ನಾಗಿಮಳ್ಳಿಯೆಂಬ ತಾಯಿ

ಅದೊಂದು ದಿನ ಶನಿವಾರ ಮಧ್ಯಾಹ್ನ ನಾನು ‘ಚಂಪಕ’, ಅಜ್ಜಿ ‘ಸುಧಾ’ ಪತ್ರಿಕೆಯ ಅಕ್ಷರಗಳನ್ನೆಲ್ಲಾ ಗುಕ್ಕು ಹಾಕಿಕೊಳ್ಳುತ್ತಿದ್ದೆವು. ನನ್ನ ಕೈಯಲ್ಲಿ ಚಂಪಕವಿದ್ದರೂ ಕಣ್ಣೆಲ್ಲಾ ಸುಧಾ ಪತ್ರಿಕೆಯ ಮೇಲೆ. ನನಗಾಗಲೇ ಅದರಲ್ಲಿ ಬರುತ್ತಿದ್ದ ಕಥೆಗಳನ್ನು ಓದುವ ಹುಚ್ಚು. ಆದರೆ ಚಿಕ್ಕಮಕ್ಕಳು ದೊಡ್ಡವರ ಕಥೆ ಪುಸ್ತಕ ಓದಬಾರದು ಎನ್ನುವುದು ನಮ್ಮಮ್ಮ ಮಾಡಿರುವ ಮಳ್ಳು ರೂಲ್ಸುಗಳಲ್ಲೊಂದಾಗಿತ್ತು.   ‘ಗೌರೀಶ್ ಕಾಯ್ಕಿಣಿ’,  ‘ಯಶವಂತ್ ಚಿತ್ತಾಲ’ ಮತ್ತು ‘ನಾ. ಡಿಸೋಜ’ ಇನ್ನೂ ಅನೇಕರ ಬರಹಗಳನ್ನು ನಮ್ಮ ಊರಿನವರೆಂಬ ಹೆಮ್ಮೆಯಿಂದ ಓದಿದ್ದನ್ನೇ ನಾಲ್ಕೈದು ಬಾರಿ ಓದಿದ ಅಸ್ಪಷ್ಟ […]

Continue Reading

ತವರಿನ ತೇರು ಎಂಬ ಮಹಾಕಾವ್ಯ

ಸಂಕ್ರಾಂತಿ ಕಾಳು ಹಂಚುವ ಸಂಭ್ರಮ ಮುಗಿಯುವುದರೊಳಗೆ ತೇರಿನ ಸಡಗರದ ಗಡಿಬಿಡಿ ಶುರುವಾಗುತ್ತಿತ್ತು. ಸಂಕ್ರಾಂತಿಯ ಮರುದಿನ ಗೋರೆಯ ಸಮೀಪದ ಗೊಜ್ನುಗುಡಿಯ ಗುಡ್ಡದಲ್ಲಿ ನಡೆಯುವ ‘ಜಟಕ’ ದೇವರ ಸಣ್ಣಹಬ್ಬ ನಡೆಯುತ್ತಿತ್ತು. ಒಂದೆರಡು ಬಳೆ ಕುಂಕುಮದಂಗಡಿ, ಪುಗ್ಗೆ-ಪೀಪೀಯ ಹುಡುಗ, ಐಸ್ ಕ್ಯಾಂಡಿಯವರಷ್ಟೇ ಬರುವ ಹಬ್ಬವದು. ಪೂಜೆ ಮಾಡುವಾಗ ಜನರ ಗುಂಪಲ್ಲಿ ಸುಮ್ಮನೆ ಕೈಮುಗಿದು ನಿಂತಿರುವ ಕೆಲವರಿಗೆ ಇದ್ದಕ್ಕಿದ್ದಂತೆ ಮೈಮೇಲೆ ದೇವರು ಬಂದು, ಅವರ ಮನಸ್ಸಲ್ಲಿದ್ದದ್ದೆಲ್ಲ ಕಹಿ ನೀರಾಗಿ ಎರಚಾಡಿ ರಾಡಿಯೆಬ್ಬಿಸಿಬಿಡುತ್ತಿತ್ತು. ಹುಣ್ಣಿಮೆ ಸಮೀಪಿಸುವಾಗ ಇದನ್ನೆಲ್ಲ ನೋಡಿ ಹೆದರಿದರೆ ರಾತ್ರಿಯೆಲ್ಲ ರಗಳೆ ಮಾಡುವರೆಂಬ […]

Continue Reading

ಪರೀಕ್ಷಾಗಾಲದಲ್ಲಿ ಜನಿಸುವ ಕಥೆಗಳು

‘ಪರೀಕ್ಷೆ’ ಹತ್ತಿರ ಬಂತೆಂದರೆ ನಮಗೆಲ್ಲ ಹೊಕ್ಕಳಬಳ್ಳಿಯಿಂದ ಛಳುಕೆದ್ದ ಅನುಭವವಾಗುತ್ತಿತ್ತು. ‘ಪರೀಕ್ಷೆಗೆ ಓದಲು ಬಿಡುವುದು’ ಎಂಬ ವಾಕ್ಯವನ್ನೇ ದ್ವೇಷಿಸುತ್ತಿದ್ದೆ ನಾನಾಗ. ಅದರಲ್ಲೂ ಹಿಂದಿ ಮತ್ತು ಗಣಿತವೆಂದರೆ ತುರಿಕೆಸೊಪ್ಪು ತಾಕಿಸಿಕೊಂಡಷ್ಟು ಅಲರ್ಜಿ. ಕಥೆಪುಸ್ತಕಗಳನ್ನು ಕಂಡರೆ ತಂಪೆನಿಸುವ ಹಾಗೆ ಶಾಲೆಯ ಪುಸ್ತಕಗಳ್ಯಾವುದೂ ಜೀವಕ್ಕೆ ತಂಪೆರೆಯಲಿಲ್ಲ. ಓದಲು ಕುಳಿತಾಗ ಕೈಗೆ ಸಿಗುವ ಸಣ್ಣಪುಟ್ಟ ಕಾಗದದ ಚೂರುಗಳಲ್ಲಿನ ಅಕ್ಷರಕ್ಷರವೂ ಪರಮಾದ್ಭುತವೆನಿಸುವ ಕಾಲವದು. ಮನೆಯಲ್ಲಿದ್ದರೆ ಪುಸ್ತಕದ ಮಧ್ಯೆ ಕಥೆಪುಸ್ತಕ ಸೇರಿಸಿ ಓದಿಬಿಡುತ್ತಾಳೆ ಎಂಬುದನ್ನು ಅರಿತ ಅಮ್ಮ, ಓದಲು ಬಿಟ್ಟಾಗಲೆಲ್ಲ ತೋಟಕ್ಕೆ ತೌರಿಬಿಡುತ್ತಿದ್ದಳು. ತೋಟಕ್ಕೆ ಓದಲು ಹೋಗುವ […]

Continue Reading

ದಣಪೆಯೊಳಗಣ ಅಕ್ಷರಮೋಹ

ದಣಪೆಯೊಳಗಣ ಅಕ್ಷರಮೋ ಅವಳು ಕಲಿತಿದ್ದು ಕೇವಲ ನಾಲ್ಕನೇ ತರಗತಿಯಾದರೂ ಅವಳಿಗೆ ಸಿಕ್ಕಾಪಟ್ಟೆ ಅಕ್ಷರಮೋಹ. ಈಗಿನ ಕಾಲದವರಿಗೆ ಹತ್ತರ ತನಕದ ಮಗ್ಗಿಯನ್ನೇ ಸೀದಾ ಹೇಳಲು ಸರಿಯಾಗಿ ಬರದಿರುವಾಗ, ಇಪ್ಪತ್ತರ ತನಕದ ಉಲ್ಟಾ ಮಗ್ಗಿಯ ಜೊತೆಗೆ ರೇಡಿಯೋದಲ್ಲಿ ಬರುತ್ತಿದ್ದ ಹಿಂದಿ ಹಾಡನ್ನು ಬಾಯಿಪಾಠ ಮಾಡುವ ಜಾಣ್ಮೆಯೂ ಆಕೆಗಿತ್ತು. ಎಳೇಪ್ರಾಯದ ಹೂಪಕಳೆಯಂತಹ ಆ ಮನಸ್ಸಿಗೆ ಮದುವೆಯಾದಾಗ ಹದಿನಾರೂ ತುಂಬಿರಲಿಲ್ಲ. ತುಂಬಿ ತುಳುಕುವ ಕುಟುಂಬಕ್ಕೆ ಸೇರಕ್ಕಿ ಒದ್ದೇ ಬಂದಿದ್ದಳು. ಮದುವೆಯಾಗಿ ನಾಲ್ಕೈದು ವರುಷ ಕಳೆದರೂ ಕಟ್ಟದ ಬಸಿರು, ಮುಸುರೆ ತಿಕ್ಕುವಾಗ ನಿಲ್ಲದ ಬಿಕ್ಕುಸಿರು. […]

Continue Reading