ಮಕ್ಕಳ ಸಂಗದೊಳೆಚ್ಚರಗೊಳ್ಳಲಿ ಬಾಲ್ಯವೇ ವ್ಯಕ್ತಿತ್ವದ ಅಡಿಪಾಯ

ಗರ್ಭಾಂಕುರವಾದಾಗ ಅಣುಗಾತ್ರದಲ್ಲಿರುವ ವ್ಯಕ್ತಿಯ ಭ್ರೂಣ ಪ್ರಸವದ ವೇಳೆಗೆ ತೂಕದಲ್ಲಿ ಸುಮಾರು ಹನ್ನೊಂದು ದಶಲಕ್ಷ ಪಟ್ಟು ಬೆಳೆದಿರುತ್ತದೆ. ಜನನಾನಂತರವೂ ಈ ದೈಹಿಕ ಬೆಳವಣಿಗೆ ಸಾಕಷ್ಟು ವೇಗವಾಗಿಯೇ ಮುಂದುವರೆಯುತ್ತದೆ. ಕ್ರಮೇಣ ನಿಧಾನವಾಗುತ್ತ ಸಾಗುವ ಈ ದೈಹಿಕ ಬೆಳವಣಿಗೆ ತಾರುಣ್ಯದ ನಂತರ ಬಹುತೇಕ ತಟಸ್ಥವಾಗುತ್ತದೆ ಎಂಬುದು ವೈಜ್ಞಾನಿಕ ವಿಶ್ಲೇಷಣೆ. ಶರೀರದ  ಗಾತ್ರ ಮತ್ತು ಕ್ರಿಯೆಗಳಲ್ಲಿ ಮಾರ್ಪಾಡುಗಳು ಉಂಟಾಗುವಂತೆಯೇ ಮನೋಸಾಮರ್ಥ್ಯದಲ್ಲಿಯೂ ಬದಲಾವಣೆಗಳು ಸಂಭವಿಸುತ್ತದೆ. ಆಯುರವಧಿಯ ಮೊದಲರ್ಧ ಕಾಲ ವೃದ್ಧಿಯಾದರೆ , ಕ್ರಮೇಣ ಶಕ್ತಿಯು ಕುಂದುತ್ತಾ ಕ್ಷೀಣಿಸುತ್ತಾ ಸಾಗುತ್ತದೆ. ಈ ಕ್ಷೀಣವಾಗುವ ಪ್ರಕ್ರಿಯೆಯಲ್ಲಿ ಕೂಡ […]

Continue Reading

ಮಗು ಕಾಯುವುದಿಲ್ಲ…

‘A baby is God’s opinion that the world should go on.’ ಇದು ಅಮೆರಿಕನ್ ಕವಿ ಕಾರ್ಲ್ ಸ್ಯಾಂಡ್ಬರ್ಗನ ಮಾತು. ‘ಜಗತ್ತಿನ ಮುಂದುವರಿಕೆಯ ಕುರಿತು ದೇವರ ನಿರ್ಣಯ ಮಗು’, ಅಂದರೆ ಜೀವಕೋಟಿಯ ಮುಂದುವರಿಕೆಗಾಗಿ ದೇವರು ಮಕ್ಕಳನ್ನು ಸೃಷ್ಟಿಸುತ್ತಾನೆ. ‌ಪೀಳಿಗೆ ಮತ್ತು ಸಂಸ್ಕೃತಿಗಳೆರಡೂ ಮುಂದುವರಿಯುವುದು ಮಕ್ಕಳಿಂದ. ಹಾಗಾಗಿ ಮಕ್ಕಳನ್ನು ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸುವುದೇ ನಮ್ಮ ಪರಂಪರೆಯ ಮುಂದುವರಿಕೆ.   ನಮಗೆ ನೋಬೆಲ್ ಪಾರಿತೋಷಕ ವಿಜೇತೆ, ಚಿಲಿ ದೇಶದ ಧೀಮಂತ ಮಹಿಳೆ ಗಾಬ್ರಿಯೆಲಾ ಮಿಸ್ತ್ರಾಲೆ ಪ್ರಪಂಚದ ಹಿರಿಯರಿಗೆ ನೀಡಿದ […]

Continue Reading

ನಗರದ ನೀರಡಿಕೆ ನೀಗಲು ನಾಳೆಗೂ  ನೀರು ಬೇಡವೇ?

