|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಹೊಸಾಡದಲ್ಲಿ ನಡೆಯಲಿದೆ ಗೋಸಂಧ್ಯಾ ಕಾರ್ಯಕ್ರಮ

ಕುಮಟಾ: ಗೋಪ್ರೇಮಿಗಳಿಗಾಗಿ ಇದೇ ಬರುವ ಜನವರಿ 26, ಶನಿವಾರದಂದು ‘ಅಮೃತಧಾರಾ ಗೋಬ್ಯಾಂಕ್ ಹೊಸಾಡ’ದಲ್ಲಿ ವಾರ್ಷಿಕ ‘ಗೋಸಂಧ್ಯಾ’ ಕಾರ್ಯಕ್ರಮ ನಡೆಯಲಿದೆ.

 

ಇದೊಂದು ಗೋಪ್ರೇಮಿಗಳ ದಿನವಾಗಿದ್ದು, ಅಂದು ಸಂಜೆ 5.00 ಗಂಟೆಯಿಂದ ನಡೆಯಲಿರುವ ಕಾರ್ಯಕ್ರಮಕ್ಕೆ ಎಲ್ಲ ಗೋಪ್ರೇಮಿಗಳೂ ಆಗಮಿಸಿ ಗೋಶಾಲೆಯ ಗೋವುಗಳನ್ನು ವೀಕ್ಷಿಸಿ, ಕಾರ್ಯಕ್ರಮದಲ್ಲಿ ಭಾಗವಹಿಸಿ, ಗೋಸೇವೆಯಲ್ಲೂ ಪಾಲ್ಗೊಂಡು ಪುಣ್ಯಕ್ಕೆ ಪಾತ್ರರಾಗಬೇಕೆಂದು ಕೋರಲಾಗಿದೆ. ಕಾರ್ಯಕ್ರಮದ ಬಳಿಕ ಮಿತಭೋಜನವನ್ನೂ ಏರ್ಪಡಿಸಲಾಗಿದೆ.