|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

09.02.2019

         

ವಿಲಂಬನಾಮ ಸಂವತ್ಸರ / ಉತ್ತರಾಯಣ /
ಶಿಶಿರ ಋತು / ಮಾಘ ಮಾಸ /
ಶುಕ್ಲ ಪಕ್ಷ / ಚತುರ್ಥಿ/ಪಂಚಮೀ ತಿಥಿ/

ಶನಿವಾರ/ ಉತ್ತರಭಾದ್ರ ನಕ್ಷತ್ರ/

ದಿನಾಂಕ: 09.02.2019

 °~•~°~•~°~•~°~•~°~•~°

ಮೇಷ

        ಮಾಡುತ್ತಿರುವ ಕೆಲಸಕಾರ್ಯದಲ್ಲಿ ಉತ್ತಮ ಮುನ್ನಡೆ ದೊರೆಯುತ್ತದೆ. ಮಾನಸಿಕ ಕಿರಿಕಿರಿ ಎದುರಿಸಬೇಕಾಗುತ್ತದೆ. ಹಣಕಾಸಿನ ತೊಂದರೆಯನ್ನು ಎದುರಿಸಬೇಕಾಗುತ್ತದೆ. ಖರ್ಚುವೆಚ್ಚ ಜಾಸ್ತಿ ಆಗುವ ಸಂಭವ ಇರುವುದರಿಂದ ಜಾಗರೂಕತೆಯಿಂದ ವ್ಯವಹರಿಸಿ. ಶೀತ, ಜ್ವರ, ಕಫ, ಚರ್ಮ ಸಂಬಂಧಿ ತೊಂದರೆಗಳನ್ನು ಅನುಭವಿಸಬೇಕಾಗುವುದುರಿಂದ ಜಾಗರೂಕತೆಯಿಂದ ಇರಬೇಕು. ದಾಂಪತ್ಯಜೀವನದಲ್ಲಿ ತೊಂದರೆ ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಉತ್ತಮ ಪರಿಶ್ರಮದಿಂದ ಮುಂದುವರಿಯಬೇಕು.



ಪರಿಹಾರ:
ಶ್ರೀದುರ್ಗಾಪರಮೇಶ್ವರೀ ಅಮ್ಮನವರ ಆರಾಧನೆ ಹಾಗೂ ಸುಬ್ರಹ್ಮಣ್ಯ ದೇವರ ಆರಾಧನೆಯನ್ನು ಮಾಡಬೇಕು.

ಜಪಿಸಲು:
ನಮಸ್ತೇ ಶರಣ್ಯೇ ಶಿವೇ ಸಾನುಕಮ್ಪೇ

ನಮಸ್ತೇ ಜಗದ್ವ್ಯಾಪಿಕೇ ವಿಶ್ವರೂಪೇ ।
ನಮಸ್ತೇ ಜಗದ್ವನ್ದ್ಯ-ಪಾದಾರವಿನ್ದೇ

ನಮಸ್ತೇ ಜಗತ್ತಾರಿಣಿ ತ್ರಾಹಿ ದುರ್ಗೇ ॥

°~•~°~•~°~•~°~•~°~•~°

    

ವೃಷಭ

         ವ್ಯಾವಹಾರಿಕ ಕ್ಷೇತ್ರದಲ್ಲಿ ಹಿನ್ನಡೆ ಕಂಡುಬರುತ್ತದೆ. ಅಧಿಕಾರಿಗಳಿಂದ ಅಸಮಾಧಾನದ ಮಾತುಗಳನ್ನು ಕೇಳಬೇಕಾಗುತ್ತದೆ. ವೃಥಾ ಖರ್ಚುವೆಚ್ಚಗಳು ಒದಗಿಬರುವುದು. ದಾಂಪತ್ಯಜೀವನದಲ್ಲಿ ಸಣ್ಣಪುಟ್ಟ ಜಗಳಗಳನ್ನು ಎದುರಿಸಬೇಕಾಗುತ್ತದೆ. ಮೂತ್ರ ಸಂಬಂಧಿ ತೊಂದರೆಗಳು, ಮೈ  ಗಂಟು ನೋವುಗಳನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಉತ್ತಮ ಪರಿಶ್ರಮದಿಂದ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು.




