ಚಿತ್ರ ಸ್ಪರ್ಧೆಯ ಸೆ.೧೩ಕ್ಕೆ ಬಹುಮಾನ ವಿತರಣೆ

ಪ್ರಕಟಣೆ

ಬೆಂಗಳೂರು: ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಚಾತುರ್ಮಾಸ್ಯ ಅವಧಿಯಲ್ಲಿ ಶ್ರೀಮುಖ ಸುದ್ದಿಪೋರ್ಟಲ್ ಎರಡು ವಿಷಯಗಳಲ್ಲಿ ಚಿತ್ರ ಸ್ಪರ್ಧೆಯನ್ನು ಆಯೋಜಿಸಿದ್ದು, ವಿಜೇತರಿಗೆ ಸೆ.13ರಂದು ಗಿರಿನಗರ ರಾಮಾಶ್ರಮದಲ್ಲಿ ಬಹುಮಾನ ವಿತರಣೆ ನಡೆಯಲಿದೆ.

 

ಚಾತುರ್ಮಾಸ್ಯದಲ್ಲಿ ಪ್ರತಿಯೊಬ್ಬರೂ ವಿವಿಧ ರೀತಿಯಲ್ಲಿ ಭಾಗಿಯಾಗುವ ಮೂಲಕ ವಿಶ್ವ ವಿದ್ಯಾ ಪೀಠದ ಸ್ಥಾಪನೆಗೆ ಕಾರಣಕರ್ತರಾಗಬೇಕೆಂಬ ಆಶಯದೊಂದಿಗೆ ಯುವ ಪೀಳೆಗೆ ಚಿತ್ರ ಸ್ಪರ್ಧೆಯನ್ನು ಹಾಕೊಕೊಳ್ಳಲಾಗಿತ್ತು. ರಾಮಾಯಣ~ಚಾತುರ್ಮಾಸ್ಯ ಹಾಗೂ ಗಣೇಶಚತುರ್ಥಿ ವಿಷಯದಲ್ಲಿ ಚಿತ್ರ ಸ್ಪರ್ಧೆಯನ್ನು ನಡೆಸಿತ್ತು.

 

ಬಾಲ – ಪ್ರೌಢ – ಯುವ ವಿಭಾಗಗಳಲ್ಲಿ ಉತ್ಸಾಹದಿಂದ ಪ್ರತಿಯೊಬ್ಬರೂ ಭಾಗವಹಿಸಿದ್ದು, ರಾಮಾಯಣ~ಚಾತುರ್ಮಾಸ್ಯ ಸ್ಪರ್ಧೆಯಲ್ಲಿ 9 ಮಂದಿ, ಗಣೇಶಚತುರ್ಥಿ ಸ್ಪರ್ಧೆಯಲ್ಲಿ 12 ಮಂದಿ ವಿಜೇತರನ್ನು ತೀರ್ಪುಗಾರರು ಆಯ್ಕೆ ಮಾಡಿದ್ದಾರೆ. ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ವಿಜೇತ ಎಲ್ಲರಿಗೂ ಬಹುಮಾನ ವಿತರಣೆಯನ್ನು ಮಾಡಿ ಆಶೀರ್ವದಿಸಲಿದ್ದಾರೆ.

Author Details


Srimukha

Leave a Reply

Your email address will not be published. Required fields are marked *