ಗೋವಿನ ಮೇವಿಗೆ ನಾವೇನು ಮಾಡಬಹುದು?

ಪ್ರಕಟಣೆ

ಬಜಕೂಡ್ಲು: ಸಾರ್ವಜನಿಕ ಸ್ಥಳದಲ್ಲಿ ಹಾಳಾಗಿ ಹೋಗುವ ಹಸಿ ಹುಲ್ಲನ್ನು ಶ್ರಮಸೇವೆಯ ಮೂಲಕ ಬಜಕೂಡ್ಲು ಅಮೃತಧಾರಾ ಗೋಶಾಲೆಗೆ ಕೊಡುವ ಕಾರ್ಯಕ್ರಮ ಅ.೧೩ರಂದು ಬೆಳಗ್ಗೆ ೭.೩೦ರಿಂದ ವಿದ್ಯಾನಗರ ಕುರುಡರಶಾಲೆಯ ಮುಂಭಾಗದಲ್ಲಿ ನಡೆಯಲಿದೆ. ಗೋವಿನ ಹಸಿವನ್ನು ನೀಗಿಸುವ ಹಸಿ ಹುಲ್ಲು ಕತ್ತರಿಸಿ ಗೋವುಗಳಿಗೆ ನೀಡುವ ಮಹಾ ಕಾರ್ಯದಲ್ಲಿ ಗೋಸೇವಕರೆಲ್ಲಾ ಭಾಗವಹಿಸಿ, ಕಾರ್ಯಕ್ರಮ ಯಶಸ್ವಿ ಮಾಡಬೇಕೆಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *