ಅಧಿಕಮಾಸ-ಪುರುಷೋತ್ತಮ ಮಾಸ
ಪ್ರಸ್ತುತ ಜ್ಯೇಷ್ಠ ಮಾಸವು ಅಧಿಕ ಮಾಸವಾಗಿರುವುದರಿಂದ ಅದರ ಮಹತ್ತ್ವದ ಕುರಿತು ಈ ಲೇಖನ. ಅಧಿಕಮಾಸ: ಯಸ್ಮಿನ್ ಮಾಸೇ ನ ಸಂಕ್ರಾಂತಿಃ ಸಂಕ್ರಾಂತಿದ್ವಯಮೇವ ವಾ | ಮಲಮಾಸಃ ಸ ವಿಜ್ಞೇಯೋ ಮಾಸಃ ಸ್ಯಾತ್ತು ತ್ರಯೋದಶ || ಯಾವ ಚಾಂದ್ರಮಾಸದಲ್ಲಿ ಸಂಕ್ರಾಂತಿ ಇರುವುದಿಲ್ಲವೋ ಅಥವಾ ಎರಡು ಸಂಕ್ರಾಂತಿ ಇರುತ್ತದೆಯೋ ಆ ಮಾಸವು ಮಲಮಾಸವೆನಿಸಿಕೊಳ್ಳುವುದು. ಸಂಕ್ರಾಂತಿರಹಿತ ಚಾಂದ್ರಮಾನಮಾಸಕ್ಕೆ ಅಧಿಕಮಾಸವೆಂದೂ, ಎರಡು ಸಂಕ್ರಾಂತಿ ಇರುವ ಚಾಂದ್ರಮಾನಮಾಸವು ಕ್ಷಯಮಾಸವೆಂದೂ ಕರೆಯಲ್ಪಟ್ಟಿದೆ. ಆ ಸಂವತ್ಸರದಲ್ಲಿ 13 ಮಾಸಗಳಿರುತ್ತವೆ. (ಕ್ಷಯಮಾಸ ಬಂದ ವರ್ಷ ಎರಡು ಅಧಿಕಮಾಸಗಳು […]
Continue Reading