ಚಾತುರ್ಮಾಸ್ಯ ವಿಷಯದಲ್ಲಿ ಶ್ರೀಮುಖದ ಚಿತ್ರ ಸ್ಪರ್ಧೆ..

ಪ್ರಕಟಣೆ

ಗಿರಿನಗರ: ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಚಾತುರ್ಮಾಸ್ಯ ಜುಲೈ 16ರಿಂದ ಸೆಪ್ಟೆಂಬರ್ 14ರವರೆಗೆ ಗಿರಿನಗರ ಶ್ರೀರಾಮಾಶ್ರಮದಲ್ಲಿ ನಡೆಯಲಿದೆ.

 

ಶ್ರೀಸಂಸ್ಥಾನದವರು ಸನ್ಯಾಸ ಸ್ವೀಕರಿಸಿ 25ವರ್ಷಗಳನ್ನು ಪೂರೈಸಿದ್ದು, ಈ ಬಾರಿ 26ನೇ ವರ್ಷದ ಚಾತುರ್ಮಾಸ್ಯವನ್ನು ಆಚರಿಸುತ್ತಿದ್ದಾರೆ. ಈಬಾರಿಯದ್ದು ರಾಮಾಯಣ ಚಾತುರ್ಮಾಸ್ಯ ಎಂದು ಘೋಷಣೆಯಾಗಿದೆ. ಇದು ಚಾತುರ್ಮಾಸ್ಯದ ನಡುವೆ ರಾಮಾಯಣಧಾರೆಯಲ್ಲ; ರಾಮಾಯಣಧಾರೆಯಲ್ಲಿ ಮಿಂದೇಳುವ ಚಾತುರ್ಮಾಸ್ಯ!.

 

ಚಾತುರ್ಮಾಸ್ಯದಲ್ಲಿ ಪ್ರತಿಯೊಬ್ಬರೂ ವಿವಿಧ ರೀತಿಯಲ್ಲಿ ಭಾಗಿಯಾಗುವ ಮೂಲಕ ವಿಶ್ವ ವಿದ್ಯಾ ಪೀಠದ ಸ್ಥಾಪನೆಗೆ ಕಾರಣಕರ್ತರಾಗಬೇಕೆಂಬ ಆಶಯವಿದೆ. ಶ್ರೀಮುಖ ಸುದ್ದಿ ಪೋರ್ಟಲ್ ಹೊಸ ಕಲ್ಪನೆಯೊಂದನ್ನು ಓದುಗರಿಗೆ ನೀಡಲು ಮುಂದಾಗಿದೆ. ರಾಮಾಯಣ ಚಾತುರ್ಮಾಸ್ಯ ವಿಷಯವನ್ನಿಟ್ಟುಕೊಂಡು ಚಿತ್ರ ಸ್ಪರ್ಧೆಯನ್ನು ನಡೆಸುತ್ತಿದೆ.

 

ಚಿತ್ರಗಳ ಆಯ್ಕೆಯನ್ನು ವಿಶೇಷ ತೀರ್ಪುಗಾರರು ನಡೆಸಲಿದ್ದು, ಅವರ ತೀರ್ಪು ಅಂತಿಮವಾಗಿರುತ್ತದೆ. ವಿಭಾಗವಾರು ವಿಜೇತರನ್ನು ಆಯ್ಕೆ ಮಾಡಿ, ಪ್ರೋತ್ಸಾಹಿಸುವ ಕಾರ್ಯ ಮಾಡಲಾಗುವುದು.

 

ಚಿತ್ರಗಳನ್ನು ಬಿಡಿಸುವವರ ಗಮನಕ್ಕೆ

  • ನಿಮ್ಮ ಸ್ವಂತ ಕಲ್ಪನೆಯನ್ನು ಎ4 ಹಾಳೆಯಲ್ಲಿ ಬಿಡಿಸಿ
  • ಬಣ್ಣದ ಚಿತ್ರಗಳು, ಕಪ್ಪು ಬಿಳುಪು ಚಿತ್ರ, ಚುಕ್ಕಿ ಚಿತ್ರಗಳನ್ನು ಪರಿಗಣಿಸಲಾಗುವುದು
  • ಜುಲೈ 15 ಸಂಜೆ 6 ಗಂಟೆ ಮೊದಲು ಬಂದ ಚಿತ್ರಗಳನ್ನು ಪರಿಗಣಿಸಲಾಗುವುದು
  • ಸ್ಕ್ಯಾನ್ ಮಾಡಿ ಮಿಂಚಂಚೆ ಮೂಲಕವೇ ಕಳುಹಿಸಬೇಕು

 

ಮಿಂಚಂಚೆ ವಿಷಯದಲ್ಲಿ ಖಂಡ್ಡಾಯವಾಗಿ ವಿಭಾಗ ನಮೂದಿಸಿ:

  • 12ವರ್ಷದ ಒಳಗಿನವರು – ಬಾಲ ವಿಭಾಗ
  • 13ರಿಂದ-18ವರ್ಷದ ಒಳಗಿನವರು – ಪ್ರೌಢ ವಿಭಾಗ
  • 19ರಿಂದ ಮೇಲ್ಪಟ್ಟವರು – ಯುವ ವಿಭಾಗ

 

ಸಂಪರ್ಕ ಹಾಗೂ ಪ್ರಕಟ:
srimukhanews@gmail.com ಗೆ ಸಂಪರ್ಕಿಸಬಹುದು ಹಾಗೂ ಚಿತ್ರಗಳನ್ನು ಕಳುಹಿಸಬಹುದು.
https://srimukha.srisamsthana.org/ ನಲ್ಲಿ ಬಹುಮಾನಿತ ಚಿತ್ರದ ಮಾಹಿತಿಯನ್ನು ತಿಳಿಸಲಾಗುವುದು.

Author Details

Avatar
Srimukha

2 thoughts on “ಚಾತುರ್ಮಾಸ್ಯ ವಿಷಯದಲ್ಲಿ ಶ್ರೀಮುಖದ ಚಿತ್ರ ಸ್ಪರ್ಧೆ..

Leave a Reply

Your email address will not be published. Required fields are marked *