ಪ್ರತಿಭಾಭಾರತೀ ಸಂಪನ್ನ

ಸುದ್ದಿ

ಮುಜುಂಗಾವು: ಶ್ರೀಭಾರತೀ ವಿದ್ಯಾಪೀಠದಲ್ಲಿ 2026- 27 ನೇ ಶೈಕ್ಷಣಿಕ ವರ್ಷದ ‘ಪ್ರತಿಭಾ ಭಾರತೀ’ ಮತ್ತು ವಿವಿಧ ಸಂಘಗಳ ಉಧ್ಘಾಟನಾ ಕಾರ್ಯಕ್ರಮವು ಆಷಾಢ ಶುಕ್ಲ ಬಿದಿಗೆಯಂದು (16-07-2026) ಜರಗಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಬದಿಯಡ್ಕ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಸಮಾಜ ಸೇವಕ ಕೆ. ಎನ್. ಕೃಷ್ಣ ಭಟ್ ಕಿಳಿಂಗಾರು ಮಾತನಾಡುತ್ತಾ ‘ಆದರ್ಶ ಜೀವನಕ್ಕೆ ಮೌಲ್ಯಯುತ ಶಿಕ್ಷಣದ ಅಗತ್ಯ ಇಂದಿನ ಜನಾಂಗಕ್ಕಿದೆ’ ಎಂದರಲ್ಲದೇ ನಮ್ಮ ವಿದ್ಯಾಲಯವು ಈ ವಿಷಯದಲ್ಲಿ ಮುಂಚೂಣಿಯಲ್ಲಿದೆ ಎಂದು ಸಂತಸಪಟ್ಟರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಹತ್ತನೇ ತರಗತಿಯ ಶಾಶ್ವತ್ ಕೆ. ವಹಿಸಿದ್ದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಸಂದರ್ಭದಲ್ಲಿ ನಡೆಯಿತು. ಶಾಲಾ ಆಡಳಿತ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಬೆಜಪ್ಪೆ , ಆಡಳಿತ ಸೇವಾಸಮಿತಿಯ ಕಾರ್ಯದರ್ಶಿ ಎಚ್. ಎಸ್. ಪ್ರಸಾದ್, ಜತೆ ಕಾರ್ಯದರ್ಶಿ ಬಾಲಕೃಷ್ಣ ಶರ್ಮ ಅನಂತಪುರ, ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ್ ಭಟ್ ದರ್ಬೆಮಾರ್ಗ ಹಾಗೂ ಸಹ ಮುಖ್ಯ ಶಿಕ್ಷಕಿ ಚಿತ್ರಾಸರಸ್ವತೀ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *