ಸಭಾಭವನದ ಭೂಮಿ ಪೂಜೆ

ಸುದ್ದಿ

ವಿಟ್ಲ: ಶ್ರೀರಾಮಚಂದ್ರಾಪುರ ಮಠಕ್ಕೆ ಸೇರಿದ ಮುಳಿಯ ನಿವೇಶನದಲ್ಲಿ ತಿಮ್ಮಪ್ಪಯ್ಯ ಕಟ್ಟಡ ಕ್ರಿಯಾ ಸಮಿತಿ ವತಿಯಿಂದ ನಿರ್ಮಾಣವಾಗಲಿರುವ ನೂತನ ಸಭಾಭವನದ ಭೂಮಿ ಪೂಜೆ ಆಷಾಢ ಶುಕ್ಲ ಪಾಡ್ಯದಂದು (15-07-2026) ನಡೆಯಿತು.

ವೇದಮೂರ್ತಿಗಳಾದ ಕುರೂವುಮೂಲೆ ಚಂದ್ರಶೇಖರ ಉಪಾಧ್ಯಾಯ ಹಾಗೂ ಶಿವಪ್ರಸಾದ್ ಭಟ್ ಅಮೈ ಅವರ ನೇತೃತ್ವದಲ್ಲಿ ವಿಧಿಗಳು ನಡೆದವು.

ಹವ್ಯಕ ಮಹಾಮಂಡಲದ ಅಧ್ಯಕ್ಷ ಹರಿಪ್ರಸಾದ ಪೆರಿಯಪ್ಪು, ಮುಳಿಯ ತಿಮ್ಮಪ್ಪಯ್ಯ ಸ್ಮಾರಕ ಕಟ್ಟಡ ಕ್ರಿಯಾ ಸಮಿತಿಯ ಅಧ್ಯಕ್ಷ ಮೋಹನ ಎ., ಹವ್ಯಕ ಮಹಾಮಂಡಲದ ಉಪಾಧ್ಯಕ್ಷ ಶಿವಶಂಕರ ಭಟ್, ಮಂಗಳೂರು ಮಂಡಲದ ಉಪಾಧ್ಯಕ್ಷ ರಾಜಶೇಖರ ಭಟ್ ಕಾಕುಂಜೆ, ಕೇಪು ವಲಯದ ಅಧ್ಯಕ್ಷೆ ಯಶಸ್ವಿನಿ ಶಾಸ್ತ್ರಿ, ಕಟ್ಟಡ ಸಮಿತಿಯ ಸಂಚಾಲಕರಾದ ಕಟ್ಟೆ ಕೃಷ್ಣಮೂರ್ತಿ, ಬಲರಾಮ ಬೈಕುಂಜ, ಪ್ರಧಾನ ಕಾರ್ಯದರ್ಶಿ ಜನಾರ್ದನ ಭಟ್ ಅಮೈ, ಸಹಕಾರ್ಯದರ್ಶಿ ಕಾನ ಈಶ್ವರ ಭಟ್, ಕೋಶಾಧಿಕಾರಿ ಮುರಳೀಕೃಷ್ಣ ಕುಕ್ಕಿಲ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *