ಬೆಂಗಳೂರು: ಶ್ರೀರಾಘವೇಶ್ವರಭಾರತೀಸ್ವಾಮೀಜಿಯವರು ಅನುಗ್ರಹಿಸುತ್ತಿರುವ ಧಾರಾ ರಾಮಾಯಣಕ್ಕೆ ಈ ತಿಂಗಳ 20ರವರೆಗೆ ಕಾಂಡವಿರಾಮ ಇದ್ದು, ಕಾಂಡವಿರಾಮದಲ್ಲಿ ರಾಮಾಯಣ ಕುರಿತು ವಿಶಿಷ್ಟ ಗೀತ ಚಿತ್ರ ಹಾಗೂ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಪ್ರತಿದಿನ ಸಂಜೆ 6.45ರಿಂದ 8.15ರವರೆಗೆ ವೈವಿಧ್ಯಮಯ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ತಿಂಗಳ 17ರಂದು ವಿದುಷಿ ಶ್ರೀರಂಜಿನಿ ಮತ್ತು ಶ್ರುತಿರಂಜಿನಿ ರಾಮಕೀರ್ತನೆ ಹಾಡಲಿದ್ದು, ಖ್ಯಾತ ವ್ಯಂಗ್ಯ ಚಿತ್ರ ಕಲಾವಿದ ನೀರ್ನಳ್ಳಿ ಗಣಪತಿ ಚಿತ್ರ ರಚಿಸುವರು. 18ರಂದು ರಾಮಾಯಣ ಕುರಿತ ಯಕ್ಷಗಾನ ಪದ್ಯಗಳಿಗೆ ಚಿತ್ರರಚನೆ ಇದ್ದು, 19ರಂದು ಗಂಗಮ್ಮ ಕೇಶವಮೂರ್ತಿಯವರ ಗಮಕ ವಾಚನ, ಶಾಂತಾ ಗೋಪಾಲ್ ಅವರ ವ್ಯಾಖ್ಯಾನ ಹಾಗೂ ನೀರ್ನಳ್ಳಿಯವರು ಚಿತ್ರ ರಚಿಸುವರು. ಪ್ರತಿದಿನ ರಸಪ್ರಶ್ನೆ, ಪಾತ್ರ ಗುರುತಿಸುವಿಕೆಯಂಥ ಚಟುವಟಿಕೆಗಳು ನಡೆಯಲಿವೆ ಎಂದು ಶ್ರೀಮಠದ ಸಾಕ್ಷಾತ್ ಸಂದೇಶ ವಿಭಾಗದ ಅನುರಾಧಾ ಪಾರ್ವತಿ ಪ್ರಕಟಣೆಯಲ್ಲಿ ಹೇಳಿದ್ದಾರೆ.