾರವಿನ್ದೇ

ನಮಸ್ತೇ ಜಗತ್ತಾರಿಣಿ ತ್ರಾಹಿ ದುರ್ಗೇ ॥

°~•~°~•~°~•~°~•~°~•~°

    

ವೃಷಭ

ಹಿರಿಯ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುತ್ತೀರಿ. ಧನಲಾಭ ಒದಗಿಬರುತ್ತದೆ. ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ನೆಲೆಗೊಳ್ಳುತ್ತದೆ. ಆರೋಗ್ಯ ಸಂಬಂಧಿ ತೊಂದರೆ ನಿವಾರಿಸಲು ಉತ್ತಮವಾಗಿ ನೀರು ಕುಡಿಯಿರಿ. ವಿದ್ಯಾರ್ಥಿಗಳಿಗೆ ಉತ್ತಮ ಅಭಿವೃದ್ಧಿ ಕಂಡುಬರುತ್ತದೆ.

ಪರಿಹಾರ
ಗೋಮಾತೆಯ ದರ್ಶನ ಹಾಗೂ ಸೇವೆಯನ್ನು ಮಾಡಿ.

ಜಪಿಸಲು :
ಸರ್ವದೇವಮಯೇ ದೇವಿ

ಸರ್ವದೇವೈರಲಂಕೃತೇ |
ಮಾತರ್ಮಮಾಭಿಲಷಿತಮ್

ಸಫಲಂ ಕುರು ನಂದಿನಿ ||

°~•~°~•~°~•~°~•~°~•~°



ಮಿಥುನ

     ಉದ್ಯೋಗ ವ್ಯವಹಾರ ಕ್ಷೇತ್ರಗಳಲ್ಲಿ  ಅಡೆತಡೆಗಳು ಕಷ್ಟನಷ್ಟಗಳು ಎದುರಾಗುತ್ತಿದೆ. ಹಣಕಾಸಿನ ವಿಚಾರದಲ್ಲಿ ತೊಂದರೆಗಳನು ಎದುರಿಸಬೇಕಾಗುವುದು ರಿಂದ ಜಾಗರೂಕತೆಯಿಂದ ಖರ್ಚುವೆಚ್ಚವನ್ನು ನಿಭಾಯಿಸಿ. ಆರೋಗ್ಯ ಸಂಬಂಧಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಅಭಿವೃದ್ಧಿ ಕಂಡುಬರುವುದು.



ಪರಿಹಾರ  
ನರಸಿಂಹನ ಆರಾಧನೆಯನ್ನು ಮಾಡಿ.

ಜಪಿಸಲು :
ದೇವತಾಕಾರ್ಯಸಿದ್ಧ್ಯರ್ಥಮ್

ಸಭಾಸ್ತಂಭಸಮುದ್ಭವಮ್ |
ಶ್ರೀನೃಸಿಂಹಮಹಾವೀರಮ್

ನಮಾಮಿ ಋಣಮುಕ್ತಯೇ ||

  °~•~°~•~°~•~°~•~°~•~°



ಕರ್ಕಾಟಕ

ನಿಮ್ಮ ವ್ಯವಹಾರ ಕ್ಷಮತೆಯಿಂದ ಕಾರ್ಯಕ್ಷೇತ್ರಗಳು  ಉತ್ತಮ ಅಭಿವೃದ್ಧಿ ಕಂಡು ಬರುತ್ತದೆ. ಹಣಕಾಸಿನ ವಿಚಾರದಲ್ಲಿ ಸಣ್ಣಪುಟ್ಟ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ದಾಂಪತ್ಯಜೀವನದಲ್ಲಿ  ಕಲಹ ಏರ್ಪಡುವ ಲಕ್ಷಣಗಳು ಇರುವುದರಿಂದ ಜಾಗರೂಕತೆಯಿಂದ ಇರಬೇಕು.ವಿದ್ಯಾರ್ಥಿಗಳು ಉತ್ತಮ ಪರಿಶ್ರಮದಿಂದ ಮುನ್ನಡೆಯಿರಿ.

ಪರಿಹಾರ
ಕುಲದೇವತಾ ಆರಾಧನೆ ಅಗತ್ಯ. ದೇವಿಯ ಆರಾಧನೆಯಿಂದ ಶುಭ.

