ಸಂಸ್ಥಾಪನೋತ್ಸವ – ವಿಶೇಷ ಪ್ರಶಸ್ತಿ ಪುರಸ್ಕಾರ ಸಮಾರಂಭ

Ñಶ್ರೀ ಅಖಿಲ ಹವ್ಯಕ ಮಹಾಸಭೆಯ 76ನೇ ವರ್ಷದ ಸಂಸ್ಥಾಪನೋತ್ಸವ ಹಾಗೂ ಹವ್ಯಕ ವಿಶೇಷ ಪ್ರಶಸ್ತಿ ಪುರಸ್ಕಾರ, ಪಲ್ಲವ ಪುರಸ್ಕಾರ ಪ್ರದಾನ ಸಮಾರಂಭ 31.3.2019 ಭಾನುವಾರ ಮಲ್ಲೇಶ್ವರದಲ್ಲಿರುವ ಹವ್ಯಕ ಭವನದಲ್ಲಿ ಸಂಜೆ 4.00 ಗಂಟೆಗೆ ನಡೆಯಲಿದೆ. 1943ರಲ್ಲಿ ಸಂಸ್ಥಾಪಿತವಾಗಿ ; 75 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಹವ್ಯಕ ಸಮಾಜದ ಪ್ರಾತಿನಿಧಿಕ ಸಂಸ್ಥೆಯಾದ ಶ್ರೀಅಖಿಲ ಹವ್ಯಕ ಮಹಾಸಭೆಯ 76ನೇ ವರ್ಷದ ಸಂಸ್ಥಾಪನೋತ್ಸವದ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, 2018-19 ನೇ ಸಾಲಿನ “ಹವ್ಯಕ ವಿಭೂಷಣ” “ಹವ್ಯಕ ಭೂಷಣ” “ಹವ್ಯಕ ಶ್ರೀ” […]

Continue Reading

ಶ್ರೀಮುಖ ಇನ್ನು ಸುಲಭದ ಓದು

ನಿಮ್ಮ ಶ್ರೀಮುಖ ಈಗ ಇನ್ನಷ್ಟು ಗ್ರಾಹಕ ಸ್ನೇಹಿ. (User friendly). ಶ್ರೀಮುಖ ಸುದ್ದಿಗಳನ್ನು ಓದಲು ಅದರ URL ಅನ್ನು ಸರ್ಚ್ ಎಂಜಿನ್ ನಲ್ಲಿ ಟೈಪಿಸಬೇಕಾಗಿಲ್ಲ. ನಿಮ್ಮ ಮೊಬೈಲ್, ಟ್ಯಾಬ್, ಐಪ್ಯಾಡ್ ಮತ್ತು ಕಂಪ್ಯೂಟರ್ ಗಳಲ್ಲಿ ಶ್ರೀಮುಖ PWA ಆಗಿ ಕಾಣಿಸಿಕೊಳ್ಳಲಿದೆ. ಅ್ಯಪ್ ಗಳಂತೆ ನಿಮ್ಮ ಡಿವೈಸ್ ಗೆ ಭಾರವಾಗುವುದಿಲ್ಲ ಆದರೆ ಅ್ಯಪ್ ತರಹ ಕಾಣಿಸಿಕೊಳ್ಳುತ್ತದೆ‌. ಶ್ರೀಮುಖದ ಸುಲಭ ಓದಿಗೆ ನೀವು ಮುಖಪುಟ ಇದನ್ನು ಕ್ಲಿಕ್ ಮಾಡಿ, ಸೇವ್ ಮಾಡಿಕೊಳ್ಳಿ. ಬೇಕೆನಿಸಿದಾಗ ಓದಿ, ಸ್ಪಂದಿಸಿ.

Continue Reading

ದಿಲೀಪ ಪರೀಕ್ಷಾ; ಕಾಳಿದಾಸನ ರಘುವಂಶದ ಗಾಯನ ಮತ್ತು ವ್ಯಾಖ್ಯಾನ

  ಪ್ರೊ. ಕೆ. ಎಸ್. ಕಣ್ಣನ್ ಹಾಗೂ ಶ್ರೀಮತಿ ಮೀರಾ ಕಣ್ಣನ್ ನಡೆಸಿಕೊಡುವ, ಕಾಳಿದಾಸನ ರಘುವಂಶದ ಗಾಯನ ಮತ್ತು ವ್ಯಾಖ್ಯಾನಗಳನ್ನೊಳಗೊಂಡ ಕಾರ್ಯಕ್ರಮ ದಿಲೀಪ ಪರೀಕ್ಷಾ 14.03.2019 ಮಂಗಳವಾರದಂದು ಸಂಜೆ 6 ಗಂಟೆಗೆ ಬೆಂಗಳೂರಿನ ಬಿ. ಪಿ. ವಾಡಿಯಾ ರಸ್ತೆಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರಿನ ಸಭಾಂಗಣದಲ್ಲಿ ನಡೆಯಲಿದೆ.   ಸರ್ವರಿಗೂ ಹೃತ್ಪೂರ್ವಕ ಸ್ವಾಗತ.

Continue Reading

ಶ್ರೀಸಂಸ್ಥಾನದವರ 26ನೆಯ ಸಂನ್ಯಾಸಗ್ರಹಣ ದಿನಾಚರಣೆಯ ಅಂಗವಾಗಿ ಜೀವನದಾನ ಹಾಗೂ 26ನೆಯ ಯೋಗಪಟ್ಟಾಭಿಷೇಕ ದಿನಾಚರಣೆಯ ಅಂಗವಾಗಿ ಮಹಾಪಾದುಕಾಪೂಜೆ‌ ಕಾರ್ಯಕ್ರಮಗಳ ಆಯೋಜನೆ

ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ   ಇಪ್ಪತ್ತಾರನೆಯ ಸಂನ್ಯಾಸಗ್ರಹಣ ದಿನಾಚರಣೆ ಕಷ್ಟ-ನಷ್ಟಗಳಿಗೆ ಒಳಗಾಗಿ ಬದುಕಿನ ಬೆಳಕು ಕಾಣದ ಕುಟುಂಬಕ್ಕೆ ಸದಾಶ್ರಯ ಜೀವನದಾನ   ಇಪ್ಪತ್ತಾರನೆಯ ಯೋಗಪಟ್ಟಾಭಿಷೇಕ ದಿನಾಚರಣೆ ಸಹಸ್ರ-ಸಹಸ್ರ ಶಿಷ್ಯ-ಭಕ್ತರ ಭಕ್ತಿಯ ಸಮರ್ಪಣೆ ಮಹಾಪಾದುಕಾಪೂಜೆ   ದೇಶ: ಶ್ರೀರಾಮಚಂದ್ರಾಪುರಮಠ ಪೆರಾಜೆ, ಮಾಣಿ ಕಾಲ: ಜೀವನದಾನ – 9 ಏಪ್ರಿಲ್ 2019 ಯೋಗಪಟ್ಟಾಭಿಷೇಕ ದಿನಾಚರಣೆ – 11 ಏಪ್ರಿಲ್ 2019   ಸರ್ವರಿಗೂ ಹೃತ್ಪೂರ್ವಕ ಸ್ವಾಗತ   ಜೀವನದಾನ ಮತ್ತು ಯೋಗಪಟ್ಟಾಭಿಷೇಕ ದಿನ ಆಯೋಜನಾ ಸಮಿತಿ ಶ್ರೀರಾಮಚಂದ್ರಾಪುರಮಠ ಪೆರಾಜೆ, […]

Continue Reading

2019-20ನೆಯ ಸಾಲಿನಿಂದ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಥಿನಿಲಯ ಸೌಲಭ್ಯ; ತ್ರಿಮತಸ್ಥ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಅವಕಾಶ

ಬಸರೀಕಟ್ಟೆ: ಮಲೆನಾಡಿನ ಕಾಶ್ಮೀರವೆಂದೇ ಪ್ರಸಿದ್ಧವಾಗಿರುವ, ಸದಾ ಹಸಿರಿನಿಂದ ಕೂಡಿ ರಮಣೀಯ ಪ್ರಾಕೃತಿಕ ಸೊಬಗನ್ನು ಹೊಂದಿರುವ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಬಸರೀಕಟ್ಟೆಯಲ್ಲಿ ಸುಮಾರು ಹದಿನೆಂಟು ವರ್ಷಗಳಿಂದ ಶ್ರೀ ಸದ್ಗುರು ವಿದ್ಯಾನಿಕೇತನ ವಿಶ್ವಸ್ಥ ಮಂಡಳಿ ತ್ರಿಮತಸ್ಥ ಬ್ರಾಹ್ಮಣ ವಿದ್ಯಾರ್ಥಿ ನಿಲಯವು ಕಾರ್ಯನಿರ್ವಹಿಸುತ್ತಿದೆ. ಸ್ಥಳೀಯವಾಗಿ ಅತ್ಯುತ್ತಮ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಗಳಿದ್ದು ಮಕ್ಕಳಿಗೆ ಪಠ್ಯ ಚಟುವಟಿಕೆಗಳ ಜೊತೆಗೆ ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ವೇದ ಮಂತ್ರ, ಯೋಗ, ಸಂಗೀತ, ಭಜನೆ, ನೀತಿ ಪಾಠ ಮುಂತಾದವುಗಳನ್ನು ಬೋಧಿಸುವುದು ಈ ವಿದ್ಯಾನಿಕೇತನದ ಉದ್ದೇಶವಾಗಿದೆ. […]

Continue Reading

ಬಸರೀಕಟ್ಟೆಯ ‘ಶ್ರೀಸದ್ಗುರು ವಿದ್ಯಾನಿಕೇತನ’ದಲ್ಲಿ ‘ಭಾರತ ಸಂಸ್ಕೃತಿ ಶಿಕ್ಷಣ ಶಿಬಿರ’

  ಚಿಕ್ಕಮಗಳೂರು ಜಿಲ್ಲೆ, ಕೊಪ್ಪ ತಾಲ್ಲೂಕು, ಬಸರೀಕಟ್ಟೆಯ ‘ಶ್ರೀಸದ್ಗುರು ವಿದ್ಯಾನಿಕೇತನ’ ಬ್ರಾಹ್ಮಣ ವಿದ್ಯಾರ್ಥಿ ನಿಲಯದಲ್ಲಿ ಸಂಸ್ಕೃತಿ ಶಿಕ್ಷಣ ಶಿಬಿರವೊಂದನ್ನು ಆಯೋಜಿಸಲಾಗಿದೆ.   * ದಿನಾಂಕ 11.04.2019 ರಿಂದ 18.04.2019 ರವರೆಗೆ ಎಂಟು ದಿನಗಳ ಕಾಲ ಈ ಶಿಬಿರ ನಡೆಯಲಿದೆ.   * 10ರಿಂದ 24ವರ್ಷ ವಯೋಮಾನದ ತ್ರಿಮತಸ್ಥ ಬ್ರಾಹ್ಮಣ ಯುವಕ ಮತ್ತು ಯುವತಿಯರು ಈ ಶಿಬಿರಕ್ಕೆ ಶಿಬಿರಾರ್ಥಿಗಳಾಗಿ ಸೇರಬಹುದಾಗಿರುತ್ತದೆ.   * ವೇದಮಂತ್ರಗಳು, ಸ್ತೋತ್ರಗಳು, ಧರ್ಮ ಸಂಸ್ಕೃತಿ, ಆಚಾರಗಳು, ಆಹಾರ, ಸಂಸ್ಕಾರಗಳು, ಸ್ತ್ರೀ ಶಿಕ್ಷಣ, ಭಾರತ ದೇಶದ […]

Continue Reading

ಶ್ರೀಸಂಸ್ಥಾನದವರ ದಿವ್ಯ ಸಂಕಲ್ಪ “ವಿಷಮುಕ್ತ ಅಡುಗೆ ಮನೆ” ಗ್ರಾಮರಾಜ್ಯ ಇನ್ನು ಮುಂದೆ ದಕ್ಷಿಣ ಕನ್ನಡದಲ್ಲಿ

  ಬೆಂಗಳೂರು: ಶ್ರೀಸಂಸ್ಥಾನದವರ ದಿವ್ಯ ಸಂಕಲ್ಪ “ವಿಷಮುಕ್ತ ಅಡುಗೆ ಮನೆ “. ಇದಕ್ಕೆಂದೇ ರೂಪಿಸಿದ ಯೋಜನೆ “ಗ್ರಾಮರಾಜ್ಯ”.   ಶ್ರೀರಾಮಚಂದ್ರಾಪುರ ಮಠದ ಅಧೀನ ಸಂಸ್ಥೆಯಾಗಿರುವ “ಗ್ರಾಮರಾಜ್ಯ” ಈಗಾಗಲೇ ಬೆಂಗಳೂರು ಮತ್ತು ಕರ್ನಾಟಕದ ಹಲವೆಡೆ ಮನೆಮಾತಾಗಿ ಹೆಸರು ಮಾಡಿರುವುದು ಶ್ರೀರಾಮಚಂದ್ರಾಪುರ ಮಠದ ಅಧೀನ ಸಂಸ್ಥೆ “ಗ್ರಾಮರಾಜ್ಯ”. ಇದರ ಪರಿಶುದ್ದ , ನೈಸರ್ಗಿಕ ಮತ್ತು ರಾಸಾಯನಿಕ ಮುಕ್ತ ಆಹಾರ ಪದಾರ್ಥಗಳು, ಮನೆಬಳಕೆ ವಸ್ತುಗಳು ಮತ್ತು ಗವ್ಯೋತ್ಪನ್ನಗಳು ಸದ್ಯ ದಕ್ಷಿಣ ಕನ್ನಡದಲ್ಲೂ ಲಭ್ಯವಿದೆ.   ಗ್ರಾಮರಾಜ್ಯವೆಂಬುದು ನಮ್ಮದೇ ಸಂಸ್ಥೆ. ನಾವೆಲ್ಲ ಈ […]

Continue Reading

ಶ್ರೀ ಕ್ಷೇತ್ರ ಯಡೂರಿನಲ್ಲಿ ನಡೆಯುವ ಶ್ರೀ ವೀರಭದ್ರೇಶ್ವರ ವಿಶಾಳಿ ಜಾತ್ರೆಯ ಸಮಾರಂಭದಲ್ಲಿ ಶ್ರೀಸಂಸ್ಥಾನದವರು ಸಾನ್ನಿಧ್ಯವಹಿಸಲಿದ್ದಾರೆ

Continue Reading

ಗಜಾನನ ಶರ್ಮರ ಹೊಸ ಕಾದಂಬರಿ ಕುರಿತು ಅವರದೇ ಮಾತು

ಸ್ನೇಹಿತರೇ, ” ಪುನರ್ವಸು” ಎಂದರೆ ಒಂದು ನಕ್ಷತ್ರ. ಅದರ ಶಬ್ಧಾರ್ಥ, ಮತ್ತೆ ಮತ್ತೆ ಭಾಗ್ಯವನ್ನು ಕೊಡುವುದು ಎಂಬುದು. “ಪುನರ್ವಸು” ವಿನ ಕುರಿತು ಒಂದು ಉಪನಿಷತ್ ಕತೆಯಿದೆ.   ಜೀವಸಂಕುಲದ ಒತ್ತಡಕ್ಕೆ ಸಿಕ್ಕು ಒಮ್ಮೆ ವಸುಂಧರೆ ರಸಹೀನಳಾಗಿ, ಗಂಧಹೀನಳಾಗಿ, ಫಲಪುಷ್ಪರಹಿತಳಾಗಿ ಬಂಜರಾದಳಂತೆ. ವಸುಧೆ ಶುಷ್ಕಳಾದ ಪರಿಣಾಮ ಜೀವಕೋಟಿ ಪರಿತಪಿಸತೊಡಗುತ್ತವೆ. ಆಗ ದೇವತೆಗಳ ತಾಯಿ ಅದಿತಿ , ದೇವಗುರು ಬೃಹಸ್ಪತಿಯ ಸಲಹೆಯ ಮೇರೆಗೆ ಪುನರ್ವಸು ಎಂಬ ನಕ್ಷತ್ರಲೋಕದಲ್ಲಿ ವಿಶಿಷ್ಟ ಯಾಗವೊಂದನ್ನು ಕೈಗೊಳ್ಳುತ್ತಾಳೆ. ತತ್ಪರಿಣಾಮ ಭೂಮಿ ಮತ್ತೆ ರಸವತಿಯಾಗಿ, ಗಂಧವತಿಯಾಗಿ, ಫಲಪುಷ್ಪ […]

