25.03.2019

ದಿನ ಭವಿಷ್ಯ

         

ವಿಲಂಬನಾಮ ಸಂವತ್ಸರ / ಉತ್ತರಾಯಣ /
ಶಿಶಿರ ಋತು / ಪಾಲ್ಗುನ ಮಾಸ /
ಕೃಷ್ಣ ಪಕ್ಷ /ಪಂಚಮಿ ತಿಥಿ /

ಸೋಮವಾರ/‌ವಿಶಾಖ ನಕ್ಷತ್ರ/

ದಿನಾಂಕ: 25.03.2019

 °~•~°~•~°~•~°~•~°~•~°

ಮೇಷ

        ತೊಡಗಿಸಿಕೊಂಡ ಕೆಲಸ ಕಾರ್ಯಗಳಲ್ಲಿ  ವಿಘ್ನ ಕಂಡು ಬರುತ್ತದೆ. ಉತ್ತಮ ಕಾರ್ಯಗಳಿಗೆ ಗೋಸ್ಕರ  ಹಣವನ್ನು ವಿನಿಯೋಗಿಸಿ. ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ನೆಲೆಗೊಳ್ಳುತ್ತದೆ. ಅಲರ್ಜಿ, ಚರ್ಮ ಸಂಬಂಧಿ ರೋಗಗಳು, ಶ್ವಾಸ ಸಂಬಂಧಿ ತೊಂದರೆ ಮೊದಲಾದವುಗಳನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಪರಿಶ್ರಮದಿಂದ ಮುಂದುವರಿಯಬೇಕು



ಪರಿಹಾರ:
ಶ್ರೀದುರ್ಗಾಪರಮೇಶ್ವರೀ ಅಮ್ಮನವರ ಆರಾಧನೆ ಹಾಗೂ ಸುಬ್ರಹ್ಮಣ್ಯ ದೇವರ ಆರಾಧನೆಯನ್ನು ಮಾಡಬೇಕು.

ಜಪಿಸಲು :
ನಮಸ್ತೇ ಶರಣ್ಯೇ ಶಿವೇ ಸಾನುಕಮ್ಪೇ

ನಮಸ್ತೇ ಜಗದ್ವ್ಯಾಪಿಕೇ ವಿಶ್ವರೂಪೇ ।
ನಮಸ್ತೇ ಜಗದ್ವನ್ದ್ಯಪಾದಾರವಿನ್ದೇ

ನಮಸ್ತೇ ಜಗತ್ತಾರಿಣಿ ತ್ರಾಹಿ ದುರ್ಗೇ ॥

°~•~°~•~°~•~°~•~°~•~°

    

ವೃಷಭ

         ನೂತನ ಉದ್ಯೋಗಾಕಾಂಕ್ಷಿಗಳಿಗೆ ಅವಕಾಶ ಒದಗಿ ಬರುತ್ತದೆ. ಉತ್ತಮ ಸ್ಥಾನಮಾನ ಗೌರವಗಳು ಲಭಿಸುತ್ತವೆ. ಹಣಕಾಸಿನ ವಿಚಾರದಲ್ಲಿ ತೊಂದರೆ ಎದುರಿಸಬೇಕಾಗುತ್ತದೆ. ಜೀವನದಲ್ಲಿ ಸುಖ ಶಾಂತಿ ನೆಲೆಗೊಳ್ಳುತ್ತದೆ ಹಾಗೂ ಯುವಕ-ಯುವತಿಯರಿಗೆ ವಿವಾಹ ಯೋಗ ಭಾಗ್ಯ ಒದಗಿ ಬರುತ್ತದೆ. ಉತ್ತಮ ಆರೋಗ್ಯ ಭಾಗ್ಯವನ್ನು ಪಡೆಯುತ್ತೀರಿ. ವಿದ್ಯಾರ್ಥಿಗಳು ಉತ್ತಮ ಪರಿಶ್ರಮದಿಂದ ಮುಂದುವರಿಯಬೇಕು




ಪರಿಹಾರ
ಗೋಮಾತೆಯ ದರ್ಶನ ಹಾಗೂ ಸೇವೆಯನ್ನು ಮಾಡಿ.