ಜಪಿಸಲು :
ಶ್ರೀದುರ್ಗಾಯೈ ನಮಃ / ಶ್ರೀಶಾಂತ್ಯೈ ನಮಃ / ಶ್ರೀಶಾಂಭವ್ಯೈ ನಮಃ / ಶ್ರೀಭೂತಿದಾಯಿನ್ಯೈ ನಮಃ / ಶ್ರೀಶಂಕರಪ್ರಿಯಾಯೈ ನಮಃ / ಶ್ರೀನಾರಾಯಣ್ಯೈ ನಮಃ / ಶ್ರೀಭದ್ರಕಾಲ್ಯೈ ನಮಃ / ಶ್ರೀಶಿವದೂತ್ಯೈ ನಮಃ / ಶ್ರೀಮಹಾಲಕ್ಷ್ಮ್ಯೈ ನಮಃ / ಶ್ರೀಮಹಾಮಾಯಾಯೈ ನಮಃ / ಶ್ರೀಯೋಗನಿದ್ರಾಯೈ ನಮಃ / ಶ್ರೀಚಂಡಿಕಾಯೈ ನಮಃ ||

 °~•~°~•~°~•~°~•~°~•~°



ಸಿಂಹ

   ಮಾನಸಿಕವಾಗಿ ಭಯ ಗೊಳ್ಳದೆ ಧೈರ್ಯವಾಗಿ ಮುನ್ನಡೆಯಿರಿ. ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ದಾಂಪತ್ಯ ಜೀವನದಲ್ಲಿ ಕಲಹ ಏರ್ಪಡುತ್ತದೆ. ಆರೋಗ್ಯ ಸಂಬಂಧವಾದ ಸಣ್ಣ  ಪುಟ್ಟ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಅಭಿವೃದ್ಧಿ ಕಂಡುಬರುವುದು.


ಪರಿಹಾರ
ಶಿವನ ಆರಾಧನೆ ಅಗತ್ಯ.

ಜಪಿಸಲು :
ಕರಚರಣಕೃತಂ ವಾಕ್ಕಾಯಜಂ ಕರ್ಮಜಂ ವಾ
ಶ್ರವಣನಯನಜಂ ವಾ ಮಾನಸಂ ವಾಪರಾಧಮ್ |
ವಿಹಿತಮವಿಹಿತಂ ವಾ ಸರ್ವಮೇತತ್ ಕ್ಷಮಸ್ವ
ಜಯ ಜಯ ಕರುಣಾಬ್ದೇ ಶ್ರೀಮಹಾದೇವ ಶಂಭೋ||

    °~•~°~•~°~•~°~•~°~•~°      


ಕನ್ಯಾ


     ದೂರ ಪ್ರಯಾಣ ಮಾಡಬೇಕಾದಂತಹ ಪರಿಸ್ಥಿತಿ ಒದಗಿ ಬರುವುದು. ಹಣಕಾಸಿನ ವಿಚಾರದಲ್ಲೂ ಉತ್ತಮ ಅಭಿವೃದ್ಧಿ ಕಂಡುಬರುತ್ತದೆ. ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ಬಲಗೊಳ್ಳುತ್ತಿದೆ ಹಾಗೂ ಯುವಕ-ಯುವತಿಯರಿಗೆ ವಿವಾಹಯೋಗ ಭಾಗ್ಯ ಒದಗಿ ಬರುತ್ತದೆ. ವಿದ್ಯಾರ್ಥಿಗಳು ಉತ್ತಮ ಪರಿಶ್ರಮದಿಂದ ಮುನ್ನಡೆದರೆ ಮಾತ್ರ ಅಭಿವೃದ್ಧಿ ಕಂಡುಬರುವುದು.



ಪರಿಹಾರ
ಶ್ರೀಕೃಷ್ಣ ದೇವರ ಆರಾಧನೆಯಿಂದ ಶುಭ

ಜಪಿಸಲು :
ವಸುದೇವಸುತಂ  ದೇವಮ್

ಕಂಸಚಾಣೂರಮರ್ದನಮ್  |
ದೇವಕೀಪರಮಾನಂದಮ್

ಕೃಷ್ಣಂ ವಂದೇ  ಜಗದ್ಗುರುಮ್ ||

  °~•~°~•~°~•~°~•~°~•~°       


ತುಲಾ

ವ್ಯವಹಾರದಲ್ಲಿ ನಷ್ಟವನ್ನು ಎದುರಿಸಬೇಕಾಗುತ್ತದೆ. ಹಣಕಾಸಿನ ವಿಚಾರದಲ್ಲಿ  ತೊಂದರೆಗಳು ಎದುರಾಗುತ್ತದೆ. ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಗೊಳ್ಳುತ್ತದೆ. ಶೀತ ಜ್ವರ ತಲೆನೋವು ಕಣ್ಣ  ನೋವು ಮೊದಲಾದ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಅಭಿವೃದ್ಧಿ ಕಂಡು ಬರುವುದು.


ಪರಿಹಾರ  
ದುರ್ಗಾದೇವಿಯ ಆರಾಧನೆಯಂದ ಶುಭ.

