ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಹವ್ಯಕ ಮಹಾಮಂಡಲದ ವಿದ್ಯಾರ್ಥಿವಾಹಿನೀ ವಿಭಾಗದಿಂದ 5 ನೆಯ ತರಗತಿಯಿಂದ ಪದವಿಪೂರ್ವ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ ವಿರಾಮ – ವಿಹಾರ – ವಿಚಾರ ಎಂಬ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ. ಬೇಸಿಗೆ ರಜೆಯು ಸಜೆಯಾಗದೆ ಸಂತೋಷ ಹಾಗೂ ಸಂಸ್ಕಾರ ನೀಡುವಂತಹ ವಿರಾಮಕಾಲವಾಗಬೇಕು ಎಂಬ ದೃಷ್ಟಿಯಿಂದ, ನಮ್ಮ ಸಮಾಜದ ಮಕ್ಕಳಿಗಾಗಿ ಬೇಸಿಗೆ ಶಿಬಿರವು 2019ರ ಮೇ ತಿಂಗಳ 02 ರಿಂದ 07 ರ ತನಕ ಗೋವು -ದೇವತಾ ದಿವ್ಯ ಸಾನ್ನಿಧ್ಯಗಳನ್ನೊಳಗೊಂಡ ಶ್ರೀರಾಮಚಂದ್ರಾಪುರ ಮಠದ ಶಾಖಾ ಮಠವಾದ ಶಿರಸಿಯ ಅಂಬಾಗಿರಿ ಪರಿಸರದ ಶ್ರೀ ರಾಮಕೃಷ್ಣ ಕಾಳಿಕಾ ಮಠದಲ್ಲಿ ನಡೆಯಲಿದೆ.
ವಿದ್ಯಾರ್ಥಿ ವಾಹಿನೀ ಪ್ರಧಾನರ ಜವಾಬ್ದಾರಿಯಲ್ಲಿ ಕೆಳಗೆ ತಿಳಿಸಿದ ವಯೋಮಿತಿಯ ವಿದ್ಯಾರ್ಥಿಗಳನ್ನು ( ಪ್ರತಿ ವಲಯದಿಂದ ) ಶಿಬಿರದಲ್ಲಿ ಭಾಗವಹಿಸುವಂತೆ ಮಾಡಲು ಈ ಮೂಲಕ ಕೋರಿದೆ. ಹಾಗೂ ಎಲ್ಲರ ಸಹಕಾರವನ್ನು ಈ ಮೂಲಕ ಕೋರಿದೆ.
*ವಯೋಮಿತಿ:* 6 ನೆಯ ತರಗತಿಯಿಂದ ಪಿಯುಸಿ ವರೆಗಿನ ಮಕ್ಕಳು (ಹೆಣ್ಣು ಮಕ್ಕಳು ಹಾಗೂ ಗಂಡು ಮಕ್ಕಳು)
*ಶಿಬಿರ ಕಾಣಿಕೆ*
ರೂ1000/- ಶಿಬಿರಾರ್ಥಿಗಳಿಂದ.
* ಹಾಗೆಯೇ ಸೇವಾ ರೂಪದಲ್ಲಿ ಕಾಣಿಕೆ ನೀಡಲು ಎಲ್ಲರಿಗೂ ಅವಕಾಶವಿದೆ.
* ಯಥಾಶಕ್ತಿ ಶಿಬಿರ ಕಾಣಿಕೆ ನೀಡಿಯೂ ಶಿಬಿರದಲ್ಲಿ ಭಾಗವಹಿಸಲು ಅವಕಾಶವಿದೆ.
* ನೋಂದಣಿಗಾಗಿ ಸಂಪರ್ಕ: ಸ್ಥಾನೀಯ ವಲಯ/ ಮಂಡಲ ವಿದ್ಯಾರ್ಥಿ ವಾಹಿನೀ ಪ್ರಧಾನರು.
ಸಂಸ್ಕಾರ, ಸೇವೆ ಮತ್ತು ಸ್ವಾವಲಂಬನೆಯನ್ನು ಮಕ್ಕಳಲ್ಲಿ ಬಿತ್ತಿ ಬೆಳೆದು ಸತ್ಪ್ರಜೆಗಳನ್ನಾಗಿ ರೂಪಿಸುವ ನಿಟ್ಟಿನಲ್ಲಿ ಪೂರಕವಾಗಿ ನಡೆಯುವ ಈ ಶಿಬಿರದಲ್ಲಿ ನಿಮ್ಮ ಮಕ್ಕಳೂ, ನಿಮ್ಮ ಸ್ನೇಹಿತರ ಮಕ್ಕಳೂ ಭಾಗವಹಿಸುವಂತೆ ಪ್ರೇರೇಪಿಸಿ, ಪ್ರೋತ್ಸಾಹಿಸಲು ಈ ಮೂಲಕ ಕೋರಲಾಗಿದೆ.
ಶಿಬಿರಕ್ಕೆ ಹೆಸರು ನೋಂದಾಯಿಸಲು ನಿಮ್ಮ ಮಂಡಲದ ವಿದ್ಯಾರ್ಥಿವಾಹಿನೀ ಪ್ರಧಾನರನ್ನು ಸಂಪರ್ಕಿಸಿ.
1. ರಾಮಚಂದ್ರಾಪುರ ಮಂಡಲ – ಗಣೇಶ್. ಹೆಚ್.ಕೆ. – 9449270026 9945667721
2. ಸಾಗರ ಮಂಡಲ – ಲಕ್ಷೀಶ ಟಿ. ಎಂ. – 9686103578
3. ಸಿದ್ದಾಪುರ ಮಂಡಲ – ವಸುಂಧರಾ ಭಟ್ಟ – 8762827633
4. ಹೊನ್ನಾವರ ಮಂಡಲ – ರಾಘವೇಂದ್ರ ಹೆಗಡೆ – +919480520380
5. ಕುಮಟಾ ಮಂಡಲ – ಡಾ| ಗೋಪಾಲಕೃಷ್ಣ ಹೆಗಡೆ – 9741847399
6.ಮಂಗಳೂರು ಮಂಡಲ – ಭಾಸ್ಕರ ಹೊಸಮನೆ – +918970015493
7.ಉಪ್ಪಿನಂಗಡಿ ಮಂಡಲ – ವಿ. ಜಿ. ಭಟ್ಟ – +91 94482 40975
8.ಮುಳ್ಳೇರಿಯ ಮಂಡಲ – ಕೇಶವ ಪ್ರಸಾದ ಎಡೆಕ್ಕಾನ – +918921367767
9.ದಕ್ಷಿಣ ಬೆಂಗಳೂರು ಮಂಡಲ – ಅಶ್ವಿನಿ ಅರವಿಂದ – +919945483276
10. ಬೆಂಗಳೂರು ಉತ್ತರ ಮಂಡಲ – ಸಂಧ್ಯಾ ಕಾನತ್ತೂರು – 9535728246.
*ನೋಂದಣಿ ಮಾಡಲು ಕೊನೆಯ ದಿನಾಂಕ: ಎಪ್ರಿಲ್ 25 2019*
*ಶಿಬಿರದ ವಿಷಯಗಳು ಹಾಗೂ ಧ್ಯೇಯೋದ್ದೇಶಗಳು*
ಸಂಸ್ಕಾರ ಹಾಗೂ ಸಂತೋಷ ನೀಡುವಂತಹ ಶ್ಲೋಕ, ಭಜನೆ, ಯೋಗಾಸನ, ಕರಕುಶಲ, ಆಟ, ಪ್ರವಾಸ ಇತ್ಯಾದಿ ಮಕ್ಕಳ ಆಸಕ್ತಿಯ ಮತ್ತು ಬೆಳವಣಿಗೆಗೆ ಪೂರಕವಾದ ವಿಷಯಗಳು.