ಜಪಿಸಲು :
ಸರ್ವದೇವಮಯೇ ದೇವಿ

ಸರ್ವದೇವೈರಲಂಕೃತೇ |
ಮಾತರ್ಮಮಾಭಿಲಷಿತಮ್

ಸಫಲಂ ಕುರು ನಂದಿನಿ ||

°~•~°~•~°~•~°~•~°~•~°



ಮಿಥುನ


   ಉತ್ತಮ ಏಕಾಗ್ರತೆಯಿಂದ ಹಾಗೂ ಪರಿಶ್ರಮದಿಂದ ಮುಂದುವರೆದರೆ ಮಾತ್ರ ಉದ್ಯೋಗ ಕ್ಷೇತ್ರದಲ್ಲಿ ಅಭಿವೃದ್ಧಿ ಕಂಡು ಬರುವುದು. ಹಣಕಾಸಿನ ವಿಚಾರದಲ್ಲಿ ತೊಂದರೆ ಎದುರಿಸಬೇಕಾಗುತ್ತದೆ ಹಾಗೂ ಉತ್ತಮ ಕಾರ್ಯಗಳಿಗೆ ವಿನಿಯೋಗಿಸಿ. ದಾಂಪತ್ಯ ಜೀವನದಲ್ಲಿ ಕಲಹ ಸಂಭವಿಸುವ ಲಕ್ಷಣಗಳು ಇರುವುದರಿಂದ ಜಾಗರೂಕತೆಯಿಂದ ಇರಬೇಕು. ಜ್ವರ, ಹೊಟ್ಟೆಗೆ ಸಂಬಂಧಿಸಿದ ತೊಂದರೆ ತಲೆನೋವು, ಮೊದಲಾದವುಗಳನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಉತ್ತಮ ಏಕಾಗ್ರತೆಯಿಂದ ಮುಂದುವರೆದರೆ ಮಾತ್ರ ಅಭಿವೃದ್ಧಿ ಕಂಡು ಬರುವುದು



ಪರಿಹಾರ  
ನರಸಿಂಹನ ಆರಾಧನೆಯನ್ನು ಮಾಡಿ.

ಜಪಿಸಲು :
ದೇವತಾಕಾರ್ಯಸಿದ್ಧ್ಯರ್ಥಮ್

ಸಭಾಸ್ತಂಭಸಮುದ್ಭವಮ್ |
ಶ್ರೀನೃಸಿಂಹಮಹಾವೀರಮ್

ನಮಾಮಿ ಋಣಮುಕ್ತಯೇ ||

  °~•~°~•~°~•~°~•~°~•~°



ಕರ್ಕಾಟಕ

   
ಉದ್ಯೋಗ ವ್ಯವಹಾರ ಕ್ಷೇತ್ರಗಳಲ್ಲಿ ಉತ್ತಮ ಅಭಿವೃದ್ಧಿ ಉತ್ತಮ ಸ್ಥಾನಮಾನ ಗೌರವಗಳು ಲಭಿಸುತ್ತವೆ. ಉತ್ತಮ ಹಣ ಸಂಪಾದನೆಯಾಗುತ್ತದೆ. ದಾಂಪತ್ಯ ಜೀವನದಲ್ಲಿ ಸುಖ ಶಾಂತಿ, ಯುವಕ-ಯುವತಿಯರಿಗೆ ವಿವಾಹ ಯೋಗ ಭಾಗ್ಯ ಒದಗಿ ಬರುತ್ತದೆ. ಮೈ ಕೈ ಗಂಟು ನೋವು, ಜ್ವರ ತಲೆನೋವು ಮೊದಲಾದವುಗಳನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಉತ್ತಮ ಪರಿಶ್ರಮದಿಂದ ಆಲಸ್ಯತನ ವನ್ನು ಬಿಟ್ಟು ಮುಂದುವರಿಯಬೇಕು

ಪರಿಹಾರ
ಕುಲದೇವತಾ ಆರಾಧನೆ ಅಗತ್ಯ. ದೇವಿಯ ಆರಾಧನೆಯಿಂದ ಶುಭ.