ಪರಿಹಾರ
ಗೋಮಾತೆಯ ದರ್ಶನ ಹಾಗೂ ಸೇವೆಯನ್ನು ಮಾಡಿ.

ಜಪಿಸಲು:
ಸರ್ವದೇವಮಯೇ ದೇವಿ

ಸರ್ವದೇವೈ-ರಲಂಕೃತೇ |
ಮಾತರ್ಮಮಾ-ಭಿಲಷಿತಂ

ಸಫಲಂ ಕುರು ನಂದಿನಿ ||

°~•~°~•~°~•~°~•~°~•~°



ಮಿಥುನ


   ವ್ಯಾವಹಾರಿಕ ಕ್ಷೇತ್ರದಲ್ಲಿ ಉತ್ತಮ ಬದಲಾವಣೆ ಬರುತ್ತದೆ. ಅಧಿಕಾರಿ ವರ್ಗದವರಿಂದ ಉತ್ತಮ ಮೆಚ್ಚುಗೆಯ ಮಾತುಗಳು ಕೇಳಿಬರುತ್ತದೆ. ನೂತನ ವ್ಯವಹಾರವನ್ನು ಆರಂಭಿಸುವ ಯೋಗಭಾಗ್ಯಗಳು ಒದಗಿ ಬರುತ್ತದೆ. ಆರ್ಥಿಕವಾಗಿ ಉತ್ತಮ ಲಾಭವಾಗುತ್ತದೆ. ದಾಂಪತ್ಯಜೀವನದಲ್ಲಿ ನಿಧಾನಗತಿಯ ಮುನ್ನಡೆ. ಉದರ ಸಂಬಂಧಿ ತೊಂದರೆಗಳು, ತಲೆನೋವು ಮುಂತಾದ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಉತ್ತಮ ಪರಿಶ್ರಮದಿಂದ ಉತ್ತಮವಾದ ಸಾಧನೆ ಮಾಡುತ್ತಾರೆ.



ಪರಿಹಾರ  
ನರಸಿಂಹನ ಆರಾಧನೆಯನ್ನು ಮಾಡಿ.

ಜಪಿಸಲು:
ದೇವತಾಕಾರ್ಯ-ಸಿದ್ಧ್ಯರ್ಥಂ

ಸಭಾಸ್ತಂಭ-ಸಮುದ್ಭವಮ್ |
ಶ್ರೀನೃಸಿಂಹ ಮಹಾವೀರಂ

ನಮಾಮಿ ಋಣಮುಕ್ತಯೇ ||

  °~•~°~•~°~•~°~•~°~•~°



ಕರ್ಕಾಟಕ

   ವ್ಯವಹಾರಿಕ ಕ್ಷೇತ್ರದಲ್ಲಿ ಮುನ್ನಡೆ ಕಂಡುಬರುತ್ತದೆ.  ಆರ್ಥಿಕವಾಗಿ ನಿಧಾನಗತಿಯ ಮುನ್ನಡೆ ಕಂಡುಬರುತ್ತದೆ. ದಾಂಪತ್ಯಜೀವನದಲ್ಲಿ ಕಲಹಗಳು ಏರ್ಪಡುತ್ತದೆ. ಗಂಟು ನೋವುಗಳು, ಮಾನಸಿಕ ಖಿನ್ನತೆ ಮುಂತಾದ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.  ವಿದ್ಯಾರ್ಥಿಗಳು ಉತ್ತಮ ಪರಿಶ್ರಮದಿಂದ ಮುಂದುವರಿಯಬೇಕು.



ಪರಿಹಾರ
ಕುಲದೇವತಾ ಆರಾಧನೆ ಅಗತ್ಯ. ದೇವಿಯ ಆರಾಧನೆಯಿಂದ ಶುಭ.

ಜಪಿಸಲು:
ಶ್ರೀದುರ್ಗಾಯೈ ನಮ: / ಶ್ರೀಶಾಂತ್ಯೈ ನಮ: / ಶ್ರೀಶಾಂಭವ್ಯೈ ನಮ: / ಶ್ರೀಭೂತಿದಾಯಿನ್ಯೈ ನಮ: / ಶ್ರೀಶಂಕರಪ್ರಿಯಾಯೈ ನಮ: / ಶ್ರೀನಾರಾಯಣ್ಯೈ ನಮ: / ಶ್ರೀಭದ್ರಕಾಲ್ಯೈ ನಮ: / ಶ್ರೀಶಿವದೂತ್ಯೈ ನಮ: / ಶ್ರೀಮಹಾಲಕ್ಷ್ಮ್ಯೈ ನಮ: / ಶ್ರೀಮಹಾಮಾಯಾಯೈ ನಮ: / ಶ್ರೀಯೋಗನಿದ್ರಾಯೈ ನಮ: / ಶ್ರೀಚಂಡಿಕಾಯೈ ನಮ:

 °~•~°~•~°~•~°~•~°~•~°



ಸಿಂಹ

     ಉದ್ಯೋಗ ವ್ಯವಹಾರ ಕ್ಷೇತ್ರದಲ್ಲಿ ಅಡೆತಡೆ ಕಂಡುಬರುತ್ತದೆ. ಮೇಲಿನ ಅಧಿಕಾರಿ ಗಳಿಂದ ಕಿರಿಕಿರಿ ಎದುರಿಸಬೇಕಾಗುತ್ತದೆ .ಆರ್ಥಿಕವಾಗ ಬರುವ ತೊಂದರೆಗಳಿಂದ ದಾಂಪತ್ಯದಲ್ಲಿ ಕಲಹಗ ಏರ್ಪಡುವ ಸಂಭವವಿದೆ. ಉದರ ಸಂಬಂಧಿ ತೊಂದರೆ, ಮೈ ಕೈ ಗಂಟು ನೋವು, ಮುಂತಾದ ತೊಂದರೆಗಳನ್ನು ಎದುರಿಸಬೇಕಾಗುವುದರಿಂದ ಜಾಗರೂಕತೆಯಿಂದ ಇರಬೇಕು. ವಿದ್ಯಾರ್ಥಿಗಳು ಉತ್ತಮ ಪರಿಶ್ರಮದಿಂದ ಮುನ್ನಡೆಯಬೇಕು.


ಪರಿಹಾರ
ಶಿವನ ಆರಾಧನೆ ಅಗತ್ಯ.

ಜಪಿಸಲು:
ಕರಚರಣಕೃತಂ ವಾಕ್ಕಾಯಜಂ ಕರ್ಮಜಂ ವಾ
ಶ್ರವಣನಯನಜಂ ವಾ ಮಾನಸಂ ವಾಪರಾಧಂ|
ವಿಹಿತಮವಿಹಿತಂ ವಾ ಸರ್ವಮೇತತ್ ಕ್ಷಮಸ್ವ
ಜಯ ಜಯ ಕರುಣಾಬ್ದೇ ಶ್ರೀಮಹಾದೇವ ಶಂಭೋ||

    °~•~°~•~°~•~°~•~°~•~°      


ಕನ್ಯಾ


    ವ್ಯವಹಾರಿಕ ಕ್ಷೇತ್ರದಲ್ಲಿ  ಉತ್ತಮ ಮುನ್ನಡೆ ಕಂಡುಬರುತ್ತದೆ. ಆರ್ಥಿಕವಾಗಿ ನಿಧಾನಗತಿಯ ಮುನ್ನಡೆ ಕಂಡುಬರುತ್ತದೆ. ದಾಂಪತ್ಯ ಜೀವನದಲ್ಲಿ ಸುಖ-ಶಾಂತಿ ನೆಲೆಸುತ್ತದೆ. ಮನಶ್ಶಾಂತಿ ದೊರೆಯುವುದು. ಕುಟುಂಬದಲ್ಲಿ ಶಾಂತಿ ನೆಲೆಸುವುದು. ಆರೋಗ್ಯದಲ್ಲಿ ಉತ್ತಮ ರೀತಿಯ ಸುಧಾರಣೆ ಆಗುವುದು. ವಿದ್ಯಾರ್ಥಿಗಳು ತಮ್ಮ ಉತ್ತಮ ಸಾಧನೆಯಿಂದ ಗುರುಹಿರಿಯರು ಪ್ರಶಂಸೆಗೆ ಒಳಗಾಗುವಿರಿ.



