ಗೋಮಹತಿ ಕಾರ್ಯಾಗಾರ

ಗೋವು ಪ್ರಕಟಣೆ ಸುದ್ದಿ

ನೀವು ೧೮-೨೫ ವರ್ಷದೊಳಗಿನವರಾಗಿದ್ದು, ಗೋವನ್ನು ಪ್ರೀತಿಸುವವರಾಗಿದ್ದು, ಗೋವಿನ ಕುರಿತು ಜಾಗೃತಿ ಮೂಡಿಸಲು ಆಸಕ್ತರಿದ್ದೀರೇ?
ಉತ್ತಮ ಭಾಷಣಕಾರರಾಗುವ ಗುರಿ ನಿಮಗಿದೆಯೇ?
ಹಾಗಿದ್ದರೇ ಈ ಕಾರ್ಯಾಗಾರ ನಿಮಗಾಗಿಯೇ..

 

ಭಾರತೀಯ ಗೋಪರಿವಾರ ಕರ್ನಾಟಕ ರಾಜ್ಯ ಘಟಕದ ಗೋಮಹತಿ‌ ವಿಭಾಗ ದಿಂದ ಇದೇ ಡಿಸೆಂಬರ್ 2, ಭಾನುವಾರದಂದು 18 ರಿಂದ 25 ವಯಸ್ಸಿನವರಿಗೆ ಕೋಲಾರ ಜಿಲ್ಲೆಯ ಮಾಲೂರಿನ ಶ್ರೀ ರಾಘವೇಂದ್ರ ಗೋಆಶ್ರಮದಲ್ಲಿ ಗೋಮಹತಿ ಕಾರ್ಯಾಗಾರ ಎಂಬ ಒಂದು ದಿನದ ಉಚಿತ ಭಾಷಣ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಾಗಾರದಲ್ಲಿ ಗೋವಿಚಾರ ಜಾಗೃತಿ, ಭಾಷಣ ಕಲೆಗಳ ತರಬೇತಿ, ವಿಶಾಲವಾದ ಗೋಶಾಲೆಯಲ್ಲಿ ವಿಹಾರ-ವಿಚಾರ, ಗೋವುಗಳೊಡನೆ ಒಡನಾಟ, ಗವ್ಯೋತ್ಪನ್ನ ತಯಾರಿ ಘಟಕಕ್ಕೆ ಭೇಟಿ ಹಾಗೂ ವಿಶೇಷವಾದ ಸುಗ್ರಾಸ ಭೋಜನ.

ಇವೇ ಮೊದಲಾದ ವಿಶೇಷತೆಗಳನ್ನು ಈ ಕಾರ್ಯಾಗಾರ ಒಳಗೊಂಡಿದೆ.

 

ಅಂದು ನಮ್ಮೊಡನೆ ರಾಜ್ಯ ಗೋಮಹತಿ ವಿಭಾಗದ ಅಧ್ಯಕ್ಷರಾದ ಶ್ರೀ ನಿತ್ಯಾನಂದ ವಿವೇಕವಂಶಿ ಅವರು ಇರಲಿದ್ದಾರೆ.

 

ಆಸಕ್ತರು ಈ ಕೂಡಲೇ ನೊಂದಾಯಿಸಿಕೊಳ್ಳಲು ಕೋರಿದೆ.

 

ದೇಶ: ಶ್ರೀ ರಾಘವೇಂದ್ರ ಗೋ ಆಶ್ರಮ,‌ ಮಾಲೂರು, ಕೋಲಾರ
ಕಾಲ: ಡಿಸೆಂಬರ್ 2, ಭಾನುವಾರ ಬೆಳಿಗ್ಗೆ 8:00 ಗಂಟೆಯಿಂದ ಸಂಜೆ 5:00 ಗಂಟೆ

 

ವಿ.ಸೂ.: ಮೊದಲು ಹೆಸರು ನೊಂದಾಯಿಸಿದ 30 ಜನಕ್ಕೆ ಆದ್ಯತೆ

 

ನೊಂದಣಿಗಾಗಿ ಸಂಪರ್ಕಿಸಿ:
07892976086

Author Details


Srimukha

Leave a Reply

Your email address will not be published. Required fields are marked *