ಜಪಿಸಲು :
ಶ್ರೀದುರ್ಗಾಯೈ ನಮಃ / ಶ್ರೀಶಾಂತ್ಯೈ ನಮಃ / ಶ್ರೀಶಾಂಭವ್ಯೈ ನಮಃ / ಶ್ರೀಭೂತಿದಾಯಿನ್ಯೈ ನಮಃ / ಶ್ರೀಶಂಕರಪ್ರಿಯಾಯೈ ನಮಃ / ಶ್ರೀನಾರಾಯಣ್ಯೈ ನಮಃ / ಶ್ರೀಭದ್ರಕಾಲ್ಯೈ ನಮಃ / ಶ್ರೀಶಿವದೂತ್ಯೈ ನಮಃ / ಶ್ರೀಮಹಾಲಕ್ಷ್ಮ್ಯೈ ನಮಃ / ಶ್ರೀಮಹಾಮಾಯಾಯೈ ನಮಃ / ಶ್ರೀಯೋಗನಿದ್ರಾಯೈ ನಮಃ / ಶ್ರೀಚಂಡಿಕಾಯೈ ನಮಃ ||

 °~•~°~•~°~•~°~•~°~•~°



ಸಿಂಹ

 ವ್ಯವಹಾರಿಕ ಕ್ಷೇತ್ರದಲ್ಲಿ ನಿಧಾನಗತಿಯ ಅಭಿವೃದ್ಧಿ  ಕಂಡುಬರುವುದು. ಹಣಕಾಸಿನ ವಿಚಾರದಲ್ಲಿ ಏಳಿಗೆ ಕಂಡುಬರುತ್ತದೆ. ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ನೆಲೆಗೊಳ್ಳುತ್ತದೆ ಹಾಗೂ ಯುವಕ ಯುವತಿಯರಿಗೆ ವಿವಾಹ ಯೋಗ ಭಾಗ್ಯ ಒದಗಿ ಬರುತ್ತದೆ. ಮೈ ಕೈ ಗಂಟು ನೋವು, ಬೆನ್ನು ನೋವು, ಮೊದಲಾದವುಗಳನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಉತ್ತಮ ಪರಿಶ್ರಮದಿಂದ ಮುಂದುವರಿಯಬೇಕು


ಪರಿಹಾರ
ಶಿವನ ಆರಾಧನೆ ಅಗತ್ಯ.

ಜಪಿಸಲು :
ಕರಚರಣಕೃತಂ ವಾಕ್ಕಾಯಜಂ ಕರ್ಮಜಂ ವಾ
ಶ್ರವಣನಯನಜಂ ವಾ ಮಾನಸಂ ವಾಪರಾಧಮ್ |
ವಿಹಿತಮವಿಹಿತಂ ವಾ ಸರ್ವಮೇತತ್ ಕ್ಷಮಸ್ವ
ಜಯ ಜಯ ಕರುಣಾಬ್ದೇ ಶ್ರೀಮಹಾದೇವ ಶಂಭೋ||

    °~•~°~•~°~•~°~•~°~•~°      


ಕನ್ಯಾ


     ಉದ್ಯೋಗ ವ್ಯವಹಾರ ಕ್ಷೇತ್ರಗಳಲ್ಲಿ ನಿಧಾನಗತಿಯ ಅಭಿವೃದ್ಧಿ ಕಂಡು ಬರುತ್ತದೆ. ವ್ಯಾಪಾರ ಮಾಡುವವರಿಗೆ ಹಿನ್ನಡೆ ಕಂಡುಬರುವುದು. ಹಣಕಾಸಿನ ವಿಚಾರದಲ್ಲಿ ತೊಂದರೆ ಎದುರಿಸಬೇಕಾಗುತ್ತದೆ. ದಾಂಪತ್ಯ ಜೀವನದಲ್ಲಿ  ಕಲಹ. ಮೂತ್ರ ಸಂಬಂಧಿ ತೊಂದರೆ ಬರುವ ಲಕ್ಷಣಗಳು ಇರುವುದರಿಂದ ಉತ್ತಮವಾಗಿ ನೀರು ಕುಡಿಯಿರಿ. ವಿದ್ಯಾರ್ಥಿಗಳು ತಮ್ಮ ಪರಿಶ್ರಮದಿಂದ ಮುಂದುವರಿಯಬೇಕು