ಪರಿಹಾರ
ಶ್ರೀಕೃಷ್ಣ ದೇವರ ಆರಾಧನೆಯಿಂದ ಶುಭ

ಜಪಿಸಲು:
ವಸುದೇವಸುತಂ  ದೇವಂ

ಕಂಸಚಾಣೂರ-ಮರ್ದನಮ್  |
ದೇವಕೀ-ಪರಮಾನಂದಂ  

ಕೃಷ್ಣಂ ವಂದೇ  ಜಗದ್ಗುರುಮ್ ||

  °~•~°~•~°~•~°~•~°~•~°       


ತುಲಾ


       ಮಾಡುವಂತಹ ಕೆಲಸ ಕಾರ್ಯದಲ್ಲಿ ನಿಧಾನಗತಿಯ ಹಿನ್ನಡೆ ಕಂಡುಬರುತ್ತದೆ. ಆರ್ಥಿಕವಾಗಿ  ಸಣ್ಣಪಟ್ಟ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ದಾಂಪತ್ಯ ಜೀವನದಲ್ಲಿ ಸುಖ. ಶೀತ, ಜ್ವರ, ಕಫ ಮುಂತಾದ ತೊಂದರೆಗಳು ಬರುತ್ತವೆ. ವಿದ್ಯಾರ್ಥಿಗಳು ಉತ್ತಮವಾದ ಮುನ್ನಡೆ ಸಾಧಿಸುತ್ತಾರೆ.


ಪರಿಹಾರ  
ದುರ್ಗಾದೇವಿಯ ಆರಾಧನೆಯಂದ ಶುಭ.

ಜಪಿಸಲು:
ಸರ್ವರೂಪಮಯೀ ದೇವೀ

ಸರ್ವಂ ದೇವೀಮಯಂ ಜಗತ್ ।
ಅತೋಽಹಂ ವಿಶ್ವರೂಪಾಂ ತ್ವಾಂ

ನಮಾಮಿ ಪರಮೇಶ್ವರೀಮ್ ||


 °~•~°~•~°~•~°~•~°~•~°


ವೃಶ್ಚಿಕ


  
ತೊಡಗಿಸಿಕೊಂಡ ಕೆಲಸದಲ್ಲಿ ಸಣ್ಣಪುಟ್ಟ ಅಡೆತಡೆಗಳು ಕಂಡುಬರುವುದು. ಹಣಕಾಸಿನ ವಿಚಾರದಲ್ಲಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ದಾಂಪತ್ಯ ಜೀವನದಲ್ಲಿ ಕಲಹ ಏರ್ಪಡುತ್ತದೆ. ಮಾತಿನಲ್ಲಿ ನಿಗಾ ಇರಲಿ. ಅಲರ್ಜಿ, ಚರ್ಮ ಸಂಬಂಧಿ ತೊಂದರೆಗಳು ಮುಂತಾದ ಬರುವ ಲಕ್ಷಣಗಳಿರುದರಿಂದ ಜಾಗರೂಕರಾಗಿರಬೇಕು. ವಿದ್ಯಾರ್ಥಿಗಳು ಉದಾಸೀನತೆ ಬಿಟ್ಟು ತಮ್ಮ ಪರಿಶ್ರಮದಿಂದ ಮುಂದುವರಿಯಬೇಕು.

ಪರಿಹಾರ
ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಯಿಂದ ಶುಭವಾಗಲಿದೆ.


ಜಪಿಸಲು:
ಶರಣ್ಯಂ ಸರ್ವಲೋಕಾನಾಮ್

ಅಗ್ರಗಣ್ಯಂ ದಿವೌಕಸಾಮ್ |
ವರೇಣ್ಯಂ ದೇವಸೇನಾಯಾ:

ಸುಬ್ರಮಣ್ಯ-ಮುಪಾಸ್ಮಹೇ ||

°~•~°~•~°~•~°~•~°~•~°


ಧನು


    ಉದ್ಯೋಗ ವ್ಯವಹಾರಿಕ ಕ್ಷೇತ್ರದಲ್ಲಿ ನಿಧಾನಗತಿಯ ಬದಲಾವಣೆಗಳು ಒದಗಿ ಬರುತ್ತದೆ. ಹಣಕಾಸಿನ ವಿಚಾರದಲ್ಲಿ ನಿಧಾನಗತಿಯ ಏಳಿಗೆ ಕಂಡುಬರುತ್ತದೆ. ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ನೆಲೆಸುವುದು. ಮೂತ್ರ ಸಂಬಂಧಿ ತೊಂದರೆಗಳು, ಮೈ ಕೈ ಗಂಟು ನೋವು, ಮಾನಸಿಕ ತೊಂದರೆಗಳನ್ನು ಎದುರಿಸಬೇಕಾಗುವುದುರಿಂದ ಜಾಗರೂಕರಾಗಿರಬೇಕು. ಹೆಚ್ಚು ನೀರನ್ನು ಸೇವಿಸಿ. ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ತೊಂದರೆಗಳು ಒದಗಿ ಬರುತ್ತದೆ.