ಜಪಿಸಲು :
ಸರ್ವರೂಪಮಯೀ ದೇವೀ

ಸರ್ವಂ ದೇವೀಮಯಂ ಜಗತ್ ।
ಅತೋಽಹಂ ವಿಶ್ವರೂಪಾಂ ತ್ವಾಮ್

ನಮಾಮಿ ಪರಮೇಶ್ವರೀಮ್ ||


 °~•~°~•~°~•~°~•~°~•~°


ವೃಶ್ಚಿಕ

ಹಿರಿಯ ಅಧಿಕಾರಿಗಳಿಂದ ಸಮಾನತೆಯ ಮಾತುಗಳು ಕೇಳಿ ಬರುತ್ತವೆ. ಹಣಕಾಸಿನ  ವಿಚಾರದಲ್ಲಿ ತೊಂದರೆಯನ್ನು ಎದುರಿಸಬೇಕಾಗುತ್ತದೆ. ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ನೆಲೆಗೊಳ್ಳುವುದು. ವಿದ್ಯಾರ್ಥಿಗಳಿಗೆ ಆಲಸಿತನ ವನ್ನು ಬಿಟ್ಟು ಮುನ್ನಡೆದರೆ ಮಾತ್ರ ಅಭಿವೃದ್ಧಿ.

ಪರಿಹಾರ
ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಯಿಂದ ಶುಭವಾಗಲಿದೆ.


ಜಪಿಸಲು:
ಶರಣ್ಯಂ ಸರ್ವಲೋಕಾನಾಮ್

ಅಗ್ರಗಣ್ಯಂ ದಿವೌಕಸಾಮ್ |
ವರೇಣ್ಯಂ ದೇವಸೇನಾಯಾಃ

ಸುಬ್ರಮಣ್ಯಮುಪಾಸ್ಮಹೇ ||

°~•~°~•~°~•~°~•~°~•~°


ಧನು


ಗೃಹಪಯೋಗಿ ವಸ್ತುಗಳು ಖರೀದಿಗೆ ಉತ್ತಮ ಅವಕಾಶ ಒದಗಿಬರುತ್ತದೆ. ಭೂಲಾಭ, ವಾಹನ ಲಾಭ ಮೊದಲಾದ ಸದವಕಾಶಗಳು ಒದಗಿ ಬರುತ್ತವೆ. ದಾಂಪತ್ಯ ಜೀವನದಲ್ಲಿ   ಕಲಹ ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಉತ್ತಮ ಪರಿಶ್ರಮದಿಂದ ಮುನ್ನಡೆಯಿರಿ.

ಪರಿಹಾರ
ತಂದೆ ತಾಯಿಯರ ಹಾಗೂ ಗುರುವಿನ ಆಶೀರ್ವಾದವನ್ನು  ಪಡೆಯಿರಿ.

ಜಪಿಸಲು :
ಅಖಂಡಮಂಡಲಾಕಾರಮ್

ವ್ಯಾಪ್ತಂ ಯೇನ ಚರಾಚರಮ್ |
ತತ್ಪದಂ ದರ್ಶಿತಂ ಯೇನ

ತಸ್ಮೈ ಶ್ರೀಗುರವೇ ನಮಃ ||

     °~•~°~•~°~•~°~•~°~•~°


ಮಕರ


   ತೊಡಗಿಸಿಕೊಂಡ ಕೆಲಸಕಾರ್ಯಗಳಲ್ಲಿ ನಿಧಾನಗತಿಯ  ಏಳಿಗೆ ಕಂಡುಬರುತ್ತದೆ. ಹಣಕಾಸಿನ ವಿಚಾರದಲ್ಲಿ ತೊಂದರೆ ಎದುರಿಸಬೇಕಾಗುತ್ತದೆ. ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ನೆಲೆಗೊಳ್ಳುತ್ತದೆ ಆರೋಗ್ಯ ಸಂಬಂಧವಾದ ತೊಂದರೆಗಳು ಎದುರಾಗುತ್ತವೆ. ವಿದ್ಯಾರ್ಥಿಗಳಿಗೆ ಆಲಸ್ಯವನ್ನು ಬಿಟ್ಟು ಮುನ್ನಡೆದರೆ ಮಾತ್ರ ಅಭಿವೃದ್ಧಿ ಕಂಡುಬರುತ್ತದೆ.   
ಪರಿಹಾರ
ಶಿವಾಲಯ ದರ್ಶನ, ರುದ್ರಾಭಿಷೇಕ ಸೇವೆ ಮಾಡುವುದರಿಂದ ಶುಭ ಆಗಲಿದೆ.  

