Category: ಪ್ರಕಟಣೆ
ಡಿಸೆಂಬರ್ 1ರಂದು ಮಂಗಲಗೋಯಾತ್ರೆ ಸ್ಮರಣಸಂಚಿಕೆ ಲೋಕಾರ್ಪಣೆ
ಬೆಂಗಳೂರು ಗಿರಿನಗರ ಶ್ರೀರಾಮಚಂದ್ರಾಪುರಮಠ ಶ್ರೀರಾಮಾಶ್ರಮದಲ್ಲಿ ಡಿಸೆಂಬರ್ 1ರಂದು ಮಧ್ಯಾಹ್ನ ಗಂಟೆ 12ಕ್ಕೆ ಶ್ರೀಸಂಸ್ಥಾನದವರ ಅಮೃತಹಸ್ತದಿಂದ ಶ್ರೀಭಾರತೀಪ್ರಕಾಶನ ಹೊರತಂದ ಮಂಗಲಗೋಯಾತ್ರೆ ಸ್ಮರಣಸಂಚಿಕೆ ಲೋಕಾರ್ಪಣೆಗೊಳ್ಳಲಿದೆ.
Continue Readingಶ್ರೀರಾಮಾಶ್ರಮದಲ್ಲಿ ಸಹಸ್ರ ದೀಪೋತ್ಸವ
ಸಪರಿವಾರ ಶ್ರೀರಾಮದೇವರ, ಶ್ರೀಗುರುದೇವರ ಹಾಗೂ ಕಾಮಧೇನುವಿನ ದಿವ್ಯಸನ್ನಿದಿಯಲ್ಲಿ, ಚಂಪಾಷಷ್ಠಿಯ ಪರ್ವದಿನದಲ್ಲಿ, ಸಹಸ್ರದೀಪೋತ್ಸವ ಸೇವೆ ನಡೆಯಲಿದೆ. ಕಾಲ: 13.12.2018, ಗುರುವಾರ ಸಂಜೆ 7 ರಿಂದ ಸರ್ವರಿಗೂ ಆದರದ ಸ್ವಾಗತ.
Continue Readingಡಿಸೆಂಬರ್ 15ರಂದು ರಾಮಾಶ್ರಮದಲ್ಲಿ ಶ್ರೀರಾಘವೇಂದ್ರಭಾರತೀ ಮಹಾಸ್ವಾಮಿಗಳ ಆರಾಧನೆ
ಬೆಂಗಳೂರು: ಶ್ರೀರಾಮಚಂದ್ರಾಪುರಮಠದ 35ನೆಯ ಯತಿವರ್ಯರಾದ ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಂದ್ರಭಾರತೀ ಮಹಾಸ್ವಾಮಿಗಳ ಆರಾಧನಾ ಮಹೋತ್ಸವವು ಮಾರ್ಗಶೀರ್ಷ ಶುದ್ಧ ಅಷ್ಟಮೀ ಡಿಸೆಂಬರ್ 15ರಂದು ಗಿರಿನಗರದ ಶ್ರೀರಾಮಾಶ್ರಮದಲ್ಲಿ ಸಂಪನ್ನಗೊಳ್ಳಲಿದೆ. ಆರಾಧನಾ ಮಹೋತ್ಸವ ಬಳಿಕ ಧರ್ಮಸಭೆ, ನಡೆಯಲಿದ್ದು, ಪಾಂಡಿತ್ಯಪುರಸ್ಕಾರ, ಪ್ರವಚನ, ಮಂತ್ರಾಕ್ಷತೆ ವಿತರಣೆಗಳು ನಡೆಯಲಿವೆ. ಶಿಷ್ಯಭಕ್ತರು ಭಾಗವಹಿಸಿ ಕೃಪೆಗೆ ಪಾತ್ರರಾಗಬೇಕೆಂದು ಉತ್ಸವ ಕಾರ್ಯದರ್ಶಿಗಳಾದ ಶ್ರೀ ಶಾಂತಾರಾಮ ಹಿರೇಮನೆ ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Continue Readingಗೋಮಹತಿ ಕಾರ್ಯಾಗಾರ
ನೀವು ೧೮-೨೫ ವರ್ಷದೊಳಗಿನವರಾಗಿದ್ದು, ಗೋವನ್ನು ಪ್ರೀತಿಸುವವರಾಗಿದ್ದು, ಗೋವಿನ ಕುರಿತು ಜಾಗೃತಿ ಮೂಡಿಸಲು ಆಸಕ್ತರಿದ್ದೀರೇ? ಉತ್ತಮ ಭಾಷಣಕಾರರಾಗುವ ಗುರಿ ನಿಮಗಿದೆಯೇ? ಹಾಗಿದ್ದರೇ ಈ ಕಾರ್ಯಾಗಾರ ನಿಮಗಾಗಿಯೇ.. ಭಾರತೀಯ ಗೋಪರಿವಾರ ಕರ್ನಾಟಕ ರಾಜ್ಯ ಘಟಕದ ಗೋಮಹತಿ ವಿಭಾಗ ದಿಂದ ಇದೇ ಡಿಸೆಂಬರ್ 2, ಭಾನುವಾರದಂದು 18 ರಿಂದ 25 ವಯಸ್ಸಿನವರಿಗೆ ಕೋಲಾರ ಜಿಲ್ಲೆಯ ಮಾಲೂರಿನ ಶ್ರೀ ರಾಘವೇಂದ್ರ ಗೋಆಶ್ರಮದಲ್ಲಿ ಗೋಮಹತಿ ಕಾರ್ಯಾಗಾರ ಎಂಬ ಒಂದು ದಿನದ ಉಚಿತ ಭಾಷಣ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಾಗಾರದಲ್ಲಿ ಗೋವಿಚಾರ ಜಾಗೃತಿ, ಭಾಷಣ […]
Continue Readingಅಮೃತ ಮಹೋತ್ಸವ ಮತ್ತು ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ 28,29,30 Dec 2018 ಅರಮನೆ ಮೈದಾನ, ಬೆಂಗಳೂರು ಹವ್ಯಕ ಪ್ರಶಸ್ತಿ/ಸಮ್ಮಾನ ನಾಮನಿರ್ದೇಶನ
ಆತ್ಮೀಯರೇ, ಈ ಕೆಳಗಿನ ಲಿಂಕ್ಗಳನ್ನು (5 ಬಗೆಯ ಪ್ರಶಸ್ತಿ ತಲಾ 75 ಸಾಧಕರಿಗೆ) ಬಳಸಿ ನಿಮಗೆ ತಿಳಿದಿರುವ ಹವ್ಯಕ ಸಾಧಕರನ್ನು ಅವರ ಕ್ಷೇತ್ರದ ಅನುಸಾರ ನಾಮ ನಿರ್ದೇಶನ ಮಾಡಬೇಕಾಗಿ ವಿನಂತಿ. ಕಡೆಯ ದಿನಾಂಕ: 30-11-2018 http://havyakamahasabha.com/nomination-form ಅಮೃತಮಹೋತ್ಸವ ಮತ್ತು ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನದ ಮಾಹಿತಿಗಾಗಿ ನಮ್ಮ ವೆಬ್ಸೈಟ್ ನೋಡಿ. http://havyakamahasabha.com
Continue Readingಮಠದ ಮೇಲಿನ ದುರಾಕ್ರಮಣಗಳ ಕುರಿತು ಶ್ರೀಸಂಸ್ಥಾನದವರ ಸ್ಪಷ್ಟೋಕ್ತಿ: ಪ್ರಜಾ ಟಿವಿ ಸಂದರ್ಶನದಲ್ಲಿ
* ಗೋಕರ್ಣ ಮಹಾಬಲೇಶ್ವರ ದೇವಾಲಯದ ಹಸ್ತಾಂತರ ವಿವಾದಗಳಿಗೆ ಕಾರಣವೇನು? * ರಾಮಚಂದ್ರಾಪುರಮಠವನ್ನು ಟಾರ್ಗೆಟ್ ಮಾಡಲು ಕಾರಣವೇನು? * ಮಠದ ಮೇಲಾಗುತ್ತಿರುವ ಆಕ್ರಮಣಗಳ ಹಿಂದಿರುವ ಶಕ್ತಿಗಳು ಯಾವವು?? * ಸಾಲು ಸಾಲು ಆರೋಪಗಳನ್ನು ಮಾಡಿ, ನಿಮ್ಮ ಇಮೇಜನ್ನು ಡ್ಯಾಮೇಜ್ ಮಾಡಲಾಯಿತೇ? * ಕೊಡಚಾದ್ರಿ ಸಂರಕ್ಷಣೆಗೆ ಹೊರಟಾಗ, ನಿಮಗೆ ಜೀವಬೆದರಿಕೆ ಹಾಕಲಾಯಿತು ; ಆಗ ನಿಮ್ಮ ಪ್ರತಿಕ್ರಿಯೆ ಹೇಗಿತ್ತು? * ನಿರಂತರ ಅಪಪ್ರಚಾರದಿಂದಾಗಿ ಮಠದ ಭಕ್ತರ ಮೇಲೆ ಆದ ಪರಿಣಾಮವೇನು?…… ಮುಂತಾದ ಖಡಕ್ […]
Continue Readingದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ ಹಾಗೂ ಅಮೃತಮಹೋತ್ಸವ : ಡಿಸೆಂಬರ್ 28, 29 ಮತ್ತು 30ರಂದು ಹವ್ಯಕರ ಹಬ್ಬ
ಶ್ರೀ ಅಖಿಲ ಹವ್ಯಕ ಮಹಾಸಭೆಯು ಸ್ವಾತಂತ್ರ್ಯ ಪೂರ್ವದಲ್ಲೇ ಸಂಘಟಿತವಾಗಿ, ಸಮಸ್ತ ಹವ್ಯಕ ಸಮಾಜದ ಪ್ರಾತಿನಿಧಿಕ ಸಂಸ್ಥೆಯಾಗಿ ಕಾರ್ಯಾಚರಿಸುತ್ತಿದೆ. ಗುರುಪೀಠಗಳ ದಿವ್ಯ ಮಾರ್ಗದರ್ಶನದೊಂದಿಗೆ 1943ರಿಂದ ಸಮಾಜದ ಸಂಘಟನೆ ಹಾಗೂ ಸರ್ವತೋಮುಖ ಅಭಿವೃದ್ಧಿಯ ದಿಶೆಯಲ್ಲಿ ತೊಡಗಿಸಿಕೊಂಡಿದೆ. ಅಮೃತಮಹೋತ್ಸವ ವರ್ಷದ ಹರ್ಷದಲ್ಲಿರುವ ಹವ್ಯಕ ಮಹಾಸಭೆಯು ಡಿ. 28, 29 ಹಾಗೂ 30ರಂದು ಐತಿಹಾಸಿಕ ಅಮೃತಮಹೋತ್ಸವ ಹಾಗೂ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲು ತೀರ್ಮಾನಿಸಿದೆ. ಹವ್ಯಕ ಸಮಾಜ ತನ್ನದೇ ಆದ ವಿಶಿಷ್ಟ ಸಂಸ್ಕೃತಿ ಹಾಗೂ ಸಂಸ್ಕಾರಗಳೊಂದಿಗೆ […]
Continue Readingರಾಮಮಂದಿರ ನಿರ್ಮಾಣದ ಕುರಿತು ಶ್ರೀಸಂಸ್ಥಾನದ ನಿಲುವೇನು?- ವೀಕ್ಷಿಸಿ ನಾಳೆ ರಾತ್ರಿ ದಿಗ್ವಿಜಯ ಸುದ್ದಿವಾಹಿನಿಯಲ್ಲಿ
ಬೆಂಗಳೂರು: ನಾಳೆ ಅಂದ್ರೆ ನವೆಂಬರ್ ದಿಗ್ವಿಜಯ ವಾಹಿನಿಯಲ್ಲಿ ಶ್ರೀಸಂಸ್ಥಾನದವರ ವಿಶೇಷ ಧಾರ್ಮಿಕ ಸಂದರ್ಶನ ಪ್ರಸಾರವಾಗಲಿದೆ. ರಾತ್ರಿ 9.27 ಕ್ಕೆ ಸರಿಯಾಗಿ ದಿಗ್ವಿಜಯ ವಾಹಿನಿಯಲ್ಲಿ ಶ್ರೀಸಂಸ್ಥಾನದವರ ಇಂಟರವ್ಯೂಪ್ರಸಾರವಾಗಲಿದ್ದು ಹಲವು ವಿಚಾರಗಳ ಕುರಿತು ಶ್ರೀಸಂಸ್ಥಾನದವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಪ್ರಮುಖವಾಗಿ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿರುವ ರಾಮಮಂದಿರನಿರ್ಮಾಣ, ಹಾಗೂ ದೇಗುಲಗಳ ಸರ್ಕಾರಿ ನಿರ್ವಹಣೆ ಸೇರಿದಂತೆ ಹಲವು ವಿಚಾರಗಳ ಕುರಿತು ಶ್ರೀಸಂಸ್ಥಾನದವರು ಮುಕ್ತವಾಗಿ ಮಾತನಾಡಿದ್ದಾರೆ. ಇನ್ನು ದಿಗ್ವಿಜಯ ವಾಹಿನಿಯಲ್ಲಿ ಸಂದರ್ಶನದ ಜೊತೆಗೆ ನಾಡಿನ ಜನಪ್ರಿಯ ದಿನಪತ್ರಿಕೆ ವಿಜಯವಾಣಿ ಯಲ್ಲಿ ಇದೇ ಸಂದರ್ಶನದ ವರದಿ […]
Continue Reading