ಪರಿಹಾರ
ತಂದೆ ತಾಯಿಯರ ಹಾಗೂ ಗುರುವಿನ ಆಶೀರ್ವಾದವನ್ನು  ಪಡೆಯಿರಿ.

ಜಪಿಸಲು:
ಅಖಂಡಮಂಡಲಾಕಾರಂ

ವ್ಯಾಪ್ತಂ ಯೇನ ಚರಾಚರಮ್ |
ತತ್ಪದಂ ದರ್ಶಿತಂ ಯೇನ

ತಸ್ಮೈ ಶ್ರೀಗುರವೇ ನಮಃ ||

     °~•~°~•~°~•~°~•~°~•~°


ಮಕರ


    ಉದ್ಯೋಗ ಕ್ಷೇತ್ರದಲ್ಲಿ ನಿಧಾನಗತಿಯ ಏಳಿಗೆ ಕಂಡು ಬರುವುದು. ಆರ್ಥಿಕವಾಗಿ ಹಿನ್ನಡೆ ಎದುರಿಸಬೇಕಾಗುತ್ತದೆ ಹಾಗೂ ಖರ್ಚುವೆಚ್ಚ ಅಧಿಕವಾಗಿ ಬರುವುದು. ದಾಂಪತ್ಯಜೀವನದಲ್ಲಿ ಸುಖ ಉತ್ತಮವಾದ ಆರೋಗ್ಯವನ್ನು ಪಡೆಯುತ್ತೀರಿ. ವಿದ್ಯಾರ್ಥಿಗಳ ಉತ್ತಮ ಪರಿಶ್ರಮದಿಂದಾಗಿ ಪ್ರಶಂಸೆ ದೊರೆಯಲಿದೆ.



ಪರಿಹಾರ
ಶಿವಾಲಯ ದರ್ಶನ, ರುದ್ರಾಭಿಷೇಕ ಸೇವೆ ಮಾಡುವುದರಿಂದ ಶುಭ ಆಗಲಿದೆ.  

ಜಪಿಸಲು:
ಶುದ್ಧಸ್ಫಟಿಕ-ಸಂಕಾಶಂ
ಶುದ್ಧವಿದ್ಯಾ-ಪ್ರದಾಯಕಮ್ |
ಶುದ್ಧಂ ಪೂರ್ಣಂ ಚಿದಾನಂದಂ
ಸದಾಶಿವಮಹಂ ಭಜೇ ||

   °~•~°~•~°~•~°~•~°~•~°          


ಕುಂಭ  


      ಉದ್ಯೋಗ ವ್ಯವಹಾರ ಕ್ಷೇತ್ರದಲ್ಲಿ ಉತ್ತಮ ಮುನ್ನಡೆ ಕಂಡುಬರುತ್ತದೆ. ಹಣಕಾಸಿನ ವಿಚಾರದಲ್ಲಿ ಏಳಿಗೆ ದೊರೆಯುತ್ತದೆ. ವ್ಯವಹಾರದಲ್ಲಿ ಅಧಿಕ ಲಾಭ ಗಳಿಸುತ್ತೀರಿ. ದಾಂಪತ್ಯ ಜೀವನದಲ್ಲಿ ಸುಖ. ಆರೋಗ್ಯದಲ್ಲಿ ಸುಧಾರಣೆ. ವಿದ್ಯಾರ್ಥಿಗಳಿಗೆ ಉತ್ತಮ ಪರಿಶ್ರಮದಿಂದ ಮುನ್ನಡೆ ದೊರೆಯಲಿದೆ.



