ಬೆಂಗಳೂರು: ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರಕ್ಕಾಗಿ ತರಕಾರಿಗಳನ್ನು ಸಮರ್ಪಿಸುವ ‘ಬುತ್ತಿ’ ಯೋಜನೆ ಐದು ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತ ಬಂದಿದೆ. ಪರಮಪೂಜ್ಯ ಶ್ರೀಸಂಸ್ಥಾನದವರ ಆಶೀರ್ವಾದದಿಂದ, ಹಲವು ಸಜ್ಜನರ ಸದ್ಭಾವದ ಫಲವಾಗಿ ಈ ಸತ್ಕಾರ್ಯ ನಿರ್ವಿಘ್ನವಾಗಿ ನಡೆಯುತ್ತ ಬಂದಿದ್ದು, ೨೦೨೫-೨೬ ಶೈಕ್ಷಣಿಕ ವರ್ಷದಲ್ಲಿ ೫೦ ಸಾವಿರ ಕೆ.ಜಿ.ಗಿಂತಲೂ ಅಧಿಕ ಪ್ರಮಾಣದ ತರಕಾರಿಗಳನ್ನು ಹಾಗೂ ಹಣ್ಣುಗಳನ್ನು ಬುತ್ತಿ ಬಳಗ ಸಮರ್ಪಿಸಿದೆ.

ಇದೀಗ, ಹೆಚ್ಚು ಜನರಿಗೆ ಸೇವಾವಕಾಶದಲ್ಲಿ ಭಾಗಿಯಾಗಲು ಸದವಕಾಶ ಕಲ್ಪಿಸುವ ನಿಟ್ಟಿನಲ್ಲಿ ‘ಬುತ್ತಿ’ ಯೋಜನೆಯಲ್ಲಿ ವಾರದ ಪ್ರಾಯೋಜಕತ್ವ ನಿರ್ವಹಿಸುವ ಅವಕಾಶಕ್ಕೆ ಪರಮಪೂಜ್ಯ ಶ್ರೀಸಂಸ್ಥಾನದವರು ನಿಜ ಜ್ಯೇಷ್ಠ ಕೃಷ್ಣ ತ್ರಯೋದಶಿಯಂದು (12-07-2026) ವಿಜಯನಗರದ ಶ್ರೀಭಾರತೀ ವಿದ್ಯಾಲಯದಲ್ಲಿ ಚಾಲನೆ ನೀಡಿದ್ದಾರೆ. ಪರಮಪೂಜ್ಯರು ನೂತನ ಯೋಜನೆಗೆ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದ್ದಾರೆ.
ವಾರದ ಪ್ರಾಯೋಜಕತ್ವ:
ವಾರಕ್ಕೆ ಸುಮಾರು ರೂಪಾಯಿ 25,000/- ಮೌಲ್ಯದ ತರಕಾರಿ ಹಣ್ಣುಗಳ ಅಗತ್ಯವಿದ್ದು, ವಾರದ ಆವಶ್ಯಕತೆಯ ಪ್ರಾಯೋಜಕರಾಗಿ ಸಹಕರಿಸಲು ಅವಕಾಶವಿದೆ. ತಿಂಗಳಿಗೆ 4 ದಾನಿಗಳಂತೆ ಒಟ್ಟು 52 ದಾನಿಗಳಿಗೆ ಒಂದು ವರ್ಷಕ್ಕೆ ಅವಕಾಶವಿದೆ.
ಸಂಪರ್ಕ: ಡಾ. ಆರ್. ಸಿ. ಭಾರದ್ವಾಜ (+91 9845194269)