Continue Reading

ಶ್ರೀವಿಶ್ವಬಂಧು ಸಂಗೀತ ಗುರುಕುಲ ಹಾಗೂ ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಸಹಯೋಗದಲ್ಲಿ ಸಂಗೀತ ಕಾರ್ಯಕ್ರಮ

ಶ್ರೀವಿಶ್ವಬಂಧು ಸಂಗೀತ ಗುರುಕುಲ ಹಾಗೂ ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಸಹಯೋಗದೊಂದಿಗೆ ನಡೆಯುವ ಮೂರನೇ ವರ್ಷದ ವಾರ್ಷಿಕೋತ್ಸವ ಹಾಗೂ ಗಾನಯೋಗಿ ಪಂಚಾಕ್ಷರಿ ಗವಾಯಿಗಳ ಜನ್ಮ ದಿನಾಚರಣೆಯ ಪ್ರಯುಕ್ತ ದಿನವಿಡೀ ನಡೆಯುವ ಸಂಗೀತ ಕಾರ್ಯಕ್ರಮಕ್ಕೆ ಬಂದು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾಗಬೇಕೆಂದು ಸಂಯೋಜಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

Continue Reading

ತೇಜೋವಧೆ ಮಾಡುವ ಸುದ್ದಿಗಳಿಗಿನ್ನು ಕಡಿವಾಣ

ದೇಶದ ಎಲ್ಲಾ ಪ್ರಮುಖ ಮಾಧ್ಯಮಗಳ ಮೇಲೆ ಬೇಲೂರು ನ್ಯಾಯಾಲಯವು ಪ್ರಕರಣಗಳು ಇತ್ಯರ್ಥವಾಗುವವರೆಗೂ ಶ್ರೀಮಠದ, ಶ್ರೀಗಳ ಮೇಲಿರುವ ಪ್ರಕರಣಗಳ ಬಗ್ಗೆ ಯಾವುದೇ ಚರ್ಚೆಗಳನ್ನು, ಶ್ರೀಗಳ ತೇಜೋವಧೆಯ ಪ್ರಯತ್ನಗಳನ್ನು ಮಾಡಬಾರದು ಎಂದು ತಡೆಯಾಜ್ಞೆಯನ್ನು ಜನವರಿ 17, 2019 ರಂದು ಹೊರಡಿಸಿದೆ.

Continue Reading

ಸಂಸ್ಕೃತಿ ಸಂವಾದ : ಆರ್ಷಸಂಸ್ಕೃತಿ ಕುರಿತಾದ ಪ್ರಶ್ನೆಗಳಿಗೆ ಪೂಜ್ಯ ಡಾ.ಕೆ.ಎಲ್.ಶಂಕರನಾರಾಯಣ ಜೋಯಿಸ್ ಅಂತರ್ಜಾಲ ನೇರಪ್ರಸಾರದಲ್ಲಿ ಉತ್ತರಿಸುವ ವಿಶಿಷ್ಟ ಕಾರ್ಯಕ್ರಮ

ಧರ್ಮ-ಸಂಸ್ಕೃತಿ ಕುರಿತಾಗಿ ತಿಳಿಯಬಯಸುವ ಎಲ್ಲ ಜಿಜ್ಞಾಸುಗಳಿಗೂ ಸಂಸ್ಕೃತಿ ಸಂವಾದಕ್ಕೆ ಹಾರ್ದವಾದ ಸ್ವಾಗತ. 📺 YouTube Live Link: https://youtu.be/DNiVwB60PcE ⏰ ನೇರಪ್ರಸಾರದ ಸಮಯ: 09/01/2019 ರಾತ್ರಿ 08:00 ಪ್ರಶ್ನೆಗಳನ್ನು ಕೆಳಗಿನ ನಂಬರ್‌ಗೆ ವಾಟ್ಸ್ಯಾಪ್ ಮಾಡಿ: +918310021501 (ನಮ್ಮ ಸಂಸ್ಕೃತಿ ಆಚಾರ ವಿಚಾರಗಳ ಕುರಿತಾಗಿ ತಮಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ ಅಪರಾಹ್ನ ೩ ಘಂಟೆಯ ಒಳಗೆ ತಿಳಿಸಬೇಕಾಗಿ ವಿನಂತಿ. ಆಚಾರ್ಯರು ಯಥಾವಕಾಶ ಉತ್ತರಿಸಲಿದ್ದಾರೆ) 🙏 ಬನ್ನಿ, ಆರ್ಷವಿಜ್ಞಾನದ ಮಹತಿಯನ್ನು ಅರಿಯಲೆತ್ನಿಸೋಣ🙏

Continue Reading

ರಾಮಪದಕ್ಕೊಂದು ಅಲ್ಪವಿರಾಮ

  ಪ್ರತಿ ಜೀವದ ಕೊನೆಯ ಗುರಿಯಾದ ಮುಕ್ತಿಯ ಮೊದಲ ಹಂತ ಸತ್ಸಂಗ. ಸತ್ಸಂಗ ಮಾಡಲು ಏಕಾದಶಿಯ ಹರಿದಿನಕ್ಕಿಂತ ಶ್ರೇಷ್ಠ ಪರ್ವಕಾಲ ಯಾವುದಿರಬಹುದು! ರಾಮನ ಪದಗಳನ್ನು, ರಾಗದಲ್ಲಿ ಪೋಣಿಸಿ ಭಾವದ ಸುಗಂಧ ಬೀರುವ ‘ರಾಮಪದ’ ವೆಂಬ ವಿನೂತನ ಸತ್ಸಂಗವನ್ನು ಶ್ರೀಸಂಸ್ಥಾನದವರು ಅಂತಹ ಪರ್ವಕಾಲವಾದ ಪ್ರತಿ ಏಕಾದಶಿಯಂದು ಅನುಗ್ರಹಿಸಿದರು. ಶಾಸನತಂತ್ರದ ಕಲಾರಾಮ ವಿಭಾಗದ ಅಡಿಯಲ್ಲಿ ಈ ರಾಮಪದವೆಂಬ ಸತ್ಸಂಗ ಆಯೋಜಿತಗೊಂಡಿತು.   ಹೇಮಲಂಬ ಸಂವತ್ಸರದ ರಾಮನವಮಿ (04-04-2017)ಯಿಂದ ಈ ವಿಶಿಷ್ಟ ರಾಮಪದವು ಹೊಸನಗರದ ಪ್ರಧಾನಮಠದಲ್ಲಿ ಪ್ರಾರಂಭಗೊಂಡಿತು. ನುರಿತ ಕಲಾವಿದರಿಂದ ಮೊದಲ್ಗೊಂಡು […]

Continue Reading

ಐತಿಹಾಸಿಕ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಭಾಗಿಗಳಾಗೋಣ

ವಿಶ್ವ ಹವ್ಯಕ ಸಮ್ಮೇಳನ – ಶ್ರೀಮಠದ ಶಿಷ್ಯ ಸಂಘಟನೆಯಾದ ಹವ್ಯಕ ಮಹಾಮಂಡಲದ ಕರೆ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ ಹಾಗೂ ಶ್ರೀ ಅಖಿಲ ಹವ್ಯಕ ಮಹಾಸಭೆಯ ಅಮೃತಮಹೋತ್ಸವ ಕಾರ್ಯಕ್ರಮಗಳು ಡಿಸೆಂಬರ್ 28,29 ಹಾಗೂ 30 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿತವಾಗಿದ್ದು, ಈ ಐತಿಹಾಸಿಕ ಕಾರ್ಯಕ್ರಮಗಳು ಸಮಸ್ತ ಹವ್ಯಕ ಸಮಾಜದ ಕಾರ್ಯಕ್ರಮವಾಗಿರುವುದರಿಂದ ಸಮಸ್ತ ಸಮಾಜ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕಾಗಿ ಹವ್ಯಕ ಮಹಾಮಂಡಲ ಕರೆನೀಡುತ್ತದೆ. ಈ ಐತಿಹಾಸಿಕ ಬೃಹತ್ ಉತ್ಸವದಲ್ಲಿ ನಮ್ಮ ವಿಶಿಷ್ಟವಾದ ಕೃಷಿ – ಕಲೆ – […]

Continue Reading