ಪರಿಹಾರ  
ಶಿವದೇವಸ್ಥಾನ ದರ್ಶನ, ಆಂಜನೇಯ ಸ್ವಾಮಿಯ ಆರಾಧನೆಯಿಂದ ಶುಭವಾಗಲಿದೆ.

ಜಪಿಸಲು:
ಅಂಜನಾಗರ್ಭ-ಸಂಭೂತ
ಕಪೀಂದ್ರ-ಸಚಿವೋತ್ತಮ |
ರಾಮಪ್ರಿಯ ನಮಸ್ತುಭ್ಯಂ
ಹನುಮಾನ್ ರಕ್ಷ ಮಾಂ ಸದಾ ||

°~•~°~•~°~•~°~•~°~•~°


ಮೀನ   


  ತೊಡಗಿಸಿಕೊಂಡ ಕೆಲಸದಲ್ಲಿ ಉತ್ತಮ ಏಳಿಗೆ  ಕಂಡುಬರುತ್ತದೆ. ನೂತನ ವ್ಯವಹಾರದಲ್ಲಿ ಅಧಿಕ ಲಾಭ ಗಳಿಸುತ್ತೀರಿ. ಆರ್ಥಿಕವಾಗಿ ಮುನ್ನಡೆ ಸಾಧಿಸುತ್ತೀರಿ. ದಾಂಪತ್ಯ ಜೀವನದಲ್ಲಿ ಸುಖ. ಉದರ ಸಂಬಂಧಿ, ಮೈ ಕೈ ಗಂಟು ನೋವು, ಮಾನಸಿಕ ಖಿನ್ನತೆ, ಶೀತ ಜ್ವರ ಕಫ ಮುಂತಾದ ತೊಂದರೆಗಳು ಬರುವಂತಹ  ಸಾಧ್ಯತೆಗಳಿರುವುದರಿಂದ ಜಾಗರೂಕರಾಗಿರಬೇಕು. ವಿದ್ಯಾರ್ಥಿಗಳು ತಮ್ಮ ಗುರಿ ತಲುಪಲು ಉತ್ತಮವಾದ ಸಾಧನೆ ಅಗತ್ಯ‌. ಗುರು ಹಿರಿಯರ ಮಾತಿನಂತೆ ನಡೆಯಿರಿ.


ಪರಿಹಾರ
ಶ್ರೀಮಹಾವಿಷ್ಣುದೇವರ ಆರಾಧನೆಯಿಂದ ಶುಭ. ಅಶ್ವತ್ಥ ಮರ ಪ್ರದಕ್ಷಿಣೆ ಬರುವುದರಿಂದ ಶುಭ ಕುಲದೇವತಾ ಆರಾಧನೆಯು ಅತ್ಯಗತ್ಯವಾಗಿದೆ.


ಜಪಿಸಲು:    
ಶ್ರೀಕೇಶವಾಯ ನಮಃ / ಶ್ರೀನಾರಾಯಣಾಯ ನಮಃ / ಶ್ರೀಮಾಧವಾಯ ನಮಃ / ಶ್ರೀಗೋವಿಂದಾಯ ನಮಃ / ಶ್ರೀವಿಷ್ಣವೇ ನಮಃ / ಶ್ರೀಮಧುಸೂದನಾಯ ನಮಃ /  ಶ್ರೀತ್ರಿವಿಕ್ರಮಾಯ ನಮಃ / ಶ್ರೀವಾಮನಾಯ ನಮಃ / ಶ್ರೀಶ್ರೀಧರಾಯ ನಮಃ / ಶ್ರೀಹೃಷಿಕೇಶಾಯ ನಮಃ / ಶ್ರೀಪದ್ಮನಾಭಾಯ ನಮಃ / ಶ್ರೀದಾಮೋದರಾಯ ನಮಃ

°~•~°~•~°~•~°~•~°~•~°



{ವಿ. ಸೂ. : ಮೇಲೆ ಕೊಟ್ಟ ಪರಿಹಾರ ಶ್ಲೋಕ ಮತ್ತು ನಾಮಗಳನ್ನು ಸ್ನಾನದ ಅನಂತರ ಶುಚಿಯಾಗಿ ದೇವರ ಮುಂದೆ ದೀಪ ಹಚ್ಚಿ ನಿರ್ಮಲ ಮನಸ್ಸಿನಿಂದ 48 ಸಲ ಪಠಿಸಬೇಕು.}