ಲಕ್ಷಭಾಗಿನಿಯರಿಗೆ ಬಾಗಿನ : ಧನ್ಯರಾದ ಸುರಭಿಸೇವಿಕೆಯರು

ಸುದ್ದಿ

 

ಬೆಂಗಳೂರು: 22.02.2019ರಂದು ಬೆಂಗಳೂರಿನ ಗಿರಿನಗರದ ರಾಮಾಶ್ರಮದಲ್ಲಿ ಮಾತೆಯರ ಸಂಭ್ರಮ. ಶ್ರೀಮಠದ ಸಮವಸ್ತ್ರ ಧರಿಸಿದ 150ಕ್ಕೂ ಹೆಚ್ಚು ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು.
ಅನಂತರ ಶ್ರೀಮಠದ ಒಳಿತಿಗಾಗಿ 4 ವರ್ಷಗಳಿಂದ ಚಾಚೂ ತಪ್ಪದೆ ಪ್ರತಿದಿನವೂ ನಡೆದ ಬನಶಂಕರಿ ದೀಪದ ಸೇವೆ ಮತ್ತು ಶ್ರೀಕರಾರ್ಚಿತ ರಾಮನ ಮುಂದೆ ಪ್ರತಿ ದಿನ ಸಂಜೆ ಪೂಜೆಯ ಸಮಯದಲ್ಲಿ ಬೆಳಗುವ ರಾಮತಾರಕದ ಅಕ್ಷರರೂಪದ ದೀಪದ ಸೇವೆ, ಇವೆರಡರಲ್ಲೂ ಭಾಗಿಗಳಾದ ಮಾತೆಯರನ್ನು ‘ದೀಪ ದೇವಿಯರು’ ಎಂದು ಹೆಸರಿಸಿ ಶ್ರೀಸಂಸ್ಥಾನದವರು ಹಾರೈಸಿದ ಕ್ಷಣ, ಎಲ್ಲ ಮಾತೆಯರಲ್ಲೂ ಧನ್ಯತೆಯ ಭಾವ ಕಾಣುತ್ತಿತ್ತು.

ಅನಂತರ ನಡೆದ ಸಭೆಯಲ್ಲಿ ಲಕ್ಷ ಭಾಗಿನಿಯರಾದ ಮೂವರು ಸುರಭಿಸೇವಿಕೆಯರು ಮಾತೃಸ್ವರೂಪಿ ಗುರುಗಳಿಂದ ಆಶೀರ್ವಾದ ಪೂರ್ವಕ ಬಾಗಿನ ಪಡೆದಾಗ ಅವರಲ್ಲಿ ಸಾರ್ಥಕತೆಯ ಭಾವ ತುಂಬಿತ್ತು.
ಸಾವಿರದ ಸುರಭಿ ಯೋಜನೆಯ ಕುರಿತು ಶ್ರೀಸಂಸ್ಥಾನದವರು ಸುರಭಿಸೇವಿಕೆಯರಿಗೆ ಮಾರ್ಗದರ್ಶನ ನೀಡುತ್ತಾ, ಮಾತೆಯರು ಗೋಸ್ವರ್ಗದ ಆಧಾರಸ್ತಂಭವಾಗಬೇಕು. ಹೆಚ್ಚಿನ ಮಾತೆಯರು ಇದರಲ್ಲಿ ತೊಡಗಿಸಿಕೊಂಡು ಲಕ್ಷಭಾಗಿನಿಯರಾಗಿ ಬಾಗಿನ ಪಡೆದುಕೊಳ್ಳಬೇಕು. ಹೆಚ್ಚಿನ ಜನರನ್ನು ಗೋಸ್ವರ್ಗಕ್ಕೆ ಕರೆತರುವಲ್ಲಿ ಮಾತೆಯರ ಪಾತ್ರ ಮಹತ್ತ್ವದ್ದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ರಾಮಾಶ್ರಮ ಸೇವಾಸಮಿತಿಯಿಂದ ಸಪರಿವಾರ ಶ್ರೀರಾಮದೇವರು ಮತ್ತು ಶ್ರೀಗುರು ಸನ್ನಿಧಿಗಳಿಗೆ ರಜತ ಪ್ರಭಾವಳಿಯ ರಾಮಾರ್ಪಣದ ರಶೀದಿ ಪುಸ್ತಕವನ್ನು ಸಮರ್ಪಿಸಿ, ಆಶೀರ್ವಾದ ಪಡೆಯಲಾಯಿತು.

Leave a Reply

Your email address will not be published. Required fields are marked *