ಜಪಿಸಲು :
ಶುದ್ಧಸ್ಫಟಿಕಸಂಕಾಶಮ್
ಶುದ್ಧವಿದ್ಯಾಪ್ರದಾಯಕಮ್ |
ಶುದ್ಧಂ ಪೂರ್ಣಂ ಚಿದಾನಂದಮ್
ಸದಾಶಿವಮಹಂ ಭಜೇ ||

   °~•~°~•~°~•~°~•~°~•~°          


ಕುಂಭ  

ಉದ್ಯೋಗ ಕ್ಷೇತ್ರಗಳಲ್ಲಿ ನಿಧಾನಗತಿಯ  ಏಳಿಗೆ ಕಂಡುಬರುವುದು. ಮಾತಿನ ಮೂಲಕ ಜಗಳಗಳು ಸಂಭವಿಸುವ ಲಕ್ಷಣಗಳು ಇರುವುದರಿಂದ ಜಾಗರೂಕತೆಯಿಂದ ಇರಬೇಕು. ಆರೋಗ್ಯ ಸಂಬಂಧಿ ತೊಂದರೆಗಳು ಎದುರಾಗುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಅಭಿವೃದ್ಧಿ ಕಂಡುಬರುವುದು.



ಪರಿಹಾರ  
ಶಿವದೇವಸ್ಥಾನ ದರ್ಶನ, ಆಂಜನೇಯ ಸ್ವಾಮಿಯ ಆರಾಧನೆಯಿಂದ ಶುಭವಾಗಲಿದೆ.

ಜಪಿಸಲು :
ಅಂಜನಾಗರ್ಭಸಂಭೂತ
ಕಪೀಂದ್ರಸಚಿವೋತ್ತಮ |
ರಾಮಪ್ರಿಯ ನಮಸ್ತುಭ್ಯಮ್
ಹನೂಮಾನ್ ರಕ್ಷ ಮಾಂ ಸದಾ ||

°~•~°~•~°~•~°~•~°~•~°


ಮೀನ   


     ಆಲಸಿತನ ವನ್ನು ಬಿಟ್ಟು ಕೆಲಸ ಕಾರ್ಯದಲ್ಲಿ ಉತ್ತಮ ಪರಿಶ್ರಮದಿಂದ ತೊಡಗಿಸಿಕೊಳ್ಳಿ. ಹಣಕಾಸಿನ ವಿಚಾರದಲ್ಲಿ ಅಭಿವೃದ್ಧಿ ಕಂಡು ಬರುತ್ತದೆ. ದಾಂಪತ್ಯ ಜೀವನದಲ್ಲಿ ಕಲಹ  ಸಂಭವಿಸುವ ಲಕ್ಷಣಗಳು ಇರುವುದರಿಂದಜಾಗರೂಕತೆಯಿಂದ ಇರಬೇಕು. ವಿದ್ಯಾರ್ಥಿಗಳಿಗೆ ಉತ್ತಮ ಅಭಿವೃದ್ಧಿ ದೊರೆಯಲಿದೆ.


ಪರಿಹಾರ
ಶ್ರೀಮಹಾವಿಷ್ಣುದೇವರ ಆರಾಧನೆಯಿಂದ ಶುಭ. ಅಶ್ವತ್ಥಮರ ಪ್ರದಕ್ಷಿಣೆ ಬರುವುದರಿಂದ ಶುಭ ಕುಲದೇವತಾ ಆರಾಧನೆಯು ಅತ್ಯಗತ್ಯವಾಗಿದೆ.


ಜಪಿಸಲು :    
ಶ್ರೀಕೇಶವಾಯ ನಮಃ / ಶ್ರೀನಾರಾಯಣಾಯ ನಮಃ / ಶ್ರೀಮಾಧವಾಯ ನಮಃ / ಶ್ರೀಗೋವಿಂದಾಯ ನಮಃ / ಶ್ರೀವಿಷ್ಣವೇ ನಮಃ / ಶ್ರೀಮಧುಸೂದನಾಯ ನಮಃ /  ಶ್ರೀತ್ರಿವಿಕ್ರಮಾಯ ನಮಃ / ಶ್ರೀವಾಮನಾಯ ನಮಃ / ಶ್ರೀಶ್ರೀಧರಾಯ ನಮಃ / ಶ್ರೀಹೃಷಿಕೇಶಾಯ ನಮಃ / ಶ್ರೀಪದ್ಮನಾಭಾಯ ನಮಃ / ಶ್ರೀದಾಮೋದರಾಯ ನಮಃ ||

°~•~°~•~°~•~°~•~°~•~°



{ವಿ. ಸೂ. : ಮೇಲೆ ಕೊಟ್ಟ ಪರಿಹಾರ ಶ್ಲೋಕ ಮತ್ತು ನಾಮಗಳನ್ನು ಸ್ನಾನದ ಅನಂತರ ಶುಚಿಯಾಗಿ ದೇವರ ಮುಂದೆ ದೀಪ ಹಚ್ಚಿ ನಿರ್ಮಲ ಮನಸ್ಸಿನಿಂದ 48 ಸಲ ಪಠಿಸಬೇಕು.}