|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ನವರಾತ್ರ ನಮಸ್ಯಾ – ಕಾರ್ಯಾಲಯ ಉದ್ಘಾಟನೆ

ಬೆಂಗಳೂರು: ಮಹಾನಗರದಲ್ಲಿ – ಶ್ರೀಮಠದ ಬೆಂಗಳೂರು ಶಾಖೆ ಶ್ರೀರಾಮಾಶ್ರಮದಲ್ಲಿ ಪರಮಪೂಜ್ಯ ಶ್ರೀಸಂಸ್ಥಾನದವರು ಈ ಸಂವತ್ಸರದ ನವರಾತ್ರವನ್ನು – ಮಹಾದೇವಿಯ ಮಾಹಾರಾಧನೆಯನ್ನು ಕೈಗೊಳ್ಳುವುದು ಬೆಂಗಳೂರು ಮಹಾನಗರದ ಜನತೆಯ ಮಹಾಭಾಗ್ಯ. ತತ್ಸಂಬಂಧವಾಗಿ ಈಗಾಗಲೇ ಸಿದ್ಧತೆಗಳು ಹುರುಪು-ಉತ್ಸಾಹಗಳೊಂದಿಗೆ ನಡೆಯುತ್ತಿವೆ.

ತದಂಗವಾಗಿ ಭಾದ್ರಪದ ಕೃಷ್ಣ ಏಕಾದಶಿಯಂದು (ಅ. 6) ‘ನವರಾತ್ರ ನಮಸ್ಯಾ ಕಾರ್ಯಾಲಯ’ ಉದ್ಘಾಟನೆ ಕಾರ್ಯಕ್ರಮದ ಕಾರ್ಯಾಲಯವನ್ನು ಬಸವನಗುಡಿಯ ಶಾಸಕ ಎಲ್. ಎ. ರವಿಸುಬ್ರಹ್ಮಣ್ಯ ಉದ್ಘಾಟಿಸಿದರು. ನವರಾತ್ರ ಪರ್ವದ ದೇವಿಯ ಆರಾಧನೆಯು ಈ ಬಾರಿ ಬೆಂಗಳೂರಿನಲ್ಲಿ ನಡೆಯುತ್ತಿರುವುದು ವಿಶೇಷವಾಗಿದ್ದು, ಕಾರ್ಯಕ್ರಮಕ್ಕೆ ತಮ್ಮ ಸಂಪೂರ್ಣ ಸಹಕಾರವಿದ್ದು, ಬೆಂಗಳೂರಿನ ಮಹಾಜನತೆ ಈ ಅಪೂರ್ವ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕರೆ ನೀಡಿದರು.