ಮೇವು ಹುಡುಕುವ ಗೋವು, ಕಟುಕರಿಗೆ ಸುಲಭ ಮೇವು
ಬೆಳಗಾಗುತ್ತಿದ್ದಂತೆಯೇ ಮನೆ ನಡೆಸುವ ಅಮ್ಮಂದಿರ ದಿನಚರಿಯ ಮುಖ್ಯ ಕಾರ್ಯವೆಂದರೆ, ಹಟ್ಟಿಯ ಕೆಲಸಗಳು. ಹಟ್ಟಿಯಲ್ಲಿ ಅಂಬಾ ಎಂದು ಅದಾಗಲೇ ಕರೆಯಲು ಆರಂಭಿಸಿ ಮನೆಯೊಡತಿ ಅಮ್ಮನಿಗಾಗಿ ಕಾಯುತ್ತಿರುವ ದನಗಳಿಗೆ ಕಲಗಚ್ಚು, ಮಡ್ಡಿ ಉಣಿಸಿ; ಕರುವಿಗೆ ಕುಡಿಸಿ ಉಳಿದ ಹಾಲು ಕರೆದು, ಕುಡಿಯಲು ನೀರು ಕೊಟ್ಟು, ಹೆಸರಿನಿಂದ ಕರೆದು, ಮಗಳೇ ಎಂದು ಮುದ್ದಿಸಿ… ಇವೆಲ್ಲ ನಾವುಗಳು ನೋಡಿ ಬೆಳೆದ ನಿತ್ಯಚರ್ಯೆಗಳು. ಅದಾಗಿ ದನಗಳನ್ನು ಮೇಯಲು ಗುಡ್ಡೆಗೆ ಬಿಡುವುದು. ದನಗಳೂ ಈ ದಿನಚರಿಗೆ ಅದೆಷ್ಟು ಒಗ್ಗಿದ್ದವೆಂದರೆ, ನಿತ್ಯವೂ ಬೆಳಗ್ಗೆ ಹಟ್ಟಿಯಿಂದ ಹೊರಟು […]
Continue Reading