*ಸಂಘಟನೆ:* ಎಲ್ಲಾ ವಲಯ,
ಎಲ್ಲ ಸೀಮೆಗಳ ಮಕ್ಕಳ ಭಾಗವಹಿಸುವಿಕೆಯಿಂದ ಪ್ರಾದೇಶಿಕ ವೈಶಿಷ್ಟ್ಯಗಳನ್ನು ಹಂಚಿಕೊಳ್ಳುವ ಮೂಲಕ ಏಕೀಭಾವದ ಬೆಳವಣಿಗೆಗೆ ಕಾರಣವಾಗಬೇಕೆಂಬುದು ಪ್ರಮುಖ ಉದ್ದೇಶವೂ ಆಗಿರುತ್ತದೆ.
*ಶಿಬಿರಾರ್ಥಿಗಳು ತರಬೇಕಾದ ವಸ್ತುಗಳು*
ಕ್ರಾಫ್ಟ್ ಕತ್ತರಿ – 1
ಬಟ್ಟೆ ಸಾದಾ : 3 , ಉತ್ತಮ : 3
ಬೆಡ್ ಶೀಟ್ : 2
ಬಾತ್ ಟವಲ್ : 1 or 2
ಸ್ನಾನದ ಸಾಬೂನು : 1
ಬಟ್ಟೆ ಸಾಬೂನು : 1
ಟೂತ್ ಬ್ರಷ್ : 1
ಟೂತ್‌ಪೇಸ್ಟ್ ಅಥವಾ ಟೂತ್ ಪೌಡರ್
ಬಾಚಣಿಗೆ, ಕುಂಕುಮ, ಬೊಟ್ಟು
ಉಪನೀತರು: ಪಂಚೆ ಶಲ್ಯ, ಜಲಪಾತ್ರೆ, ಉದ್ಧರಣೆ, ಹರಿವಾಣ, ವಿಭೂತಿ.
ಶಿಬಿರದ ಉದ್ಘಾಟನೆಯು 02.05 ರಂದು ಬೆಳಗ್ಗೆ 9 ಗಂಟೆಗೆ ಶಿಬಿರದ ಉದ್ಘಾಟನೆ ನಡೆಯಲಿದ್ದು, ಶಿಬಿರಾರ್ಥಿಗಳು 01.05. 2019 ರಂದು ಸಂಜೆಯ ಮೊದಲು ಶಿಬಿರ ಸ್ಥಳದಲ್ಲಿ ಹಾಜರಿರುವುದು.
ದಿನಾಂಕ 07.05.2019 ಸೋಮವಾರ, ಶಿಬಿರದ ಸಮಾರೋಪ ಅಪರಾಹ್ಣ 03.00 ರಿಂದ ನಡೆಯಲಿದ್ದು, ಪಾಲಕರನ್ನು ಈ ಮೂಲಕ ಆಮಂತ್ರಿಸುತ್ತೇವೆ.
ಶಿಬಿರ ನಡೆಯುವ ಸ್ಥಳ :
ಶ್ರೀ ರಾಮಕೃಷ್ಣ ಕಾಳಿಕಾ ಮಠ,ಅಂಬಾಗಿರಿ.ಶಿರಸಿ.ಉತ್ತರ ಕನ್ನಡ ಜಿಲ್ಲೆ.
ಶಿಬಿರದ ಅವಧಿ : 01-05-2019 ರಾತ್ರಿಯಿಂದ 07-05-2019 ಸಾಯಂಕಾಲದ ವರೆಗೆ
ಹೆಚ್ಚಿನ ಮಾಹಿತಿಗಾಗಿ
ಸಂಪರ್ಕ: ಎಸ್. ಜಿ. ಭಟ್ಟ ಕಬ್ಬಿನಗದ್ದೆ ( ವಿದ್ಯಾರ್ಥಿವಾಹಿನೀ ಮಹಾಮಂಡಲ ಪ್ರಧಾನ) +919448755969
ಸಂಧ್ಯಾ ಕಾನತ್ತೂರು – 9535728246