ಗಣೇಶನ ಚಿತ್ರ ಬರೆಯಿರಿ ಬಹುಮಾನ ಗೆಲ್ಲಿ !

ಪ್ರಕಟಣೆ

ಗಿರಿನಗರ: ಭಾರತದಲ್ಲಿ ವೈಭವದಿಂದ ಆಚರಿಸಲ್ಪಡುವ ಹಬ್ಬ ಗಣೇಶ ಚತುರ್ಥಿ. ಗಣೇಶ ಹಬ್ಬ ಎಂದಾದ ಕೂಡಲೆ ಎಲ್ಲೆಲ್ಲೂ ಸಂಭ್ರಮದ ವಾತಾವರಣ. ಬೆಳ್ಳಿ ಅಥವಾ ಮಣ್ಣಿನ ಮೂರ್ತಿಯನ್ನು ಮಾಡಿ ಗಣಪತಿಯ ಮೂರ್ತಿಯನ್ನು ಪೂಜಿಸಿ ವ್ರತಾಚರಣೆಗಳನ್ನು ಮಾಡಲಾಗುತ್ತದೆ.

 

ಇತ್ತೀಚಿನ ದಿನದಲ್ಲಿ ಪ್ಲಾಸ್ಟರ್ ಆಫ್ ಪಾರಿಸ್ ಸೇರಿ ರಾಸಾಯನಿಕ ವಸ್ತುಗಳಿಂದ ವಿಗ್ರಹವನ್ನು ಮಾಡಿ ಪರಿಸರ ಹಾನಿಗೊಳಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ನಗರ ಪ್ರದೇಶಗಳಲ್ಲಿ ನೀರಿನಲ್ಲಿ ಕರಗದ ರಾಸಾಯನಿಕ ವಿಗ್ರಹಗಳನ್ನು ವಿಲೇವಾರಿ ಮಾಡುವುದೇ ದೊಡ್ದ ತಲೆನೋವಾಗುತ್ತಿರುವುದನ್ನು ಕಾಣುತ್ತಿದೆ.

 

ಆದರೆ ಶ್ರೀರಾಮಚಂದ್ರಾಪುರ ಮಠದಲ್ಲಿ ಪರಿಸರಕ್ಕೆ ಪೂರಕವಾದ ಗೋಮಯ ಗಣೇಶನನ್ನು ತಯಾರಿಸಿ ಸುಮಾರು 4 ವರ್ಷಗಳಿಂದ ಪೂಜಿಸಿಕೊಂಡು ಬರಲಾಗುತ್ತಿದೆ. ಮಠದಲ್ಲಿ ನಡೆಯುವ 4 ದಿನಗಳ ಗಣೇಶೋತ್ಸವದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸುವ ಸಲುವಾಗಿ ಗಣೇಶ ಹಬ್ಬದ ಕುರಿತಾಗಿ ಚಿತ್ರ ಸ್ಪರ್ಧೆಯನ್ನು ಶ್ರೀಮುಖದ ವತಿಯಿಂದ ಏರ್ಪಡಿಸಲಾಗಿದೆ.

 

ಚಿತ್ರಗಳನ್ನು ಬಿಡಿಸುವವರ ಗಮನಕ್ಕೆ
1.ನಿಮ್ಮ ಸ್ವಂತ ಕಲ್ಪನೆಯನ್ನು ಎ೪ ಹಾಳೆಯಲ್ಲಿ ಬಿಡಿಸಿ
2.ಬಣ್ಣದ ಚಿತ್ರಗಳು, ಕಪ್ಪು ಬಿಳುಪು ಚಿತ್ರ, ಚುಕ್ಕಿ ಚಿತ್ರಗಳನ್ನು ಪರಿಗಣಿಸಲಾಗುವುದು
3.ಸೆಪ್ಟೆಂಬರ್ 2 ರ ರಾತ್ರಿ 7 ಗಂಟೆ ಮೊದಲು ಬಂದ ಚಿತ್ರಗಳನ್ನು ಪರಿಗಣಿಸಲಾಗುವುದು
4.ಸ್ಕ್ಯಾನ್ ಮಾಡಿ ಮಿಂಚಂಚೆ ಮೂಲಕವೇ ಕಳುಹಿಸಬೇಕು

 

ಮಿಂಚಂಚೆ ವಿಷಯದಲ್ಲಿ ಖಂಡ್ಡಾಯವಾಗಿ ವಿಭಾಗ ನಮೂದಿಸಿ:
12ವರ್ಷದ ಒಳಗಿನವರು – ಬಾಲ ವಿಭಾಗ
13ರಿಂದ-18ವರ್ಷದ ಒಳಗಿನವರು – ಪ್ರೌಢ ವಿಭಾಗ
19ರಿಂದ ಮೇಲ್ಪಟ್ಟವರು – ಯುವ ವಿಭಾಗ

 

ಸಂಪರ್ಕ ಹಾಗೂ ಪ್ರಕಟ:
srimukhanews@gmail.com ಗೆ ಸಂಪರ್ಕಿಸಬಹುದು ಹಾಗೂ ಚಿತ್ರಗಳನ್ನು ಕಳುಹಿಸಬಹುದು.
https://srimukha.srisamsthana.org/ ನಲ್ಲಿ ಬಹುಮಾನಿತ ಚಿತ್ರದ ಮಾಹಿತಿಯನ್ನು ಸೆಪ್ಟೆಂಬರ್ 7ರಂದು ರಾತ್ರಿ 7ಗಂಟೆಗೆ ತಿಳಿಸಲಾಗುವುದು.

Author Details


Srimukha

Leave a Reply

Your email address will not be published. Required fields are marked *