ಸಾಗರ: ಶ್ರೀರಾಘವೇಶ್ವರ ಸಭಾಭವನದಲ್ಲಿ ವಂದೇ ಮಾತರಂ ಸೇವಾ ಸಮಿತಿ ಹಾಗೂ ವೇದನಾದ ಪ್ರತಿಷ್ಠಾನ ಇವರ ಸಂಯುಕ್ತ ಆಶ್ರಯದಲ್ಲಿ ವಂದೇ ಮಾತರಂ ಕಲಿಕಾ ಅಭಿಯಾನದ ಪ್ರಾರಂಭೋತ್ಸವ ಆಶ್ವಯುಜ ಕೃಷ್ಣ ತದಿಗೆಯಂದು (ಅ. ೨೮) ನಡೆಯಿತು. ಸಾಗರ ಜಿಲ್ಲಾ ಸಂಘ ಚಾಲಕ ಕೇಶವ ಸಂಪೈಕ ಅವರು ಉದ್ಘಾಟಿಸಿ ವಂದೇ ಮಾತರಂ ಗೀತೆಯ ಸುದೀರ್ಘ ಇತಿಹಾಸವನ್ನು ತಿಳಿಸಿದರು. ವಂದೇ ಮಾತರಂ ರಾಷ್ಟ್ರಗೀತೆಯನ್ನು ಹೇಳಿಕೊಡುವ ಮೂಲಕ ವಸುಧಾ ಶರ್ಮಾ ಮತ್ತು ಶ್ರೀರಂಜಿನಿ ಕಲಿಕಾ ಅಭಿನಯ ಪ್ರಾರಂಭಿಸಿದರು.


