ಹವ್ಯಕ ಮಹಾಸಭಾದಿಂದ ಅಭಿನಂದನಾ ಸಮಾರಂಭ..!

ಪ್ರಕಟಣೆ

ಬೆಂಗಳೂರು: ಅಖಿಲ ಹವ್ಯಕ ಮಹಾಸಭೆಯ ಹಿತೈಷಿಗಳಾದ ಡಾ. ಅಶ್ವಥ್’ನಾರಾಯಣ್ ಅವರು ಘನ ಸರ್ಕಾರದ ಉಪ ಮುಖ್ಯಮಂತ್ರಿಗಳಾಗಿ ನಿಯುಕ್ತರಾದ ಹಿನ್ನೆಲೆಯಲ್ಲಿ ಶ್ರೀಅಖಿಲ ಹವ್ಯಕ ಮಹಾಸಭೆಯಿಂದ ಅಭಿನಂದಾ ಸಮಾರಂಭವನ್ನು ಆಯೋಜಿಸಲಾಗಿದೆ. ಡಾ. ಅಶ್ವಥ್’ನಾರಾಯಣ್ ಅಭಿಮಾನಿ ಬಳಗದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿತವಾಗಿದ್ದು, ಸೆ.21 ಸಂಜೆ 6.30 ಕ್ಕೆ ಮಲ್ಲೇಶ್ವರದಲ್ಲಿರುವ ಹವ್ಯಕ ಸಭಾಭವನದಲ್ಲಿ ಕಾರ್ಯಕ್ರಮ ನಡೆಯಲಿದೆ.

ಡಾ. ಅಶ್ವಥ್’ನಾರಾಯಣ್ ಉಪಸ್ಥಿತರಿದ್ದು, ಹವ್ಯಕ ಮಹಾಸಭೆ ಹಾಗೂ ಅಭಿಮಾನಿ ಬಳಗದ ಸನ್ಮಾನವನ್ನು ಸ್ವೀಕರಿಸಲಿದ್ದು ; ಅಭಿನಂದನಾ ಸಮಾರಂಭದ ಅಧ್ಯಕ್ಷತೆಯನ್ನು ಹವ್ಯಕ ಮಹಾಸಭೆಯ ಅಧ್ಯಕ್ಷರಾದ ಡಾ. ಗಿರಿಧರ ಕಜೆ ವಹಿಸಲಿದ್ದಾರೆ  ಕಾಡುಮಲ್ಲೇಶ್ವರ ವಾರ್ಡ್ ಬಿಬಿಎಂಪಿ ಸದಸ್ಯರಾದ ಶ್ರೀ ಮಂಜುನಾಥ್ ರಾಜು ಅಭ್ಯಾಗತರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Author Details

Avatar
Srimukha

Leave a Reply

Your email address will not be published. Required fields are marked *