ಗೋಕರ್ಣ: ಶ್ರೀ ಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಲೋಕಕಲ್ಯಾಣಾರ್ಥ ‘ಅತಿರುದ್ರ ಪಾರಾಯಣ’, ಶ್ರೀ ದೇವರ ವಿಶೇಷ ‘ಪಲ್ಲಕ್ಕಿ ಉತ್ಸವ’ ಶ್ರೀ ಕ್ಷೇತ್ರ ಉಪಾಧಿವಂತ ಮಂಡಳದಿಂದ ‘ಮಹಾರುದ್ರ ಹವನ’ ಸಂಪನ್ನಗೊಂಡವು.
ಶ್ರೀರಾಮಚಂದ್ರಾಪುರಮಠದ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಸಂಕಲ್ಪ ಮತ್ತು ಮಾರ್ಗದರ್ಶನದಲ್ಲಿ ಉಪಾಧಿವಂತ ಮಂಡಳ (ರಿ) ಗೋಕರ್ಣ ಇವರ ನೇತೃತ್ವದಲ್ಲಿ ಹಾಗೂ ಹವ್ಯಕ ಮಹಾಮಂಡಲದ ಸಹಯೋಗದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ರಾಜ್ಯದ ವಿವಿಧೆಡೆಯಿಂದ ಆಗಮಿಸಿದ ರುದ್ರಾಧ್ಯಯಿಗಳು ಲೋಕಕಲ್ಯಾಣರ್ಥವಾಗಿ ಮಹಾಬಲೇಶ್ವರ ದೇವರ ಸನ್ನಿಧಿಯಲ್ಲಿ ಪಾರಾಯಣ ಮಾಡಿದರು.
ಪ್ರಧಾನ ಅರ್ಚಕ ವೇ. ಶಿತಿಕಂಠ ಹಿರೇಭಟ್ ಹಾಗೂ ಉಪಾಧಿವಂತ ಮಂಡಳದ ಸದಸ್ಯರು , ಹವ್ಯಕ ಮಹಾಮಂಡಲದ ಅಧ್ಯಕ್ಷೆ ಶ್ರೀಮತಿ ಈಶ್ವರಿ ಬೇರ್ಕಡವು, ಕಾರ್ಯದರ್ಶಿ ಶ್ರೀ ಹರಿಪ್ರಸಾದ ಪೆರಿಯಪ್ಪು ಹಾಗೂ ಪದಾಧಿಕಾರಿಗಳು, ಮಂಡಲಗಳ ಅಧ್ಯಕ್ಷರು, ಪದಾಧಿಕಾರಿಗಳು , ದೇವಾಲಯದ ಆಡಳಿತಾಧಿಕಾರಿ ಶ್ರೀ ಜಿ.ಕೆ. ಹೆಗಡೆ ಮತ್ತು ಶ್ರೀರಾಮಚಂದ್ರಾಪುಮಠದ ಶಿಷ್ಯ ವೃಂದದವರು, ಭಕ್ತಾದಿಗಳು ಭಾಗವಹಿಸಿದ್ದರು .
ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಭಾಗವಹಿಸಿದ್ದ ರುದ್ರಾಧ್ಯಾಯಿಗಳನ್ನು ಉದ್ಧೇಶಿಸಿ ಆಶೀರ್ವಾದ ಪೂರ್ವಕವಾಗಿ ಕಳುಹಿಸಿದ್ದ ಧ್ವನಿ ಸಂದೇಶವನ್ನು ಕೇಳಿಸಲಾಯಿತು.