ಪರಿಹಾರ
ಶ್ರೀಕೃಷ್ಣ ದೇವರ ಆರಾಧನೆಯಿಂದ ಶುಭ

ಜಪಿಸಲು :
ವಸುದೇವಸುತಂ  ದೇವಮ್

ಕಂಸಚಾಣೂರಮರ್ದನಮ್  |
ದೇವಕೀಪರಮಾನಂದಮ್

ಕೃಷ್ಣಂ ವಂದೇ  ಜಗದ್ಗುರುಮ್ ||

  °~•~°~•~°~•~°~•~°~•~°       


ತುಲಾ


       ನೂತನ ಉದ್ಯೋಗಾಕಾಂಕ್ಷಿಗಳಿಗೆ ಅವಕಾಶ ಒದಗಿ ಬರುತ್ತದೆ, ಉತ್ತಮ ಸ್ಥಾನಮಾನ ಗೌರವಗಳು ಲಭಿಸುತ್ತದೆ. ಹಣಕಾಸಿನ ವಿಚಾರದಲ್ಲಿ ಉತ್ತಮ ಏಳಿಗೆ ದೊರೆಯುತ್ತದೆ. ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ನೀಡುತ್ತದೆ. ಉದರ ಸಂಬಂಧಿ ತೊಂದರೆ ಬರುವ ಲಕ್ಷಣಗಳು ಇರುವುದರಿಂದ ಜಾಗರೂಕತೆಯಿಂದ ಇರಬೇಕು. ವಿದ್ಯಾರ್ಥಿಗಳಿಗೆ ಉತ್ತಮ ಅಭಿವೃದ್ಧಿ ಕಂಡು ಬರುವುದು


ಪರಿಹಾರ  
ದುರ್ಗಾದೇವಿಯ ಆರಾಧನೆಯಂದ ಶುಭ.

ಜಪಿಸಲು :
ಸರ್ವರೂಪಮಯೀ ದೇವೀ

ಸರ್ವಂ ದೇವೀಮಯಂ ಜಗತ್ ।
ಅತೋಽಹಂ ವಿಶ್ವರೂಪಾಂ ತ್ವಾಮ್

ನಮಾಮಿ ಪರಮೇಶ್ವರೀಮ್ ||


 °~•~°~•~°~•~°~•~°~•~°


ವೃಶ್ಚಿಕ


  
ನೂತನ ಉದ್ಯೋಗ ಆಕಾಂಕ್ಷಿಗಳಿಗೆ ಅವಕಾಶಗಳು ದೊರೆಯುತ್ತದೆ. ಸಮಾಜದಲ್ಲಿ ಗೌರವ ಲಭಿಸುತ್ತದೆ. ಹಣಕಾಸಿನ ವಿಚಾರದಲ್ಲಿ ತೊಂದರೆ ಎದುರಿಸಬೇಕಾಗುತ್ತದೆ ಹಾಗೂ  ಉತ್ತಮ ಕಾರ್ಯಗಳಿಗೋಸ್ಕರ ವಾಗಿ ಹಣವನ್ನು ವಿನಿಯೋಗಿಸಿ.ದ ದಾಂಪತ್ಯ ಜೀವನದಲ್ಲ ಶಾಂತಿ ದೊರೆಯುತ್ತದೆ. ಉತ್ತಮ ಆರೋಗ್ಯ ಭಾಗ್ಯ ದೊರೆಯುತ್ತದೆ. ವಿದ್ಯಾರ್ಥಿಗಳು ಉತ್ತಮ ಪರಿಶ್ರಮದಿಂದ ಏಕಾಗ್ರತೆಯಿಂದ ಮುಂದುವರಿಯಬೇಕು

ಪರಿಹಾರ
ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಯಿಂದ ಶುಭವಾಗಲಿದೆ.


ಜಪಿಸಲು:
ಶರಣ್ಯಂ ಸರ್ವಲೋಕಾನಾಮ್

ಅಗ್ರಗಣ್ಯಂ ದಿವೌಕಸಾಮ್ |
ವರೇಣ್ಯಂ ದೇವಸೇನಾಯಾಃ

ಸುಬ್ರಮಣ್ಯಮುಪಾಸ್ಮಹೇ ||

°~•~°~•~°~•~°~•~°~•~°


ಧನು


    
ತೊಡಗಿಸಿಕೊಂಡ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ಕಷ್ಟನಷ್ಟಗಳು ಎದುರಾಗುತ್ತವೆ. ಹಣಕಾಸಿನ ವಿಚಾರದಲ್ಲಿ ನಿಧಾನಗತಿಯ ಅಭಿವೃದ್ಧಿ ಕಂಡು ಬರುವುದು. ದಾಂಪತ್ಯ ಜೀವನದಲ್ಲಿ  ಕಲಹ ಸಂಭವಿಸುವ ಲಕ್ಷಣ ಗಳಿರುವುದರಿಂದ ಜಾಗರೂಕತೆಯಿಂದ ಇರಬೇಕು. ಪಿತ್ತ ಸಂಬಂಧಿತ ತೊಂದರೆಗಳು ಬರುವ ಲಕ್ಷಣಗಳಿವೆ. ವಿದ್ಯಾರ್ಥಿಗಳು ಉತ್ತಮ ಪರಿಸರದಿಂದ ಆಲಸ್ಯತನ ಒಂದು ಬಿಟ್ಟು  ಮುಂದುವರಿಯಬೇಕು
ಪರಿಹಾರ
ತಂದೆ ತಾಯಿಯರ ಹಾಗೂ ಗುರುವಿನ ಆಶೀರ್ವಾದವನ್ನು  ಪಡೆಯಿರಿ.

ಜಪಿಸಲು :
ಅಖಂಡಮಂಡಲಾಕಾರಮ್

ವ್ಯಾಪ್ತಂ ಯೇನ ಚರಾಚರಮ್ |
ತತ್ಪದಂ ದರ್ಶಿತಂ ಯೇನ

ತಸ್ಮೈ ಶ್ರೀಗುರವೇ ನಮಃ ||

     °~•~°~•~°~•~°~•~°~•~°


ಮಕರ


    ಉದ್ಯೋಗ ವ್ಯವಹಾರ ಕ್ಷೇತ್ರಗಳಲ್ಲಿ ಉತ್ತಮ ಅಭಿವೃದ್ಧಿ ಕಂಡು ಬರುತ್ತದೆ. ಹಣಕಾಸಿನ ವಿಚಾರದಲ್ಲಿ ಏಳಿಗೆ ಕಂಡು ಬರುವುದು ಹಾಗೂ ಉತ್ತಮ ಕಾರ್ಯಗಳಿಗೆ ವಿನಿಯೋಗಿಸಿ  ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ನೆಲೆಗೊಳ್ಳುತ್ತದೆ. ಶ್ವಾಸ ಸಂಬಂಧಿ ತೊಂದರೆ, ಅಲರ್ಜಿ ಮೊದಲಾದ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಉತ್ತಮ ಪರಿಶ್ರಮದಿಂದ ಮುಂದುವರಿಯಬೇಕು. ಟಿವಿ ಮೊಬೈಲ್ ಮೊದಲಾದವುಗಳಿಂದ ದೂರವಿರಬೇಕು



ಪರಿಹಾರ
ಶಿವಾಲಯ ದರ್ಶನ, ರುದ್ರಾಭಿಷೇಕ ಸೇವೆ ಮಾಡುವುದರಿಂದ ಶುಭ ಆಗಲಿದೆ.  

ಜಪಿಸಲು :
ಶುದ್ಧಸ್ಫಟಿಕಸಂಕಾಶಮ್
ಶುದ್ಧವಿದ್ಯಾಪ್ರದಾಯಕಮ್ |
ಶುದ್ಧಂ ಪೂರ್ಣಂ ಚಿದಾನಂದಮ್
ಸದಾಶಿವಮಹಂ ಭಜೇ ||

   °~•~°~•~°~•~°~•~°~•~°          


ಕುಂಭ  


      ಉದ್ಯೋಗ ವ್ಯವಹಾರ ಕ್ಷೇತ್ರಗಳಲ್ಲಿ ಉತ್ತಮ ಅಭಿವೃದ್ಧಿ ಸ್ಥಾನಮಾನಗಳು ಕಂಡುಬರುತ್ತದೆ ಹಣಕಾಸಿನ ವಿಚಾರದಲ್ಲಿ ನಿಧಾನಗತಿ ಅಭಿವೃದ್ಧಿ ಕಂಡು ಬರುತ್ತದೆ . ಜೀವನದಲ್ಲಿ ಸುಖ ಶಾಂತಿ  ಕಂಡುಬರುತ್ತದೆ. ಉತ್ತಮ ಆರೋಗ್ಯವನ್ನು ಹೊಂದುತ್ತೀರಿ ವಿದ್ಯಾರ್ಥಿಗಳು ಉತ್ತಮ ಪರಿಶ್ರಮದಿಂದ ಮುನ್ನಡೆದರೆ ಉತ್ತಮ ಅಭಿವೃದ್ಧಿ ಕಂಡು ಬರುವುದು.



ಪರಿಹಾರ  
ಶಿವದೇವಸ್ಥಾನ ದರ್ಶನ, ಆಂಜನೇಯ ಸ್ವಾಮಿಯ ಆರಾಧನೆಯಿಂದ ಶುಭವಾಗಲಿದೆ.

ಜಪಿಸಲು :
ಅಂಜನಾಗರ್ಭಸಂಭೂತ
ಕಪೀಂದ್ರಸಚಿವೋತ್ತಮ |
ರಾಮಪ್ರಿಯ ನಮಸ್ತುಭ್ಯಮ್
ಹನೂಮಾನ್ ರಕ್ಷ ಮಾಂ ಸದಾ ||

°~•~°~•~°~•~°~•~°~•~°


ಮೀನ   


  ಉದ್ಯೋಗ  ವ್ಯವಹಾರ ಕ್ಷೇತ್ರಗಳಲ್ಲಿ ತೊಂದರೆ ಎದುರಿಸಬೇಕಾಗುತ್ತದೆ. ಹಣಕಾಸಿನ ವಿಚಾರದಲ್ಲಿ ನಿಧಾನಗತಿ ಅಭಿವೃದ್ಧಿ ಕಂಡು ಬರುವುದು. ದಾಂಪತ್ಯ ಜೀವನದಲ್ಲಿ ಕಲಹ ಎದುರಾಗುತ್ತದೆ ಆಹಾರದ ಮೂಲಕ ಆರೋಗ್ಯ  ಹದಗೆಡುವ ಲಕ್ಷಣಗಳು ಇರುವುದರಿಂದ ಜಾಗರೂಕತೆಯಿಂದ ಇರಬೇಕು. ವಿದ್ಯಾರ್ಥಿಗಳು ಉತ್ತಮ ಪರಿಶ್ರಮದಿಂದ ಮುನ್ನಡೆಯಬೇಕು


ಪರಿಹಾರ
ಶ್ರೀಮಹಾವಿಷ್ಣುದೇವರ ಆರಾಧನೆಯಿಂದ ಶುಭ. ಅಶ್ವತ್ಥಮರ ಪ್ರದಕ್ಷಿಣೆ ಬರುವುದರಿಂದ ಶುಭ ಕುಲದೇವತಾ ಆರಾಧನೆಯು ಅತ್ಯಗತ್ಯವಾಗಿದೆ.


ಜಪಿಸಲು :    
ಶ್ರೀಕೇಶವಾಯ ನಮಃ / ಶ್ರೀನಾರಾಯಣಾಯ ನಮಃ / ಶ್ರೀಮಾಧವಾಯ ನಮಃ / ಶ್ರೀಗೋವಿಂದಾಯ ನಮಃ / ಶ್ರೀವಿಷ್ಣವೇ ನಮಃ / ಶ್ರೀಮಧುಸೂದನಾಯ ನಮಃ /  ಶ್ರೀತ್ರಿವಿಕ್ರಮಾಯ ನಮಃ / ಶ್ರೀವಾಮನಾಯ ನಮಃ / ಶ್ರೀಶ್ರೀಧರಾಯ ನಮಃ / ಶ್ರೀಹೃಷಿಕೇಶಾಯ ನಮಃ / ಶ್ರೀಪದ್ಮನಾಭಾಯ ನಮಃ / ಶ್ರೀದಾಮೋದರಾಯ ನಮಃ ||

°~•~°~•~°~•~°~•~°~•~°



{ವಿ. ಸೂ. : ಮೇಲೆ ಕೊಟ್ಟ ಪರಿಹಾರ ಶ್ಲೋಕ ಮತ್ತು ನಾಮಗಳನ್ನು ಸ್ನಾನದ ಅನಂತರ ಶುಚಿಯಾಗಿ ದೇವರ ಮುಂದೆ ದೀಪ ಹಚ್ಚಿ ನಿರ್ಮಲ ಮನಸ್ಸಿನಿಂದ 48 ಸಲ ಪಠಿಸಬೇಕು.}

Author Details


Srimukha

Leave a Reply

Your email address will not be published. Required fields are marked *