ಗಿರಿನಗರ: ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಚಾತುರ್ಮಾಸ್ಯ ಪ್ರಾರಂಭ ದಿನದ ಅಂಗವಾಗಿ ಶ್ರೀಮುಖ ಸುದ್ದಿ ಪೋರ್ಟಲ್ ರಾಮಾಯಣ ಚಾತುರ್ಮಾಸ್ಯ ವಿಷಯವನ್ನಿಟ್ಟುಕೊಂಡು ನಡೆಸಿದ ಚಿತ್ರ ಸ್ಪರ್ಧೆಗೆ ಉತ್ತಮ ಪ್ರತಿಕ್ರಿಯೆ ಲಭಿಸಿದೆ.
ಚಾತುರ್ಮಾಸ್ಯದಲ್ಲಿ ಪ್ರತಿಯೊಬ್ಬರೂ ವಿವಿಧ ರೀತಿಯಲ್ಲಿ ಭಾಗಿಯಾಗುವ ಮೂಲಕ ವಿಶ್ವ ವಿದ್ಯಾ ಪೀಠದ ಸ್ಥಾಪನೆಗೆ ಕಾರಣಕರ್ತರಾಗಬೇಕೆಂಬ ಆಶಯದಲ್ಲಿ ನಡೆಸಿದ ಚಿತ್ರ ಸ್ಪರ್ಧೆಯ ಫಲಿತಾಂಶವನ್ನು ಸುಮಾರು 20 ವರ್ಷಗಳಿಂದ ಚಿತ್ರ ಕಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸುವ ಉರಿಮಜಲು ನಿವಾಸಿ ಉದಯ ವಿಟ್ಲ ಅವರು ನೀಡಲಿದ್ದಾರೆ.
ಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಪ್ರತಿಭಾನ್ವಿತರೂ, ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆಂಬುದು ಅವರಿಂದ ಬರುತ್ತಿರುವ ಮಿಂಚಂಚೆಯಿಂದ ಗಮನಿಸಲಾಗಿದೆ. ಎಲ್ಲರ ಉತ್ಸಾಹಕ್ಕೆ ಉತ್ತರವಾಗಿ ಫಲಿತಾಂಶವನ್ನು ಜುಲೈ 27ಕ್ಕೆ ಸಂಜೆ 6 ಗಂಟೆಗೆ ಪೋರ್ಟಲ್ ಮೂಲಕ ಘೋಷಿಸಲಾಗುವುದು.
ಮುಂದಿನ ದಿನಗಳಲ್ಲಿ ಇನ್ನಷ್ಟು ಚಿತ್ರ ಸ್ಪರ್ಧೆಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳಿಗೆ ಇತಿಹಾಸದ ಬಗೆಗಿನ ಒಲವು ಒಚ್ಚಿಸುವ ಕಾರ್ಯವನ್ನು ಶ್ರೀಮುಖ ಮಾಡಬೇಕೆಂದಿದೆ. ಎಲ್ಲಾ ವಿಜೇತರಿಗೂ ಬಹುಮಾನ ನೀಡಲಿದ್ದು, ಈ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು.