ಬೆಂಗಳೂರು: ಶ್ರೀರಾಮಚಂದ್ರಾಪುರಮಠ ಭಾರತೀಯ ಗೋಪರಿವಾರ ತಂಡದಿಂದ ಕಳೆದ ಒಂದು ತಿಂಗಳ ಅವಧಿಯಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳ ನೆರೆ ಸಂತ್ರಸ್ತ ಪ್ರದೇಶಗಳಿಗೆ ಸುಮಾರು 25ಲೋಡ್ ಮೇವು, ಸುಮಾರು 4ಲಕ್ಷ ಮೌಲ್ಯದ ಅಗತ್ಯ ವಸ್ತುಗಳು, 1ಟನ್ ಅಕ್ಕಿ, 18ಟನ್ ಪಶು ಆಹಾರ ಸಂಗ್ರಹಿಸಿ ವಿತರಣೆ ಮಾಡುವ ಮಹಾ ಕಾರ್ಯವನ್ನು ಮಾಡಲಾಯಿತು.
ದಾವಣಗೆರೆ ಜಿಲ್ಲೆಯಿಂದ 2ಲೋಡ್ ಒಣಹುಲ್ಲನ್ನು ಜಿಲ್ಲಾ ಗೋ ಸಂಚಾಲಕ ಶ್ರೀಕಾಂತ್ ಮತ್ತು ಗೋಪರಿವಾರದ ಸದಸ್ಯರು ದಾನಿಗಳಿಂದ ಸಂಗ್ರಹಿಸಿ ಹಾನಗಲ್‌ನ ತಿಳುವಳ್ಳಿಯ ವಿಶ್ವಹಿಂದೂ ಪರಿಷತ್, ಭಜರಂಗ ದಳ ಸಂಚಾಲಿತ ಗೋಶಾಲೆಗೆ ಹಾಗೂ ಬಾದಾಮಿಯ ಶಿವಯೋಗಿ ಮಂದಿರ ಗೋಶಾಲೆಗೆ, ಕೊತ್ತನೂರು ಗ್ರಾಮಸ್ಥರಿಂದ ಸಂಗ್ರಹಿಸಿದ 2ಲೋಡ್ ಒಣಹುಲ್ಲನ್ನು ಹಾಗೂ 1ಲೋಡ್ ಅಕ್ಕಿಯನ್ನು ಹಾವೇರಿಯ ನೆರೆ ಸಂತ್ರಸ್ತ ರೈತರಿಗೆ ವಿತರಣೆ ಮಾಡಲಾಗಿದೆ.
ಚಿತ್ರದುರ್ಗ ಜಿಲ್ಲೆಯಿಂದ 1ಲೋಡ್ ಹಾಗೂ ದಾವಣಗೆರೆ ಜಿಲ್ಲೆಯ ಬನ್ನಿಕೋಡ್ ಗ್ರಾಮಸ್ಥರಿಂದ ಸಂಗ್ರಹಿಸಿದ 2ಲೋಡ್ ಒಣಹುಲ್ಲನ್ನು ಚಳ್ಳಕೆರೆಯ ಶ್ರೀ ಶಿವಸಾದ್ ಸ್ವಾಮೀಜಿಯವರ ಬಾಲಾಜಿ ಮಠ ಗೋಶಾಲೆಗೆ, ಮೈಸೂರಿನ ಕೆ ಆರ್ ನಗರದಿಂದ 2ಲೋಡ್ ಒಣಹುಲ್ಲನ್ನು ಕೊಡಗು ಸಿದ್ದಾಪುರದ ಬಾಳೆಲೆ ಊರಿನ ನೆರೆ ಸಂತ್ರಸ್ತ ರೈತರಿಗೆ, ಬೆಂಗಳೂರಿನ 1982-87ನೇ ಸಾಲಿನ ವಿದ್ಯಾರ್ಥಿಗಳ ಧನ ಸಹಾಯದಿಂದ 2ಲೋಡ್ ಒಣಹುಲ್ಲ ಮೇವು ಸಂಗ್ರಹಿಸಿ ಬಾದಾಮಿ ತಾಲೂಕಿನ ಬನಶಂಕರಿ ದೇವಸ್ಥಾನದ ಗೋಶಾಲೆಗೆ ಹಾಗೂ ಬಾದಾಮಿಯ ಶಿವಯೋಗಿ ಮಂದಿರ ಗೋಶಾಲೆಗೆ ವಿತರಿಸಲಾಗಿದೆ.
ಮಂಡ್ಯ ಜಿಲ್ಲೆಯಿಂದ ಸಂಗ್ರಹಿಸಿದ 5ಲೋಡ್ ಒಣಹುಲ್ಲಿನಲ್ಲಿ 3ಲೋಡ್ ಬೆಳ್ತಂಗಡಿ ತಾಲ್ಲೂಕಿನ ಉಜಿರೆಯ ನೆರೆ ಸಂತ್ರಸ್ತ ರೈತರಿಗೆ ಹಾಗೂ 2ಲೋಡ್ ಮೇವನ್ನು ಕೊಡಗು, ಸಂಪಾಜೆ ಪರಿಸರದಲ್ಲಿ ನೆರೆ ಸಂತ್ರಸ್ತ ರೈತರಿಗೆ ವಿತರಣೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಗ್ರಹಿಸಿದ 1ಲೋಡ್ ಹಸಿ ಹುಲ್ಲನ್ನು ಉಜಿರೆ ಭಾಗದಲ್ಲಿ ರೈತರಿಗೆ ವಿತರಿಸಲಾಗಿದೆ.
ಮಂಡ್ಯ ಜಿಲ್ಲೆಯಿಂದ 1ಲೋಡ್ ಪಶು ಆಹಾರ ಸಂಗ್ರಹಿಸಿ ಬಾಗಲಕೋಟೆಯ ನೆರೆ ಸಂತ್ರಸ್ಥ ಪ್ರದೇಶದ ರೈತರಿಗೆ, ಬೆಂಗಳೂರು ಕೆ ಆರ್ ಪುರಂ ನಿವಾಸಿಗಳ ವತಿಯಿಂದ 1ಲೋಡ್ ಪಶು ಆಹಾರ ಸಂಗ್ರಹಿಸಿ ಮೂಡಿಗೆರೆ ಪ್ರದೇಶದ ರೈತರಿಗೆ, ಗದಗ ಗೋ ಭಕ್ತರಿಂದ ಸಂಗ್ರಹಿತ 1ಲೋಡ್ ಪಶು ಆಹಾರವನ್ನು ಬಾದಾಮಿಯ ಶಿವಯೋಗಿ ಮಂದಿರ ಗೋಶಾಲೆಗೆ, ಅಂಕೋಲ, ಗುಂಡಬಾಳ, ಹಿಲ್ಲೂರು ಭಾಗದ ನೆರೆಸಂತ್ರಸ್ತ ಪ್ರದೇಶದ ರೈತರ ರಾಸುಗಳಿಗೆ ಕಲಘಟಗಿಯಿಂದ 4ಲೋಡ್ ಮೇವನ್ನು ವಿತರಣೆ ಮಾಡಲಾಯಿತು.
1 thought on “ನೆರೆಯಿಂದ ಸಂತ್ರಸ್ತ ಜನತೆಗೆ ಭಾರತೀಯ ಗೋಪರಿವಾರದ ನೆರವು”