ಮಗೂ, ಬದುಕಿಗೊಂದು ಅರ್ಥವೇ ಇಲ್ಲದೇ ವ್ಯರ್ಥವಾಗಿ ನಲ್ಲಿಯಿಂದ ತೊಟ್ಟಿಕ್ಕಿ ಬಚ್ಚಲಿಗೆ ಹರಿಯುತ್ತಿರುವ ತಣ್ಣೀರಿನ ಹನಿ ನಾನು. ಒಂದರ್ಥದಲ್ಲಿ ಕಣ್ಣೀರಿನ ಹನಿಯೂ ಕೂಡ. ಹೌದು, ಬೆಳಿಗ್ಗೆ ತಿಂಡಿ ತಿಂದು ಕೈತೊಳೆದ ನೀನು ನಲ್ಲಿಯನ್ನು ಅರ್ಧ ತಿರುವಿ  ಹಾಗೆಯೇ ಶಾಲೆಗೆ ಓಡಿ ಹೋಗಿ ಈಗ ಬಂದೆ. ಬಾ ಮಗೂ, ನಲ್ಲಿಯನ್ನು ಬಂದ್ ಮಾಡು. ಇದೋ ನೀನು ಹೋದಾಗಿನಿಂದ ನಾನು ‘ಟಪ್ ಟಪ್’ ಎಂದು ಸುಮ್ಮನೆ ಸುರಿಯುತ್ತಲೇ ಇದ್ದೇನೆ.   ನಿನ್ನ ತಂದೆತಾಯಿಯರಿಗೂ ನನ್ನ ಕುರಿತು ಗಮನವಿಲ್ಲ. ನಿಮ್ಮಪ್ಪ ಮುಖಕ್ಷೌರದ ವೇಳೆ, […]

Continue Reading

ಮಕ್ಕಳ ಸಂಗದೊಳೆಚ್ಚರಗೊಳ್ಳಲಿ…

ದೊಡ್ಡವರೆಲ್ಲರ ಹೃದಯದಿ ಕಟ್ಟಿದ ತೊಟ್ಟಿಲ ಲೋಕದಲಿ ದಿವ್ಯ ಕಿಶೋರತೆ ನಿದ್ರಿಸುತಿಹುದು ವಿಸ್ಮೃತ ನಾಕದಲಿ | ಮಕ್ಕಳ ಸಂಗದೊಳೆಚ್ಚರಗೊಳ್ಳಲಿ ಆನಂದದ ಆ ದಿವ್ಯಶಿಶು ಹಾಡಲಿ ಕುಣಿಯಲಿ ಹಾರಲಿ ಏರಲಿ ದಿವಿಜತ್ವಕೆ ಈ ಮನುಜಪಶು ||  ಇದು ರಾಷ್ಟ್ರಕವಿ ಕುವೆಂಪು ಅವರ ಕವಿತೆಯ ಸಾಲುಗಳು. ಅವರ ಪ್ರಕಾರ, ತಮ್ಮನ್ನು ತಾವು ದೊಡ್ಡವರು ಎಂದುಕೊಂಡವರ, ಸಮಾಜ ದೊಡ್ಡವರೆಂದು ಹೇಳುವವರ ಅಥವಾ ವಯಸ್ಸಿನ ಕಾರಣದಿಂದ ದೊಡ್ಡವರು ಎನ್ನಲಾಗುವ ಎಲ್ಲರ ಹೃದಯದಲ್ಲೂ ಒಂದು ಪುಟ್ಟ ತೊಟ್ಟಿಲ ಲೋಕವಿದ್ದು ಅದರಲ್ಲಿ  ‘ದಿವ್ಯಕಿಶೋರತೆ’ ನೆಮ್ಮದಿಯಲ್ಲಿ ನಿದ್ರಿಸುತ್ತಿರುತ್ತದೆ. ಅದು […]

Continue Reading

ಭರವಸೆಯು ಬಾಡದಿರಲಿ,ನಂಬುಗೆ ಬಗೆ ತುಂಬಲಿ

ಬೆಳ್ಳಂಬೆಳಿಗ್ಗೆ ಮನೆಯ ಮೂಲೆಯಲ್ಲಿದ್ದ ತನ್ನ ಉಳಿತಾಯದ ಮಣ್ಣಿನ ಗೋಲಕವನ್ನು ಎತ್ತಿಹಾಕಿ‌, ಚದುರಿ ಬಿದ್ದ ಚಿಲ್ಲರೆ ಕಾಸನ್ನೆಲ್ಲ ಹೆಕ್ಕಿ ಎಣಿಸಿ, ಬೊಗಸೆಗೂಡಿಸಿಕೊಂಡು, ಓಡಿಬಂದು ಊರ ದೇಗುಲದ ದೇವರಮೂರ್ತಿಯೆದುರು  ನಿಂತಿದ್ದಳು ಆ ಆರರ ಪುಟ್ಟಬಾಲೆ. ಎಳೆನೀರ ತಿರುಳಿನಂತಿದ್ದ ಆಕೆಯ ಮೃದುಕಪೋಲದ ಮೇಲೆ ಕಂಬನಿ, ಧಾರೆ ಧಾರೆಯಾಗಿ ಜಾರುತ್ತಿತ್ತು. ಜಗತ್ತಿನ ಆತಂಕವೆಲ್ಲ ಆಕೆಯ ಪುಟ್ಟ ಬಟ್ಟಲುಗಣ್ಣುಗಳಲ್ಲಿ ಮನೆ ಮಾಡಿಕೊಂಡಿತ್ತು. ಏನನ್ನೋ ಕೇಳಲು ಆಕೆ ಅರ್ಚಕರ ಮುಖವನ್ನೇ ನೋಡುತ್ತ ಕ್ಷಣಕಾಲ ನಿಲ್ಲುತ್ತಾಳೆ. ಊಹುಂ, ಅರ್ಚಕರು ಮಂತ್ರ ಹೇಳುವುದರಲ್ಲಿ ತನ್ಮಯರು. ಯಾರೋ ಶ್ರೀಮಂತರು ಅರ್ಚನೆ […]

Continue Reading

ಅವರವರ ಭಾವಕ್ಕೆ

ನೋಡುವುದಕ್ಕೂ ಕಾಣುವುದಕ್ಕೂ ಅಂತರವಿದೆ. ನೋಡುವುದೆಲ್ಲವನ್ನೂ ನಮಗೆ ಕಾಣುವುದಕ್ಕೆ ಸಾಧ್ಯವಾಗದು. ಹಾಗೆಯೇ ‘ನಾನು ಕಂಡಿದ್ದೇನೆ’ ಎಂದು ಹೇಳುವುದನ್ನೆಲ್ಲ ನಾವು ನೋಡಿದ್ದೇವೆ ಎಂದೂ ಹೇಳಲಾಗದು. ‘ನೋಡು’ವುದು ಕೇವಲ ಒಂದು ಕ್ರಿಯೆ ಮಾತ್ರವಾದರೆ ‘ಕಾಣು’ವುದು ಒಂದು ಭಾವ ಪ್ರಕ್ರಿಯೆ. ಕಣ್ಣುಮುಚ್ಚಿ ನಮಗೆ ಏನನ್ನೂ ನೋಡಲಾಗದು, ಆದರೆ ಬಹಳಷ್ಟನ್ನು ‘ಕಾಣ’ ಬಹುದು.   ಕಣ್ಣು ಬರೀ ಒಂದು ಕ್ಯಾಮರ ಮಾತ್ರ. ಅದು ತನ್ನ ದೃಷ್ಟಿಯ ವ್ಯಾಪ್ತಿಯಲ್ಲಿ ಬರುವ ದೃಶ್ಯದ ಮೇಲೆ ಬಿದ್ದ ಬೆಳಕು ಪ್ರತಿಫಲಿಸಿ, ಅಕ್ಷಿಪಟಲದ ಮೇಲೆ ಬಿದ್ದಾಗ ಅದನ್ನು ನರಗಳ ಮೂಲಕ […]

Continue Reading